ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್ 100% ಪಾರದರ್ಶಕತೆ ಮತ್ತು ಕೈಗೆಟಕುವ ಬಡ್ಡಿ ದರಗಳೊಂದಿಗೆ ರೂ. 2 ಕೋಟಿಯವರೆಗಿನ ಗೋಲ್ಡ್ ಲೋನನ್ನು ಒದಗಿಸುತ್ತದೆ. ಅದರ ಜೊತೆಗೆ, ಬಜಾಜ್ ಫಿನ್‌ಸರ್ವ್ ಭಾಗಶಃ ಪಾವತಿ ಮತ್ತು ಫೋರ್ಕ್ಲೋಸರ್ಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಇದಲ್ಲದೆ, ನಿಮಗೆ ಅಗತ್ಯವಿದ್ದಾಗ, ನಿಮ್ಮ ಕೆಲವು ಚಿನ್ನದ ಆಭರಣಗಳನ್ನು ವಿತ್ಡ್ರಾ ಮಾಡಲು ಅನುವು ಮಾಡಿಕೊಡುವ ಭಾಗಶಃ ಬಿಡುಗಡೆಯ ಸೌಲಭ್ಯವನ್ನು ಕೂಡ ನೀವು ಪಡೆಯಬಹುದು.
ಬಜಾಜ್ ಫಿನ್ಸರ್ವ್ನೊಂದಿಗೆ, ನಿಮ್ಮ ಚಿನ್ನದ ಆಭರಣಗಳು ವಿಶ್ವ ದರ್ಜೆಯ ಸುರಕ್ಷತಾ ಪ್ರೋಟೋಕಾಲ್‌ಗಳೊಂದಿಗೆ ಸುರಕ್ಷಿತವಾಗಿರುವ ಬಲವಾದ ಕೊಠಡಿಯಲ್ಲಿ ಸುರಕ್ಷಿತವಾಗಿರುತ್ತದೆ. ನಿಮ್ಮ ಆಭರಣಗಳ ಅತ್ಯಧಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಶಾಖೆಗಳಲ್ಲಿ ಸಿಸಿಟಿವಿ, ಗೋಲ್ಡ್ ವಾಲ್ಟ್ಗಳು ಮತ್ತು ಮೋಷನ್ ಡಿಟೆಕ್ಟರ್‌ಗಳನ್ನು ಸ್ಥಾಪಿಸಿದ್ದೇವೆ.
ಬಜಾಜ್ ಫಿನ್ಸರ್ವ್ನಲ್ಲಿ, ನಿಮ್ಮ ಚಿನ್ನವನ್ನು ಇನ್ಶೂರೆನ್ಸ್ ಮಾಡಲಾಗಿರುತ್ತದೆ. ನಿಮ್ಮ ಚಿನ್ನದ ಆಭರಣಗಳು ಕಳ್ಳತನವಾದರೆ, ರೆಕಾರ್ಡ್ ಮಾಡಿದ ತೂಕ ಮತ್ತು ಕ್ಯಾರೆಟ್ ಪ್ರಕಾರ ಪ್ರಸ್ತುತ ಚಿನ್ನದ ಬೆಲೆಯ ಆಧಾರದ ಮೇಲೆ ನಿಮ್ಮ ಚಿನ್ನದ ಪೂರ್ಣ ಮೌಲ್ಯಕ್ಕೆ ನಿಮಗೆ ಪರಿಹಾರ ನೀಡಲಾಗುತ್ತದೆ.
ಗೋಲ್ಡ್ ಲೋನ್ ವಿತರಣೆಯ ವಿಧಾನವನ್ನು ನಗದು ಮತ್ತು ಐಎಂಪಿಎಸ್/ ಎನ್ಇಎಫ್‌ಟಿ/ ಆರ್‌ಟಿಜಿಎಸ್ ಮೂಲಕ ಮಾಡಬಹುದು.
ನೀವು ಬಜಾಜ್ ಫಿನ್‌ಸರ್ವ್‌ನಿಂದ ನಿರ್ಧರಿಸಲಾದ ಕನಿಷ್ಠ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಗೋಲ್ಡ್ ಲೋನ್ ಪಡೆಯಲು ನೀವು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯಂತಹ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕು.
ಹೌದು, ನೀವು 1 ವರ್ಷದ ನಂತರ ನಿಮ್ಮ ಲೋನನ್ನು ಮುಂದುವರೆಸಬಹುದು. ಬಜಾಜ್ ಫಿನ್ಸರ್ವ್ನಲ್ಲಿ, ನಿಮ್ಮ ಗೋಲ್ಡ್ ಲೋನನ್ನು ನವೀಕರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ಉಚಿತ ಭಾಗಶಃ ಪಾವತಿ ಸೌಲಭ್ಯದೊಂದಿಗೆ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತದೆ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು 2 ಭಾಗಶಃ ಪಾವತಿಗಳಲ್ಲಿ ನಿಮ್ಮ ಗೋಲ್ಡ್ ಲೋನನ್ನು ಪಾವತಿಸಬಹುದು.
ಬಜಾಜ್ ಫಿನ್‌ಸರ್ವ್ ಅನೇಕ ಮರುಪಾವತಿ ಯೋಜನೆಗಳು ಮತ್ತು ಉಚಿತ ಭಾಗಶಃ ಪಾವತಿ ಮತ್ತು ಫೋರ್‌ಕ್ಲೋಸರ್ ಸೌಲಭ್ಯಗಳೊಂದಿಗೆ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತದೆ. ನೀವು ಆಯ್ಕೆ ಮಾಡಿದ ಮರುಪಾವತಿ ಯೋಜನೆಯನ್ನು ಹೊರತುಪಡಿಸಿ, ನೀವು ಹೆಚ್ಚುವರಿ ಹಣವನ್ನು ಹೊಂದಿರುವಾಗ ನಿಮ್ಮ ಗೋಲ್ಡ್ ಲೋನನ್ನು ಭಾಗಶಃ ಪಾವತಿ ಮಾಡಬಹುದು.
ಈ ಅನಿರೀಕ್ಷಿತ ಸಂದರ್ಭದಲ್ಲಿ, ಬಾಕಿ ಮೊತ್ತವನ್ನು ಪಾವತಿಸುವ ಮೂಲಕ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ತೋರಿಸುವ ಮೂಲಕ ನಿಮ್ಮ ನಾಮಿನಿಯು ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ನೀವು ಅಡವಿಟ್ಟ ಚಿನ್ನವನ್ನು ಕ್ಲೈಮ್ ಮಾಡಬಹುದು.
ಇಲ್ಲ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಚಿನ್ನದ ಆಭರಣಗಳ ಮೇಲೆ ಮಾತ್ರ ಗೋಲ್ಡ್ ಲೋನ್‌ಗಳನ್ನು ನೀಡಬಹುದು.
ನೀವು ಈ ಕೆಳಗಿನ ಆವರ್ತನಗಳಲ್ಲಿ ಬಡ್ಡಿ ಮೊತ್ತವನ್ನು ಪಾವತಿಸುವ ಅನುಕೂಲತೆಯನ್ನು ಹೊಂದಿದ್ದೀರಿ
- ಮಾಸಿಕ - ತಿಂಗಳಿಗೆ ಒಮ್ಮೆ
- ದ್ವಿ-ಮಾಸಿಕ - ಪ್ರತಿ 2 ತಿಂಗಳಿಗೆ ಒಮ್ಮೆ
- ತ್ರೈಮಾಸಿಕ - ಪ್ರತಿ 3 ತಿಂಗಳಿಗೆ ಒಮ್ಮೆ
- ಅರ್ಧ-ವಾರ್ಷಿಕ - ಪ್ರತಿ 6 ತಿಂಗಳಿಗೆ ಒಮ್ಮೆ
- ವಾರ್ಷಿಕವಾಗಿ - ಲೋನ್ ಮೆಚ್ಯೂರಿಟಿಯ ನಂತರ ಅಸಲಿನೊಂದಿಗೆ ಒಂದು ಬಾರಿಯ ಬಡ್ಡಿ ಪಾವತಿ
ಗೋಲ್ಡ್ ಡೆಪಾಸಿಟ್ ರಸೀತಿ (ಜಿಡಿಆರ್) ಸೇರಿದಂತೆ ನಿಮ್ಮ ಅಸ್ತಿತ್ವದಲ್ಲಿರುವ ಗೋಲ್ಡ್ ಲೋನಿನ ಎಲ್ಲಾ ವಿವರಗಳನ್ನು ಒದಗಿಸುವ ಮೂಲಕ ನಿಮ್ಮ ಹಿಂದಿನ ಸಾಲದಾತರೊಂದಿಗೆ ನೀವು ನಿಮ್ಮ ಅಸ್ತಿತ್ವದಲ್ಲಿರುವ ಗೋಲ್ಡ್ ಲೋನನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಟ್ರಾನ್ಸ್‌ಫರ್ ಮಾಡಬಹುದು.
ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಪ್ಯಾನ್ ಕಾರ್ಡ್ ಅಗತ್ಯವಿದೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ನೀವು ಫಾರ್ಮ್ 60 ಗೆ ಸಹಿ ಮಾಡಬೇಕಾಗುತ್ತದೆ. ಫಾರ್ಮ್ 60 ಎಂಬುದು ನೀವು ಪ್ಯಾನ್ ಕಾರ್ಡ್ ಹೊಂದಿಲ್ಲ ಮತ್ತು ನಿಮ್ಮ ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದೆ ಎಂದು ತಿಳಿಸುವ ಸಹಿ ಮಾಡಿದ ಘೋಷಣಾ ಪತ್ರವಾಗಿದೆ. ರೂ. 5 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ನೀವು 22 ಕ್ಯಾರೆಟ್ಗಳ ಚಿನ್ನದ ಆಭರಣಗಳ ಮೇಲೆ ಗೋಲ್ಡ್ ಲೋನ್ ಪಡೆಯಬಹುದು. ಚಿನ್ನದ ನಾಣ್ಯಗಳು, ಬಾರ್‌ಗಳು, ಬುಲಿಯನ್ಗಳು, ಚಿನ್ನದ ಬಿಸ್ಕಟ್ಗಳು, ಚಮಚಗಳು, ಪಾತ್ರೆಗಳು, ಧಾರ್ಮಿಕ ಮೂರ್ತಿಗಳು ಮತ್ತು ಕ್ರೌನ್‌ಗಳ ಮೇಲೆ ಗೋಲ್ಡ್ ಲೋನನ್ನು ನೀಡಲಾಗುವುದಿಲ್ಲ.
ಹೌದು, ನೀವು ನಗದು ರೂಪದಲ್ಲಿ ಗೋಲ್ಡ್ ಲೋನ್ ಮೊತ್ತವನ್ನು ಪಡೆಯಬಹುದು. ಭಾಗಶಃ ನಗದು ಮತ್ತು ಭಾಗಶಃ ಬ್ಯಾಂಕ್ ಅಕೌಂಟಿನಲ್ಲಿ ಲೋನ್ ಮೊತ್ತವನ್ನು ಪಡೆಯಲು ನೀವು ಆಯ್ಕೆ ಮಾಡಬಹುದು. ನೀವು ನಗದು ರೂಪದಲ್ಲಿ ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತ ರೂ. 1,99,999.
ಗೋಲ್ಡ್ ಡೆಪಾಸಿಟ್ ರಸೀತಿ ಅಥವಾ ಜಿಡಿಆರ್ ಎನ್ನುವುದು ಗೋಲ್ಡ್ ಲೋನ್‌ಗಾಗಿ ಸಾಲದಾತರ ಬಳಿ ನೀವು ಅಡವಿಡುವ ನಿಮ್ಮ ಚಿನ್ನದ ಪುರಾವೆಯಾಗಿದೆ. ಒಬ್ಬ ವ್ಯಕ್ತಿಯು ತಾವು ಗೋಲ್ಡ್ ಲೋನ್ ಪಡೆದ ತಮ್ಮ ಅಸ್ತಿತ್ವದಲ್ಲಿರುವ ಸಾಲದಾತರನ್ನು ಬದಲಾಯಿಸಲು ಬಯಸಿದರೆ ಈ ಡಾಕ್ಯುಮೆಂಟ್ ಮುಖ್ಯವಾಗಿದೆ.