ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಲೋನ್ ಹೇಗೆ ಪಡೆಯಬಹುದು ಎಂದು ನೋಡಿ

2 ನಿಮಿಷದ ಓದು

ಪರ್ಸನಲ್ ಲೋನ್ ಪಡೆಯುವುದು ಸುಲಭವಾಗಿದ್ದು, ಅದನ್ನು ಅಸಂಖ್ಯಾತ ರೀತಿಯಲ್ಲಿ ಬಳಸಬಹುದಾದರೂ ಸಹ, ತಕ್ಷಣವೇ ಸಾಕಷ್ಟು ಹಣ ಪಡೆಯಲು ನೀವು ಕೆಲವು ಮಾನದಂಡಗಳನ್ನು ಪೂರೈಸಲೇಬೇಕು. ಉದಾಹರಣೆಗೆ, ಪರ್ಸನಲ್ ಲೋನ್ ಅನುಮೋದನೆಗೆ ಹೆಚ್ಚಿನ ಸಿಬಿಲ್ ಸ್ಕೋರ್ ಅತ್ಯಗತ್ಯ.

ನಿಮ್ಮ ಕ್ರೆಡಿಟ್ ಮತ್ತು ಮರುಪಾವತಿ ಹಿನ್ನೆಲೆಯನ್ನು ಅವಲಂಬಿಸಿ ನಿಮ್ಮ ಸಿಬಿಲ್ ಸ್ಕೋರ್ 300 ರಿಂದ 900 ನಡುವೆ ಇರುತ್ತದೆ. ಸಾಮಾನ್ಯವಾಗಿ, ಇದು ಪರ್ಸನಲ್ ಲೋನ್‌ಗೆ 750 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಯಾವುದೇ ಮೇಲಾಧಾರವಿಲ್ಲದ ಕಾರಣ, ಸಾಲದಾತರಿಗೆ ನಿಮ್ಮ ಮರುಪಾವತಿ ಸಾಮರ್ಥ್ಯದ ಬಗ್ಗೆ ಭರವಸೆ ಮೂಡಲು ಹೆಚ್ಚಿನ ಸ್ಕೋರ್ ಬೇಕಾಗುತ್ತದೆ.

ಇನ್ನಷ್ಟು ಓದಿರಿ: 550-600 ಸಿಬಿಲ್ ಸ್ಕೋರ್‌ಗಾಗಿ ಪರ್ಸನಲ್ ಲೋನ್

'ಸಿಬಿಲ್ ಡಿಫಾಲ್ಟರ್' ಎಂಬ ಪದ ಅಸ್ತಿತ್ವದಲ್ಲೇ ಇಲ್ಲ, ಆದರೆ ನೀವು ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ, ನೀವು ಇತರ ರೀತಿಯಲ್ಲಿ ಮರುಪೂರಣ ಮಾಡದ ಹೊರತು ಪರ್ಸನಲ್ ಲೋನ್‌ಗೆ ಅನುಮೋದನೆ ಪಡೆಯಲು ಸಾಧ್ಯವಿಲ್ಲ.

ಕಡಿಮೆ ಸಿಬಿಲ್ ಸ್ಕೋರ್‌ ಇದ್ದಾಗಲೂ ನಿಮ್ಮ ಪರ್ಸನಲ್ ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು ನೀವು ಈ ಕೆಳಗಿನಂತೆ ಮಾಡಬಹುದು:

ಸಹ-ಅರ್ಜಿ: ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಿ. ಇದು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಸಾಲದಾತರಿಗೆ ಅಪಾಯ ಕಡಿಮೆ ಮಾಡುವುದರ ಜೊತೆಗೆ ನಿಮಗೆ ಫಂಡ್ ಸಿಗುವಂತೆ ಮಾಡುತ್ತದೆ.

ಸಾಕಷ್ಟು ಆದಾಯವನ್ನು ತೋರಿಸಿ: ಇತರ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಹೊರತಾಗಿ, ಮರುಪಾವತಿಗೆ ಸಾಕಷ್ಟು ಆದಾಯವನ್ನು ನೀವು ಹೊಂದಿದ್ದೀರಿ ಎಂದು ತೋರಿಸಿ. ಅಲ್ಲದೆ, ನೀವು ನಿಯಮಿತವಾಗಿ ಆದಾಯವನ್ನು ಪಡೆಯುತ್ತೀರಿ ಎಂಬುದನ್ನು ಹೈಲೈಟ್ ಮಾಡಿ.

ಹೆಚ್ಚಿನ ಬಡ್ಡಿದರ ನಿರೀಕ್ಷಿಸಿ: ಹೆಚ್ಚಿನ ಅಪಾಯವನ್ನು ಕವರ್ ಮಾಡಲು ಸಾಲದಾತರು ಹೆಚ್ಚಿನ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್ ನೀಡಲು ಮುಂದಾಗಬಹುದು. ನಿಮ್ಮ ಬಜೆಟ್ ಅನುಮತಿಸಿದರೆ ನೀವು ಅಂತಹ ಲೋನ್ ತೆಗೆದುಕೊಳ್ಳಬಹುದು.

ನಿಮ್ಮ ಸ್ಕೋರ್ ಸುಧಾರಿಸಿ: ನಿಮ್ಮ ಸಿಬಿಲ್ ಸ್ಕೋರ್ ಅನ್ನು 750 ಕ್ಕೆ ಹೆಚ್ಚಿಸಿ ಮತ್ತು ನಂತರ ಮಾತ್ರ ಲೋನ್‌ಗೆ ಅಪ್ಲೈ ಮಾಡಿ.

ಕಡಿಮೆ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಲು, ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ಈ ಸಲಹೆಗಳನ್ನು ಅನುಸರಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ