ಭದ್ರತೆ ಇರುವ ಮತ್ತು ಭದ್ರತೆ ರಹಿತ ಲೋನ್‌ಗಳ ನಡುವಿನ ವ್ಯತ್ಯಾಸಗಳು ಯಾವುವು?
ಸೆಕ್ಯೂರ್ಡ್ ಮತ್ತು ಅನ್‌ಸೆಕ್ಯೂರ್ಡ್ ಲೋನ್‌ಗಳು, ಗ್ರಾಹಕರ ಹಣಕಾಸಿನ ಅಗತ್ಯಗಳ ಪೂರೈಕೆಗಾಗಿ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ನೀಡುವ ಲೋನ್‌ನ ಎರಡು ವಿಧಗಳಾಗಿವೆ. ಎರಡರ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳು ಹೀಗಿವೆ:
ಸುರಕ್ಷಿತ ಲೋನ್‌ಗಳು
ನೀವು ಆಸ್ತಿಯನ್ನು ಅಡಮಾನವಾಗಿ ಇಡುವಾಗ ಸಾಲದಾತರು ಸೆಕ್ಯೂರ್ಡ್ ಲೋನ್ ಮಂಜೂರು ಮಾಡುತ್ತಾರೆ, ಈ ಆಸ್ತಿಯು ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ಮನೆ ಅಥವಾ ಪ್ಲಾಟ್, ಚಿನ್ನ, ವಾಹನ, ಸೆಕ್ಯೂರಿಟಿಗಳು ಅಥವಾ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಅಡಮಾನವಾಗಿ ಇಡಬಹುದು.
ಸೆಕ್ಯೂರ್ಡ್ ಲೋನ್‌ಗಳಲ್ಲಿ ಮಾರ್ಟ್‌ಗೇಜ್ ಲೋನ್‌ಗಳು, ಗೋಲ್ಡ್ ಲೋನ್‌ಗಳು, ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಲೋನ್‌ಗಳು, ವಾಹನ ಲೋನ್‌ಗಳು ಮತ್ತು ಸೆಕ್ಯೂರಿಟಿಗಳ ಮೇಲಿನ ಲೋನ್‌ಗಳು ಸೇರಿವೆ. ಆದಾಗ್ಯೂ, ನೀವು ಸೆಕ್ಯೂರ್ಡ್ ಲೋನ್‌ನಲ್ಲಿ ಡೀಫಾಲ್ಟ್ ಮಾಡಿದರೆ, ಬಾಕಿ ವಸೂಲಿಗಾಗಿ ಸಾಲದಾತರು ನಿಮ್ಮ ಅಡವಿಟ್ಟ ಆಸ್ತಿಯನ್ನು ವಶಪಡಿಸಿಕೊಂಡು ಲಿಕ್ವಿಡೇಟ್ ಮಾಡಬಹುದು ಎಂಬುದನ್ನು ನೆನಪಿಡಿ.
ಅಸುರಕ್ಷಿತ ಲೋನ್‌ಗಳು
ಸುರಕ್ಷಿತವಲ್ಲದ ಲೋನ್ ಗೆ ಯಾವುದೇ ಅಡಮಾನ ಬೇಕಾಗುವುದಿಲ್ಲ. ನೀವು ಒಳ್ಳೆಯ ಮರುಪಾವತಿ ಹಿನ್ನೆಲೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತಾರೆ. ಸುರಕ್ಷಿತವಲ್ಲದ ಲೋನ್ ಪಡೆಯಲು ಕ್ರೆಡಿಟ್ ಸ್ಕೋರ್ 685 ಅಥವಾ ಅದಕ್ಕಿಂತ ಹೆಚ್ಚಾಗಿರಲೇಬೇಕು. ಡೀಫಾಲ್ಟ್ ಆದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ.
ಎರಡು ರೀತಿಯ ಜನಪ್ರಿಯ ಭದ್ರತೆ ರಹಿತ ಲೋನ್‌ಗಳು ಹೀಗಿವೆ:
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು, ಆನ್ಲೈನ್ ಅಪ್ಲಿಕೇಶನ್ ಫಾರಂನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ, ನಿಮಗೆ ಸೂಕ್ತವಾದ ಲೋನ್ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಿ, ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಅನುಮೋದನೆಯ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ.
*ಷರತ್ತು ಅನ್ವಯ