ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪರ್ಸನಲ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು
-
24 ಗಂಟೆಗಳಲ್ಲಿ ವಿತರಣೆ*
ಅನುಮೋದನೆಯಾದ ಒಂದು ದಿನದ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಫಂಡ್ಗಳನ್ನು ಪಡೆಯಿರಿ ಹಾಗೂ ನಿಮ್ಮ ಅಗತ್ಯಗಳನ್ನು ಯಾವುದೇ ತಡವಿಲ್ಲದೆ ಪೂರೈಸಿಕೊಳ್ಳಿ.
-
ಫ್ಲೆಕ್ಸಿ ಲೋನ್ ಸೌಲಭ್ಯ
ನಿಮ್ಮ ಅನುಮೋದಿತ ಮಿತಿಯೊಳಗೆ ನಿಮಗೆ ಬೇಕಾದಾಗೆಲ್ಲ ಹಣ ಪಡೆಯಿರಿ ಹಾಗೂ ಸಾಧ್ಯವಾದಾಗಲೆಲ್ಲ ಮುಂಗಡವಾಗಿ ಪಾವತಿಸಿ. ನೀವು ಪಡೆಯುವ ಹಣದ ಮೇಲೆ ಮಾತ್ರ ಬಡ್ಡಿ ಕಟ್ಟಿರಿ.
-
ಸರಳ ಡಾಕ್ಯುಮೆಂಟೇಶನ್
ಲೋನ್ ಅನುಮೋದನೆ ಪಡೆಯಲು ಕೆವೈಸಿ ಮತ್ತು ಆದಾಯ ಪ್ರಮಾಣಪತ್ರಗಳ ಜೊತೆ ಪ್ರ್ಯಾಕ್ಟಿಸ್ ಸರ್ಟಿಫಿಕೇಟ್ (ಸಿಒಪಿ) ಸಲ್ಲಿಸಿ.
-
ಅಡಮಾನವಿಲ್ಲದ ಲೋನ್
ನಿಮ್ಮ ಅಮೂಲ್ಯ ವೈಯಕ್ತಿಕ ಅಥವಾ ಬಿಸಿನೆಸ್ ಆಸ್ತಿಯನ್ನು ಸೆಕ್ಯೂರಿಟಿಯಾಗಿ ಇಡದೆ, ಹೆಚ್ಚಿನ ಮೌಲ್ಯದ ಹಣಕಾಸು ಪಡೆಯಿರಿ.
-
ಸುಲಭ ಮರುಪಾವತಿ
ಅನುಕೂಲಕರ ಮರುಪಾವತಿ ಸೌಲಭ್ಯದಿಂದ, 96 ತಿಂಗಳವರೆಗೆ ವಿಸ್ತಾರವಾಗುವ ಮರುಪಾವತಿ ಅವಧಿಗಳನ್ನು ಆಯ್ಕೆ ಮಾಡಿ.
-
ಮುಂಚಿತ ಅನುಮೋದಿತ ಆಫರ್‌ಗಳು
ಚಾರ್ಟರ್ಡ್ ಅಕೌಂಟಂಟ್‌ಗಳ ತ್ವರಿತ ಪರ್ಸನಲ್ ಲೋನ್ ತೆಗೆದುಕೊಳ್ಳಲು ವಿಶೇಷ ಪೂರ್ವ-ಅನುಮೋದಿತ ಆಫರ್‌ಗಳನ್ನು ಪಡೆಯಿರಿ.
-
ಡಿಜಿಟಲ್ ಲೋನ್ ಅಕೌಂಟ್
ನಮ್ಮ ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ ಮೂಲಕ ನಿಮ್ಮ ಲೋನ್ ಮುಂಗಡ ಪಾವತಿ ಮಾಡಿ, ನಿಮ್ಮ ಮರುಪಾವತಿ ಶೆಡ್ಯೂಲ್ ನೋಡಿ, ಸ್ಟೇಟ್ಮೆಂಟ್, ಇನ್ನು ಮುಂತಾದವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
-
ಹೆಚ್ಚಿನ ಲೋನ್ ವ್ಯಾಲ್ಯೂ
ದೊಡ್ಡ ಮತ್ತು ಸಣ್ಣ ಖರ್ಚುಗಳನ್ನು ಸುಲಭವಾಗಿ ಪೂರೈಸಲು ರೂ. 45 ಲಕ್ಷದವರೆಗೆ ಹಣ ಪಡೆಯಿರಿ.
ಚಾರ್ಟರ್ಡ್ ಅಕೌಂಟೆಂಟ್‌ಗಳ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗೆ ಅನುಮೋದನೆ ಪಡೆದ 24 ಗಂಟೆಗಳ ಒಳಗೆ ರೂ. 45 ಲಕ್ಷದವರೆಗೆ ಫಂಡಿಂಗ್ ನೀಡುತ್ತದೆ. ಪ್ರಮುಖ ಅರ್ಹತಾ ಮಾನದಂಡಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಮಾತ್ರ ಬೇಕಾಗುತ್ತದೆ. ಅಲ್ಲದೆ, ಅನುಮೋದನೆಗೆ ಯಾವುದೇ ಮೇಲಾಧಾರದ ಅಗತ್ಯವಿಲ್ಲ. ಲೋನ್ ಅನ್ನು ಮದುವೆ, ರಜೆಯಲ್ಲಿ ಪ್ರವಾಸ, ಮನೆಯನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ನವೀಕರಿಸುವುದು, ಮಕ್ಕಳ ವಿದೇಶೀ ವಿದ್ಯಾಭ್ಯಾಸ, ನಿಮ್ಮ ಇತರೆ ಸಾಲಗಳನ್ನು ಒಟ್ಟುಗೂಡಿಸುವುದು ಮತ್ತು ಇತರೆ ವೃತ್ತಿಗೆ ಸಂಬಂಧಿಸಿದ ಅಥವಾ ವಯಕ್ತಿಕ ಅಗತ್ಯಗಳಿಗೆ ಬಳಸಿ.
ಫ್ಲೆಕ್ಸಿಬಿಲಿಟಿಗಾಗಿ, ನೀವು ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಬಹುದು. ಇಲ್ಲಿ, ನೀವು ಒಂದು ಅನುಮೋದಿತ ಲೋನ್ ಮಿತಿಯನ್ನು ಪಡೆಯುತ್ತೀರಿ, ಈ ಮಿತಿಯೊಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮಗೆ ಬೇಕಾದಷ್ಟು ಬಾರಿ ಹಣ ವಿತ್‌ಡ್ರಾ ಮಾಡಬಹುದು ಮತ್ತು ಮುಂಗಡ ಪಾವತಿ ಮಾಡಬಹುದು. ನೀವು ಪಡೆಯುವ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಅವಧಿಯ ಆರಂಭದಲ್ಲಿ ನಿಮ್ಮ ಪರ್ಸನಲ್ ಲೋನ್ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸುವ ಆಯ್ಕೆಯನ್ನು ಕೂಡ ಮಾಡಬಹುದು. ಇದು ನಿಮ್ಮ ಮಾಸಿಕ ಪಾವತಿಗಳನ್ನು45% ವರೆಗೆ ಕಡಿಮೆ ಮಾಡುತ್ತದೆ*.
ಚಾರ್ಟರ್ಡ್ ಅಕೌಂಟೆಂಟ್ ಪರ್ಸನಲ್ ಲೋನ್‌ಗೆ ಅರ್ಹತಾ ಮಾನದಂಡ
ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಬಜಾಜ್ ಫಿನ್‌ಸರ್ವ್ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ನೀಡುವ ಪರ್ಸನಲ್ ಲೋನ್ ಪಡೆಯಿರಿ.
ಪ್ರಾಕ್ಟೀಸ್: ಕನಿಷ್ಠ 2 ವರ್ಷಗಳು
ಆಸ್ತಿ: ಬಜಾಜ್ ಫಿನ್‌ಸರ್ವ್ ಕಾರ್ಯನಿರ್ವಹಿಸುತ್ತಿರುವ ನಗರದಲ್ಲಿ ಒಂದು ಮನೆ ಅಥವಾ ಕಚೇರಿಯನ್ನು ಹೊಂದಿರಬೇಕು
ಚಾರ್ಟರ್ಡ್ ಅಕೌಂಟೆಂಟ್‌ಗಳ ಪರ್ಸನಲ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು
ಸುವ್ಯವಸ್ಥಿತ ಅನುಮೋದನಾ ಪ್ರಕ್ರಿಯೆಗಾಗಿ, ಬಜಾಜ್ ಫಿನ್‌ಸರ್ವ್ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ನೀಡುವ ಪರ್ಸನಲ್ ಲೋನ್‌ಗೆ ಕನಿಷ್ಠ ಡಾಕ್ಯುಮೆಂಟೇಶನ್ ಬೇಕಾಗುತ್ತದೆ:
- ಕೆವೈಸಿ ಡಾಕ್ಯುಮೆಂಟ್‌ಗಳು - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಯಾವುದೇ ಇತರ ಸರ್ಕಾರೀ-ಅನುಮೋದಿತ ಕೆವೈಸಿ ಡಾಕ್ಯುಮೆಂಟ್
- ವಿಳಾಸದ ಪುರಾವೆ - ನಿಮ್ಮ ವಿದ್ಯುತ್ ಬಿಲ್, ಬಾಡಿಗೆ ಒಪ್ಪಂದ, ಪಾಸ್‌ಪೋರ್ಟ್ ಮುಂತಾದ ಡಾಕ್ಯುಮೆಂಟ್‌ಗಳನ್ನು ವಿಳಾಸದ ಪುರಾವೆಯಾಗಿ ಬಳಸಬಹುದು
- ಅನುಭವದ ಪ್ರಮಾಣಪತ್ರ
- ಫೈನಾನ್ಶಿಯಲ್ ಡಾಕ್ಯುಮೆಂಟ್‌ಗಳು - ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
- ಮಾಲೀಕತ್ವದ ಪುರಾವೆ - ಕನಿಷ್ಠ ಒಂದು ಆಸ್ತಿಗಾಗಿ
ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪರ್ಸನಲ್ ಲೋನ್ ಫೀಸ್ ಮತ್ತು ಬಡ್ಡಿ ದರಗಳು
ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೆಚ್ಚಿನ ಖರ್ಚಿಲ್ಲದೆ ಪರ್ಸನಲ್ ಲೋನ್ ಫೈನಾನ್ಸಿಂಗ್‌ಗೆ ಅನುಮೋದನೆ ಪಡೆಯಿರಿ.
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಬಡ್ಡಿದರ |
ವರ್ಷಕ್ಕೆ 14% ರಿಂದ ವರ್ಷಕ್ಕೆ 17%. |
ಪ್ರಕ್ರಿಯಾ ಶುಲ್ಕ |
ಲೋನ್ ಮೊತ್ತದ 2% ವರೆಗೆ (ಜೊತೆಗೆ ತೆರಿಗೆಗಳು) |
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು |
ಎಕ್ಸ್ಪೀರಿಯದಿಂದ ಉಚಿತವಾಗಿ ನಿಮ್ಮ ಇ-ಸ್ಟೇಟ್ಮೆಂಟ್ಗಳು/ ಪತ್ರಗಳು/ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. |
ದಂಡದ ಬಡ್ಡಿ |
2% ಪ್ರತಿ ತಿಂಗಳಿಗೆ |
ಬೌನ್ಸ್ ಶುಲ್ಕಗಳು* |
ರೂ. 3,000 ಪ್ರತಿ ಬೌನ್ಸ್‌ಗೆ |
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆಗಿದೆ) |
ರೂ. 2,000 (ಜೊತೆಗೆ ತೆರಿಗೆಗಳು) |
ಗಮನಿಸಿ: ಚಾರ್ಟರ್ಡ್ ಅಕೌಂಟೆಂಟ್‌ಗಳ ಪರ್ಸನಲ್ ಲೋನ್ ಮೇಲೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ಓದಿ.
ಚಾರ್ಟರ್ಡ್ ಅಕೌಂಟೆಂಟ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ
ಯಾವುದೇ ತಡವಿಲ್ಲದೆ ಚಾರ್ಟರ್ಡ್ ಅಕೌಂಟೆಂಟ್ ಪರ್ಸನಲ್ ಲೋನ್ ಪಡೆಯಲು, ಈ ಸರಳ ಹಂತಗಳನ್ನು ಅನುಸರಿಸಿ:
- 1 ನಿಮ್ಮ ಅಪ್ಲಿಕೇಶನ್ ಶುರುಮಾಡಲು 'ಅಪ್ಲೈ ಆನ್ಲೈನ್' ಮೇಲೆ ಕ್ಲಿಕ್ ಮಾಡಿ
- 2 ನಿಮ್ಮ ಫೋನ್ ನಂಬರ್ ಒದಗಿಸಿ ಮತ್ತು ಅದಕ್ಕೆ ಕಳುಹಿಸಲಾದ ಒಟಿಪಿ ನಮೂದಿಸಿ
- 3 ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ಭರ್ತಿ ಮಾಡಿ
- 4 ಅರ್ಜಿ ಸಲ್ಲಿಸಿ
ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಲೋನ್ ಮಂಜೂರಾಗಲು ಪಾಲಿಸಬೇಕಾದ ಮುಂದಿನ ಹಂತಗಳ ಬಗ್ಗೆ ವಿವರಿಸುತ್ತಾರೆ.
*ಷರತ್ತು ಅನ್ವಯ