ಕೋಲ್ಕತ್ತಾದಲ್ಲಿ ಹೋಮ್ ಲೋನ್ ಅಪ್ಲೈ ಮಾಡಲು ಯೋಚಿಸುತ್ತಿದ್ದೀರಾ? ನೀವು ಮೊದಲು ನಿಮ್ಮ ಆಯ್ಕೆಯ ಆಸ್ತಿಯನ್ನು ಶಾರ್ಟ್ಲಿಸ್ಟ್ ಮಾಡಬೇಕು ಮತ್ತು ಕೋಲ್ಕತ್ತಾದಲ್ಲಿ ಆಸ್ತಿ ನೋಂದಣಿ ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳನ್ನು ತಿಳಿದುಕೊಳ್ಳಬೇಕು. ರೂ. 25 ಲಕ್ಷಕ್ಕಿಂತ ಕಡಿಮೆ ಬೆಲೆಯ ಆಸ್ತಿಗಳಿಗೆ, ಸ್ಟ್ಯಾಂಪ್ ಡ್ಯೂಟಿಯು ಕಾರ್ಪೋರೇಶನ್ (ಕೋಲ್ಕತ್ತಾ ಮತ್ತು ಹೌರಾ) ಪ್ರದೇಶಗಳು ಮತ್ತು ನೋಟಿಫೈ ಮಾಡಿದ ಪ್ರದೇಶಗಳು/ಮುನಿಸಿಪಲ್ ಕಾರ್ಪೋರೇಶನ್/ಮುನಿಸಿಪಾಲಿಟಿ ಪ್ರದೇಶಗಳಿಗೆ 6% ಆಗಿರುತ್ತದೆ. ಈ ಮೇಲಿನ ಕೆಟಗರಿಯಲ್ಲಿ ಬರದ ಪ್ರದೇಶಗಳಿಗೆ 5% ಆಗಿರುತ್ತದೆ. ರೂ. 25 ಲಕ್ಷಕ್ಕಿಂತ ಮೇಲಿನ ಆಸ್ತಿಗಳಿಗೆ ಮೊದಲು ಎರಡು ಕೆಟಗರಿ ಪ್ರದೇಶಗಳಿಗೆ ಸ್ಟ್ಯಾಂಪ್ ಡ್ಯೂಟಿ 7% ಆಗಿರುತ್ತದೆ ಮತ್ತು ಆ ಕೆಟಗರಿಯಲ್ಲಿ ಬಾರದ ಪ್ರದೇಶಗಳಿಗೆ 6% ಆಗಿರುತ್ತದೆ. ನೋಂದಣಿ ಶುಲ್ಕವನ್ನು ಆಸ್ತಿ ಮೌಲ್ಯದ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ಅದು ಒಟ್ಟು ಆಸ್ತಿ ವೆಚ್ಚದ 1.1% ಆಗಿರುತ್ತದೆ. ರೂ. 25 ಲಕ್ಷಕ್ಕಿಂತ ಕಡಿಮೆ ಇರುವ ಆಸ್ತಿಗಳಿಗೆ, ನೋಂದಣಿ ಶುಲ್ಕವು ಒಟ್ಟು ಖರ್ಚಿನ 1% ಆಗಿರುತ್ತದೆ. ನಮ್ಮ ಬಳಸಲು ಸುಲಭವಾದ ಸ್ಟ್ಯಾಂಪ್ ಡ್ಯೂಟಿ ಕ್ಯಾಲ್ಕುಲೇಟರ್ ಮೂಲಕ ಸ್ಟ್ಯಾಂಪ್ ಡ್ಯೂಟಿ ಮತ್ತು ಆಸ್ತಿ ನೋಂದಣಿ ಶುಲ್ಕಗಳನ್ನು ಲೆಕ್ಕ ಹಾಕಿ.
ಇದನ್ನೂ ಓದಿ': ಹೋಮ್ ಲೋನ್ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನೂ ಕವರ್ ಮಾಡುತ್ತದೆಯೇ?