ಕಾಗದ ಪತ್ರಗಳು ಇಲ್ಲದೇ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

2 ನಿಮಿಷದ ಓದು

ಪರ್ಸನಲ್ ಲೋನ್ ಒಂದು ಅನ್‌ಸೆಕ್ಯೂರ್ಡ್‌ ಕ್ರೆಡಿಟ್ ಆಗಿರುವುದರಿಂದ, ಲೋನ್ ಅನುಮೋದನೆಯು ಹಲವಾರು ಅಂಶಗಳನ್ನು, ಅದರಲ್ಲೂ ಮುಖ್ಯವಾಗಿ ನಿಮ್ಮ ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಅರ್ಹತೆ ಮತ್ತು ಸಿಬಿಲ್‌ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಇವು ತೃಪ್ತಿಕರವಾಗಿದ್ದರೆ, ಬಜಾಜ್ ಫಿನ್‌ಸರ್ವ್‌ನಂತಹ ಸಾಲದಾತರು ಸುಲಭವಾಗಿ ಪರ್ಸನಲ್ ಲೋನ್ ಒದಗಿಸುತ್ತಾರೆ ಹಾಗೂ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಯಂತಹ ಕೆಲವೇ ಡಾಕ್ಯುಮೆಂಟ್‌ಗಳನ್ನು ಮಾತ್ರ ಕೇಳುತ್ತಾರೆ.

ನಿಮ್ಮ ವಿಶ್ವಾಸಾರ್ಹತೆ ಮತ್ತು ಹಿಂದಿನ ಲೋನ್ ಚಟುವಟಿಕೆಗಳು ನೀವು ಲೋನ್ ಪಡೆಯಬಹುದೇ ಅಥವಾ ಇಲ್ಲವೇ ಎಂಬುದರ ಮೇಲೆ ಗಮನಾರ್ಹ ಪರಿಣಾಮ ಬೀರುವುದರಿಂದ, ಪರ್ಸನಲ್ ಲೋನ್‌ಗೆ ಡಾಕ್ಯುಮೆಂಟ್‌ಗಳಿಲ್ಲದೆ ಅನುಮೋದನೆ ಪಡೆಯಲು ಈ ಹಂತಗಳನ್ನು ಅನುಸರಿಸಿ.

 • ಸಮಯಕ್ಕೆ ಸರಿಯಾಗಿ ಅಸ್ತಿತ್ವದಲ್ಲಿರುವ ಬಾಕಿಗಳನ್ನು ಮರುಪಾವತಿಸಿ
  ಸಾಲದಾತರು ನಿಮ್ಮ ಸಾಲ ಪಡೆಯುವ ಅರ್ಹತೆಯನ್ನು ನೋಡುತ್ತಾರೆ, ಅದು ನೀವು ಎಷ್ಟು ಕಟ್ಟುನಿಟ್ಟಾಗಿ ಮರುಪಾವತಿ ಮಾಡಬಲ್ಲಿರಿ ಎಂಬುದರ ಸಂಕೇತ. ನೀವು ಕಂತು ತಪ್ಪಿಸಿದ್ದಲ್ಲಿ, ಅದನ್ನು ಸಾಲದಾತರು ಕ್ರೆಡಿಟ್‌ ಕುರಿತು ನಿಮಗಿರುವ ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಲೋನ್ ಇಎಂಐ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ ಹಾಗೂ ಬೇಪಾವತಿ ಅಥವಾ ವಿಳಂಬ ಪಾವತಿಯನ್ನು ತಪ್ಪಿಸಿ.
 • ಹೆಚ್ಚಿನ ಸಿಬಿಲ್ ಸ್ಕೋರ್
  ಅನ್‌ಸೆಕ್ಯೂರ್ಡ್‌ ಲೋನ್‌ನ ಅನುಮೋದನೆಗೆ 750 ಮತ್ತು ಅದಕ್ಕಿಂತ ಹೆಚ್ಚಿನ ಸ್ಕೋರ್ ಅಗತ್ಯವಿದೆ. ಹಾಗಾಗಿ ನಿಮ್ಮ ಕ್ರೆಡಿಟ್ ನಡವಳಿಕೆಯು ನಿಮ್ಮ ಸ್ಕೋರ್ ಹೆಚ್ಚಿಸುತ್ತಿದೆಯೇ ಹೊರತು ಅದನ್ನು ಕಡಿಮೆ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇನ್ನಷ್ಟು ಓದಿರಿ: ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಹೇಗೆ?

 • ಡೆಟ್-ಟು-ಇನ್ಕಮ್ ರೇಶಿಯೋ
  ಡಾಕ್ಯುಮೆಂಟ್‌ಗಳಿಲ್ಲದೆ ಲೋನ್ ಅನುಮೋದನೆ ಪಡೆಯಲು 50% ಅಥವಾ ಅದಕ್ಕಿಂತ ಕಡಿಮೆ ಡೆಟ್-ಟು-ಇನ್‌ಕಮ್ ಅನುಪಾತದ ಅಗತ್ಯವಿದೆ. ಅನುಪಾತವು ಕಡಿಮೆ ಇದ್ದಷ್ಟು, ನಿಮ್ಮ ವಿಲೇವಾರಿ ಆದಾಯ ಮತ್ತು ಮರುಪಾವತಿ ಸಾಮರ್ಥ್ಯಗಳು ಹೆಚ್ಚಾಗಿರುತ್ತವೆ. ಇದು ನಿಮ್ಮನ್ನು ಲೋ-ರಿಸ್ಕ್ ಸಾಲಗಾರರಾಗಿ ತೋರಿಸುತ್ತದೆ.
 • ಸಾಲದಾತರೊಂದಿಗೆ ಸಂಬಂಧ
  ಸಾಲದಾತರ ಜೊತೆಗಿನ ದೀರ್ಘಾವಧಿ ಸಂಬಂಧವು, ಡಾಕ್ಯುಮೆಂಟ್‌ಗಳಿಲ್ಲದೇ ಹಾಗೂ ಉತ್ತಮ ನಿಯಮ ಮತ್ತು ಷರತ್ತುಗಳೊಂದಿಗೆ ಅಥವಾ ಕಡಿಮೆ ಪರ್ಸನಲ್ ಲೋನ್ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್ ಪಡೆಯಲು ಸಹಾಯ ಮಾಡುತ್ತದೆ.

ಈಗ ನಿಮಗೆ ಡಾಕ್ಯುಮೆಂಟ್‌ಗಳಿಲ್ಲದೆ ಪರ್ಸನಲ್ ಲೋನ್ ಪಡೆಯುವುದು ಹೇಗೆಂದು ತಿಳಿದಿರುವುದರಿಂದ, ಬಜಾಜ್ ಫಿನ್‌ಸರ್ವ್‌ನ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಅನುಸರಿಸಿ ಮತ್ತು ಕೆಲವೇ ನಿಮಿಷಗಳಲ್ಲಿ ಅಪ್ಲೈ ಮಾಡಿ ಅಥವಾ ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಬಳಸಿಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ