ಹೋಮ್ ಲೋನ್ ಮುಂಪಾವತಿ ಪ್ರಕ್ರಿಯೆ ಇವುಗಳನ್ನು ಒಳಗೊಂಡಿದೆ:
1. ಸಾಲದಾತರಿಗೆ ತಿಳಿಸುವುದು: ನೀವು ಯೋಜನೆಗೆ ಮುಂಚೆಯೇ ಲೋನನ್ನು ಪಾವತಿ ಮಾಡುತ್ತಿರುವುದರಿಂದ, ಸಾಲದಾತರಿಗೆ ಮುಂಚೆಯೇ ಬರವಣಿಗೆಯ ಮೂಲಕ ತಿಳಿಸಬೇಕಾಗುವುದು.
2. ದಂಡ ಶುಲ್ಕವನ್ನು ಪಾವತಿಸಿ (ಯಾವುದಾದರೂ ಇದ್ದರೆ); RBI ಕಡ್ಡಾಯದಂತೆ ಪ್ಲೋಟಿಂಗ್ ಬಡ್ಡಿಗಾಗಿ ಪೂರ್ವ ಪಾವತಿಗೆ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ. ಆದರೆ ಕೆಲವು ಸಾಲದಾತರು ಹೋಮ್ ಲೋನನ್ನು ಮುಂಚಿತವಾಗಿಯೇ ತೀರಿಸಿದಾಗ ಅದಕ್ಕಾಗಿ ಶುಲ್ಕವನ್ನು ವಿಧಿಸಬಹುದು
3. ಫೋರ್ಕ್ಲೋಶರ್: ನೀವು ಯಾವುದೇ ಮೊತ್ತವನ್ನು ಮುಂಪಾವತಿ ಮಾಡಬಹದು, (ಒಟ್ಟು ಮೊತ್ತವು ಮೂರು EMI ಗಳ ಮೊತ್ತದಷ್ಟಿರಬೇಕು) ಇದನ್ನು ನೀವು ಮೊದಲ EMI ಪಾವತಿಸಿದ ಮೇಲೆ ಮಾಡಬಹುದು. ನಿಮ್ಮ ಹೋಮ್ ಲೋನಿನ ಭಾಗಶಃ ಮುಂಪಾವತಿ ಮಾಡಲು ಯಾವುದೇ ಗರಿಷ್ಠ ಮೊತ್ತದ ಮಿತಿಯಿಲ್ಲ
ಹೋಮ್ ಲೋನ್ ಮುಂಪಾವತಿ ಸಲಹೆಗಳು
• ಲೋನಿನ ಅವಧಿಗೆ ಮುನ್ನವೇ ಮುಂಪಾವತಿ ಮಾಡಲು ಯೋಜನೆ.
• ಫೋರ್‌ಕ್ಲೋಸರ್ ಮಾಡುವುದಕ್ಕಿಂತ ಫಂಡ್ ಅನ್ನು ಬೇರೆ ರೀತಿಯಲ್ಲಿ ಬಳಸುವುದರ ಲಾಭಗಳ ಕುರಿತು ಯೋಚಿಸಿ.
• ಸಾಲದಾತರಿಂದ ಒಂದು ಸ್ವೀಕೃತಿ ಪತ್ರವನ್ನು ಪಡೆಯಿರಿ.
• ಫೋರ್‌ಕ್ಲೋಸರ್ ನಂತರ ಎಲ್ಲಾ ಮೂಲ ಡಾಕ್ಯುಮೆಂಟ್‌ಗಳನ್ನು ಪಡೆದುಕೊಳ್ಳಿ.
• ನಿರ್ಧರಿಸುವ ಮೊದಲು, ತೆರಿಗೆ ಪ್ರಯೋಜನಗಳನ್ನು ಪರಿಶೀಲಿಸಿ.
ಹೋಮ್ ಲೋನ್ ಮುಂಪಾವತಿ ನಿಯಮಗಳು
• ನೀವು ಮುಂಪಾವತಿ ಮಾಡಲು ಯೋಜಿಸಿದಾಗ ಸರ್ಕಾರಿ ಗುರುತಿನ ಪುರಾವೆ ಒಯ್ಯಿರಿ.
• ಮುಂಪಾವತಿ ಮಾಡಲು ಸಂಬಂಧಪಟ್ಟ ಪೂರಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
• ದುರ್ಬಳಕೆ ತಪ್ಪಿಸಲು ಸಾಲದಾತರಿಂದ ಬಳಸದ ಚೆಕ್ ಗಳನ್ನು ಸಂಗ್ರಹಿಸಿ.
ಬಜಾಜ್ ಫಿನ್ಸರ್ವ್ನಿಮ್ಮ ಹೋಮ್ ಲೋನ್ ಫೋರ್ಕ್ಲೋಸರ್ಗಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮೂಲಕ ನೀವು ಅನುಕೂಲಕರವಾಗಿ ಮುಂಪಾವತಿ ಮಾಡಬಹುದು.
ಹೆಚ್ಚುವರಿ ಓದು: ನಿಮ್ಮ ಗೃಹ ಲೋನ್ ಅನ್ನು ಮುಂಗಡವಾಗಿ ಪಾವತಿ ಮಾಡುವಾಗ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು