ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಗಳನ್ನು ಲೆಕ್ಕ ಹಾಕುವುದು ಹೇಗೆ?

2 ನಿಮಿಷದ ಓದು

ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಗಳನ್ನು ಲೆಕ್ಕ ಹಾಕಲು, ಈ ಕೆಳಗೆ ನಮೂದಿಸಿದ ಫಾರ್ಮುಲಾವನ್ನು ನೀವು ಬಳಸಬಹುದು:
ವರ್ಕಿಂಗ್ ಕ್ಯಾಪಿಟಲ್ (WC) = ಈಗಿರುವ ಸ್ವತ್ತುಗಳು (CA) – ಈಗಿರುವ ಹೊಣೆಗಾರಿಕೆಗಳು (CL).
ಒಟ್ಟು ಪ್ರಸ್ತುತ ಸ್ವತ್ತುಗಳ ಮೌಲ್ಯ ರೂ. 3,00,000 ಮತ್ತು ಪ್ರಸ್ತುತ ಹೊಣೆಗಾರಿಕೆಗಳು ರೂ. 1,50,000 ಆಗಿದ್ದರೆ, ನಿಮ್ಮ ಕಂಪನಿಯ ವರ್ಕಿಂಗ್ ಕ್ಯಾಪಿಟಲ್ 3,00,000 - 1,50,000 ಆಗಿರುತ್ತದೆ, ಇದು ರೂ. 1,50,000 ಕ್ಕೆ ಸಮನಾಗಿರುತ್ತದೆ.

ಕಂಪನಿಯ ಸದ್ಯದ ಆಸ್ತಿಗಳ ಕೆಲವು ಮುಖ್ಯ ಅಂಶಗಳು:

  • ಲಭ್ಯವಿರುವ ನಗದು
  • ಕಂಪನಿ ಹೊಂದಿರುವ ಸ್ಟಾಕ್ ಅಥವಾ ದಾಸ್ತಾನು
  • ಕಂಪನಿಯಿಂದ ಸರಕುಗಳನ್ನು ಖರೀದಿಸಿ ಇನ್ನೂ ತಮ್ಮ ಬಾಕಿ ಪಾವತಿಸದ ಸಾಲಗಾರರು
  • ಮುಂಗಡವಾಗಿ ಪಾವತಿ ಮಾಡಲ್ಪಟ್ಟ ವೆಚ್ಚಗಳು

ಸದ್ಯದ ಹೊಣೆಗಾರಿಕೆಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:

  • ಸಾಲದಾತರಿಗೆ ಬಾಕಿ ಇರುವ ಪಾವತಿಗಳು
  • ಇತರ ಪಾವತಿಸದ ವೆಚ್ಚಗಳು
  • ಪಾವತಿಸಬೇಕಾದ ಇತರ ಅಲ್ಪಾವಧಿಯ ಲೋನ್‌ಗಳು

ವರ್ಕಿಂಗ್ ಕ್ಯಾಪಿಟಲ್ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಒಂದು ವಿವರಣೆ ಇಲ್ಲಿದೆ:

ನಿಮ್ಮ ವ್ಯವಹಾರವು ಈ ಕೆಳಗಿನ ಪ್ರಸ್ತುತ ಸ್ವತ್ತುಗಳನ್ನು ಹೊಂದಿದೆ ಎಂದು ಹೇಳಿ:

  • ಕ್ರೆಡಿಟ್‌ನಲ್ಲಿ ಮಾರಾಟವಾದ ಸರಕುಗಳು: ರೂ. 2,00,000
  • ಕಚ್ಚಾ ವಸ್ತುಗಳು: ರೂ. 2,00,000
  • ಕೈಯಲ್ಲಿ ನಗದು: ರೂ. 1,50,000
  • ಅಬ್ಸೋಲೆಟ್ ದಾಸ್ತಾನು: ರೂ. 40,000
  • ಉದ್ಯೋಗಿಗಳಿಗೆ ನೀಡಲಾದ ಲೋನ್‌ಗಳು: ರೂ. 50,000

ಪ್ರಸ್ತುತ ಸ್ವತ್ತಿನ ಒಟ್ಟು ಮೌಲ್ಯವು ಕೈಯಲ್ಲಿ ನಗದು ಹೊರತುಪಡಿಸಿ ಮೇಲೆ ನೀಡಲಾದ ಮೌಲ್ಯಗಳ ಒಟ್ಟು ಮೊತ್ತವಾಗಿರುತ್ತದೆ, ಅಂದರೆ ರೂ. 4,90,000. ಲಭ್ಯವಿರುವ ನಗದು ಲಿಕ್ವಿಡಿಟಿಯ ಅಂತಿಮ ಅಳತೆಯಾಗಿದೆ ಮತ್ತು ರಶೀದಿ ಅಥವಾ ಪಾವತಿಯೊಂದಿಗೆ ಆಗಾಗ್ಗೆ ಬದಲಾವಣೆಯಾಗುತ್ತದೆ. ಇದನ್ನು ಪ್ರಸ್ತುತ ಸ್ವತ್ತುಗಳಿಗೆ ಸೇರಿಸುವುದು ಬಿಸಿನೆಸ್‌ನ ಲಿಕ್ವಿಡಿಟಿಯನ್ನು ನಿಖರವಾಗಿ ಚಿತ್ರಿಸುವುದಿಲ್ಲ.

ನಿಮ್ಮ ಪ್ರಸ್ತುತ ಹೊಣೆಗಾರಿಕೆಗಳು ಹೀಗಿವೆ ಎಂದು ಹೇಳಿ:

  • ಸಾಲದಾತರಿಗೆ ಪಾವತಿಸಬೇಕಾದ ಬಾಕಿ ಉಳಿದ ಫಂಡ್‌ಗಳು: ರೂ. 1,70,000
  • ಪಾವತಿಸದ ವೆಚ್ಚಗಳು: ರೂ. 80,000

ಪ್ರಸ್ತುತ ಹೊಣೆಗಾರಿಕೆಗಳ ಒಟ್ಟು ಮೌಲ್ಯ ರೂ. 2,50,000 (ಮೇಲಿನ ಎರಡು ಮೌಲ್ಯಗಳ ಮೊತ್ತ).
ವರ್ಕಿಂಗ್ ಕ್ಯಾಪಿಟಲ್ ಫಾರ್ಮುಲಾ ಬಳಸಿಕೊಂಡು, ನೀವು ಬಿಸಿನೆಸ್‌ನ ಲಿಕ್ವಿಡಿಟಿ ಸ್ಥಿತಿಯನ್ನು ಅಂದಾಜು ಮಾಡಬಹುದು.
WC = CA – CL
= ರೂ. 4,90,000 – ರೂ. 2,50,000
= ರೂ. 2,40,000

ಈ ಫಾರ್ಮುಲಾದ ಸಹಾಯದಿಂದ, ಬಿಸಿನೆಸ್ ಅದರ ವರ್ಕಿಂಗ್ ಕ್ಯಾಪಿಟಲ್ ಅನ್ನು ಅಂದಾಜು ಮಾಡಬಹುದು. ಕೊರತೆಯ ಸಂದರ್ಭದಲ್ಲಿ, ಬಿಸಿನೆಸ್ ಮಾಲೀಕರು ವೆಚ್ಚದ ಅವಶ್ಯಕತೆಗಳನ್ನು ಪೂರೈಸಲು ವರ್ಕಿಂಗ್ ಕ್ಯಾಪಿಟಲ್ ಲೋನನ್ನು ಆಯ್ಕೆ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ರೂ. 50 ಲಕ್ಷದವರೆಗಿನ ಹೆಚ್ಚಿನ ಮೌಲ್ಯದ ಲೋನನ್ನು ಒದಗಿಸುತ್ತದೆ* (*ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡು) ಇದು ಬಿಸಿನೆಸ್ ತನ್ನ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗೆ ಹಣಕಾಸು ಒದಗಿಸಲು ಮತ್ತು ಸೂಕ್ತ ದಕ್ಷತೆಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆಫರ್‌ನಲ್ಲಿ ಲೋನ್ ಪಡೆದುಕೊಳ್ಳಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಕೈಗೆಟಕುವ ರೀತಿಯಲ್ಲಿ ಮರುಪಾವತಿ ಮಾಡಿ.

ಹೆಚ್ಚುವರಿ ಓದು: ಕ್ಯಾಪಿಟಲ್ ಬಜೆಟಿಂಗ್ ಪ್ರಾಮುಖ್ಯತೆ

ಇನ್ನಷ್ಟು ಓದಿರಿ ಕಡಿಮೆ ಓದಿ