ಅಡಮಾನ ಲೋನಿಗೆ ಅಪ್ಲೈ ಮಾಡುವುದು ಹೇಗೆ?

2 ನಿಮಿಷದ ಓದು

ಬಜಾಜ್ ಫಿನ್‌ಸರ್ವ್‌ ಅಡಮಾನ ಲೋನಿಗೆ ಅಪ್ಲೈ ಮಾಡುವುದಕ್ಕೆ ಯಾವುದೇ ಸಮಯ ಬೇಕಾಗುವುದಿಲ್ಲ. ನೀವು ಮೂರು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.

ಒಮ್ಮೆ ನೀವು ಈ ವಿವರಗಳನ್ನು ಸಲ್ಲಿಸಿದ ನಂತರ, ಉಳಿದ ಅಪ್ಲಿಕೇಶನ್ ಹಂತಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ರಿಲೇಶನ್‌ಶಿಪ್ ಮ್ಯಾನೇಜರ್‌ನಿಂದ ನೀವು ಕರೆಯನ್ನು ನಿರೀಕ್ಷಿಸಬಹುದು.

ಸುಲಭ ಅಪ್ಲಿಕೇಶನ್ ಹೊರತುಪಡಿಸಿ, ಬಜಾಜ್ ಫಿನ್‌ಸರ್ವ್ ತಮ್ಮ ಅಡಮಾನದ ಲೋನ್ ಮೂಲಕ ಇತರ ಪ್ರಯೋಜನಗಳನ್ನು ಒದಗಿಸುತ್ತದೆ, ಉದಾಹರಣೆಗೆ ರೂ. 5 ಕೋಟಿ* ವರೆಗಿನ ಹೆಚ್ಚಿನ ಮೊತ್ತದ ಲೋನ್ ಮೊತ್ತ ಮತ್ತು 48 ಗಂಟೆಗಳಲ್ಲಿ ಅಕೌಂಟ್‍ನಲ್ಲಿ ಹಣ ಪಡೆಯುವ ಅವಕಾಶ*. ನೀವು ಫ್ಲೆಕ್ಸಿ ಸೌಲಭ್ಯ, ದೀರ್ಘ ಮರುಪಾವತಿ ಅವಧಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಕೂಡ ಅಕ್ಸೆಸ್ ಮಾಡಬಹುದು. ಎಲ್ಲದಕ್ಕೂ ಉತ್ತಮವಾಗಿ, ನೀವು ಫಂಡ್‌ಗಳನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ಯಾವುದೇ ನಿರ್ಬಂಧಗಳಿಲ್ಲ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ಅಡಮಾನ ಲೋನ್ ಮೇಲೆ ಗರಿಷ್ಠ ಲೋನ್ ಮೊತ್ತ ಎಷ್ಟು?
ಅಡಮಾನ ಲೋನ್ ಆಸ್ತಿಯ ಅಡಮಾನದ ಮೇಲೆ ಪಡೆದ ಸುರಕ್ಷಿತ ಸಾಲವಾಗಿದೆ. ಬಜಾಜ್ ಫಿನ್ಸರ್ವ್ ಆಸ್ತಿಯಾಧಾರಿತ ಲೋನ್ ಎರಡು ಆದಾಯ ಗುಂಪುಗಳ ವ್ಯಕ್ತಿಗಳಿಗೆ ಹೆಚ್ಚಿನ ಮೌಲ್ಯದ ಲೋನ್ ಅನ್ನು ನೀಡುತ್ತದೆ. ಅಡಮಾನ ಲೋನ್ ನ ಗರಿಷ್ಠ ಲೋನ್ ಮೊತ್ತ ಎಷ್ಟು ಎಂಬುವುದಕ್ಕೆ ನಿಮ್ಮ ಉತ್ತರವನ್ನುಈ ಕೆಳಗೆ ತಿಳಿಯಿರಿ.

ಸ್ವಯಂ ಉದ್ಯೋಗಿ ವ್ಯಕ್ತಿಗಳು – ಗರಿಷ್ಠ ಮೊತ್ತ ರೂ. 3.5 ಕೋಟಿಯವರೆಗೆ.
ಸಂಬಳ ಪಡೆಯುವ ವ್ಯಕ್ತಿಗಳು – ಗರಿಷ್ಠ ಮೊತ್ತ ರೂ. 1 ಕೋಟಿಯವರೆಗೆ.

ಆದಾಗ್ಯೂ, ನೀವು ಪಡೆಯಬಹುದಾದ ಗರಿಷ್ಠ ಮೊತ್ತವು ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಮತ್ತು ಸಾಲದಾತರು ನೀಡುವ ಅಡಮಾನ ಲೋನ್‌ನ ಮೌಲ್ಯಕ್ಕೆ ಲೋನ್ ಅನ್ನು ಅವಲಂಬಿಸಿರುತ್ತದೆ. ಬಜಾಜ್ ಫಿನ್‌ಸರ್ವ್ ಆಸ್ತಿಯ ಮೌಲ್ಯದ 75% ನಷ್ಟು ಹೆಚ್ಚಿನ ಮೌಲ್ಯಗಳಿಗೆ ಲೋನ್ ಆಫರ್ ಮಾಡುತ್ತದೆ.

ಲಭ್ಯವಿರುವ ಮೊತ್ತವನ್ನು ಹೆಚ್ಚಿಸಲು ಮತ್ತು ನಿಮ್ಮ ದೊಡ್ಡ-ಟಿಕೆಟ್ ಫಂಡಿಂಗ್ ಅಗತ್ಯಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ನ ಅಡಮಾನ ಲೋನಿಗೆ ಅಪ್ಲೈ ಮಾಡಿ.

ನೀವು ಆಸ್ತಿಯನ್ನಾಧಾರಿಸಿದ ಬಜಾಜ್ ಫಿನ್‌ಸರ್ವ್ ಲೋನ್ ಅನ್ನು ತೆಗೆದುಕೊಂಡರೆ ನಿಮಗೆ ಯಾವ ಸೌಲಭ್ಯಗಳು ಸಿಗುತ್ತವೆ?
ಆಸ್ತಿಯನ್ನಾಧಾರಿಸಿದ ಬಜಾಜ್ ಫಿನ್‌ಸರ್ವ್ ಲೋನ್ ನೊಂದಿಗೆ ನೀವು ಹಲವಾರು ಸೌಲಭ್ಯಗಳನ್ನು ಆನಂದಿಸಬಹುದು. ಜೊತೆಯಲ್ಲಿ ದೊರಕುವ ಲಾಭಗಳನ್ನು ಹೆಚ್ಚು ಮಾಡಲು ಲೋನ್ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿ.

a) ಭಾಗಶಃ-ಮುಂಪಾವತಿ ಮತ್ತು ಫೋರ್‌ಕ್ಲೋಸರ್ – ಕಾಲಾವಧಿ ಮುಗಿಯುವ ಮೊದಲು ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಹೊರೆಯನ್ನು ಕಡಿಮೆ ಮಾಡಲು ಈ ಸೌಲಭ್ಯಗಳನ್ನು ಬಳಸಿ. ಬದಲಾಗುವ ದರಗಳಲ್ಲಿ ಬಜಾಜ್ ಫಿನ್‌‌ಸರ್ವ್ ಅಡಮಾನ ಸಾಲದ ಬೇಡಿಕೆ ಇಟ್ಟಿರುವ ವ್ಯಕ್ತಿಗಳು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಈ ರೀತಿ ಮಾಡಬಹುದು.

b) ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ – ಈ ಸೌಲಭ್ಯವನ್ನು ಆಯ್ಕೆ ಮಾಡಿ ಮತ್ತು ಹೆಚ್ಚಿನ ಮೌಲ್ಯದ ಟಾಪ್-ಅಪ್ ಮೊತ್ತದೊಂದಿಗೆ ಕಡಿಮೆ ಬಡ್ಡಿ ದರಗಳಿಂದ ಪ್ರಯೋಜನ ಪಡೆಯಿರಿ.

c) ಫ್ಲೆಕ್ಸಿ ಲೋನ್ ಸೌಲಭ್ಯ – ಇದು ಪೂರ್ವ-ಮಂಜೂರಾದ ಲೋನ್ ಮೊತ್ತದಿಂದ ವಿತ್‌ಡ್ರಾ ಮಾಡಲು ನಿಮಗೆ ಅನುಮತಿ ನೀಡುತ್ತದೆ, ಮತ್ತು ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ.

ಈ ಎಲ್ಲಾ ಸೌಲಭ್ಯಗಳು ಬಜಾಜ್ ಫಿನ್‌‌ಸರ್ವ್ಸ್ ಪ್ರಾಪರ್ಟಿ ಲೋನ್ ಅನ್ನು ವಿಶಿಷ್ಟ ಹಣಕಾಸು ಒದಗಿಸುವ ಆಯ್ಕೆಯನ್ನಾಗಿಸಿದೆ. ಇದಕ್ಕೆ ಅಪ್ಲೈ ಮಾಡಲು ಆನ್ಲೈನ್ ಫಾರಂ ಅನ್ನು ಭರ್ತಿ ಮಾಡಿ.

ಆಸ್ತಿ ಮೇಲಿನ ಸ್ವಯಂ ಉದ್ಯೋಗಿ ಲೋನ್ ಪಡೆಯಲು ಸಾಧ್ಯವೇ?
ಸ್ವಯಂ ಉದ್ಯೋಗಿ ವ್ಯಕ್ತಿಗಳು ನಿರ್ದಿಷ್ಟ ಅರ್ಹತೆಗಳನ್ನು ಪೂರೈಸಿದ ನಂತರ ಆಸ್ತಿ ಲೋನ್ ಅನ್ನು ಪಡೆಯಬಹುದು. ಏಕಮಾತ್ರ ಮಾಲೀಕರಾಗಿರುವ, ಪಾಲುದಾರಿಕೆಯಲ್ಲಿ ಬಿಸಿನೆಸ್ ನಡೆಸುವ, ಕಂಪನಿಯನ್ನು ಹೊಂದಿರುವ ಅಥವಾ ಇತರ ವಿಶೇಷ ಪ್ರಕರಣಗಳಿಗೆ ಅರ್ಹತೆ ಪಡೆದ ವ್ಯಕ್ತಿಗಳಿಗೆ ಬಜಾಜ್ ಫಿನ್‌ಸರ್ವ್ ಆಸ್ತಿಯ ಮೇಲೆ ಸ್ವಯಂ ಉದ್ಯೋಗ ಲೋನ್ ನೀಡುತ್ತದೆ.

ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ನಿಂದ ಆಸ್ತಿಯನ್ನಾಧಾರಿಸಿದ ಲೋನ್ ಅನ್ನು ಪಡೆಯಬಹುದು.

 1. 25 ರಿಂದ 70 ವರ್ಷಗಳ ವಯಸ್ಸಿನ ಅವಶ್ಯಕತೆಗಳನ್ನು ಪೂರೈಸಿ.
 2. ಸ್ಥಿರ ಆದಾಯ ಮೂಲವನ್ನು ಹೊಂದಿರುವ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿರಬೇಕು.
 3. ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಥಾಣೆ, ಮುಂಬೈ, ಪುಣೆ, ಚೆನ್ನೈ, ಅಹಮದಾಬಾದ್, ವೈಜಾಗ್, ಬೆಂಗಳೂರು, ಸೂರತ್, ಉದಯಪುರ, ಇಂದೋರ್, ಔರಂಗಾಬಾದ್ ಮತ್ತು ಕೊಚ್ಚಿನ್ ನಗರಗಳಲ್ಲಿ ವಾಸಿಸುತ್ತಿರುವ ಭಾರತೀಯ ನಿವಾಸಿಯಾಗಿರಬೇಕು.

ಅರ್ಹತೆಗಳನ್ನು ಪೂರೈಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಭಾರತದ ಅತ್ಯಂತ ವೇಗದ ಆಸ್ತಿಯಾಧಾರಿತ ಲೋನ್ ಪಡೆದುಕೊಳ್ಳಿ ಮತ್ತು ಅನುಮೋದನೆಯಾದ 4 ದಿನಗಳಲ್ಲಿ ವಿತರಣೆಯನ್ನು ಆನಂದಿಸಿ.

ಒಂದು ಆಸ್ತಿ ಜಂಟಿ ಒಡೆತನದಲ್ಲಿದ್ದರೆ; ಆಸ್ತಿ ಸಹ-ಅರ್ಜಿದಾರರನ್ನಾಧಾರಿಸಿ ಇನ್ನೂ ಲೋನ್ ತೆಗೆದುಕೊಳ್ಳಬಹುದೇ?
ಹೌದು, ಒಂದು ಆಸ್ತಿಯಲ್ಲಿ ಅನೇಕ ಮಾಲೀಕರು ಇದ್ದರೆ, ಒಬ್ಬರು ಇನ್ನೂ ಆಸ್ತಿ ಲೋನ್ ಅನ್ನು ಪಡೆಯಬಹುದು. ಆದಾಗ್ಯೂ, ಈ ಲೋನ್ ಪಡೆಯಲು, ಎಲ್ಲಾ ಸಹ-ಮಾಲೀಕರು ಆಸ್ತಿ ಸಹ-ಅರ್ಜಿದಾರರನ್ನಾಧಾರಿಸಿದ ಲೋನ್ ಆಗಿ ಅರ್ಜಿ ಸಲ್ಲಿಸುವುದು ಅವಶ್ಯಕ.

ಆಸ್ತಿಯನ್ನಾಧಾರಿಸಿದ ಲೋನ್ ಗೆ ಸಹ-ಅರ್ಜಿದಾರರಾಗಬಹುದಾದ ವ್ಯಕ್ತಿಗಳು –

 • ಲೋನ್ ಪಡೆಯುವವನ ಹೆಂಡತಿ
 • ಮಗ ಮತ್ತು ತಂದೆ/ ತಾಯಿ
 • ಸಹೋದರರು
 • ಹೆತ್ತವರೊಂದಿಗೆ ಅವಿವಾಹಿತ ಮಗಳು

ಇತರ ಸಂದರ್ಭಗಳಲ್ಲಿ ಸಹ-ಅಪ್ಲಿಕೇಶನ್ ಸಹ ಕಡ್ಡಾಯವಾಗಿದೆ.

 1. ಒಂದು ಪಾಲುದಾರಿಕೆ ಸಂಸ್ಥೆಗೆ, ಅದರ ಪ್ರಮುಖ ಪಾಲುದಾರರು.
 2. ಒಂದು ಕಂಪನಿಗೆ, 76% ಗಳಿಗಿಂತ ಹೆಚ್ಚು ಷೇರುಗಳನ್ನು ಹೊಂದಿರುವ ವ್ಯಕ್ತಿಗಳು.
 3. ಒಂದು ಕಂಪನಿಯು ಅಡಮಾನ ಹೊಂದಿದ್ದರೆ, ಅದರ ಎಲ್ಲಾ ನಿರ್ದೇಶಕರು ಮತ್ತು ಪಾಲುದಾರರು.
 4. ಕರ್ತಾ, ಒಂದು ವೇಳೆ ಜಂಟಿ ಕುಟುಂಬದ ಆದಾಯವನ್ನು ಪರಿಗಣಿಸಿದರೆ.

ಸಹ-ಅರ್ಜಿದಾರರೊಂದಿಗೆ ಆಸ್ತಿ ಮೇಲಿನ ಲೋನ್ ಮೌಲ್ಯವನ್ನು ಗರಿಷ್ಠಗೊಳಿಸಿ. ಅದಕ್ಕಾಗಿ ಬಜಾಜ್ ಫಿನ್‌ಸರ್ವ್‌ ಗೆ ಅಪ್ಲೈ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ