ವರ್ಕಿಂಗ್ ಕ್ಯಾಪಿಟಲ್ ಲೋನ್, ಒಂದು ಬಗೆಯ ಮುಂಗಡ ಲೋನಾಗಿದೆ, ಇದು ಬಿಸಿನೆಸ್ಗೆ ತನ್ನ ದಿನನಿತ್ಯದ ಅಥವಾ ಅಲ್ಪಾವಧಿಯ ಕಾರ್ಯಾಚರಣೆಗಳಿಗೆ ಹಣವನ್ನು ಒದಗಿಸಲು ನೆರವಾಗುತ್ತದೆ. ವಿವಿಧ ಉದ್ದೇಶಗಳಿಗೆ ವರ್ಕಿಂಗ್ ಕ್ಯಾಪಿಟಲ್ ಬಿಸಿನೆಸ್ ಲೋನನ್ನು ಬಳಸಬಹುದು.
ಈ ರೀತಿಯ ಹಣಕಾಸು ಸಹಾಯವು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SME ಗಳು) ಬಂಡವಾಳದ ಉತ್ತಮ ಮೂಲವಾಗಿದೆ ಮತ್ತು ಇದು ವಿಶೇಷವಾಗಿ ವರ್ಷವಿಡೀ ಸುಸ್ಥಿರ ಅಥವಾ ಸ್ಥಿರ ಮಾರಾಟ ಇಲ್ಲದ ಮತ್ತು ದೈನಂದಿನ ಕಾರ್ಯಾಚರಣೆ ವೆಚ್ಚಗಳನ್ನು ಪೂರೈಸಲು ಲಿಕ್ವಿಡಿಟಿ (ಕೈಯಲ್ಲಿ ನಗದು) ಅಗತ್ಯವಿರುವ ಸೀಸನಲ್ ಅಥವಾ ಸೈಕ್ಲಿಕಲ್ ವ್ಯವಹಾರಗಳಿಗೆ ಸೂಕ್ತವಾಗಿದೆ.
ಸೀಸನಲ್ ಬಿಸಿನೆಸ್ಗಳು ಆಫ್-ಸೀಸನ್ನಿನಲ್ಲಿ, ಪೀಕ್ ಸೀಸನ್ ಸಂದರ್ಭದಲ್ಲಿ ಆಕ್ರಮಣಕಾರಿಯಾಗಿ ಮಾರಾಟ ಮಾಡಲು ಉತ್ಪಾದನೆ ಮಾಡುತ್ತವೆ. ಇದರ ಪರಿಣಾಮವಾಗಿ, ಅವರು ಪೀಕ್ ಸೀಸನ್ನಿನಲ್ಲಿ ಮಾತ್ರ ಪಾವತಿಯ ಭಾಗಗಳನ್ನು ಪಡೆಯುತ್ತಾರೆ, ಆದರೆ ಉಳಿದ ವರ್ಷದಲ್ಲಿ, ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಅವರಿಗೆ ಹಣಕಾಸು ಅಗತ್ಯವಿರುವುದರಿಂದ, ನೀವು ವರ್ಕಿಂಗ್ ಕ್ಯಾಪಿಟಲ್ ಹಣಕಾಸನ್ನು ಬಳಸಬಹುದು.
ನಿಮ್ಮ ಉದ್ಯಮಕ್ಕೆ ಹಲವಾರು ಬಾರಿ ಸಣ್ಣ ಬಿಸಿನೆಸ್ ವರ್ಕಿಂಗ್ ಕ್ಯಾಪಿಟಲ್ ಹಣಕಾಸು ಸಹಾಯದ ಅಗತ್ಯವಿರಬಹುದು:
ನಿಮ್ಮ ಬಿಸಿನೆಸ್ ಬೆಳವಣಿಗೆಗಾಗಿ ನಿಮಗೆ ಸಹಾಯ ಮಾಡಲು, ಬಜಾಜ್ ಫಿನ್ಸರ್ವ್ 18% ರಿಂದ ಆರಂಭವಾಗುವ ಬಡ್ಡಿ ದರದಲ್ಲಿ ರೂ. 20 ಲಕ್ಷದವರೆಗಿನ ಸುಲಭವಾದ ವರ್ಕಿಂಗ್ ಕ್ಯಾಪಿಟಲ್ ಲೋನ್ ಒದಗಿಸುತ್ತದೆ, ಇದನ್ನು 12 ರಿಂದ 60 ತಿಂಗಳ ಅವಧಿಯಲ್ಲಿ ಅನುಕೂಲಕರವಾಗಿ ಮರುಪಾವತಿಸಬಹುದು.
ಯಾವುದೇ ಹಣಕಾಸಿನ ನಿರ್ಬಂಧವಿಲ್ಲದೆಯೇ ನಿಮ್ಮ ಬಿಸಿನೆಸ್ ಅನ್ನು ಮುಂದುವರಿಸಲು ನಿಮಗೆ ಸಹಾಯವಾಗಲು ಯಾವುದೇ ಸೆಕ್ಯುರಿಟಿ ಒದಗಿಸದೇ ರೂ. 20 ಲಕ್ಷದವರೆಗೆ ವರ್ಕಿಂಗ್ ಕ್ಯಾಪಿಟಲ್ ಲೋನನ್ನು ನೀವು ಪಡೆದುಕೊಳ್ಳಬಹುದು. ಈ ಲೋನ್ಗಳು ನಿಮ್ಮ ಸಂಪತ್ತನ್ನು ಸುರಕ್ಷಿತವಾಗಿರಿಸುತ್ತವೆ.
ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡ ಮತ್ತು ತ್ವರಿತ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯು ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್ ಪಡೆಯುವುದನ್ನು ಸುಲಭಗೊಳಿಸುತ್ತದೆ. ಬಜಾಜ್ ಫಿನ್ಸರ್ವ್ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಅಪ್ಲಿಕೇಶನ್ಗೆ 24 ಗಂಟೆಗಳಲ್ಲಿ ಅನುಮೋದನೆ ನೀಡುತ್ತದೆ ಮತ್ತು ಕ್ಯಾಪಿಟಲ್ ಫೈನಾನ್ಸ್ ಪಡೆಯಲು ನೀವು ಕೇವಲ 2 ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು.
ಬಜಾಜ್ ಫಿನ್ಸರ್ವ್ನ ಒಂದು ವಿಶಿಷ್ಟವಾದ ಆಫರ್ ಆದ, ಫ್ಲೆಕ್ಸಿ ಲೋನ್ಗಳು ನಿಮ್ಮ ಕ್ರಿಯಾತ್ಮಕ ಬಿಸಿನೆಸ್ನ ವರ್ಕಿಂಗ್ ಕ್ಯಾಪಿಟಲ್ ಅಗತ್ಯತೆಗಳನ್ನು ನಿರ್ವಹಿಸಲು ಅತ್ಯುತ್ತಮವಾದ ಮಾರ್ಗವಾಗಿದೆ. ಈ ಸೌಲಭ್ಯದೊಂದಿಗೆ, ನಿಮಗೆ ಬೇಕಾದುದಕ್ಕೆ ಮಾತ್ರ ನೀವು ಲೋನ್ ಪಡೆಯಬಹುದು ಮತ್ತು ಬಡ್ಡಿಯನ್ನು ಪಾವತಿಸಬಹುದು. ಇಲ್ಲಿ ನೀವು ಪೂರ್ವಪಾವತಿಯ ಶುಲ್ಕವಿಲ್ಲದೇ ಪಾವತಿಗಳನ್ನು ಸ್ವೀಕರಿಸಿದ ನಂತರ ಲೋನನ್ನು ಮರುಪಾವತಿ ಮಾಡಬಹುದು. ಈ ಸೌಲಭ್ಯವು ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ EMI ಗಳನ್ನು 45% ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಜಾಜ್ ಫಿನ್ಸರ್ವ್ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅಪ್ಲಿಕೇಶನ್ನಿನಲ್ಲಿ ಮುಂಚಿತ-ಅನುಮೋದಿತ ಆಫರ್ಗಳನ್ನು ನಿಮಗೆ ಒದಗಿಸುತ್ತದೆ, ಇದು ಲೋನ್ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಸಮಯವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಬೇಸಿಕ್ ವಿವರಗಳನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಮುಂಚಿತ-ಅನುಮೋದಿತ ಆಫರ್ ನೋಡಿ.
ಬಳಸಲು ಸುಲಭವಾದ ಆನ್ಲೈನ್ ಅಕೌಂಟ್ ಮೂಲಕ ನಿಮ್ಮ ಲೋನ್ ಸಂಬಂಧಿತ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ. ಬಜಾಜ್ ಫಿನ್ಸರ್ವ್ ಕಸ್ಟಮರ್ ಪೋರ್ಟಲ್ ಎಕ್ಸ್ಪೀರಿಯ ಮೂಲಕ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕ್ಷಣದಲ್ಲಿ ನೋಡಬಹುದು. ಇದರಲ್ಲಿ ಅಸಲು ಮತ್ತು ಬಡ್ಡಿ ಸ್ಟೇಟ್ಮೆಂಟ್, ಬಾಕಿ ಉಳಿದಿರುವ ಬ್ಯಾಲೆನ್ಸ್ ಮತ್ತು ಮುಂತಾದವುಗಳು ಸೇರಿವೆ. ನೀವು ಹೆಚ್ಚುವರಿ ಹಣಕ್ಕಾಗಿ ವಿನಂತಿಸಬಹುದು ಅಥವಾ ಈ ಅಕೌಂಟಿನ ಮೂಲಕ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಲೋನ್ ಪಾವತಿಸಬಹುದು.