ಆಗಾಗ ಕೇಳುವ ಪ್ರಶ್ನೆಗಳು
ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಕಂತುಗಳನ್ನು ಲೆಕ್ಕ ಹಾಕಲು ಗಣಿತದ ಸೂತ್ರವನ್ನು ಬಳಸುತ್ತದೆ. ಇಲ್ಲಿ ಬಳಸುವ ಸೂತ್ರ ಹೀಗಿದೆ:
E = P*r*(1+r)^n/((1+r)^n-1) ಇಲ್ಲಿ,
- E ಎಂದರೆ EMI
- ಪಿ ಎಂದರೆ ಸಾಲದ ಅಸಲು ಮೊತ್ತ,
- r ಎಂದರೆ ಮಾಸಿಕವಾಗಿ ಲೆಕ್ಕ ಹಾಕಲಾಗುವ ಬಡ್ಡಿ ದರ, ಮತ್ತು
- n ಎಂದರೆ ಕಾಲಾವಧಿ/ಅವಧಿ ತಿಂಗಳುಗಳಲ್ಲಿ
ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಗಳನ್ನು ನಿಖರವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ. ನಿಮ್ಮ ಪರ್ಸನಲ್ ಲೋನಿಗೆ ಪಾವತಿಸಬೇಕಾದ ನಿಖರವಾದ ಇಎಂಐ ಅನ್ನು ಪಡೆಯಲು ನೀವು ಕೇವಲ ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಬೇಕು.
ನಮ್ಮ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಅಂಶಗಳು ನಿಮ್ಮ ಪರ್ಸನಲ್ ಲೋನ್ ಇಎಂಐ ಗಳ ಮೇಲೆ ಪರಿಣಾಮ ಬೀರುತ್ತವೆ:
- ಲೋನ್ ಮೊತ್ತ: ಪಾವತಿಸಬೇಕಾದ ಮಾಸಿಕ ಕಂತುಗಳು ನೇರವಾಗಿ ಲೋನ್ ಮೊತ್ತಕ್ಕೆ ಅನುಗುಣವಾಗಿರುತ್ತವೆ. ಪಡೆದುಕೊಂಡ ಲೋನ್ ಅಧಿಕವಾಗಿದ್ದಷ್ಟು, ನಿಮ್ಮ ಇಎಂಐಗಳು ಅಧಿಕವಾಗಿರುತ್ತವೆ.
- ಬಡ್ಡಿ ದರ: ಬಡ್ಡಿ ದರವು ಸಾಲದಾತರು ಪಡೆದ ಮೊತ್ತದ ಮೇಲೆ ಬಡ್ಡಿಯನ್ನು ವಿಧಿಸುವ ಶೇಕಡಾವಾರು ಆಗಿದೆ. ಹೆಚ್ಚಿನ ಬಡ್ಡಿದರವು ಇಎಂಐಗಳನ್ನು ಹೆಚ್ಚಿಸುತ್ತದೆ ಹಾಗೂ ಕಡಿಮೆ ಬಡ್ಡಿ ದರವು ಇಎಂಐ ಕಡಿಮೆ ಮಾಡುತ್ತದೆ.
- ಅವಧಿ: ಇದು ಪಡೆದ ಲೋನನ್ನು ಮರುಪಾವತಿಸುವ ಅವಧಿಯಾಗಿದೆ ಮತ್ತು ಇದು ಇಎಂಐಗಳಿಗೆ ವಿಲೋಮವಾಗಿ ಸಂಬಂಧಿಸಿದೆ. ದೀರ್ಘಾವಧಿಯು ಮಾಸಿಕ ಕಂತುಗಳನ್ನು ಕಡಿಮೆ ಮಾಡುತ್ತದೆ, ಆದರೆ ಕಡಿಮೆ ಅವಧಿಯು ನಿಮ್ಮ ಇಎಂಐಗಳನ್ನು ಹೆಚ್ಚಿಸುತ್ತದೆ.
ನೀವು ಪಡೆಯಬೇಕಾದ ಮೊತ್ತಕ್ಕೆ ಸಾಧ್ಯವಾದ ಇಎಂಐ ಹೊರಹರಿವನ್ನು ತಿಳಿದುಕೊಳ್ಳಲು ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಪರ್ಸನಲ್ ಲೋನ್ ಬಡ್ಡಿ ದರ ಪರ್ಸನಲ್ ಲೋನ್ ಬಡ್ಡಿ ದರವನ್ನು ನಿಮ್ಮ ಲೋನ್ ಮೊತ್ತ, ಕಾಲಾವಧಿ ಮತ್ತು ಕ್ರೆಡಿಟ್ ಹಿಸ್ಟರಿ ಆಧಾರದ ಮೇಲೆ ನಿಮ್ಮ ಸಾಲದಾತರು ನಿರ್ಧರಿಸುತ್ತಾರೆ. ಅಪೇಕ್ಷಿತ ಲೋನ್ ಮೊತ್ತ ಮತ್ತು ಕಾಲಾವಧಿಯ ಮೇಲಿನ ಬಡ್ಡಿ ದರವನ್ನು ನೀವು ತಿಳಿದುಕೊಂಡ ನಂತರ, ನಿಮ್ಮ ಮಾಸಿಕ ಕಂತುಗಳನ್ನು ನಿರ್ಧರಿಸಲು ನೀವು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಇದು ನಿಮ್ಮ ಇಎಂಐ ಗಳನ್ನು ಯೋಜಿಸಲು ಮತ್ತು ಸಮಯಕ್ಕೆ ಸರಿಯಾಗಿ ಮರುಪಾವತಿಗಳನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಪರ್ಸನಲ್ ಲೋನ್ ಬಡ್ಡಿ ದರ ಬಗ್ಗೆ ಇನ್ನಷ್ಟು ಓದಿ
ಪರ್ಸನಲ್ ಲೋನ್ ಇಎಂಐ ಗಳನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಸರಳ ಹಂತಗಳನ್ನು ಕೆಳಗೆ ನೀಡಲಾಗಿದೆ:
- ದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದರಿಂದ ಲೋನ್ ವೆಚ್ಚವನ್ನು ವಿಸ್ತರಿಸಲು ಮತ್ತು ನಿಮ್ಮ ಮಾಸಿಕ ಕಂತುಗಳನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
- ಕಡಿಮೆ ಬಡ್ಡಿ ದರಗಳು ಮತ್ತು ಕಡಿಮೆ ಇಎಂಐ ಗಳನ್ನು ಆನಂದಿಸಲು ಉತ್ತಮ ಸಿಬಿಲ್ ಸ್ಕೋರ್ ಅನ್ನು ನಿರ್ವಹಿಸಿ.
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಅನುಕೂಲಗಳು ಈ ಕೆಳಗಿನಂತಿವೆ:
- ತ್ವರಿತ ಮತ್ತು ತೊಂದರೆ ರಹಿತ ಇಎಂಐ ಲೆಕ್ಕಾಚಾರ
- ತೊಂದರೆಯ ಅವಕಾಶಗಳನ್ನು ಕಡಿಮೆ ಮಾಡುತ್ತದೆ
- ಸಂಪೂರ್ಣ ಕಾಲಾವಧಿಯ ಮರುಪಾವತಿ ಶೆಡ್ಯೂಲ್ ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ
- ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರದೆ ಕಾಲಕಾಲಕ್ಕೆ ಮರುಪಾವತಿಸಬಹುದಾದ ಸೂಕ್ತ ಮೊತ್ತವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ
ನೀವು ಯಾವುದೇ ಕಾರಣಕ್ಕಾಗಿ ನಿಮ್ಮ ಇಎಂಐ ಪಾವತಿಯನ್ನು ಸ್ಕಿಪ್ ಮಾಡಿದರೆ, ಇಎಂಐ ಬೌನ್ಸ್ ಶುಲ್ಕವಾಗಿ ರೂ. 700 ಮತ್ತು ರೂ. 1,200 ನಡುವಿನ ದಂಡ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ನಿಮ್ಮ ಲೋನ್ ಅವಧಿಯ ಮೇಲೆ ಕೂಡ ಪರಿಣಾಮ ಬೀರಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು.
ಪರ್ಸನಲ್ ಲೋನ್ ಕಾಲಾವಧಿ ಆಯ್ಕೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ಪರ್ಸನಲ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಲೋನ್ ಅವಧಿಗೆ ಮಾಡಬೇಕಾದ ನಿಯತಕಾಲಿಕ ಪಾವತಿಗಳ ವಿವರವಾದ ಟೇಬಲ್ ಆಗಿದೆ. ಈ ಶೆಡ್ಯೂಲ್ ರಚಿಸಲು ಸಾಲದಾತರು ಅಮೊರ್ಟೈಸೇಶನ್ ಕ್ಯಾಲ್ಕುಲೇಟರ್ ಬಳಸುತ್ತಾರೆ. ಅಮೊರ್ಟೈಸೇಶನ್ ಎಂಬುದು ಆಯ್ಕೆ ಮಾಡಿದ ಅವಧಿಯಲ್ಲಿ ಇಎಂಐ ಗಳ ಮೂಲಕ ಲೋನ್ ಮರುಪಾವತಿಯನ್ನು ನಿರ್ದಿಷ್ಟಪಡಿಸುವ ಲೆಕ್ಕಾಚಾರ ಪ್ರಕ್ರಿಯೆಯಾಗಿದೆ.
ಇದು ಲೋನಿನ ಸಂಪೂರ್ಣ ಮರುಪಾವತಿಯವರೆಗೆ ಅವಧಿಯ ಮೂಲಕ ಪಾವತಿಸಬೇಕಾದ ಪ್ರತಿ ಇಎಂಐನಲ್ಲಿ ಒಳಗೊಂಡಿರುವ ಅಸಲು ಮತ್ತು ಬಡ್ಡಿ ಮೊತ್ತದ ವಿವರವಾದ ಬ್ರೇಕ್‌ಡೌನ್ ಅನ್ನು ಹೊಂದಿರುತ್ತದೆ. ಪ್ರತಿ ಇಎಂಐ ನಲ್ಲಿ ಒಳಗೊಂಡಿರುವ ಅಸಲು ಮತ್ತು ಬಡ್ಡಿ ಕಾಂಪೊನೆಂಟ್‌ಗಳ ಬಗ್ಗೆ ಸಾಲಗಾರರಿಗೆ ನಿಖರವಾದ ಒಳನೋಟವನ್ನು ಈ ಶೆಡ್ಯೂಲ್ ನೀಡುತ್ತದೆ.
ಪರ್ಸನಲ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.