ಹೋಮ್ ಲೋನ್ ಇಎಂಐಗಳನ್ನು ಲೆಕ್ಕ ಹಾಕಲು ವಿವರವಾದ ಮಾರ್ಗದರ್ಶಿ

2 ನಿಮಿಷದ ಓದು

ನಿರೀಕ್ಷಿತ ಹೋಮ್ ಲೋನ್ ಮೇಲೆ ಪಾವತಿಸಬೇಕಾದ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಲು, ನೀವು ಆಯ್ಕೆ ಮಾಡಬಹುದಾದ ಎರಡು ಮಾರ್ಗಗಳಿವೆ.

  • ಫಾರ್ಮುಲಾ ಬಳಸಿ ಮತ್ತು ಮಾನ್ಯುಯಲ್ ಆಗಿ ಅದನ್ನು ಲೆಕ್ಕ ಹಾಕಿ
ಇಎಂಐಗಳನ್ನು ಲೆಕ್ಕ ಹಾಕುವ ಈ ವಿಧಾನಕ್ಕೆ ನೀವು ಈ ಕೆಳಗಿನ ಫಾರ್ಮುಲಾವನ್ನು ಬಳಸಬೇಕಾಗುತ್ತದೆ:
ಇಎಂಐ = [P x r x (1+r)^n]/[(1+r)^n-1]
 
ಮೇಲಿನ ಫಾರ್ಮುಲಾದಲ್ಲಿ, 'P' ಅಸಲು ಮೊತ್ತವನ್ನು ಪ್ರತಿನಿಧಿಸುತ್ತದೆ, 'R' ಮಾಸಿಕವಾಗಿ ಲೆಕ್ಕ ಹಾಕಲಾದ ಬಡ್ಡಿ ದರವನ್ನು ನಿರ್ಧರಿಸುತ್ತದೆ, ಮತ್ತು 'N' ನಿಮ್ಮ ಅವಧಿಯ ಉದ್ದವಾಗಿದೆ.
 
  • ಇಎಂಐ ಕ್ಯಾಲ್ಕುಲೇಟರ್ ಬಳಸಿ

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಇಎಂಐ ಗಳ ಲೆಕ್ಕಾಚಾರವನ್ನು ಸರಳಗೊಳಿಸುವ ಸುಲಭವಾದ ಆನ್ಲೈನ್ ಸಾಧನವಾಗಿದೆ. ನಿಮ್ಮ ಇಎಂಐಗಳನ್ನು ಮಾನ್ಯುಯಲ್ ಆಗಿ ಲೆಕ್ಕ ಹಾಕುವ ತೊಂದರೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಈ ವಿಧಾನದೊಂದಿಗೆ, ನೀವು ಅನುಸರಿಸಬೇಕಾದ ಹಂತಗಳು ಸರಳವಾಗಿವೆ.

  • ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ವೆಬ್‌ಪೇಜಿಗೆ ಲಾಗ್ ಆನ್ ಮಾಡಿ
  • ಸ್ಲೈಡರನ್ನು ಸರಿಹೊಂದಿಸಿ ಅಥವಾ ಅಸಲು, ಕಾಲಾವಧಿ ಮತ್ತು ಬಡ್ಡಿ ದರಕ್ಕೆ ಸಂಬಂಧಿಸಿದ ಮೊತ್ತವನ್ನು ನಮೂದಿಸಿ
  • ಕ್ಯಾಲ್ಕುಲೇಟ್' ಕ್ಲಿಕ್ ಮಾಡಿ ಅಥವಾ ಪಾವತಿಸಬೇಕಾದ ಆಟೋಮ್ಯಾಟಿಕ್ ಆಗಿ ಲೆಕ್ಕ ಹಾಕಲಾದ ಇಎಂಐಗಳನ್ನು ನೋಡಿ

ನೀವು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿದಾಗ, ನೀವು ನಿಮ್ಮ ಒಟ್ಟು ವೆಚ್ಚವನ್ನು ಕೂಡ ನೋಡಬಹುದು. ಫಲಿತಾಂಶಗಳು ನೀವು ಪಾವತಿಸಬೇಕಾದ ಒಟ್ಟು ಬಡ್ಡಿ, ಒಟ್ಟು ಲೋನ್ ಮೊತ್ತ ಮತ್ತು ಇಎಂಐಗಳನ್ನು ನಿಮಗೆ ತಿಳಿಸುತ್ತವೆ. ಫಲಿತಾಂಶಗಳು ಮರುಪಾವತಿ ವೇಳಾಪಟ್ಟಿಯ ದೃಶ್ಯ ಪ್ರಾತಿನಿಧ್ಯದ ಜೊತೆಗೆ ಇರುತ್ತವೆ, ಇದು ಇನ್ನಷ್ಟು ಮಾಹಿತಿಯುಕ್ತವಾಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ