ಅಡಮಾನ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

 • Reasonable rate of interest

  ಸಮಂಜಸವಾದ ಬಡ್ಡಿ ದರ

  9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ) ವರೆಗೆ, ಬಜಾಜ್ ಫಿನ್‌ಸರ್ವ್‌ ನಿಮಗೆ ಹೆಚ್ಚಿನ ಲೋನ್ ಮೊತ್ತವನ್ನು ಕೈಗೆಟಕುವ ಅಡಮಾನ ಲೋನ್ ಬಡ್ಡಿ ದರದಲ್ಲಿ ಅಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತದೆ.

 • Money in account in 72* hours

  72* ಗಂಟೆಗಳಲ್ಲಿ ಅಕೌಂಟ್‌ನಲ್ಲಿ ಹಣ

  ಬಜಾಜ್ ಫಿನ್‌ಸರ್ವ್‌ನೊಂದಿಗೆ ಅಡಮಾನ ಲೋನ್ ಮೊತ್ತಗಳಿಗಾಗಿ ಇನ್ನು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 72* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

 • High value funding

  ಹೆಚ್ಚಿನ ಮೌಲ್ಯದ ಫಂಡಿಂಗ್

  ನಿಮ್ಮ ಮನೆ ಖರೀದಿಯ ಪ್ರಯಾಣಕ್ಕೆ ಶಕ್ತಿ ತುಂಬಲು ಬಜಾಜ್ ಫಿನ್‌ಸರ್ವ್ ಅರ್ಹ ಅಭ್ಯರ್ಥಿಗಳಿಗೆ ರೂ. 10.50 ಕೋಟಿ* ಅಥವಾ ಹೆಚ್ಚಿನ ಮೊತ್ತದ ಅಡಮಾನ ಲೋನ್ ಮೊತ್ತವನ್ನು ಒದಗಿಸುತ್ತದೆ.

 • Digital monitoring

  ಡಿಜಿಟಲ್ ಮಾನಿಟರಿಂಗ್

  ಈಗ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಅಡಮಾನ ಲೋನ್ ಬೆಳವಣಿಗೆಗಳು ಮತ್ತು ಇಎಂಐ ವೇಳಾಪಟ್ಟಿಗಳ ಬಗ್ಗೆ ನಿಕಟವಾಗಿ ಗಮನಹರಿಸಿ.

 • Long tenor stretch

  ದೀರ್ಘ ಅವಧಿಯ ಸ್ಟ್ರೆಚ್

  ಬಜಾಜ್ ಫಿನ್‌ಸರ್ವ್‌ ಅಡಮಾನ ಲೋನ್ ಅವಧಿಯು 15 ವರ್ಷಗಳವರೆಗೆ* ವಿಸ್ತರಿಸುತ್ತದೆ, ಇದು ಸಾಲಗಾರರಿಗೆ ತಮ್ಮ ಇಎಂಐ ಪಾವತಿಗಳನ್ನು ಯೋಜಿಸಲು ಬಫರ್ ಅವಧಿಯ ಅನುಮತಿ ನೀಡುತ್ತದೆ.

 • Low contact loans

  ಕಡಿಮೆ ಕಾಂಟಾಕ್ಟ್ ಲೋನ್‌ಗಳು

  ಆನ್ಲೈನಿನಲ್ಲಿ ಅಪ್ಲೈ ಮಾಡುವ ಮತ್ತು ಸುಲಭ ಅನುಮೋದನೆ ಪಡೆಯುವ ಮೂಲಕ ಭಾರತದಲ್ಲಿ ಎಲ್ಲಿಂದಲಾದರೂ ನಿಜವಾದ ರಿಮೋಟ್ ಲೋನ್ ಅಪ್ಲಿಕೇಶನ್ ಅನುಭವಿಸಿ.

 • No prepayment and foreclosure charge

  ಯಾವುದೇ ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕವಿಲ್ಲ

  ಬಜಾಜ್ ಫಿನ್‌ಸರ್ವ್ ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಅಥವಾ ಪೂರ್ವಪಾವತಿ ದಂಡವಿಲ್ಲದೆ ಲೋನನ್ನು ಫೋರ್‌ಕ್ಲೋಸ್ ಮಾಡಲು ಅಥವಾ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ - ಗರಿಷ್ಠ ಉಳಿತಾಯಕ್ಕೆ ದಾರಿ ಮಾಡುತ್ತದೆ.

 • Easy balance transfer with top-up loan

  ಟಾಪ್-ಅಪ್ ಲೋನ್‌ನೊಂದಿಗೆ ಸುಲಭ ಬ್ಯಾಲೆನ್ಸ್ ಟ್ರಾನ್ಸ್‌ಫರ್

  ನಮ್ಮ ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದ ಭಾಗವಾಗಿ ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಿ ಮತ್ತು ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ ಟಾಪ್-ಅಪ್ ಲೋನನ್ನು ಪಡೆಯಿರಿ.

ಅಡಮಾನ ಲೋನ್: ಪರಿಚಯ

ಅಡಮಾನ ಲೋನ್ ಎಂಬುದು ಸಾಲದಾತರೊಂದಿಗೆ ಸ್ಥಿರ ಆಸ್ತಿಯನ್ನು ಅಡಮಾನವಾಗಿ ಇಡುವ ಮೂಲಕ ನೀವು ಪಡೆಯಬಹುದಾದ ಸುರಕ್ಷಿತ ಲೋನ್ ವಿಧವಾಗಿದೆ. ಆಸ್ತಿಯು ವಸತಿ/ವಾಣಿಜ್ಯ ಆಸ್ತಿ ಅಥವಾ ಭಾರಿ ಯಂತ್ರೋಪಕರಣಗಳಂತಹ ಇತರ ಸ್ಥಿರ ಆಸ್ತಿಗಳಾಗಿರಬಹುದು.

ಈ ವಿಧದ ಲೋನ್ ಅಡಮಾನ ಮೂಲ ಎಂದು ಕರೆಯಲ್ಪಡುವ ಪ್ರಕ್ರಿಯೆಯ ಪ್ರಕಾರ ಸಾಲಗಾರರ ಆಸ್ತಿಯ ಮೇಲೆ ಸುರಕ್ಷಿತವಾಗಿದೆ. ಅಂತಹ ಲೋನ್‌ಗಳು 18 ವರ್ಷಗಳವರೆಗಿನ ಮರುಪಾವತಿ ಅವಧಿಯೊಂದಿಗೆ ದೀರ್ಘಾವಧಿಯ ಮುಂಗಡಗಳಾಗಿವೆ ಮತ್ತು ಸುರಕ್ಷಿತವಲ್ಲದ ಮುಂಗಡಗಳಿಗೆ ಹೋಲಿಸಿದರೆ ಬಡ್ಡಿ ದರಗಳು ತುಂಬಾ ಕಡಿಮೆಯಾಗಿರುತ್ತವೆ. ದೊಡ್ಡ-ಟಿಕೆಟ್ ವೆಚ್ಚಗಳನ್ನು ಒಳಗೊಂಡಂತೆ ವೈವಿಧ್ಯಮಯ ಫಂಡಿಂಗ್ ಅಗತ್ಯಗಳನ್ನು ಪೂರೈಸಲು ನೀವು ಲೋನ್ ಮೊತ್ತವನ್ನು ಬಳಸಬಹುದು.

ವಿದೇಶದಲ್ಲಿ ಶಿಕ್ಷಣ, ಅದ್ದೂರಿ ಮದುವೆ, ಬೆಳೆಯುತ್ತಿರುವ ಬಿಸಿನೆಸ್ ಅಗತ್ಯತೆಗಳು ಅಥವಾ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು - ನಿಮ್ಮ ಅಗತ್ಯತೆ ಏನೇ ಇರಲಿ, ಅವುಗಳಿಗೆ ಸುಲಭವಾಗಿ ಬಜಾಜ್ ಫಿನ್‌ಸರ್ವ್‌ ಅಡಮಾನ ಲೋನಿನ ಮೂಲಕ ಹಣಕಾಸು ಸಹಾಯ ಪಡೆಯಿರಿ. ಬಜಾಜ್ ಫಿನ್‌ಸರ್ವ್‌ ಈಗ ಸಂಬಳ ಮತ್ತು ಸ್ವ ಉದ್ಯೋಗಿಗಳ ಅಗತ್ಯತೆಗಳಿಗೆ ಕಸ್ಟಮೈಜ್ ಮಾಡಿದ ಅಡಮಾನ ಲೋನ್‌ಗಳನ್ನು ಒದಗಿಸುತ್ತದೆ.

ಅಡಮಾನ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಸಾಕಷ್ಟು ಫಂಡಿಂಗ್ ಅಗತ್ಯವಿರುವವರಿಗೆ ಅಡಮಾನ ಲೋನ್ ಒಂದು ವಿಶ್ವಾಸಾರ್ಹ ಹಣಕಾಸಿನ ಪರಿಹಾರವಾಗಿದೆ. ಆರಾಮದಾಯಕ ಮರುಪಾವತಿಯನ್ನು ಕಲ್ಪಿಸಲು ಇವುಗಳು ಸಾಕಷ್ಟು ಫಂಡಿಂಗ್, ನಾಮಮಾತ್ರದ ಬಡ್ಡಿ ದರಗಳು ಮತ್ತು ದೀರ್ಘಾವಧಿಯ ಅವಧಿಗಳೊಂದಿಗೆ ಬರುತ್ತವೆ. ಇತರ ಸುರಕ್ಷಿತ ಲೋನ್‌ಗಳಂತೆ, ಭಾರತದಲ್ಲಿ ಅಡಮಾನ ಲೋನ್ ಯಾವುದೇ ಖರ್ಚಿನ ನಿರ್ಬಂಧಗಳನ್ನು ಹೊಂದಿಲ್ಲ. ಯಾವುದೇ ಹಣಕಾಸಿನ ಜವಾಬ್ದಾರಿ ಅಥವಾ ವೆಚ್ಚಕ್ಕಾಗಿ ನೀವು ಹಣವನ್ನು ಬಳಸಬಹುದು.

ಈ ಆಫರ್ ಸಂಬಳದ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಲಭ್ಯವಿದೆ. ಅಡಮಾನ ಲೋನ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಓದಿ.

 • ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
  ಅಡಮಾನ ಲೋನ್ ಪ್ರಕ್ರಿಯೆಯ ಮೊದಲ ಹಂತವೆಂದರೆ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವುದು. ಸಾಲದಾತರ ಆಧಾರದ ಮೇಲೆ, ನೀವು ಇದನ್ನು ಒಂದು ಶಾಖೆಯಲ್ಲಿ ಮಾಡಬೇಕಾಗಬಹುದು ಅಥವಾ ನೀವು ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡಲು ಸಾಧ್ಯವಾಗಬಹುದು. ಆನ್‌ಲೈನ್ ನಿಬಂಧನೆಗಳು ಸಾಮಾನ್ಯವಾಗಿ ಇನ್ನಷ್ಟು ಅನುಕೂಲಕರ ಮತ್ತು ಸುಲಭವಾಗಿವೆ.
  ಸಾಮಾನ್ಯವಾಗಿ, ನೀವು ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು:
 1. ವೈಯುಕ್ತಿಕ ವಿವರಗಳು
 2. ಉದ್ಯೋಗ ವಿವರಗಳು
 3. ಆದಾಯ ಮಾಹಿತಿ
 4. ಲೋನ್ ಅವಶ್ಯಕತೆಗಳು
 • ಲೋನ್ ಪ್ರಕ್ರಿಯೆಗಾಗಿ ಕಾಯಿರಿ
  ನೀವು ಅಪ್ಲಿಕೇಶನ್ ಫಾರಂ ಸಲ್ಲಿಸಿದ ನಂತರ, ಸಾಲದಾತರು ಅಡಮಾನ ಲೋನಿಗೆ ನಿಮ್ಮ ಅರ್ಹತೆಯನ್ನು ಮೌಲ್ಯಮಾಪನ ಮಾಡುತ್ತಾರೆ. ಅರ್ಹತೆಯ ಆಧಾರದ ಮೇಲೆ, ನಿಮಗೆ ನಿಯಮಗಳನ್ನು ನೀಡಲಾಗುತ್ತದೆ ಅಥವಾ ನಿಮ್ಮ ಅರ್ಹತೆಯನ್ನು ಹೆಚ್ಚಿಸಲು ಸಹ-ಅರ್ಜಿದಾರರನ್ನು ಸೇರಿಸುವಂತೆ ಸಾಲದಾತರು ನಿಮ್ಮನ್ನು ಕೇಳಬಹುದು.
 • ಎಲ್ಲಾ ಡಾಕ್ಯುಮೆಂಟ್‌ಗಳನ್ನು ವ್ಯವಸ್ಥೆ ಮಾಡಿ
  ಆರಂಭಿಕ ಲೋನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಅಗತ್ಯವಿರುವ ಡಾಕ್ಯುಮೆಂಟೇಶನ್ ಸಲ್ಲಿಸಬೇಕು. ಲೋನನ್ನು ಪ್ರಕ್ರಿಯೆಗೊಳಿಸಲು ಬೇಕಾದ ಡಾಕ್ಯುಮೆಂಟ್‌ಗಳ ಸಾಮಾನ್ಯ ಪಟ್ಟಿ ಇಲ್ಲಿದೆ.
 1. ಕೆವೈಸಿ
 2. ಪ್ರಾಪರ್ಟಿ ದಾಖಲೆಗಳು
 3. ಆದಾಯ ಡಾಕ್ಯುಮೆಂಟ್‌ಗಳು
 • ಲೋನ್ ಪರಿಶೀಲನೆಗಾಗಿ ಕಾಯಿರಿ
  ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, ಸಾಲದಾತರು ತಾಂತ್ರಿಕ ಮತ್ತು ಕಾನೂನು ಪರಿಶೀಲನೆಯನ್ನು ಆರಂಭಿಸುತ್ತಾರೆ. ಈ ಹಂತದಲ್ಲಿ, ಆಸ್ತಿ ಮೌಲ್ಯಮಾಪನ ನಡೆಸಲಾಗುತ್ತದೆ ಮತ್ತು ಸಾಲದಾತರು ಆಸ್ತಿ ಶೀರ್ಷಿಕೆಯ ದೃಢೀಕರಣವನ್ನು ಪರಿಶೀಲಿಸುತ್ತಾರೆ. ಈ ಮೌಲ್ಯಮಾಪನಗಳ ಆಧಾರದ ಮೇಲೆ, ಸಾಲದಾತರು ಅರ್ಹತೆಯನ್ನು ಖಚಿತಪಡಿಸುತ್ತಾರೆ ಮತ್ತು ಅನುಮೋದನೆಯೊಂದಿಗೆ ಮುಂದುವರೆಯುತ್ತಾರೆ.
  ಅಂತಿಮ ಹಂತದಲ್ಲಿ, ಸಾಲದಾತರು ಮಂಜೂರಾತಿ ಪತ್ರವನ್ನು ನೀಡುತ್ತಾರೆ ಮತ್ತು ಅನುಮೋದಿತ ನಿಯಮಗಳ ಆಧಾರದ ಮೇಲೆ ನೀವು ವಿತರಣೆಯನ್ನು ಅಧಿಕೃತಗೊಳಿಸಲು ಸಾಧ್ಯವಾಗುತ್ತದೆ. ಗಮನಿಸಿ, ನೀವು ಎಲ್ಲಾ ಮೂಲ ಆಸ್ತಿ ಡಾಕ್ಯುಮೆಂಟ್‌ಗಳನ್ನು ಸಾಲದಾತರಿಗೆ ಸಲ್ಲಿಸಬೇಕು ಮತ್ತು ಮರುಪಾವತಿ ಪೂರ್ಣಗೊಳ್ಳುವವರೆಗೆ ಇವುಗಳನ್ನು ನಡೆಸಲಾಗುತ್ತದೆ.

ಅಡಮಾನ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮತ್ತು ಅಡಮಾನ ಲೋನ್ ಇಎಂಐ ಕ್ಯಾಲ್ಕುಲೇಟರ್ ನಂತಹ ಸಾಧನಗಳೊಂದಿಗೆ, ನೀವು ನಿಮ್ಮ ಲೋನನ್ನು ಸುಲಭವಾಗಿ ನಿರ್ವಹಿಸಬಹುದು. ಅಡಮಾನ ಲೋನಿಗೆ ಅಪ್ಲೈ ಮಾಡುವುದು ಹೇಗೆ ತಿಳಿದುಕೊಳ್ಳಲು ಹಂತವಾರು ಪ್ರಕ್ರಿಯೆಯನ್ನು ಓದಿ.

ಅಡಮಾನ ಲೋನ್ ಅರ್ಹತೆ

ಅಡಮಾನ ಲೋನಿಗೆ ಅಪ್ಲೈ ಮಾಡಲು ಮಾನದಂಡಗಳನ್ನು ಈ ಕೆಳಗೆ ನಮೂದಿಸಲಾಗಿದೆ:

ಸಂಬಳ ಪಡೆಯುವ ಅರ್ಜಿದಾರರಿಗೆ

 • ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ಯಾವುದೇ ಸ್ಥಳಗಳಲ್ಲಿ ಆಸ್ತಿಯೊಂದಿಗೆ ಭಾರತದ ನಿವಾಸಿಯಾಗಿರಬೇಕು
 • ವಯಸ್ಸು: 28 ರಿಂದ 58 ವರ್ಷಗಳು**
 • ಉದ್ಯೋಗ: ಯಾವುದೇ ಖಾಸಗಿ, ಸಾರ್ವಜನಿಕ ಅಥವಾ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರಬೇಕು

ಸ್ವಯಂ ಉದ್ಯೋಗಿಗಳಿಗಾಗಿ

 • ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ಯಾವುದೇ ಸ್ಥಳಗಳಲ್ಲಿ ಆಸ್ತಿಯೊಂದಿಗೆ ಭಾರತದ ನಿವಾಸಿಯಾಗಿರಬೇಕು
 • ವಯಸ್ಸು: 25 ರಿಂದ 70 ವರ್ಷಗಳು**
 • ಉದ್ಯೋಗ: ಸ್ಥಿರ ಆದಾಯದ ಮೂಲದೊಂದಿಗೆ ಅಸ್ತಿತ್ವದಲ್ಲಿರುವ ಉದ್ಯಮದಲ್ಲಿ ಅಗತ್ಯವಿರುವ ಬಿಸಿನೆಸ್ ಹಿನ್ನೆಲೆಯನ್ನು ಸ್ಥಾಪಿಸಲು ಸಾಧ್ಯವಾಗಬೇಕು

ಅಡಮಾನ ಲೋನ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಅಡಮಾನ ಲೋನಿಗೆ ಪ್ರಕ್ರಿಯಾ ಶುಲ್ಕಗಳೇನು?

ಭಾರತದ ಪ್ರಮುಖ NBFCಗಳಲ್ಲಿ ಒಂದಾದ, ಬಜಾಜ್ ಫಿನ್‌‌ಸರ್ವ್ ಪ್ರಾಪರ್ಟಿ ಲೋನ್‌‌ಗಳ ಮೇಲೆ ಕೈಗೆಟಕುವ ಬಡ್ಡಿ ದರಗಳು ಮತ್ತು ಹೆಚ್ಚುವರಿ ಫೀಸನ್ನು ಆಫರ್ ಮಾಡುತ್ತದೆ. ಸಾಲ ಪಡೆಯುವವರು ಸುಲಭ ಮರುಪಾವತಿ ಅಡಮಾನ ಲೋನ್ ಶುಲ್ಕಗಳನ್ನು ಆನಂದಿಸಬಹುದು, ಯಾವುದೇ ಮರೆಮಾಚಿದ ಶುಲ್ಕಗಳಿಲ್ಲದ ಪಾರದರ್ಶಕ ಪಾಲಿಸಿಗೆ ಧನ್ಯವಾದಗಳು.

ಬಜಾಜ್ ಫಿನ್‌‌ಸರ್ವ್ 7% ವರೆಗಿನ ನಾಮಮಾತ್ರದ ಲೋನ್ ಪ್ರಕ್ರಿಯಾ ಫೀಸನ್ನು ವಿಧಿಸುತ್ತದೆ*. ಇವುಗಳ ಹೊರತಾಗಿ, ನೀವು ಈ ಎಲ್ಲಾ ಶುಲ್ಕಗಳನ್ನು ಪೂರೈಸಬೇಕು:

 • ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳು (ಸಂಬಳ ಪಡೆಯುವ ಸಾಲಗಾರರಿಗೆ): 9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)*
 • ಪ್ರತಿ ತಿಂಗಳಿಗೆ ದಂಡದ ಬಡ್ಡಿ – ಅನ್ವಯವಾಗುವ ತೆರಿಗೆಗಳೊಂದಿಗೆ 2% ವರೆಗೆ

ಬಜಾಜ್ ಫಿನ್‌ಸರ್ವ್‌ನೊಂದಿಗೆ ತುಲನಾತ್ಮಕವಾಗಿ ಕಡಿಮೆ ಪ್ರಾಪರ್ಟಿ ಲೋನ್ ದರಗಳನ್ನು ಆನಂದಿಸಿ ಮತ್ತು ಅನುಮೋದನೆಯ 4 ದಿನಗಳಲ್ಲಿ ವಿತರಿಸಲಾದ ಹಣವನ್ನು ಕಂಡುಕೊಳ್ಳಿ.

ಅಡಮಾನ ಲೋನ್ ಅವಧಿ ಎಂದರೇನು?

ಸಾಮಾನ್ಯವಾಗಿ, ಅಡಮಾನ ಲೋನ್ 18 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಯೊಂದಿಗೆ ದೀರ್ಘಾವಧಿಯ ಕ್ರೆಡಿಟ್ ಮುಂಗಡವಾಗಿದೆ. ಆದಾಗ್ಯೂ, ಗರಿಷ್ಠ ಅವಧಿಯು ಅರ್ಜಿದಾರರ ಪ್ರೊಫೈಲ್, ಉದ್ಯೋಗ, ವಯಸ್ಸು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.

ಉದಾಹರಣೆಗೆ, ಸ್ವ- ಉದ್ಯೋಗಿ ಅರ್ಜಿದಾರರು 18 ವರ್ಷಗಳವರೆಗಿನ ಲೋನ್ ಅವಧಿಯನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಹೊಂದಿರುತ್ತಾರೆ. ಸಾಲದಾತರಿಂದ ಸಾಲದಾತರಿಗೆ ಬದಲಾಗಬಹುದಾದ ನಾಮಮಾತ್ರದ ಶುಲ್ಕಗಳನ್ನು ಪಾವತಿಸಿ, ಲೋನ್ ಮೊತ್ತವನ್ನು ಪೂರ್ವ ಪಾವತಿ ಅಥವಾ ಭಾಗಶಃ ಪೂರ್ವ ಪಾವತಿ ಮಾಡುವ ಆಯ್ಕೆಯನ್ನು ಸಾಲಗಾರರು ಹೊಂದಿರುತ್ತಾರೆ ಎಂಬುದನ್ನು ಗಮನಿಸಿ. ಅಂತಹ ಪಾವತಿಗಳ ನಂತರ, ಸಾಲಗಾರರು EMI ಮೊತ್ತವನ್ನು ಕಡಿಮೆ ಮಾಡುವ ಅಥವಾ EMI ಗಳನ್ನು ಸ್ಥಿರವಾಗಿರಿಸಿ, ಅವಧಿಯನ್ನು ಮೊಟಕುಗೊಳಿಸುವ ಆಯ್ಕೆ ಮಾಡಬಹುದು.

ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಒಬ್ಬರು ಅಡಮಾನ ಲೋನನ್ನು ಹೇಗೆ ಮರುಪಾವತಿ ಮಾಡಬಹುದು?

ಬಜಾಜ್ ಫಿನ್‌‌ಸರ್ವ್‌‌ನಿಂದ ನೀವು ಯಾವಾಗ ಆಸ್ತಿ ಮೇಲಿನ ಲೋನ್ ಅಥವಾ ಅಡಮಾನ ಲೋನನ್ನು ಪಡೆದುಕೊಳ್ಳಬಹುದು, ನೀವು ಅನುಕೂಲಕರ ಮರುಪಾವತಿ ಕಾಲಾವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಡಮಾನ ಲೋನ್ ಮರುಪಾವತಿ ಎಂದರೇನು ಎಂದು ನೀವು ಯೋಚಿಸಿದರೆ, ಅದರ ಅರ್ಥವೇನೆಂದರೆ ಸಾಲ ಪಡೆದ ಅಸಲು ಮತ್ತು ಪಾವತಿಸಬೇಕಾದ ಬಡ್ಡಿಯನ್ನು ಪಾವತಿಸುವುದು. ಸಾಲ ಪಡೆದುಕೊಂಡವರು 18 ವರ್ಷಗಳ ದೀರ್ಘ ಕಾಲಾವಧಿಯವರೆಗೆ ನಿರ್ವಹಿಸಬಹುದಾದ EMI ಗಳಾಗಿ ಮರುಪಾವತಿಗಳನ್ನು ಸುಲಭವಾಗಿ ಮಾಡಬಹುದು.

ಆದಾಗ್ಯೂ, ನಿಮ್ಮ ಕೈಯಲ್ಲಿ ಹೆಚ್ಚುವರಿ ಹಣವಿದ್ದರೆ, ಕಾಲಾವಧಿಯ ಕೊನೆಗೆ ಮುಂಚಿತವಾಗಿ ನೀವು ಪ್ರಾಪರ್ಟಿ ಲೋನ್ ಮರುಪಾವತಿ ಆಯ್ಕೆ ಮಾಡಬಹುದು. ಬಜಾಜ್ ಫಿನ್‌‌ಸರ್ವ್ ಭಾಗಶಃ- ಪೂರ್ವಪಾವತಿ ಮತ್ತು ಫೋರ್‌‌ಕ್ಲೋಸರ್ ಸೌಲಭ್ಯ ಎರಡನ್ನೂ ನಾಮ ಮಾತ್ರದ ಶೂನ್ಯ ಶುಲ್ಕಗಳೊಂದಿಗೆ ಆಫರ್ ಮಾಡುತ್ತದೆ. ಇಎಂಐ ಮೊತ್ತ ಅಥವಾ ಲೋನ್ ಕಾಲಾವಧಿಯೊಂದಿಗೆ ಅಸಲು ಬಾಕಿಯನ್ನು ಸುಲಭವಾಗಿ ಕಡಿಮೆಗೊಳಿಸಿ.

ನೀವು ಅಡಮಾನ ಲೋನಿಗೆ ಮೇಲಾಧಾರ ಅಥವಾ ಭದ್ರತೆಯನ್ನು ಒದಗಿಸುವುದು ಅವಶ್ಯವೇ?

ಅಡಮಾನ ಲೋನಿನ ಪ್ರಾಥಮಿಕ ಅರ್ಥವೇನೆಂದರೆ ಆಸ್ತಿ ಮೇಲಾಧಾರವಾಗಿ ಲೋನನ್ನು ವಿತರಿಸಲಾಗುವುದು.

ಈ ಕೆಳಗಿನ ಯಾವುದೇ ಆಸ್ತಿಗಳ ಮೇಲೆ ಬಜಾಜ್ ಫಿನ್‌ಸರ್ವ್‌ನಿಂದ ರೂ. 5 ಕೋಟಿಯವರೆಗಿನ ಪ್ರಾಪರ್ಟಿ ಲೋನ್ ಪಡೆಯಿರಿ.

 • ಯಾವುದೇ ರೀತಿಯ ಕೈಗಾರಿಕಾ ಆಸ್ತಿ
 • ಅಪಾರ್ಟ್‌‌ಮೆಂಟ್‌‌ಗಳು, ಮನೆ ಮತ್ತು ಇತರೆ ವಸತಿ ಆಸ್ತಿಗಳು
 • ಆಫೀಸ್, ಹೋಟೆಲ್ ಮತ್ತು ಇತರೆ ಕಮರ್ಷಿಯಲ್ ಪ್ರಾಪರ್ಟಿಗಳು

ಆಸ್ತಿ ಮೇಲಿನ ಲೋನ್ ಎಂದರೇನು ಎಂಬ ಇನ್ನೊಂದು ವ್ಯಾಖ್ಯಾನವೆಂದರೆ, ಯಾವುದೇ ಅಂತಿಮ ಬಳಕೆಯ ನಿರ್ಬಂಧವಿಲ್ಲದೆ ಇದು ಸುರಕ್ಷಿತ ಲೋನ್ ಆಗಿದೆ. ಆನ್ಲೈನ್ ಅಪ್ಲಿಕೇಶನ್ ಫಾರಂ ಮೂಲಕ ಪ್ರಾಪರ್ಟಿ ಲೋನ್ ಪಡೆದುಕೊಳ್ಳುವುದು ಹೇಗೆ ಎಂಬ ಪ್ರಕ್ರಿಯೆ ಸರಳವಾಗಿದೆ.

ಅಡಮಾನ ಲೋನ್‌ಗೆ ಯಾರು ಸಹ-ಅರ್ಜಿದಾರರಾಗಬಹುದು?

ಸಹ-ಅರ್ಜಿದಾರರು ಆಸ್ತಿ ಮೇಲಿನ ಲೋನ್‌ಗೆ ಸಹ-ಸಾಲಗಾರರಾಗಿರುತ್ತಾರೆ. ನಿರ್ದಿಷ್ಟ ಆಸ್ತಿಯ ಸಹ-ಮಾಲೀಕರು ಯಾವಾಗಲೂ ಆ ನಿವಾಸದ ಮೇಲಿನ ಲೋನಿಗೆ ಸಹ-ಅರ್ಜಿದಾರರಾಗಿರಬೇಕು. ಆದಾಗ್ಯೂ, ಹಣಕಾಸು ಸಂಸ್ಥೆಗಳು ಅಡಮಾನ ಲೋನ್‌ಗೆ ಸಹ-ಅರ್ಜಿ ಸಲ್ಲಿಸಲು ನಿರ್ದಿಷ್ಟ ಸಂಬಂಧಿಗಳಿಗೆ ಮಾತ್ರ ಅವಕಾಶ ಕೊಡುತ್ತವೆ. 18 ವರ್ಷಗಳ ಒಳಗಿನ ವ್ಯಕ್ತಿಗಳನ್ನು ಸಹ-ಅರ್ಜಿದಾರರನ್ನಾಗಿ ಪರಿಗಣಿಸಲಾಗುವುದಿಲ್ಲ.

ಪೋಷಕರು ತಮ್ಮ ಗಂಡು ಮಕ್ಕಳು ಅಥವಾ ಅವಿವಾಹಿತ ಹೆಣ್ಣು ಮಕ್ಕಳ ಜೊತೆಗೆ ಇಂತಹ ಲೋನ್‌ಗೆ ಸಹ-ಅರ್ಜಿ ಸಲ್ಲಿಸಬಹುದು. ಅಂತಹ ರೀತಿಯಲ್ಲಿ ಇಬ್ಬರು ಸಹೋದರರು ಕೂಡ ಕ್ರೆಡಿಟ್‌ಗಳನ್ನು ಪಡೆಯಬಹುದು. ಅದೇ ರೀತಿ, ದಂಪತಿಗಳು ಜಂಟಿ ಹೋಮ್ ಲೋನ್ ಅಥವಾ ಆಸ್ತಿ ಮೇಲಿನ ಲೋನ್ ಅನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಸಹೋದರ-ಸಹೋದರಿ ಅಥವಾ ಇಬ್ಬರು ಸಹೋದರಿಯರಂಥ ಕೆಲವು ಸಂಬಂಧಿಗಳು ಜಂಟಿ ಲೋನ್‌ಗಳನ್ನು ಪಡೆಯಲು ಸಾಧ್ಯವಿಲ್ಲ.

ಜಂಟಿ ಅಡಮಾನ ಲೋನ್‌ಗೆ ಅಪ್ಲೈ ಮಾಡಲು ಸ್ನೇಹಿತರು ಕೂಡ ಅನರ್ಹರಾಗಿದ್ದಾರೆ. ಜಂಟಿ ಸಾಲಗಳು ವರ್ಧಿತ ಅರ್ಹತೆಯಂತಹ ಭಾರಿ ಪ್ರಯೋಜನಗಳಿಗೆ ಕಾರಣವಾಗುತ್ತವೆ. ಲೋನ್ ಪ್ರಕ್ರಿಯೆ ನಡೆಯುವ ಮೊದಲು ಸಾಲಗಾರರ ಕ್ರೆಡಿಟ್ ಸ್ಕೋರ್ ಮತ್ತು ಹಿಸ್ಟರಿ ಎರಡನ್ನೂ ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಜಂಟಿ ಆಸ್ತಿ ಲೋನ್ ಅರ್ಜಿದಾರರಿಗೆ ತೆರಿಗೆ ಕಡಿತಗಳನ್ನು ಪಡೆಯಲು ಸಹ ಅವಕಾಶ ನೀಡುತ್ತದೆ, ಎಲ್ಲಾ ಸಹ-ಸಾಲಗಾರರಿಗೆ ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿಯ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಅಡಮಾನ ಲೋನ್‌ಗಳ ವಿಧಗಳು ಯಾವುವು?

ಭಾರತದಲ್ಲಿ ವಿವಿಧ ರೀತಿಯ ಅಡಮಾನ ಲೋನ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

 • ಆಸ್ತಿ ಮೇಲಿನ ಲೋನ್
 • ಮನೆ ಖರೀದಿ ಅಥವಾ ನಿರ್ಮಾಣಕ್ಕಾಗಿ ಹೋಮ್ ಲೋನ್
 • ಮನೆ ನವೀಕರಣಕ್ಕಾಗಿ ಆಸ್ತಿ ಮೇಲಿನ ಲೋನ್
 • ಲೋನಿನ ತೀರಿಸಲು ಆಸ್ತಿ ಮೇಲೆ ಲೋನ್
 • ಶಾಪ್ ಮೇಲೆ ಲೋನ್
 • ಮಶಿನರಿ ಮೇಲಿನ ಲೋನ್
 • ಮದುವೆಗಾಗಿ ಆಸ್ತಿಯ ಮೇಲೆ ಲೋನ್
 • ಉನ್ನತ ವಿದ್ಯಾಭ್ಯಾಸಕ್ಕೆ ಆಸ್ತಿಯ ಮೇಲೆ ಲೋನ್
ಅಡಮಾನ ಲೋನ್ ತೆಗೆದುಕೊಳ್ಳುವಾಗ ಇನ್ಶೂರೆನ್ಸ್ ಕಡ್ಡಾಯವಾಗಿದೆಯೇ?

ನೀವು ಅಡಮಾನ ಲೋನ್ ತೆಗೆದುಕೊಳ್ಳಲು ಬಯಸುವ ಆಸ್ತಿಯನ್ನು ಆಸ್ತಿಯ ಮೌಲ್ಯಕ್ಕಿಂತ ಕಡಿಮೆಯಿಲ್ಲದ ಮೊತ್ತಕ್ಕೆ ಸಮಗ್ರವಾಗಿ ವಿಮೆ ಮಾಡಿಸಬೇಕು ಮತ್ತು ಅದು ಎಲ್ಲಾ ಅಪಾಯಗಳನ್ನು ಕವರ್ ಮಾಡಿರಬೇಕು.

ಅಡಮಾನ ಲೋನ್ ತೆಗೆದುಕೊಳ್ಳುವಾಗ ನಾನು ಯಾವುದೇ ಮುಂಪಾವತಿ ದಂಡವನ್ನು ಪಾವತಿಸಬೇಕೇ?

ಇಲ್ಲ, ಬಜಾಜ್ ಫಿನ್‌ಸರ್ವ್‌ನಿಂದ ಅಡಮಾನ ಲೋನ್ ತೆಗೆದುಕೊಳ್ಳುವಾಗ ಪೂರ್ವಪಾವತಿ ದಂಡವಿಲ್ಲ. ಅನೇಕ ಪೂರ್ವಪಾವತಿ ಪ್ರಕ್ರಿಯೆಗಳು ಗ್ರಾಹಕರಿಗೆ ತಮ್ಮ ಅಡಮಾನದ ಕೆಲವು ಶೇಕಡಾವಾರುಗಳವರೆಗೆ ಶುಲ್ಕವನ್ನು ಎದುರಿಸದೆ ಪಾವತಿಸುವ ನಿಬಂಧನೆಗಳನ್ನು ಒಳಗೊಂಡಿರುತ್ತವೆ. ಪ್ರಕ್ರಿಯೆ ಮತ್ತು ಅವಶ್ಯಕತೆಗಳ ವಿವರಗಳನ್ನು ಪಡೆಯಲು ನಿಮ್ಮ ಸಾಲದಾತರನ್ನು ಸಂಪರ್ಕಿಸಿ.

ಅಡಮಾನ ಮತ್ತು ರಿವರ್ಸ್ ಅಡಮಾನದ ನಡುವಿನ ವ್ಯತ್ಯಾಸವೇನು?

ಅಡಮಾನ ಮತ್ತು ರಿವರ್ಸ್ ಅಡಮಾನ ಲೋನ್ ನಡುವಿನ ವ್ಯತ್ಯಾಸಗಳು ಈ ರೀತಿಯಾಗಿವೆ:

 • ಅಡಮಾನ ಲೋನ್ ಸ್ಥಿರ ಆಸ್ತಿಯ ಅಡಮಾನದ ಮೇಲೆ ಹಣಕಾಸನ್ನು ಒದಗಿಸುತ್ತದೆ. ರಿವರ್ಸ್ ಅಡಮಾನ ಲೋನ್ ವಸತಿ ಆಸ್ತಿಯ ಇಕ್ವಿಟಿ ಬಿಲ್ಡ್-ಅಪ್ ಮೇಲೆ ಹಣವನ್ನು ಒದಗಿಸುತ್ತದೆ
 • ನಿಯಮಿತ ಅಡಮಾನ ಲೋನನ್ನು ವಸತಿ ಅಥವಾ ವಾಣಿಜ್ಯ ಆಸ್ತಿ ಅಥವಾ ಯಂತ್ರೋಪಕರಣಗಳನ್ನು ಅಡವಿಡುವ ಮೂಲಕ ಪಡೆದುಕೊಳ್ಳಬಹುದು. ಆದರೆ ಸಾಲಗಾರರು ವಾಸಿಸುತ್ತಿರುವ ವಸತಿ ಆಸ್ತಿಯನ್ನು ಮಾತ್ರ, ರಿವರ್ಸ್ ಅಡಮಾನಕ್ಕಾಗಿ ಬಳಸಬಹುದು
 • ಎಲ್ಲಾ ರೀತಿಯ ಸಾಲಗಾರರಿಂದ ಅಡಮಾನ ಲೋನ್‌ಗಳನ್ನು ಪಡೆದುಕೊಳ್ಳಬಹುದು. ರಿವರ್ಸ್ ಅಡಮಾನಗಳು ಹಿರಿಯ ನಾಗರಿಕರಿಗಾಗಿ ಮಾತ್ರ ಇವೆ
 • ಅಡಮಾನ ಲೋನ್‌ಗಳನ್ನು ನಿರ್ಧರಿತ ಅವಧಿಯಲ್ಲಿ ಮರುಪಾವತಿಸಬೇಕಾಗುತ್ತದೆ. ಆದರೆ ರಿವರ್ಸ್ ಅಡಮಾನಗಳ ಅಡಿಯಲ್ಲಿ, ಸಾಲಗಾರ ಅಥವಾ ನಾಮಿನಿಯ ಮರಣದವರೆಗೆ ಯಾವುದೇ ಮರುಪಾವತಿ ಅಗತ್ಯವಿರುವುದಿಲ್ಲ
 • ಅಡಮಾನ ಲೋನ್‌ಗಳ ಅಡಿಯಲ್ಲಿ ಮರುಪಾವತಿ ಹೊಣೆಗಾರಿಕೆಯು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ರಿವರ್ಸ್ ಅಡಮಾನಗಳ ಅಡಿಯಲ್ಲಿ, ಮರುಪಾವತಿ ಹೊಣೆಗಾರಿಕೆಗಳು ರಿವರ್ಸ್ ಅಡಮಾನ ಆಸ್ತಿಯ ಮೌಲ್ಯವನ್ನು ಎಂದಿಗೂ ಮೀರಬಾರದು
ಇನ್ನಷ್ಟು ಓದಿರಿ ಕಡಿಮೆ ಓದಿ