ಮೈ ಅಕೌಂಟಿನಲ್ಲಿ ನಿಮ್ಮ ಲೋನ್‌ಗಳನ್ನು ನಿರ್ವಹಿಸಿ

ಮೈ ಅಕೌಂಟಿನಲ್ಲಿ ನಿಮ್ಮ ಲೋನ್‌ಗಳನ್ನು ನಿರ್ವಹಿಸಿ

ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ನಿಮ್ಮ ಲೋನ್ ಅಕೌಂಟನ್ನು ಟ್ರ್ಯಾಕ್ ಮಾಡಿ

ನೀವು ಲೋನ್ ತೆಗೆದುಕೊಳ್ಳುವಾಗ, ನೀವು ಒಂದು ಅವಧಿಯಲ್ಲಿ ಮರುಪಾವತಿ ಮಾಡಬೇಕಾದ ಮೊತ್ತಕ್ಕೆ ಅಕ್ಸೆಸ್ ಪಡೆಯುತ್ತೀರಿ. ಹೆಚ್ಚಿನ ಸಂದರ್ಭಗಳಲ್ಲಿ, ನೀವು ಸಮನಾದ ಮಾಸಿಕ ಕಂತು (ಇಎಂಐ) ಎಂಬ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಮರಳಿ ಪಾವತಿಸುತ್ತೀರಿ.

ಆದರೆ ನಿಮ್ಮ ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದಕ್ಕಿಂತ ನಿಮ್ಮ ಲೋನ್ ನಿರ್ವಹಿಸುವುದು ಹೆಚ್ಚಾಗಿದೆ. ನಿಮ್ಮ ಎಲ್ಲಾ ಲೋನ್ ವಿವರಗಳ ಬಗ್ಗೆ- ಅಂದರೆ, ಮರುಪಾವತಿಸಿದ ಮೊತ್ತ, ನೀವು ಇನ್ನೂ ಪಾವತಿಸಬೇಕಾದ ಮೊತ್ತ, ನಿಮ್ಮ ಲೋನ್ ಸ್ಟೇಟ್ಮೆಂಟ್, ನಿಮ್ಮ ಮರುಪಾವತಿ ಶೆಡ್ಯೂಲ್ ಮತ್ತು ಇನ್ನೂ ಹೆಚ್ಚಿನವುಗಳನ್ನು ನೀವು ತಿಳಿದಿರಬೇಕು.

ನಿಮ್ಮ ವೈಯಕ್ತಿಕ ಮತ್ತು ವ್ಯವಹಾರದ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು ಬಜಾಜ್ ಫಿನ್‌ಸರ್ವ್ ಹಲವಾರು ಭದ್ರತೆ ರಹಿತ ಮತ್ತು ಸುರಕ್ಷಿತ ಲೋನ್ ಪರಿಹಾರಗಳನ್ನು ಒದಗಿಸುತ್ತದೆ. ನಮ್ಮ ಗ್ರಾಹಕ ಪೋರ್ಟಲ್ – ಮೈ ಅಕೌಂಟ್ ಮೂಲಕ ನಿಮ್ಮ ಲೋನ್ ಅನ್ನು ಸುಲಭವಾಗಿ ನಿರ್ವಹಿಸಲು ನೀವು ಬಳಸಬಹುದಾದ ಹಲವಾರು ಸ್ವಯಂ-ಸೇವಾ ಆಯ್ಕೆಗಳನ್ನು ನೀವು ಕಂಡುಕೊಳ್ಳಬಹುದು.

ಇವುಗಳು ಅನೇಕ ಮರುಪಾವತಿ ಆಯ್ಕೆಗಳು, ನಿಮ್ಮ ಡಾಕ್ಯುಮೆಂಟ್‌ಗಳಿಗೆ ತ್ವರಿತ ಅಕ್ಸೆಸ್ ಮತ್ತು ನಿಮ್ಮ ಅಕೌಂಟ್ ಮಾಹಿತಿಯ ಹೆಚ್ಚಿನ ನಿಯಂತ್ರಣವನ್ನು ಒಳಗೊಂಡಿವೆ.

ಬ್ರಾಂಚ್‌ಗೆ ಭೇಟಿ ನೀಡದೆ ನೀವು ಇವೆಲ್ಲವನ್ನೂ ಮಾಡಬಹುದು.

ನಿಮ್ಮ ಬೇಸಿಕ್ ವಿವರಗಳೊಂದಿಗೆ ಸೈನ್-ಇನ್ ಮಾಡಿ ಮತ್ತು ನಮ್ಮ ಎಲ್ಲಾ ಲೋನ್ ಸಂಬಂಧಿತ ಸೇವೆಗಳಿಗೆ ಅಕ್ಸೆಸ್ ಪಡೆಯಿರಿ:

  • Loan details

    ಲೋನ್ ವಿವರಗಳು

    ನಿಮ್ಮ ಇಎಂಐಗಳು, ಪಾವತಿ ಸ್ಥಿತಿ, ದಿನಾಂಕಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ನಿಮ್ಮ ಲೋನ್‌ಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಟ್ರ್ಯಾಕ್ ಮಾಡಿ.

  • Account statements and documents

    ಅಕೌಂಟ್ ಸ್ಟೇಟ್ಮೆಂಟ್‌ಗಳು ಮತ್ತು ಡಾಕ್ಯುಮೆಂಟ್‌ಗಳು

    ಪಾವತಿಸಿದ ಇಎಂಐಗಳಿಂದ ಹಿಡಿದು ಕಡಿತಗೊಳಿಸಿದ ಫೀಸ್ ಮತ್ತು ಶುಲ್ಕಗಳು ಹಾಗೂ ಇನ್ನೂ ಮುಂತಾದವುಗಳ ಕುರಿತು ನಿಮ್ಮ ಲೋನ್ ಅಕೌಂಟ್‌ನಲ್ಲಿ ಮಾಡಿದ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಗಮನಹರಿಸಿ.

  • EMI repayment

    ಇಎಂಐ ಮರುಪಾವತಿ

    ನೀವು ಪಡೆದ ಲೋನ್ ಮೊತ್ತದ ಒಂದು ಭಾಗವನ್ನು ಹಿಂತಿರುಗಿಸಿ ಅಥವಾ ನಿಮ್ಮ ಲೋನ್ ಅನ್ನು ಸುಲಭವಾಗಿ ಫೋರ್‌ಕ್ಲೋಸ್ ಮಾಡಿ.

  • Withdraw funds

    ಫಂಡ್‌ಗಳನ್ನು ವಿತ್‌ಡ್ರಾ ಮಾಡಿ

    ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟಿನಿಂದ ಹಣವನ್ನು ಡ್ರಾಡೌನ್ ಮಾಡಿ ಮತ್ತು ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣವನ್ನು ಡೆಪಾಸಿಟ್ ಮಾಡಿ.

  • Bank account update

    ಬ್ಯಾಂಕ್ ಅಕೌಂಟ್ ಅಪ್ಡೇಟ್

    ನಿಮ್ಮ ಮರುಪಾವತಿ ಮತ್ತು ಡ್ರಾಡೌನ್ ಬ್ಯಾಂಕ್ ಅಕೌಂಟ್ ವಿವರಗಳನ್ನು ಸುಲಭವಾಗಿ ನಿರ್ವಹಿಸಿ.

ನಿಮ್ಮ ಲೋನ್ ವಿವರಗಳನ್ನು ನಿರ್ವಹಿಸಿ

ಬಜಾಜ್ ಫಿನ್‌ಸರ್ವ್‌ನಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ಲೋನ್‌ಗೆ, ಲೋನ್ ಅಕೌಂಟ್ ನಂಬರ್ (ಎಲ್ಎಎನ್) ಎಂಬ ವಿಶಿಷ್ಟ ನಂಬರ್ ಅನ್ನು ನಿಯೋಜಿಸಲಾಗುತ್ತದೆ. ನಿಮ್ಮ ಎಲ್ಎಎನ್ ಒಂದು ಗುರುತಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅದರ ಸ್ಥಿತಿ (ಸಕ್ರಿಯ ಅಥವಾ ಮುಚ್ಚಿದ), ಮರುಪಾವತಿಸಿದ ಇಎಂಐಗಳ ಸಂಖ್ಯೆ ಮತ್ತು ಬಾಕಿ ಮೊತ್ತವನ್ನು ಒಳಗೊಂಡಂತೆ ನಿಮ್ಮ ಲೋನ್ ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಈ ಲೋನ್ ವಿವರಗಳನ್ನು ನೀವು ಗಮನಹರಿಸುವುದು ಮುಖ್ಯವಾಗಿದೆ, ಇದರಿಂದಾಗಿ ನೀವು ನಿಮ್ಮ ಹೊಣೆಗಾರಿಕೆಗಳ ಬಗ್ಗೆ ತಿಳಿದಿರುತ್ತೀರಿ ಮತ್ತು ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

  • View your loan details

    ನಿಮ್ಮ ಲೋನ್ ವಿವರಗಳನ್ನು ನೋಡಿ

    ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಲೋನ್ ವಿವರಗಳನ್ನು ಮೈ ಅಕೌಂಟ್‌ನಲ್ಲಿ ಪರಿಶೀಲಿಸಬಹುದು:

    • ಈ ಪುಟದಲ್ಲಿನ 'ಸೈನ್-ಇನ್' ಬಟನ್ ಕ್ಲಿಕ್ ಮಾಡುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಿ.
    • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ಸೈನ್-ಇನ್ ಮಾಡಲು ಒಟಿಪಿ ಸಲ್ಲಿಸಿ.
    • 'ನನ್ನ ಸಂಬಂಧಗಳು' ವಿಭಾಗದಿಂದ ನೀವು ವಿವರಗಳನ್ನು ನೋಡಲು ಬಯಸುವ ಲೋನನ್ನು ಆಯ್ಕೆಮಾಡಿ.
    • ಮರುಪಾವತಿ ಸ್ಥಿತಿ, ಇಎಂಐ ಮೊತ್ತ, ಮುಂದಿನ ಗಡುವು ದಿನಾಂಕ ಮತ್ತು ಇನ್ನೂ ಹೆಚ್ಚಿನ ನಿಮ್ಮ ಲೋನ್ ವಿವರಗಳನ್ನು ನೋಡಿ.


    ಈ ಕೆಳಗಿನ 'ನಿಮ್ಮ ಲೋನ್ ವಿವರಗಳನ್ನು ಪರಿಶೀಲಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಎಲ್ಲಾ ಲೋನ್ ವಿವರಗಳನ್ನು ನೀವು ನೋಡಬಹುದು. 'ಮೈ ಅಕೌಂಟ್' ಗೆ ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ’. ಒಮ್ಮೆ ಸೈನ್-ಇನ್ ಆದ ನಂತರ, ನಿಮ್ಮನ್ನು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಲೋನ್ ಅಕೌಂಟನ್ನು ಅದರ ವಿವರಗಳನ್ನು ನೋಡಲು ಆಯ್ಕೆ ಮಾಡಬಹುದು.

    ನಿಮ್ಮ ಲೋನ್‌ ವಿವರಗಳನ್ನು ಪರೀಕ್ಷಿಸಿ

  • ನಿಮ್ಮ ಲೋನ್ ಅಕೌಂಟನ್ನು ಪರಿಶೀಲಿಸಿ

    ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿ.

ನಿಮ್ಮ ಲೋನ್ ಸ್ಟೇಟ್ಮೆಂಟನ್ನು ನೋಡಿ

ನಿಮ್ಮ ಲೋನ್ ಸ್ಟೇಟ್ಮೆಂಟ್ ನಿಮ್ಮ ಚಾಲ್ತಿಯಲ್ಲಿರುವ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಡಾಕ್ಯುಮೆಂಟ್ ಆಗಿದೆ. ಇದು ವಿತರಣೆಯ ದಿನಾಂಕದಿಂದ ಲೋನ್ ಮುಚ್ಚುವ ಸಮಯದವರೆಗೆ ನಿಮ್ಮ ಲೋನ್ ಅಕೌಂಟ್‌ನಲ್ಲಿ ನಡೆಸಲಾದ ಪ್ರತಿಯೊಂದು ಟ್ರಾನ್ಸಾಕ್ಷನ್‌ನ ದಾಖಲೆಯಾಗಿದೆ.

ಇದರ ಜೊತೆಗೆ, ನಿಮ್ಮ ಮುಂದಿನ ಇಎಂಐ ಗಡುವು ದಿನಾಂಕ, ಇಲ್ಲಿಯವರೆಗೆ ಮರುಪಾವತಿಸಿದ ಒಟ್ಟು ಮೊತ್ತ, ಬಾಕಿ ಅಸಲು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಿಮ್ಮ ಲೋನ್ ಸ್ಟೇಟ್ಮೆಂಟ್ ಪ್ರಮುಖ ಅಕೌಂಟ್ ಮಾಹಿತಿಯನ್ನು ಕೂಡ ಒಳಗೊಂಡಿದೆ.

ನಿಯಮಿತವಾಗಿ ನಿಮ್ಮ ಅಕೌಂಟ್ ಸ್ಟೇಟ್ಮೆಂಟನ್ನು ಪರಿಶೀಲಿಸಿ ಮತ್ತು ನಿಮ್ಮ ಅಕೌಂಟಿನ ಕಂತುಗಳು ಮತ್ತು ಇತರ ಕಡಿತಗಳ ಬಗ್ಗೆ ತಿಳಿದುಕೊಳ್ಳಿ.

  • Download your account statement

    ನಿಮ್ಮ ಅಕೌಂಟ್ ಸ್ಟೇಟ್ಮೆಂಟನ್ನು ಡೌನ್ಲೋಡ್ ಮಾಡಿ

    ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಅಕೌಂಟ್ ಸ್ಟೇಟ್ಮೆಂಟನ್ನು ಡೌನ್ಲೋಡ್ ಮಾಡಬಹುದು

    • ನಮ್ಮ ಗ್ರಾಹಕ ಪೋರ್ಟಲ್‌ಗೆ ಹೋಗಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
    • ನಮ್ಮ ಎರಡು-ಅಂಶಗಳ ದೃಢೀಕರಣವನ್ನು ಬಳಸಿ, ಸೈನ್-ಇನ್ ಮಾಡಲು ಒಟಿಪಿ ನಮೂದಿಸಿ.
    • ನೀವು ಅಕೌಂಟ್ ಸ್ಟೇಟ್ಮೆಂಟನ್ನು ನೋಡಲು ಬಯಸುವ ಲೋನನ್ನು ಆಯ್ಕೆ ಮಾಡಲು 'ಡಾಕ್ಯುಮೆಂಟ್ ಸೆಂಟರ್' ವಿಭಾಗಕ್ಕೆ ಭೇಟಿ ನೀಡಿ.
    • 'ಅಕೌಂಟ್ ಸ್ಟೇಟ್ಮೆಂಟ್' ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಿ.


    ಈ ಕೆಳಗಿನ 'ನಿಮ್ಮ ಲೋನ್ ಸ್ಟೇಟ್ಮೆಂಟ್ ನೋಡಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಲೋನ್ ಸ್ಟೇಟ್ಮೆಂಟ್‌ಗಳು ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಕೂಡ ನೀವು ಕಂಡುಕೊಳ್ಳಬಹುದು. ನಿಮ್ಮನ್ನು 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ಮತ್ತು 'ಡಾಕ್ಯುಮೆಂಟ್ ಸೆಂಟರ್' ವಿಭಾಗಕ್ಕೆ ಕಳುಹಿಸಲು ಕೇಳಲಾಗುತ್ತದೆ, ಅಲ್ಲಿ ನೀವು ನಿಮ್ಮ ಲೋನ್ ಅಕೌಂಟನ್ನು ಅದರ ಸ್ಟೇಟ್ಮೆಂಟನ್ನು ನೋಡಲು ಆಯ್ಕೆ ಮಾಡಬಹುದು.

    ನಿಮ್ಮ ಲೋನ್ ಸ್ಟೇಟ್ಮೆಂಟನ್ನು ನೋಡಿ

ನಿಮ್ಮ ಲೋನ್ ಪಾವತಿಯನ್ನು ನಿರ್ವಹಿಸಿ

ಒಮ್ಮೆ ನಿಮ್ಮ ಲೋನನ್ನು ನಿಮಗೆ ಟ್ರಾನ್ಸ್‌ಫರ್ ಮಾಡಿದ ನಂತರ, ನಿಮ್ಮ ಮಾಸಿಕ ಕಂತುಗಳನ್ನು ಪೂರ್ವ-ನಿಗದಿತ ದಿನಾಂಕದಂದು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಆಟೋ-ಡಿಡಕ್ಟ್ ಮಾಡಲಾಗುತ್ತದೆ. ಈ ದಿನಾಂಕವು ಸಾಮಾನ್ಯವಾಗಿ ಮುಂದಿನ ತಿಂಗಳ ಎರಡನೇ ದಿನವಾಗಿರುತ್ತದೆ.

ನಿಮ್ಮ ಎನ್‌ಎಸಿಎಚ್ (ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್) ಮ್ಯಾಂಡೇಟ್ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಆಟೋ-ಪೇಮೆಂಟ್‌ಗಳನ್ನು ಸಕ್ರಿಯಗೊಳಿಸುತ್ತದೆ. ನಿಮ್ಮ ಲೋನ್ ಬುಕ್ ಆದ ನಂತರ ನೀವು ಇತರ ಯಾವುದೇ ಪಾವತಿಗಳನ್ನು ಆರಂಭಿಸಬೇಕಾಗಿಲ್ಲ.

ಆದಾಗ್ಯೂ, ನೀವು ಯಾವುದೇ ಹೆಚ್ಚುವರಿ ಪಾವತಿಗಳನ್ನು ಮಾಡಲು ಬಯಸಿದರೆ, ನೀವು ಮೈ ಅಕೌಂಟ್‌ನಲ್ಲಿ ಸುಲಭವಾಗಿ ಮಾಡಬಹುದು.

ಮುಂಗಡ ಇಎಂಐಗಳು, ಭಾಗಶಃ-ಮುಂಗಡ ಪಾವತಿಗಳು ಮತ್ತು ಗಡುವು ಮೀರಿದ ಇಎಂಐಗಳು

ನೀವು ನಿಮ್ಮ ಮುಂಬರುವ ಇಎಂಐ ಅನ್ನು ಅದರ ಗಡುವು ದಿನಾಂಕಕ್ಕಿಂತ ಮೊದಲು ಪಾವತಿಸಲು ಬಯಸಿದರೆ, ನೀವು ಮುಂಗಡ ಇಎಂಐ ಸೌಲಭ್ಯವನ್ನು ಬಳಸಿಕೊಂಡು ಪಾವತಿಸಬಹುದು. ಒಂದೇ ಮುಂಗಡ ಇಎಂಐ ಮುಂದಿನ ತಿಂಗಳಿಗೆ ನಿಮ್ಮ ಕಂತು ಮೊತ್ತವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದರರ್ಥ ನಿಮ್ಮ ಮುಂದಿನ ಇಎಂಐ ಗಡುವು ದಿನಾಂಕದಂದು ನಿಮ್ಮ ಮುಂಬರುವ ಕಂತನ್ನು ನಿಮ್ಮ ಬ್ಯಾಂಕ್ ಅಕೌಂಟಿನಿಂದ ಡೆಬಿಟ್ ಮಾಡಲಾಗುವುದಿಲ್ಲ.

ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ, ಭಾಗಶಃ-ಮುಂಗಡ ಪಾವತಿ ಸೌಲಭ್ಯವನ್ನು ಬಳಸಿ ನಿಮ್ಮ ಬಾಕಿ ಉಳಿದ ಲೋನ್ ಮೊತ್ತದ ಭಾಗವನ್ನು ನೀವು ಮರಳಿ ಪಾವತಿಸಬಹುದು. ಇದು ನಿಮ್ಮ ಲೋನ್ ಅವಧಿ ಅಥವಾ ಇಎಂಐಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಲೋನ್‌ಗಾಗಿ ನೀವು ಪಾವತಿಸುವ ಬಡ್ಡಿಯಲ್ಲಿ ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ವಾಸ್ತವವಾಗಿ, ನಿಮ್ಮ ಗಡುವು ಮೀರಿದ ಇಎಂಐ ಗಳನ್ನು ಕ್ಲಿಯರ್ ಮಾಡುವ ಆಯ್ಕೆಯನ್ನು ಕೂಡ ನೀವು ಹೊಂದಿದ್ದೀರಿ. ನೀವು ಕಡಿಮೆ ಅಕೌಂಟ್ ಬ್ಯಾಲೆನ್ಸ್ ಹೊಂದಿರುವುದರಿಂದ ಅಥವಾ ತಾಂತ್ರಿಕ ದೋಷದಿಂದಾಗಿ ನಿಮ್ಮ ಇಎಂಐ ಪಾವತಿಯನ್ನು ತಪ್ಪಿಸಿದರೆ, ನೀವು ಈ ಸೌಲಭ್ಯದ ಮೂಲಕ ಬೌನ್ಸ್ ಆದ ಇಎಂಐ ಅನ್ನು ಪಾವತಿಸಬಹುದು.

  • Make your loan payments in My Account

    ಮೈ ಅಕೌಂಟಿನಲ್ಲಿ ನಿಮ್ಮ ಲೋನ್ ಪಾವತಿಗಳನ್ನು ಮಾಡಿ

    ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ಗೆ ಭೇಟಿ ನೀಡುವ ಮೂಲಕ ನೀವು ಮುಂಚಿತವಾಗಿ ಇಎಂಐ ಪಾವತಿಸಬಹುದು, ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಬಹುದು ಅಥವಾ ನಿಮ್ಮ ಬಾಕಿಯನ್ನು ಕ್ಲಿಯರ್ ಮಾಡಬಹುದು.

    • ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರಿನೊಂದಿಗೆ ಸೈನ್-ಇನ್ ಮಾಡಿ.
    • ಪಟ್ಟಿಯಿಂದ ಪಾವತಿಯ ಪ್ರಕಾರವನ್ನು ಆಯ್ಕೆಮಾಡಿ.
    • ನೀವು ಪಾವತಿ ಮಾಡಲು ಬಯಸುವ ಲೋನ್ ಅಕೌಂಟ್ ನಂಬರನ್ನು ಆಯ್ಕೆಮಾಡಿ.
    • ಮೊತ್ತವನ್ನು ನಮೂದಿಸಿ ಮತ್ತು ಅನ್ವಯವಾದರೆ, ಹೆಚ್ಚುವರಿ ಶುಲ್ಕಗಳನ್ನು ರಿವ್ಯೂ ಮಾಡಿ.
    • ನಮ್ಮ ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪಾವತಿಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.


    ಈ ಕೆಳಗಿನ 'ನಿಮ್ಮ ಲೋನ್ ಇಎಂಐಗಳನ್ನು ಪಾವತಿಸಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಲೋನ್ ಇಎಂಐಗಳನ್ನು ಕೂಡ ನಿರ್ವಹಿಸಬಹುದು.
    ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ, ಅಲ್ಲಿ ನೀವು ಮಾಡಲು ಬಯಸುವ ಪಾವತಿಯ ಪ್ರಕಾರವನ್ನು ಆಯ್ಕೆ ಮಾಡಬಹುದು. ನಂತರ ನೀವು ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು ಮತ್ತು ಪಾವತಿಯೊಂದಿಗೆ ಮುಂದುವರೆಯಬಹುದು.

    ನಿಮ್ಮ ಲೋನ್ ಇಎಂಐ ಗಳನ್ನು ಪಾವತಿಸಿ

ನಮ್ಮನ್ನು ಸಂಪರ್ಕಿಸಿ

ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿ:

  • ಆನ್ಲೈನ್ ಸಹಾಯಕ್ಕಾಗಿ, ದಯವಿಟ್ಟು ನಮ್ಮ ಸಹಾಯ ಮತ್ತು ಬೆಂಬಲ ವಿಭಾಗಕ್ಕೆ ಭೇಟಿ ನೀಡಿ.
  • ನೀವು ಮೋಸದ ಟ್ರಾನ್ಸಾಕ್ಷನ್ ಅನ್ನು ವರದಿ ಮಾಡಲು ಬಯಸಿದರೆ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ: +91-8698010101
  • ನಮ್ಮನ್ನು ಸಂಪರ್ಕಿಸಲು ನೀವು Play Store/ App Store ನಿಂದ ನಮ್ಮ ಆ್ಯಪನ್ನು ಡೌನ್ಲೋಡ್ ಮಾಡಬಹುದು.
  • ನಿಮ್ಮ ಲೊಕೇಶನ್‌ಗೆ ಹತ್ತಿರದಲ್ಲಿರುವ ನಮ್ಮ ಬ್ರಾಂಚ್ ಹುಡುಕಿ ಮತ್ತು ನಿಮ್ಮ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಿ.
  • ನಮ್ಮ 'ನಮ್ಮನ್ನು ಸಂಪರ್ಕಿಸಿ' ಪುಟಕ್ಕೆ ಭೇಟಿ ನೀಡುವ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು.

ಫಂಡ್‌ಗಳ ವಿತ್‌ಡ್ರಾವಲ್ ನಿರ್ವಹಿಸಿ

ನಮ್ಮ ಅಸುರಕ್ಷಿತ ಲೋನ್ ಪ್ರಾಡಕ್ಟ್‌ಗಳಲ್ಲಿ ನಾವು ಟರ್ಮ್ ಮತ್ತು ಫ್ಲೆಕ್ಸಿ ವೇರಿಯಂಟ್‌ಗಳನ್ನು ಒದಗಿಸುತ್ತೇವೆ. ಫ್ಲೆಕ್ಸಿ ಲೋನ್ ವೇರಿಯಂಟ್ ನಿಮ್ಮ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ನಿಮ್ಮ ಮರುಪಾವತಿಯನ್ನು ಯೋಜಿಸುವ ಸ್ವಾತಂತ್ರ್ಯವನ್ನು ನಿಮಗೆ ನೀಡುತ್ತದೆ.

ನೀವು ನಮ್ಮ ಫ್ಲೆಕ್ಸಿ ಲೋನ್ ವೇರಿಯಂಟ್ ಅನ್ನು ಆಯ್ಕೆ ಮಾಡಿದ್ದರೆ, ನಿಮಗೆ ಬೇಕಾದಷ್ಟು ಬಾರಿ ನಿಮ್ಮ ಲಭ್ಯವಿರುವ ಲೋನ್ ಮೊತ್ತದಿಂದ ಹಣವನ್ನು ವಿತ್‌ಡ್ರಾ ಮಾಡಬಹುದು ಮತ್ತು ನಿಮಗೆ ಬೇಕಾದಾಗ ಮುಂಗಡ ಪಾವತಿ ಮಾಡಬಹುದು.

  • Withdraw funds from your Flexi account

    ನಿಮ್ಮ ಫ್ಲೆಕ್ಸಿ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡಿ

    ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟಿನಿಂದ ನೀವು ಹಣವನ್ನು ವಿತ್‌ಡ್ರಾ ಮಾಡಬಹುದು

    • ಮೈ ಅಕೌಂಟಿಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
    • ಸೈನ್-ಇನ್ ಮಾಡಲು ನಿಮ್ಮ ಹುಟ್ಟಿದ ದಿನಾಂಕ ಮತ್ತು ನೋಂದಾಯಿತ ಮೊಬೈಲ್ ನಂಬರನ್ನು ನಮೂದಿಸಿ.
    • 'ನನ್ನ ಸಂಬಂಧಗಳು' ವಿಭಾಗದಿಂದ ನೀವು ಹಣವನ್ನು ವಿತ್‌ಡ್ರಾ ಮಾಡಲು ಬಯಸುವ ನಿಮ್ಮ ಲೋನ್ ಅಕೌಂಟನ್ನು ಆಯ್ಕೆಮಾಡಿ.
    • 'ತ್ವರಿತ ಆ್ಯಕ್ಷನ್‌ಗಳು' ವಿಭಾಗದಿಂದ 'ವಿತ್‌ಡ್ರಾ ಮಾಡಿ' ಆಯ್ಕೆ ಕ್ಲಿಕ್ ಮಾಡಿ.
    • ನಿಮ್ಮ ಲಭ್ಯವಿರುವ ಮೊತ್ತದಿಂದ ನೀವು ವಿತ್‌ಡ್ರಾ ಮಾಡಬೇಕಾದ ಮೊತ್ತವನ್ನು ನಮೂದಿಸಿ. ನಿಮ್ಮ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಮಿತಿಗೊಳಿಸಿ ಮತ್ತು ರಿವ್ಯೂ ಮಾಡಿ.
    • ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.


    ಈ ಕೆಳಗಿನ 'ನಿಮ್ಮ ಫ್ಲೆಕ್ಸಿ ಲೋನ್‌ನಿಂದ ಹಣ ವಿತ್‌ಡ್ರಾ ಮಾಡಿ' ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಲಭ್ಯವಿರುವ ಮಿತಿಯಿಂದ ಕೂಡ ನೀವು ಹಣವನ್ನು ವಿತ್‌ಡ್ರಾ ಮಾಡಬಹುದು. 'ಮೈ ಅಕೌಂಟ್'ಗೆ ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ ಮತ್ತು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲಾಗುತ್ತದೆ.

    ನಂತರ ನೀವು ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು, 'ತ್ವರಿತ ಕ್ರಮಗಳು' ವಿಭಾಗದಿಂದ 'ವಿತ್‌ಡ್ರಾ' ಮೇಲೆ ಕ್ಲಿಕ್ ಮಾಡಿ ಮತ್ತು ವಿತ್‌ಡ್ರಾವಲ್‌ನೊಂದಿಗೆ ಮುಂದುವರಿಯಿರಿ.

    ನಿಮ್ಮ ವಿತ್‌ಡ್ರಾವಲ್ ಕೋರಿಕೆಯನ್ನು ಪ್ರಕ್ರಿಯೆಗೊಳಿಸಿದ ನಂತರ, ನೀವು ಕೆಲವು ಗಂಟೆಗಳಲ್ಲಿ ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟಿನಲ್ಲಿ ಹಣವನ್ನು ಪಡೆಯುತ್ತೀರಿ.

    ನಿಮ್ಮ ಫ್ಲೆಕ್ಸಿ ಲೋನಿನಿಂದ ಹಣವನ್ನು ವಿತ್‌ಡ್ರಾ ಮಾಡಿ

ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಮ್ಯಾನೇಜ್ ಮಾಡಿ

ನೀವು ನಮ್ಮಿಂದ ಲೋನ್ ತೆಗೆದುಕೊಳ್ಳುವಾಗ, ಲೋನ್ ವಿತರಿಸಲಾದ ಸಕ್ರಿಯ ಬ್ಯಾಂಕ್ ಅಕೌಂಟನ್ನು ನೀವು ನೋಂದಾಯಿಸಬೇಕು. ಇದು ನಿಮ್ಮ ಇಎಂಐ ಗಳನ್ನು ಇಲ್ಲಿಂದ ಕಡಿತಗೊಳಿಸಲಾಗುವ ಅಕೌಂಟ್ ಆಗಿದೆ.

ನಿಮ್ಮ ಬ್ಯಾಂಕ್ ಅಕೌಂಟ್ ಬದಲಾವಣೆಗೆ ಒಳಪಟ್ಟರೆ, ನಮ್ಮ ದಾಖಲೆಗಳಲ್ಲಿ ನೀವು ಅದನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ. ಇಎಂಐ ಬೌನ್ಸ್, ಅನಗತ್ಯ ಶುಲ್ಕಗಳು ಮತ್ತು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮವನ್ನು ತಡೆಗಟ್ಟಲು ನೀವು ಇದನ್ನು ಮಾಡಬೇಕು.

ನಮ್ಮ ಗ್ರಾಹಕ ಪೋರ್ಟಲ್ ಮೈ ಅಕೌಂಟ್‌ಗೆ ಸೈನ್ ಇನ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀವು ನಿರ್ವಹಿಸಬಹುದು.

ನೀವು ನಮ್ಮ ಫ್ಲೆಕ್ಸಿ ಲೋನ್ ವೇರಿಯೆಂಟ್ ಅನ್ನು ಆಯ್ಕೆ ಮಾಡಿದ್ದರೆ, ನೀವು ಅಪ್ಡೇಟ್ ಮಾಡಬಹುದಾದ ಎರಡು ರೀತಿಯ ಬ್ಯಾಂಕ್ ಅಕೌಂಟ್‌ಗಳಿವೆ - ನಿಮ್ಮ ಇಎಂಐ ಮರುಪಾವತಿ ಅಕೌಂಟ್ ಮತ್ತು ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್.

ಮರುಪಾವತಿ ಅಕೌಂಟ್ ಎಂಬುದು ಪ್ರತಿ ತಿಂಗಳು ನಿಮ್ಮ ಇಎಂಐಗಳನ್ನು ಕಡಿತಗೊಳಿಸಲಾಗುವ ಅಕೌಂಟ್ ಆಗಿದೆ. ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್ ಎಂಬುದು ನಿಮ್ಮ ಫ್ಲೆಕ್ಸಿ ಲೋನ್‌ನಿಂದ ಹಣ ವಿತ್‌ಡ್ರಾ ಮಾಡಿದಾಗ ನೀವು ಹಣವನ್ನು ಪಡೆಯುವ ಅಕೌಂಟ್ ಆಗಿದೆ.

  • Change repayment bank account details

    ಮರುಪಾವತಿ ಬ್ಯಾಂಕ್ ಅಕೌಂಟ್ ವಿವರಗಳನ್ನು ಬದಲಾಯಿಸಿ

    ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಮೈ ಅಕೌಂಟಿನಲ್ಲಿ ನಿಮ್ಮ ಮರುಪಾವತಿ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀವು ಅಪ್ಡೇಟ್ ಮಾಡಬಹುದು:

    • ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್‌ನೊಂದಿಗೆ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ.
    • ನೀವು ಬ್ಯಾಂಕ್ ವಿವರಗಳನ್ನು ಅಪ್ಡೇಟ್ ಮಾಡಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ ಮತ್ತು ಮುಂದುವರಿಯಿರಿ.
    • ಅಕೌಂಟ್ ಹೋಲ್ಡರ್ ಹೆಸರು, ಹೊಸ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಮುಂತಾದ ಸಂಬಂಧಿತ ವಿವರಗಳನ್ನು ನಮೂದಿಸಿ.
    • ನಿಮ್ಮ ನೋಂದಣಿ ವಿಧಾನವನ್ನು ಆಯ್ಕೆಮಾಡಿ ಮತ್ತು ಮುಂದುವರೆಯಿರಿ.


    ಈ ಕೆಳಗಿನ 'ನಿಮ್ಮ ಮರುಪಾವತಿ ಅಕೌಂಟನ್ನು ನಿರ್ವಹಿಸಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಮರುಪಾವತಿ ಬ್ಯಾಂಕ್ ಅಕೌಂಟ್ ವಿವರಗಳನ್ನು ಕೂಡ ಬದಲಾಯಿಸಬಹುದು. 'ಮೈ ಅಕೌಂಟ್‌ಗೆ ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ’. ಸೈನ್-ಇನ್ ಮಾಡಿದ ನಂತರ, ನಿಮ್ಮನ್ನು ನಮ್ಮ ಮ್ಯಾಂಡೇಟ್ ಮ್ಯಾನೇಜ್ಮೆಂಟ್ ವಿಭಾಗಕ್ಕೆ ಕಳುಹಿಸಲಾಗುತ್ತದೆ.

    ನಂತರ ನೀವು ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಮುಂದುವರೆಯಬಹುದು.

    ನಿಮ್ಮ ಮರುಪಾವತಿ ಅಕೌಂಟನ್ನು ನಿರ್ವಹಿಸಿ

    ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳು ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಸ್ಕ್ರೀನಿನಲ್ಲಿ ದೃಢೀಕರಣದ ಸಂದೇಶವನ್ನು ನೀವು ಪಡೆಯುತ್ತೀರಿ.

    ಇತ್ತೀಚೆಗೆ ನಿಮ್ಮ ಯಾವುದೇ ಪ್ರೊಫೈಲ್ ವಿವರಗಳನ್ನು ನೀವು ಅಪ್ಡೇಟ್ ಮಾಡಿದ್ದರೆ, ನಿಮ್ಮ ಮರುಪಾವತಿ ಬ್ಯಾಂಕ್ ಅಕೌಂಟ್ ವಿವರಗಳನ್ನು ನೀವು ಮತ್ತೊಮ್ಮೆ ಅಪ್ಡೇಟ್ ಮಾಡಲು 90 ದಿನಗಳವರೆಗೆ ಕಾಯಬೇಕು ಎಂಬುದನ್ನು ದಯವಿಟ್ಟು ಗಮನಿಸಿ.

    ಅಲ್ಲದೆ, ನಿಮ್ಮ ಮರುಪಾವತಿ ಬ್ಯಾಂಕ್ ಅಕೌಂಟಿನಲ್ಲಿ ಯಾವುದೇ ಬದಲಾವಣೆಯು ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್ ವಿವರಗಳನ್ನು ಬದಲಾಯಿಸುವುದಿಲ್ಲ.

  • Change drawdown bank account details

    ಡ್ರಾಡೌನ್ ಬ್ಯಾಂಕ್ ಅಕೌಂಟ್ ವಿವರಗಳನ್ನು ಬದಲಾಯಿಸಿ

    ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್ ಅನ್ನು ನೀವು ಬದಲಾಯಿಸಬಹುದು

    • ನಮ್ಮ ಎರಡು-ಅಂಶಗಳ ದೃಢೀಕರಣವನ್ನು ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಿ ಮತ್ತು ಒಟಿಪಿಯೊಂದಿಗೆ ನಿಮ್ಮ ವಿವರಗಳನ್ನು ಪರಿಶೀಲಿಸಿ.
    • ನೀವು ಡ್ರಾಡೌನ್ ಬ್ಯಾಂಕ್ ಅಕೌಂಟನ್ನು ಬದಲಾಯಿಸಲು ಬಯಸುವ 'ನನ್ನ ಸಂಬಂಧಗಳು' ವಿಭಾಗದಿಂದ ಫ್ಲೆಕ್ಸಿ ಲೋನ್ ಅಕೌಂಟನ್ನು ಆಯ್ಕೆಮಾಡಿ.
    • ತ್ವರಿತ ಕ್ರಮಗಳು' ಆಯ್ಕೆಯಿಂದ 'ವಿತ್‌ಡ್ರಾ' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಅಕೌಂಟ್ ವಿವರಗಳಿಗೆ ಕೆಳಗಿನ 'ಬ್ಯಾಂಕ್ ಅಕೌಂಟ್ ಅಪ್ಡೇಟ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    • ನಿಮ್ಮ ಹೊಸ ಬ್ಯಾಂಕ್ ಅಕೌಂಟ್ ವಿವರಗಳು ಮತ್ತು ಐಎಫ್‌ಎಸ್‌ಸಿ ನಮೂದಿಸಿ.
    • ನಿಮ್ಮ ಹೊಸ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.


    ಪರ್ಯಾಯವಾಗಿ, ಈ ಕೆಳಗಿನ 'ನಿಮ್ಮ ಡ್ರಾಡೌನ್ ಅಕೌಂಟನ್ನು ನಿರ್ವಹಿಸಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟನ್ನು ನೀವು ಅಪ್ಡೇಟ್ ಮಾಡಬಹುದು. 'ಮೈ ಅಕೌಂಟ್‌ಗೆ' ಸೈನ್-ಇನ್ ಮಾಡಲು ಮತ್ತು 'ನನ್ನ ಸಂಬಂಧಗಳು' ವಿಭಾಗಕ್ಕೆ ಕಳುಹಿಸಲು ನಿಮ್ಮನ್ನು ಕೇಳಲಾಗುತ್ತದೆ.

    ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟನ್ನು ಆಯ್ಕೆಮಾಡಿ, 'ತ್ವರಿತ ಕ್ರಮಗಳು' ವಿಭಾಗದಲ್ಲಿ 'ವಿತ್‌ಡ್ರಾ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್ ವಿವರಗಳಿಗೆ ಕೆಳಗೆ 'ಬ್ಯಾಂಕ್ ಅಕೌಂಟನ್ನು ಅಪ್ಡೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ.

    ನಿಮ್ಮ ಮರುಪಾವತಿ ಬ್ಯಾಂಕ್ ಅಕೌಂಟ್‌ನಲ್ಲಿನ ಯಾವುದೇ ಬದಲಾವಣೆಯು ನಿಮ್ಮ ಡ್ರಾಡೌನ್ ಬ್ಯಾಂಕ್ ಅಕೌಂಟ್ ವಿವರಗಳನ್ನು ಬದಲಾಯಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

    ನಿಮ್ಮ ಡ್ರಾಡೌನ್ ಅಕೌಂಟನ್ನು ನಿರ್ವಹಿಸಿ

ನಿಮ್ಮ ಲೋನಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳನ್ನು ಪರಿಶೀಲಿಸಿ

ನೀವು ಆಯ್ಕೆ ಮಾಡಿದ ಲೋನಿಗೆ ಹಲವಾರು ಫೀಸ್ ಮತ್ತು ಶುಲ್ಕಗಳು ಅನ್ವಯವಾಗುತ್ತವೆ. ಇವುಗಳನ್ನು ನಮ್ಮ ವೆಬ್‌ಸೈಟ್, ಆ್ಯಪ್‌ ಮತ್ತು ನೀವು ಒದಗಿಸಿದ ಲೋನ್ ಒಪ್ಪಂದದಲ್ಲಿ ತುಂಬಾ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ನೀವು ಮರುಪಾವತಿಸುವ ಮೊತ್ತದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದಾದ್ದರಿಂದ ಅನ್ವಯವಾಗುವ ಶುಲ್ಕಗಳ ಬಗ್ಗೆ ನಿಮಗೆ ತಿಳಿದಿರುವುದು ಮುಖ್ಯವಾಗಿದೆ.

ನಮ್ಮ ಪ್ರಾಡಕ್ಟ್‌ಗಳಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳನ್ನು ಪರಿಶೀಲಿಸಿ

  • Part- prepayment charges

    ಭಾಗಶಃ- ಮುಂಪಾವತಿ ಶುಲ್ಕಗಳು

    ನೀವು ನಿಮ್ಮ ಟರ್ಮ್ ಲೋನ್‌ಗೆ ಭಾಗಶಃ ಪಾವತಿ ಮಾಡಿದಾಗ, ನಾಮಮಾತ್ರದ ಶುಲ್ಕವನ್ನು ಪಾವತಿಸಲು ನಿಮ್ಮನ್ನು ಕೇಳಬಹುದು. ಇದನ್ನು ಭಾಗಶಃ-ಮುಂಗಡ ಪಾವತಿ ಶುಲ್ಕ ಎಂದು ಕರೆಯಲಾಗುತ್ತದೆ.
    ನೀವು ನಮ್ಮ ಫ್ಲೆಕ್ಸಿ ವೇರಿಯಂಟ್ ಅನ್ನು ಆಯ್ಕೆ ಮಾಡಿದ್ದರೆ, ಭಾಗಶಃ ಮುಂಪಾವತಿ ಮಾಡಲು ನೀವು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು ಬಯಸಿದಷ್ಟು ಬಾರಿ ಇದನ್ನು ಮಾಡಬಹುದು.

  • Bounce charges

    ಬೌನ್ಸ್ ಶುಲ್ಕಗಳು

    ಗಡುವು ದಿನಾಂಕದಂದು ಇಎಂಐ ಪಾವತಿಸಲು ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ, ನಿಮ್ಮ ಕಂತು ಬೌನ್ಸ್ ಆಗುತ್ತದೆ. ಅಂತಹ ಸಂದರ್ಭದಲ್ಲಿ, ನಿಮ್ಮ ಅಕೌಂಟಿನಲ್ಲಿ ಬ್ಯಾಂಕ್ ವಿಧಿಸುವ ಶುಲ್ಕಗಳ ಜೊತೆಗೆ ನೀವು ಬೌನ್ಸ್ ಶುಲ್ಕವನ್ನು ಭರಿಸಬೇಕಾಗುತ್ತದೆ. ಬೌನ್ಸ್ ಆದ ಇಎಂಐ ನಿಮ್ಮ ಮರುಪಾವತಿ ಇತಿಹಾಸವನ್ನು ಅಡ್ಡಿಪಡಿಸುವ ಮತ್ತು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.

  • Foreclosure charges

    ಫೋರ್‌ಕ್ಲೋಸರ್ ಶುಲ್ಕಗಳು

    ನಿಮ್ಮ ವಿಲೇವಾರಿಯಲ್ಲಿ ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ, ಸಂಪೂರ್ಣ ಬಾಕಿ ಉಳಿದ ಲೋನ್ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ನಿಮ್ಮ ಮೊದಲ ಇಎಂಐ ಅನ್ನು ಕ್ಲಿಯರೆನ್ಸ್ ಮಾಡಿದ ನಂತರ ನೀವು ಇದನ್ನು ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಅವಧಿಯಲ್ಲಿ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ, ಅದನ್ನು ಫೋರ್‌ಕ್ಲೋಸರ್ ಶುಲ್ಕಗಳು ಎಂದು ಕರೆಯಲಾಗುತ್ತದೆ.

ಲೋನನ್ನು ಫೋರ್‌ಕ್ಲೋಸ್ ಮಾಡುವುದು ಹೇಗೆ

ನಿಮ್ಮ ಲೋನ್ ಅಕೌಂಟನ್ನು ಫೋರ್‌ಕ್ಲೋಸ್ ಮಾಡಿ

ನಿಮ್ಮ ಲೋನ್ ಅವಧಿಯಲ್ಲಿ ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ, ಬಾಕಿ ಮೊತ್ತವನ್ನು ಪಾವತಿಸುವ ಮೂಲಕ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು. ನಿಮ್ಮ ಮೊದಲ ಇಎಂಐ ನಂತರ ಯಾವುದೇ ಸಮಯದಲ್ಲಿ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು, ಆದಾಗ್ಯೂ, ಫೋರ್‌ಕ್ಲೋಸರ್ ಶುಲ್ಕವನ್ನು ಭರಿಸಲು ನಿಮ್ಮನ್ನು ಕೇಳಬಹುದು.

  • Repay your complete loan amount in advance

    ನಿಮ್ಮ ಸಂಪೂರ್ಣ ಲೋನ್ ಮೊತ್ತವನ್ನು ಮುಂಚಿತವಾಗಿ ಮರುಪಾವತಿಸಿ

    ನಿಮ್ಮ ಲೋನ್ ಅಕೌಂಟನ್ನು ಫೋರ್‌ಕ್ಲೋಸ್ ಮಾಡಲು:

    • ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರಿನೊಂದಿಗೆ ಸೈನ್-ಇನ್ ಮಾಡಿ.
    • ನೀವು ಮುಚ್ಚಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸಿ.
    • ಪಾವತಿ ಆಯ್ಕೆಗಳಿಂದ 'ಫೋರ್‌ಕ್ಲೋಸರ್' ಆಯ್ಕೆಮಾಡಿ.
    • ಅನ್ವಯವಾಗುವ ಫೋರ್‌ಕ್ಲೋಸರ್ ಶುಲ್ಕಗಳನ್ನು ರಿವ್ಯೂ ಮಾಡಿ ಮತ್ತು ಪಾವತಿಯೊಂದಿಗೆ ಮುಂದುವರೆಯಿರಿ.

    ಸೈನ್-ಇನ್ ಮಾಡಲು ನೀವು 'ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಿ' ಮೇಲೆ ಕೂಡ ಕ್ಲಿಕ್ ಮಾಡಬಹುದು. ನಂತರ ನೀವು ಆಯ್ಕೆಗಳ ಪಟ್ಟಿಯಿಂದ 'ಫೋರ್‌ಕ್ಲೋಸರ್' ಆಯ್ಕೆ ಮಾಡಬಹುದು, ನಿಮ್ಮ ಲೋನ್ ಅಕೌಂಟನ್ನು ಆಯ್ಕೆ ಮಾಡಬಹುದು ಮತ್ತು ಪಾವತಿಯೊಂದಿಗೆ ಮುಂದುವರೆಯಬಹುದು. ಫೋರ್‌ಕ್ಲೋಸರ್ ಮಾಡಿದ 24 ಗಂಟೆಗಳ ಒಳಗೆ ನೀವು ನಿಮ್ಮ 'ನೋ ಡ್ಯೂಸ್ ಸರ್ಟಿಫಿಕೇಟ್' ಅನ್ನು ಡೌನ್ಲೋಡ್ ಮಾಡಬಹುದು.

    ನಿಮ್ಮ ಲೋನ್ ಫೋರ್‌‌ಕ್ಲೋಸ್‌‌ಗೊಳಿಸಿ

ನಿಮ್ಮ ಇಎಂಐ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ

ನಿಮ್ಮ ನಿಗದಿತ ಇಎಂಐ ದಿನಾಂಕಕ್ಕಿಂತ ಕನಿಷ್ಠ ಎರಡು ದಿನಗಳ ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಸಾಕಷ್ಟು ಬ್ಯಾಲೆನ್ಸ್ ಹೊಂದಿರಬೇಕು. ಇದು ಇಎಂಐ ಬೌನ್ಸ್ ಮಾಡುವ ಸಾಧ್ಯತೆ ಇಲ್ಲ ಮತ್ತು ನಿಮ್ಮ ಸಿಬಿಲ್ ಸ್ಕೋರ್ ಅನ್ನು ನೀವು ನಿರ್ವಹಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ನಾನು ನನ್ನ ಲೋನಿಗೆ ಫೋರ್‌ಕ್ಲೋಸರ್ ಮೊತ್ತವನ್ನು ಪಾವತಿಸಿದ್ದೇನೆ, ಆದರೆ ನನ್ನ ಇಎಂಐ ಕೂಡ ಡೆಬಿಟ್ ಆಗಿದೆ. ನಾನು ರಿಫಂಡ್ ಅನ್ನು ಯಾವಾಗ ನಿರೀಕ್ಷಿಸಬಹುದು?

ತಿಂಗಳ 22ನೇ ನಂತರ ಫೋರ್‌ಕ್ಲೋಸರ್ ಪಾವತಿಯನ್ನು ಆರಂಭಿಸಿದರೆ ಇದು ಸಂಭವಿಸುತ್ತದೆ. ಅಂತಹ ಸಂದರ್ಭದಲ್ಲಿ, ಏಳು ರಿಂದ ಹತ್ತು ಕೆಲಸದ ದಿನಗಳ ಒಳಗೆ ಡೆಬಿಟ್ ಮಾಡಲಾದ ಇಎಂಐ ರಿಫಂಡ್ ಅನ್ನು ನೀವು ಪಡೆಯುತ್ತೀರಿ.

ನನ್ನ ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದ್ದರೂ ನನ್ನ ಇಎಂಐ ಬೌನ್ಸ್ ಏಕೆ ಆಗಿದೆ?

ನಿಮ್ಮ ಇಎಂಐ ಏಕೆ ಬೌನ್ಸ್ ಆಗಿರಬಹುದು ಎಂಬುದಕ್ಕೆ ಎರಡು ಕಾರಣಗಳಿವೆ. ನಿಮ್ಮ ಬ್ಯಾಂಕಿನ ಕಡೆಯಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಇದು ಆಗಿರಬಹುದು. ಅಥವಾ ನಿಮ್ಮ ಲೋನ್ ಅಕೌಂಟಿನೊಂದಿಗೆ ಮ್ಯಾಂಡೇಟ್ ಸಂಬಂಧಿತ ಸಮಸ್ಯೆ ಇರಬಹುದು.

ದಯವಿಟ್ಟು ನಿಮ್ಮ ಬ್ಯಾಂಕನ್ನು ಸಂಪರ್ಕಿಸಿ ಮತ್ತು ಈ ಸಮಸ್ಯೆಯನ್ನು ತಕ್ಷಣ ವರದಿ ಮಾಡಿ. ಮ್ಯಾಂಡೇಟ್ ಸಂಬಂಧಿತ ಸಮಸ್ಯೆಗಳಿಗಾಗಿ, ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ನಮ್ಮೊಂದಿಗೆ ಕೋರಿಕೆಯನ್ನು ಸಲ್ಲಿಸಬಹುದು:

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಕೆಳಗಿನ 'ನಮ್ಮ ಸಹಾಯ ಮತ್ತು ಬೆಂಬಲ ವಿಭಾಗಕ್ಕೆ ಭೇಟಿ ನೀಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
  • ಕೋರಿಕೆಯನ್ನು ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ, ನಿಮ್ಮ ಪ್ರಾಡಕ್ಟ್ ಆಯ್ಕೆಮಾಡಿ ಮತ್ತು ನಿಮ್ಮ ಲೋನ್ ಅಕೌಂಟ್ ನಂಬರನ್ನು ಆಯ್ಕೆಮಾಡಿ.
  • ಈಗ ನಿಮ್ಮ ಕಳಕಳಿಗೆ ಸಂಬಂಧಿಸಿದ 'ವಿಚಾರಣೆ ಪ್ರಕಾರ' ಮತ್ತು 'ಉಪ-ವಿಚಾರಣೆ ಪ್ರಕಾರ' ಆಯ್ಕೆಮಾಡಿ.
  • ಅಂತಿಮವಾಗಿ, ನಿಮ್ಮ ವಿಚಾರಣೆಯ ವಿವರಗಳನ್ನು ಹಂಚಿಕೊಳ್ಳಿ, ಅಗತ್ಯವಿರುವ ಯಾವುದೇ ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’.

ಇದರ ನಂತರ, ನಿಮ್ಮ ಕೋರಿಕೆಯ ಪರಿಹಾರದ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುವ ಸೇವಾ ಕೋರಿಕೆ ಸಂಖ್ಯೆಯನ್ನು ನೀವು ಪಡೆಯುತ್ತೀರಿ.

ನಮ್ಮ ಸಹಾಯ ಮತ್ತು ಬೆಂಬಲ ವಿಭಾಗಕ್ಕೆ ಭೇಟಿ ನೀಡಿ

ನನ್ನ ಫೋರ್‌ಕ್ಲೋಸರ್ ಪತ್ರವನ್ನು ನಾನು ಹೇಗೆ ಜನರೇಟ್ ಮಾಡಬಹುದು?

ನೀವು ಮೈ ಅಕೌಂಟಿನಲ್ಲಿ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಫೋರ್‌ಕ್ಲೋಸರ್ ಪತ್ರವನ್ನು ಜನರೇಟ್ ಮಾಡಲಾಗುತ್ತದೆ. ಫೋರ್‌ಕ್ಲೋಸರ್ ಪತ್ರವು ಜನರೇಟ್ ಆದ ಏಳು ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಭವಿಷ್ಯದಲ್ಲಿ ನಿಮಗೆ ಇನ್ನೊಮ್ಮೆ ಅದರ ಅಗತ್ಯವಿದ್ದರೆ, ನೀವು ಹೊಸ ಫೋರ್‌ಕ್ಲೋಸರ್ ಪತ್ರವನ್ನು ಜನರೇಟ್ ಮಾಡಬೇಕು.

ನಿಮ್ಮ ಲೋನ್ ಫೋರ್‌ಕ್ಲೋಸರ್ ಪತ್ರವನ್ನು ಡೌನ್ಲೋಡ್ ಮಾಡಲು ನೀವು ಈ ಹಂತಗಳನ್ನು ಅನುಸರಿಸಬಹುದು:

  • ಮೈ ಅಕೌಂಟಿಗೆ ಹೋಗಲು ಈ ಕೆಳಗಿನ 'ಫೋರ್‌ಕ್ಲೋಸರ್ ಲೆಟರ್ ಡೌನ್ಲೋಡ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರನ್ನು ನಮೂದಿಸುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಸೈನ್-ಇನ್ ಮಾಡಿ.
  • ನೀವು ಫೋರ್‌ಕ್ಲೋಸರ್ ಪತ್ರವನ್ನು ಜನರೇಟ್ ಮಾಡಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ.
  • ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನೋಡಿ ಮತ್ತು ಅದನ್ನು ಡೌನ್ಲೋಡ್ ಮಾಡಲು 'ಫೋರ್‌ಕ್ಲೋಸರ್ ಪತ್ರದ' ಮೇಲೆ ಕ್ಲಿಕ್ ಮಾಡಿ.

ಫೋರ್‌ಕ್ಲೋಸರ್ ಪತ್ರವನ್ನು ಡೌನ್ಲೋಡ್ ಮಾಡಿ

ನಾನು ನನ್ನ ಲೋನನ್ನು ಭಾಗಶಃ-ಮುಂಪಾವತಿ ಮಾಡಿದ್ದೇನೆ ಆದರೆ ನನ್ನ ಇಎಂಐ ಮೊತ್ತವನ್ನು ಏಕೆ ಕಡಿಮೆ ಮಾಡಲಾಗಿಲ್ಲ?

ನಿಮ್ಮ ಲೋನ್ ಮೇಲಿನ ಭಾಗಶಃ ಮುಂಪಾವತಿಯು ಮಾಸಿಕ ಕಂತುಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಿಮ್ಮ ಇಎಂಐ ಮೊತ್ತವು ಒಂದೇ ಆಗಿರುತ್ತದೆ. ಆದಾಗ್ಯೂ, ಭಾಗಶಃ ಮುಂಪಾವತಿ ಮೊತ್ತವು ನಿಮ್ಮ ಲೋನ್ ಅವಧಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಭಾಗಶಃ ಮುಂಪಾವತಿ ಮೊತ್ತವು ದೊಡ್ಡ ಮೊತ್ತವಾದಷ್ಟು, ನಿಮ್ಮ ಉಳಿದಿರುವ ಇಎಂಐಗಳು ಕಡಿಮೆಯಾಗಿರುತ್ತವೆ.

ನನ್ನ ಲೋನ್ ಅಕೌಂಟಿನಲ್ಲಿ ಸರಿಹೊಂದಿಸಲು ಭಾಗಶಃ-ಮುಂಪಾವತಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ನೀವು ಭಾಗಶಃ ಮುಂಪಾವತಿ ಮಾಡಿದ ನಂತರ, ಮೊತ್ತವು ನಿಮ್ಮ ಲೋನ್ ಅಕೌಂಟಿನಲ್ಲಿ ಕಾಣಿಸಿಕೊಳ್ಳಲು 24 ಗಂಟೆಗಳವರೆಗಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಅಪ್ಡೇಟ್ ಆದ ಲೋನ್ ವಿವರಗಳಿಗಾಗಿ ನೀವು ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ಪರಿಶೀಲಿಸಬಹುದು:

  • ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಕೆಳಗಿನ 'ಸ್ಟೇಟ್ಮೆಂಟ್ ಡೌನ್ಲೋಡ್ ಮಾಡಿ' ಮೇಲೆ ಕ್ಲಿಕ್ ಮಾಡಿ.
  • ನಮ್ಮ ಎರಡು-ಅಂಶಗಳ ದೃಢೀಕರಣವನ್ನು ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
  • ನೀವು 'ಮರುಪಾವತಿ ಶೆಡ್ಯೂಲ್' ಡೌನ್ಲೋಡ್ ಮಾಡಲು ಬಯಸುವ ಲೋನ್ ಅಕೌಂಟನ್ನು ಆಯ್ಕೆಮಾಡಿ’.
  • ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನೋಡಿ ಮತ್ತು ಅದನ್ನು ಡೌನ್ಲೋಡ್ ಮಾಡಲು 'ಮರುಪಾವತಿ ಶೆಡ್ಯೂಲ್' ಮೇಲೆ ಕ್ಲಿಕ್ ಮಾಡಿ.

ಸ್ಟೇಟ್ಮೆಂಟ್ ಡೌನ್ಲೋಡ್ ಮಾಡಿ

ನನ್ನ ಲೋನನ್ನು ಭಾಗಶಃ-ಮುಂಪಾವತಿ ಮಾಡಲು ನನಗೆ ಯಾಕೆ ಸಾಧ್ಯವಾಗುತ್ತಿಲ್ಲ?

ಮೈ ಅಕೌಂಟಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಲೋನಿನ ಒಂದು ಭಾಗವನ್ನು ಪಾವತಿಸಬಹುದು. ನೀವು ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಲು ಸಾಧ್ಯವಾಗದಿದ್ದರೆ, ಅದು ಈ ಕೆಳಗಿನ ಕಾರಣಗಳಿಂದಾಗಿ ಇರಬಹುದು:

  • ನಿಮ್ಮ ಲೋನ್ ಮೇಲೆ ಗಡುವು ಮೀರಿದ ಮೊತ್ತವನ್ನು ಕ್ಲಿಯರ್ ಮಾಡಬೇಕಾದರೆ.
  • ಕೊನೆಯ ಇಎಂಐ ಬಾಕಿ ಇದ್ದರೆ; ಈ ಸಂದರ್ಭದಲ್ಲಿ ನೀವು ನೇರವಾಗಿ ಫೋರ್‌ಕ್ಲೋಸರ್‌ಗೆ ಮುಂದುವರೆಯಬಹುದು.
  • ನಿಮ್ಮ ಭಾಗಶಃ-ಮುಂಪಾವತಿ ಮೊತ್ತವು ನಿಮ್ಮ ಬ್ಯಾಂಕ್ ವ್ಯಾಖ್ಯಾನಿಸಿದ ಎನ್ಇಎಫ್‌ಟಿ ಮಿತಿಯನ್ನು ಮೀರಿದರೆ.
  • ತಾಂತ್ರಿಕ ವಿಳಂಬಗಳನ್ನು ಉಂಟುಮಾಡುವ ನೆಟ್ವರ್ಕ್ ಸಮಸ್ಯೆಗಳಿದ್ದರೆ; ಈ ಸಂದರ್ಭದಲ್ಲಿ, ದಯವಿಟ್ಟು ಸ್ವಲ್ಪ ಸಮಯದ ನಂತರ ಮರುಪ್ರಯತ್ನಿಸಿ.

ಭಾಗಶಃ-ಪಾವತಿ ಮಾಡಿ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ