ಹಕ್ಕುತ್ಯಾಗ

ಕ್ಯಾಲ್ಕುಲೇಟರ್(ಗಳು) ಜನರೇಟ್ ಮಾಡಿದ ಫಲಿತಾಂಶಗಳು ಸೂಚಕವಾಗಿವೆ. ಲೋನ್ ಮೇಲೆ ಅಪ್ಲೈ ಮಾಡಲಾದ ಬಡ್ಡಿ ದರವು ಲೋನ್ ಬುಕಿಂಗ್ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ. ಕ್ಯಾಲ್ಕುಲೇಟರ್ (ಗಳು) ಅದರ ಬಳಕೆದಾರರಿಗೆ/ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್")ನಿಂದ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ಯಾವುದೇ ಸಂದರ್ಭಗಳಲ್ಲಿ ಬಿಎಫ್ಎಲ್‌ನಿಂದ ಬಾಧ್ಯತೆ, ಭರವಸೆ, ಖಾತರಿ, ಕೈಗೊಳ್ಳುವುದು ಅಥವಾ ಬದ್ಧತೆ, ಹಣಕಾಸು ಮತ್ತು ವೃತ್ತಿಪರ ಸಲಹೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಕ್ಯಾಲ್ಕುಲೇಟರ್(ಗಳು) ಬಳಕೆದಾರರು/ಗ್ರಾಹಕರು ಡೇಟಾ ಇನ್ಪುಟ್‌ನಿಂದ ಜನರೇಟ್ ಮಾಡಲಾದ ವಿವಿಧ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯುವ ಸಾಧನವಾಗಿದೆ. ಕ್ಯಾಲ್ಕುಲೇಟರ್ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ಗ್ರಾಹಕರ ಹೊಣೆಯಾಗಿದೆ, ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೆ ಜವಾಬ್ದಾರರಲ್ಲ.

ಆಗಾಗ ಕೇಳುವ ಪ್ರಶ್ನೆಗಳು

ಪರ್ಸನಲ್‌ ಲೋನ್‌ ಅರ್ಹತೆಯನ್ನು ಹೇಗೆ ಲೆಕ್ಕ ಹಾಕುತ್ತದೆ?

ನೀವು 21 ವರ್ಷಗಳು ಮತ್ತು 67 ವರ್ಷಗಳ ನಡುವಿನ ವಯಸ್ಸಿನ ಸಂಬಳದ ವೃತ್ತಿಪರರಾಗಿದ್ದರೆ ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಗೆ ಅರ್ಹರಾಗಿದ್ದೀರಿ*. ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳ ಬಗ್ಗೆ ಇಲ್ಲಿ ಓದಿ.

ನಾನು ಪರ್ಸನಲ್ ಲೋನ್ ಅರ್ಹತೆಯನ್ನು ಹೇಗೆ ಪರಿಶೀಲಿಸಬಹುದು?

ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಬಯಸಿದರೆ, ಅದಕ್ಕಾಗಿ ಅಪ್ಲೈ ಮಾಡುವ ಮೊದಲು ನೀವು ನಿಮ್ಮ ಅರ್ಹತೆಯನ್ನು ನಿರ್ಧರಿಸಬೇಕಾಗುತ್ತದೆ. ಅದನ್ನು ಮಾಡಲು, ನೀವು ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು. ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ:

 • ಲೋನ್ ಅರ್ಹತೆ ಕ್ಯಾಲ್ಕುಲೇಟರ್‌ ತೆರೆಯಿರಿ
 • ನಿವಾಸದ ನಗರ, ಹುಟ್ಟಿದ ದಿನಾಂಕ, ಉದ್ಯೋಗದಾತ, ಮಾಸಿಕ ಆದಾಯ ಮತ್ತು ಮಾಸಿಕ ವೆಚ್ಚಗಳನ್ನು ಆಯ್ಕೆಮಾಡಿ
 • ಒಮ್ಮೆ ನೀವು ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡರೆ, ಈ ಸಾಧನವು ನೀವು ಸಾಲ ಪಡೆಯಲು ಅರ್ಹರಾಗಿರುವ ಮೊತ್ತವನ್ನು ತೋರಿಸುತ್ತದೆ
 • ನೀವು ಈ ಮೊತ್ತದ ಲೋನಿಗಾಗಿ ಅಪ್ಲಿಕೇಶನನ್ನು ಸಲ್ಲಿಸಿ ಶೀಘ್ರವಾಗಿ ಅನುಮೋದನೆಯನ್ನು ಪಡೆಯಬಹುದು
ನಿಮ್ಮ ಸಂಬಳದ ಮೇಲೆ ನೀವು ಎಷ್ಟು ಪರ್ಸನಲ್ ಲೋನ್ ಪಡೆಯಬಹುದು?

ಸಾಲದಾತರಿಂದ ನೀವು ಪಡೆಯಬಹುದಾದ ಅಂತಿಮ, ಪರ್ಸನಲ್ ಲೋನ್ ಮೊತ್ತವು ನಿಮ್ಮ ಸಂಬಳ, ನಿವಾಸದ ನಗರ, ವಯಸ್ಸು ಮತ್ತು ಇತರ ಅರ್ಹತಾ ಮಾನದಂಡಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಸಂಬಳದಲ್ಲಿ ನೀವು ಎಷ್ಟು ಪರ್ಸನಲ್ ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ನಗರ, ವಯಸ್ಸು, ಸಂಬಳ ಮತ್ತು ಟೂಲ್‌‌ನಲ್ಲಿ ಮಾಸಿಕ ವೆಚ್ಚಗಳನ್ನು ಆಯ್ಕೆ ಮಾಡಿದ ನಂತರ ನೀವು ಅಪ್ಲೈ ಮಾಡಬಹುದಾದ ಮೊತ್ತವನ್ನು ಹೇಳುತ್ತದೆ. ಈ ರೀತಿಯಲ್ಲಿ, ನೀವು ಅರ್ಹ ಮೊತ್ತಕ್ಕೆ ಅಪ್ಲೈ ಮಾಡಬಹುದು ಮತ್ತು ತಿರಸ್ಕರಿಸುವ ಅವಕಾಶಗಳನ್ನು ತಪ್ಪಿಸಬಹುದು.

ವೇತನವನ್ನು ಪಡೆಯುತ್ತಿರುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್ ಪಡೆಯಲು ಇರಬೇಕಾದ ಅರ್ಹತೆಯು ಏನು?

ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಸಂಬಳದ ಉದ್ಯೋಗಿಗಳಿಗೆ ನೀವು ಪರ್ಸನಲ್ ಲೋನನ್ನು ಪಡೆಯಬಹುದು ಬಜಾಜ್ ಫಿನ್‌ಸರ್ವ್‌ನ ಪರ್ಸನಲ್ ಲೋನ್ ಅರ್ಹತೆಯನ್ನು ನೋಡಿ:

 • ನೀವು ಭಾರತದ ನಿವಾಸಿಗಳಾಗಿರಬೇಕು
 • ನೀವು 21 ವರ್ಷ ಮತ್ತು 67 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು*
 • ನೀವು ಖಾಸಗಿ, ಸಾರ್ವಜನಿಕ ಸೀಮಿತ ಕಂಪನಿ ಅಥವಾ MNCಯಲ್ಲಿ ಉದ್ಯೋಗದಲ್ಲಿರಬೇಕು
 • ನೀವು ಕನಿಷ್ಠ 750 ಸಿಬಿಲ್ ಸ್ಕೋರ್ ಹೊಂದಿರಬೇಕು
ಪರ್ಸನಲ್ ಲೋನಿಗೆ ಅರ್ಹತೆ ಪಡೆಯುವುದು ಹೇಗೆ?

ನೀವು ಬಜಾಜ್ ಫಿನ್‌ಸರ್ವ್‌ನ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಲು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದರೆ ಬಜಾಜ್‌ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್‌ ಪಡೆಯಲು ಅರ್ಹರಾಗುವಿರಿ.

ಅರ್ಹತೆ:

 • ನೀವು 21 ವರ್ಷ ಮತ್ತು 67 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು*
 • ಭಾರತದ ನಿವಾಸಿಗಳಾಗಿರಬೇಕು
 • ನೀವು MNC, ಖಾಸಗಿ ಅಥವಾ ಪಬ್ಲಿಕ್ ಲಿಮಿಟೆಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು
 • ನೀವು ಕನಿಷ್ಠ 750 ಸಿಬಿಲ್ ಸ್ಕೋರ್ ಹೊಂದಿರಬೇಕು

ಡಾಕ್ಯುಮೆಂಟ್‌ಗಳು:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಉದ್ಯೋಗಿ ಐಡಿ ಕಾರ್ಡ್
 • ಕೊನೆಯ 3 ತಿಂಗಳ ಸ್ಯಾಲರಿ ಸ್ಲಿಪ್
 • ಕೊನೆಯ 3 ತಿಂಗಳ ಸಂಬಳದ ಬ್ಯಾಂಕ್ ಅಕೌಂಟಿನ ಸ್ಟೇಟ್ಮೆಂಟ್

ಇವುಗಳ ಜೊತೆಯಲ್ಲಿ, ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನನ್ನು ಅನುಮೋದಿಸುವ ಮೊದಲು ಲೋನ್ ನೀಡುವವರು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಮರುಪಾವತಿ ಇತಿಹಾಸವನ್ನು ನೋಡುತ್ತಾರೆ.

ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಂಬಳ ಎಷ್ಟು?

ನೀವು ಪರ್ಸನಲ್ ಲೋನ್‌ಗಳಿಗೆ ಗಳಿಸಬೇಕಾದ ಕನಿಷ್ಠ ಸಂಬಳವು ನಿಮ್ಮ ನಿವಾಸದ ನಗರವನ್ನು ಅವಲಂಬಿಸಿರುತ್ತದೆ. ನೀವು ಗಳಿಸಬೇಕಾದ ಕನಿಷ್ಠ ಸಂಬಳ ರೂ. 22,000, ಆದರೆ ಅದು ನಿಮ್ಮ ನಗರದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ನೀವು ರೂ. 25,000 ಗಳಿಸುತ್ತಿದ್ದರೆ, ನೀವು ಪುಣೆಯಲ್ಲಿ ಲೋನಿಗೆ ಅಪ್ಲೈ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪುಣೆಯಲ್ಲಿ ಕನಿಷ್ಠ ಸಂಬಳ ರೂ. 35,000 ಆಗಿದೆ. ಪರ್ಸನಲ್ ಲೋನ್‌ಗಳಿಗೆ ಅಪ್ಲೈ ಮಾಡಲು ಬೇಕಾದ ಕನಿಷ್ಠ ಸಂಬಳವು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತದೆ.

ಪರ್ಸನಲ್ ಲೋನ್ ಪಡೆಯಲು ಗರಿಷ್ಠ ವಯಸ್ಸು ಎಷ್ಟು?

ಬಜಾಜ್ ಫಿನ್‌ಸರ್ವ್‌ನಲ್ಲಿ, ಪರ್ಸನಲ್ ಲೋನ್ ವಯಸ್ಸಿನ ಮಿತಿ 21 ವರ್ಷಗಳಿಂದ 67 ವರ್ಷಗಳ ನಡುವೆ ಇರುತ್ತದೆ*. ಆದ್ದರಿಂದ, ಲೋನ್ ಪಡೆಯಲು ಗರಿಷ್ಠ ವಯಸ್ಸು 67 ವರ್ಷಗಳು*. ಆದಾಗ್ಯೂ, ಆತ/ಆಕೆ ಯುವಕರಾಗಿರುವುದು ಅರ್ಜಿದಾರರು ಕಡಿಮೆ ಬಡ್ಡಿ ದರದಲ್ಲಿ ಲೋನ್ ಅನುಮೋದನೆಯನ್ನು ಪಡೆಯಲು ಅವಕಾಶವಾಗಿದೆ . ಇದು ಏಕೆಂದರೆ ಅವರು ಆತ/ಆಕೆಯ 50 ರಲ್ಲಿ ಅರ್ಜಿದಾರರಿಗಿಂತ ಹೆಚ್ಚು ಕೆಲಸ ಮಾಡುವ ವರ್ಷಗಳನ್ನು ಹೊಂದಿದ್ದಾರೆ. ಹೀಗಾಗಿ, ಅರ್ಜಿದಾರರು ಡೀಫಾಲ್ಟ್ ಮಾಡುವ ಅಪಾಯವಿಲ್ಲದೆ ಲೋನ್ EMI ಗಳನ್ನು ಪಾವತಿಸುವಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ನಾನು ಪರ್ಸನಲ್ ಲೋನಿಗೆ ಅರ್ಹನಾಗಿದ್ದೇನೆ ಅಥವಾ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?

ನೀವು ನಿಮ್ಮ ತುರ್ತು ಅಗತ್ಯಗಳನ್ನು ಪೂರೈಸಲು ಬಯಸಿ ಪರ್ಸನಲ್ ಲೋನ್‌ ತೆಗದುಕೊಳ್ಳಲು ಬಯಸಿದರೆ ಆಗ ನೀವು ಬಯಸಿದ ಮೊತ್ತಕ್ಕೆ ಲೋನ್ ಪಡೆಯುವ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಕಂಡುಹಿಡಿಯಲು ಅಂದರೆ ನಿಮ್ಮ ಲೋನ್ ಅರ್ಹತೆ ಪರೀಕ್ಷಿಸಲು ನೀವು ಪರ್ಸನಲ್ ಲೋನ್ ಅರ್ಹತೆ ಚೆಕರ್‌ ಉಪಯೋಗಿಸಬೇಕು. ನೀವು ವಾಸಮಾಡುತ್ತಿರುವ ನಗರ, ವಯಸ್ಸು, ಆದಾಯ ಮತ್ತು ನಿಮ್ಮ ವೆಚ್ಚಗಳು ಎಲ್ಲವನ್ನು ನಮೂದಿಸಿದರೆ ಈ ಸಾಧನವು ನೀವು ಅರ್ಹತೆಯನ್ನು ಹೊಂದಿದ ಮೊತ್ತವನ್ನು ತೋರಿಸುತ್ತದೆ. ಈ ಮೊತ್ತವನ್ನು ಲೋನ್ ಪಡೆಯಲು ನೀವು ಅಪ್ಲಿಕೇಶನನ್ನು ಸಲ್ಲಿಸಿ ತಕ್ಷಣ ಅನುಮೋದನೆಯನ್ನು ಪಡೆಯಿರಿ.

ಪರ್ಸನಲ್ ಲೋನ್ ಮತ್ತು ಹೋಮ್ ಲೋನನ್ನು ಒಂದೇ ಸಮಯದಲ್ಲಿ ಪಡೆಯಬಹುದೇ?

ಹೌದು, ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ ಪರ್ಸನಲ್ ಲೋನ್ ಮತ್ತು ಹೋಮ್ ಲೋನ್ ಅಕೌಂಟನ್ನು ಹೊಂದಬಹುದು. ನೀವು ಚಾಲ್ತಿಯಲ್ಲಿರುವ ಪರ್ಸನಲ್ ಲೋನ್ ಹೊಂದಿದ್ದರೆ ಮತ್ತು ಹೋಮ್ ಲೋನ್ ಪಡೆಯಲು ಬಯಸಿದರೆ, ನೀವು ಅದಕ್ಕಾಗಿ ಅಪ್ಲೈ ಮಾಡಬಹುದು. ಆದಾಯದ ಅನುಪಾತಕ್ಕೆ ನಿಮ್ಮ ಸಾಲವು 50% ಕ್ಕಿಂತ ಹೆಚ್ಚಾಗಿರಬಾರದು ಎಂಬುದು ಏಕೈಕ ಷರತ್ತು. ನೀವು ಅನೇಕ ಪರ್ಸನಲ್ ಲೋನ್‌ಗಳನ್ನು ಹೊಂದಬಹುದು ಮತ್ತು ನಂತರವೂ ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ನೀವು ಹೆಚ್ಚಿನ ಕ್ರೆಡಿಟ್ ಅರ್ಹತೆಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಇದರಿಂದಾಗಿ ನೀವು ಹೋಮ್ ಲೋನ್ ಮತ್ತು ಪರ್ಸನಲ್ ಲೋನ್ ಮರುಪಾವತಿಗಳನ್ನು ನಿರ್ವಹಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ