ಹೋಮ್ ಲೋನ್ ಎನ್‌ಓಸಿ ಮತ್ತು ಅದನ್ನು ಡೌನ್ಲೋಡ್ ಮಾಡುವ ಪ್ರಕ್ರಿಯೆ

2 ನಿಮಿಷದ ಓದು

ಹೋಮ್ ಲೋನ್ ಪಡೆಯಲು ಅಪ್ಲಿಕೇಶನ್ ಪ್ರಕ್ರಿಯೆಯು ಹೇಗೆ ಅಗತ್ಯವೋ, ಹಾಗೆಯೇ ಅದನ್ನು ಮುಚ್ಚುವಾಗ ಕೆಲವು ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದು ಕೂಡಾ ಮುಖ್ಯವಾಗಿದೆ. ಒಮ್ಮೆ ನೀವು ಲೋನ್ ಮರುಪಾವತಿಯನ್ನು ಪೂರ್ಣಗೊಳಿಸಿದ ನಂತರ, ನೀವು ನಿಮ್ಮ ಸಾಲದಾತರಿಂದ ಹೋಮ್ ಲೋನ್ ಎನ್‌ಒಸಿಯನ್ನು ಸಂಗ್ರಹಿಸಬೇಕು.

ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಅಥವಾ ನೋ ಡ್ಯೂಸ್ ಸರ್ಟಿಫಿಕೇಟ್ ಎನ್ನುವುದು ಕಾನೂನು ಡಾಕ್ಯುಮೆಂಟ್ ಆಗಿದ್ದು, ಇದು ಸಾಲಗಾರರು ತಮ್ಮ ಹೆಸರಿನಲ್ಲಿ ಯಾವುದೇ ಬಾಕಿ ಉಳಿದಿಲ್ಲ ಮತ್ತು ಲೋನ್ ಅನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಘೋಷಿಸುತ್ತದೆ. ಸಾಲದಾತರು ಇನ್ನು ಮುಂದೆ ಅಡಮಾನದ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಇದು ಹೇಳುತ್ತದೆ.

ಲೋನ್ ಎನ್‌ಒಸಿ ಪತ್ರ ಪಡೆಯುವ ಪ್ರಯೋಜನಗಳು

ಗ್ರಾಹಕರು ಎನ್‌ಒಸಿ ಪತ್ರದಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು

  • ಇದು ಸಂಪೂರ್ಣ ಹೋಮ್ ಲೋನ್ ಮರುಪಾವತಿಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ
  • ಇದು ನಿಮ್ಮ ಸಾಲದಾತರು ಲೋನ್ ಮುಚ್ಚುವಿಕೆಯನ್ನು ದಾಖಲಿಸುವುದನ್ನು ಖಚಿತಪಡಿಸುತ್ತದೆ
  • ಹೋಮ್ ಲೋನ್ ಎನ್‌ಒಸಿ ನೀಡುವುದರಿಂದ ನಿಮ್ಮ ಕ್ರೆಡಿಟ್ ಪ್ರೊಫೈಲ್ ಅಪ್ಡೇಟ್ ಮಾಡುವುದನ್ನು ಸೂಚಿಸುತ್ತದೆ ಮತ್ತು ಹೀಗಾಗಿ, ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಳವಾಗುತ್ತದೆ
  • ಭವಿಷ್ಯದಲ್ಲಿ ಸುಲಭವಾಗಿ ಲೋನನ್ನು ಪಡೆಯಲು ಪ್ರಮಾಣಪತ್ರವು ನಿಮಗೆ ಸಹಾಯ ಮಾಡಬಹುದು

ಬಜಾಜ್ ಫಿನ್‌ಸರ್ವ್‌ ಎನ್‌ಒಸಿ ಡೌನ್ಲೋಡ್ ಮಾಡುವ ಹಂತವಾರು ಪ್ರಕ್ರಿಯೆ

ಬಜಾಜ್ ಫಿನ್‌ಸರ್ವ್‌ ಎನ್‌ಒಸಿ ಡೌನ್ಲೋಡ್ ಪ್ರಕ್ರಿಯೆಯನ್ನು ಅನುಸರಿಸುವುದು ಸುಲಭ

ಹಂತ 1: ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಗೆ ಭೇಟಿ ನೀಡಿ, ಮತ್ತು ನಿಮ್ಮ ಲೋನ್ ವಿವರಗಳನ್ನು ಪರಿಶೀಲಿಸಿ
ಹಂತ 2: ಇ-ಸ್ಟೇಟ್ಮೆಂಟ್ ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ಬಜಾಜ್ ಫಿನ್‌ಸರ್ವ್‌ ಎನ್‌ಒಸಿ ಪತ್ರವನ್ನು ನೇರವಾಗಿ ಡೌನ್ಲೋಡ್ ಮಾಡಿ

ನೋಂದಾಯಿಸದ ಆಸ್ತಿಯ ಸಂದರ್ಭದಲ್ಲಿ, ನಿಮ್ಮ ಸಾಲದಾತರ ಪ್ರತಿನಿಧಿಯೊಂದಿಗೆ ನೀವು ಆಸ್ತಿ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ಹೋಮ್ ಲೋನ್ ಕ್ಲೋಸರ್‌ಗಾಗಿ ನಿಮ್ಮ ಎನ್‌ಒಸಿ ಪಡೆಯಿರಿ ಮತ್ತು ಹೊಣೆಗಾರಿಕೆಯನ್ನು ಕಳೆದುಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ