ಹೋಮ್ ಲೋನ್ ಪರಿಶೀಲನಾ ಪ್ರಕ್ರಿಯೆ ಎಂದರೇನು?

2 ನಿಮಿಷದ ಓದು

ಹೋಮ್ ಲೋನ್ ಎನ್ನುವುದು ವಸತಿ ಆಸ್ತಿಯನ್ನು ಖರೀದಿಸಲು ನೀವು ಪಡೆಯಬಹುದಾದ ಹಣಕಾಸು ಪರಿಹಾರವಾಗಿದೆ. ಹೋಮ್ ಲೋನ್ ಪರಿಶೀಲನಾ ಪ್ರಕ್ರಿಯೆಯಲ್ಲಿ, ನಿಮ್ಮ ಆರಂಭಿಕ ಅಪ್ಲಿಕೇಶನ್‌ನಲ್ಲಿ ಒದಗಿಸಲಾದ ಮಾಹಿತಿಯನ್ನು ಬೆಂಬಲಿಸಲು ನೀವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ನಂತರ ಸಾಲದಾತರು ಹಿನ್ನೆಲೆ ಪರಿಶೀಲನೆಗಳನ್ನು ನಡೆಸುವ ಮೂಲಕ ಈ ಡಾಕ್ಯುಮೆಂಟ್‌ಗಳ ದೃಢೀಕರಣವನ್ನು ಪರಿಶೀಲಿಸುತ್ತಾರೆ.

ಪರಿಶೀಲನೆ ಪೂರ್ಣಗೊಂಡ ನಂತರ, ನಿಮ್ಮ ಬಡ್ಡಿ ದರ ಮತ್ತು ಲೋನ್ ಮೊತ್ತವನ್ನು ಅಂತಿಮಗೊಳಿಸಲಾಗುತ್ತದೆ. ವಿತರಣೆಯ ಸಮಯದಲ್ಲಿ ಇವುಗಳು ಬದಲಾಗಬಹುದು, ನಿಮ್ಮ ಕ್ರೆಡಿಟ್ ಪ್ರೊಫೈಲ್ ಬದಲಾಗಬಹುದು.

ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಹೋಮ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

 • ಗುರುತಿನ ಪುರಾವೆ
 • ವಿಳಾಸದ ಪುರಾವೆ
 • ಕೆವೈಸಿ ಡಾಕ್ಯುಮೆಂಟ್‌ಗಳು
 • ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ಸ್ವಯಂ ಉದ್ಯೋಗಿ ಸಾಲಗಾರರಿಗೆ, ಕನಿಷ್ಠ 5 ವರ್ಷಗಳ ಬಿಸಿನೆಸ್ ವಿಂಟೇಜ್ ಪುರಾವೆ
 • ಆಸ್ತಿ ಡಾಕ್ಯುಮೆಂಟ್‌ಗಳು (ಮನೆ ಖರೀದಿ ಒಪ್ಪಂದ)

ಹೋಮ್ ಲೋನ್ ಪರಿಶೀಲನೆಯ ಪ್ರಕ್ರಿಯೆ

ಈ ಕೆಳಗಿನ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಹೋಮ್ ಲೋನ್ ಪರಿಶೀಲನೆಗಾಗಿ ಹಣಕಾಸು ಸಂಸ್ಥೆಗಳು ಅನುಸರಿಸುತ್ತವೆ.

 • ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆಯನ್ನು ಪಡೆದ ನಂತರ, ಮುಂದಿನ ಪ್ರಕ್ರಿಯೆಗಾಗಿ ನಮ್ಮ ಪ್ರತಿನಿಧಿಗಳು 24 ಗಂಟೆಗಳ* ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ
 • ಹೋಮ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನೀವು ಸಲ್ಲಿಸಬೇಕು
 • ಒಮ್ಮೆ ಮುಗಿದ ನಂತರ, ಒದಗಿಸಲಾದ ಮಾಹಿತಿಯ ದೃಢೀಕರಣವನ್ನು ಪರಿಶೀಲಿಸಲು ಹಿನ್ನೆಲೆ ಪರಿಶೀಲನೆಯನ್ನು ನಡೆಸಲಾಗುತ್ತದೆ. ನಿಮ್ಮ ನೋಂದಾಯಿತ ವಿಳಾಸ, ಉದ್ಯೋಗದ ಹಿನ್ನೆಲೆ, ಬ್ಯಾಂಕ್ ವಿವರಗಳು ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ
 • ಹೌಸಿಂಗ್ ಲೋನ್ ಪರಿಶೀಲನೆಯ ನಂತರ, ವಿತರಣೆ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ
 • ನೀವು ಆಸ್ತಿ ಡಾಕ್ಯುಮೆಂಟ್‌ಗಳನ್ನು ಸಹಿ ಮಾಡಿ ಅವುಗಳನ್ನು ಸಲ್ಲಿಸಬೇಕು
 • ಮುಂದೆ, ಡೌನ್ ಪೇಮೆಂಟ್ ಮಾಡಿ. ಇದರ ಶೇಕಡಾವಾರು ಸಾಮಾನ್ಯವಾಗಿ ಸಾಲದಾತರ ಪಾಲಿಸಿ ಮತ್ತು ನಿಮ್ಮ ವೈಯಕ್ತಿಕ ಪ್ರೊಫೈಲ್ ಮೇಲೆ ಅವಲಂಬಿತವಾಗಿರುತ್ತದೆ
 • ಶೀರ್ಷಿಕೆ ಪತ್ರ ಮತ್ತು ಎನ್‌ಒಸಿ ಸೇರಿದಂತೆ ಸಂಬಂಧಿತ ಆಸ್ತಿ ಪತ್ರಗಳ ಕಾನೂನು ಪರಿಶೀಲನೆಯನ್ನು ನಡೆಸಲಾಗುತ್ತದೆ. ಸಲ್ಲಿಸಿದ ಕಾಗದಗಳು ಸಾಕಷ್ಟು ಇಲ್ಲದಿದ್ದರೆ ಅರ್ಜಿದಾರರು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು
 • ಆಸ್ತಿಯ ತಾಂತ್ರಿಕ ಪರಿಶೀಲನೆ, ಅದರ ವಯಸ್ಸು, ನಿರ್ಮಾಣದ ಗುಣಮಟ್ಟ, ಪ್ರಮಾಣಪತ್ರಗಳು ಇತ್ಯಾದಿಗಳನ್ನು ಪರಿಶೀಲಿಸಲು ನಡೆಸಬಹುದು
 • ಒಮ್ಮೆ ಮುಗಿದ ನಂತರ, ಲೋನ್ ಡೀಲ್ ನೋಂದಣಿಯಾಗುತ್ತದೆ, ಮತ್ತು ನೀವು ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ.
 • ನಂತರ, ಹೋಮ್ ಲೋನನ್ನು ವಿತರಿಸಲಾಗುತ್ತದೆ

ಆನ್ಲೈನ್ ಅಪ್ಲಿಕೇಶನ್‌ಗಳೊಂದಿಗೆ, ಹೋಮ್ ಲೋನ್ ಪರಿಶೀಲನಾ ಪ್ರಕ್ರಿಯೆಯು ಈಗ ಸರಳವಾಗಿದೆ ಮತ್ತು ತ್ವರಿತವಾಗಿದೆ. ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಿದ ನಂತರ ಹೋಮ್ ಲೋನ್ ಪರಿಶೀಲನಾ ಪ್ರಕ್ರಿಯೆಯು ಲೋನನ್ನು ಮೌಲ್ಯಕ್ಕೆ ತಲುಪಲು ಸಹಾಯ ಮಾಡುತ್ತದೆ.

ತ್ವರಿತ ಅನುಮೋದನೆಯನ್ನು ಖಚಿತಪಡಿಸಿಕೊಳ್ಳಲು, ನೀವು ಮುಂಚಿತವಾಗಿಯೇ ಅರ್ಹತಾ ಮಾನದಂಡವನ್ನು ಪರಿಶೀಲಿಸುವುದು ಅಗತ್ಯವಾಗಿದೆ. ನಮ್ಮ ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಪರಿಶೀಲಿಸುವ ಮೂಲಕ ಮತ್ತು ಅಪ್ಲೈ ಮಾಡುವ ಮೊದಲು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಕೈಯಲ್ಲಿ ಇಟ್ಟುಕೊಳ್ಳುವ ಮೂಲಕ ನೀವು ಪ್ರಕ್ರಿಯೆಯನ್ನು ಮುಂದುವರೆಸಬಹುದು. ಅರ್ಹ ಲೋನ್ ಮೊತ್ತದ ವಿಷಯದಲ್ಲಿ, ನೀವು ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸುವ ಮೂಲಕ ನಿಮ್ಮ ಅರ್ಹತೆಯನ್ನು ಹೆಚ್ಚಿಸಬಹುದು. ಇತರ ಎಲ್ಲಾ ಜವಾಬ್ದಾರಿಗಳನ್ನು ಮುಚ್ಚಿ ಮತ್ತು ನಿಮ್ಮ ಪ್ರೊಫೈಲಿಗೆ ಅತಿ ಹೆಚ್ಚಿನ ಲೋನ್ ಮೊತ್ತವನ್ನು ನೀಡಲು ನಿಮ್ಮ ಎಲ್ಲಾ ಆದಾಯ ಮೂಲಗಳನ್ನು ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ