ನಿಮ್ಮ ಪ್ರಾವಿಡೆಂಟ್ ಫಂಡ್ ಉಳಿತಾಯವನ್ನು ಹೂಡಿಕೆ ಮಾಡಲು ಮಾರ್ಗದರ್ಶಿ

2 ನಿಮಿಷದ ಓದು

ಪ್ರಾವಿಡೆಂಟ್ ಫಂಡ್ (ಪಿಎಫ್) ಒಂದು ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿದ್ದು, ಇಲ್ಲಿ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡುತ್ತೀರಿ ಮತ್ತು ಕಾಲಕಾಲಕ್ಕೆ ಸಂಗ್ರಹಿಸಿದ ಬಡ್ಡಿಯಿಂದ ಪ್ರಯೋಜನ ಪಡೆಯುತ್ತೀರಿ. ಸಂಬಳ ಪಡೆಯುವ ಉದ್ಯೋಗಿಗಳು ಉದ್ಯೋಗದಿಂದ ನಿವೃತ್ತಿಯಾದ ನಂತರ ಈ ಒಟ್ಟು ಮೊತ್ತವನ್ನು ಪಡೆಯುತ್ತಾರೆ. 5 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಉದ್ಯೋಗದ ನಂತರ ವಿತ್‌ಡ್ರಾ ಮಾಡಿದರೆ ಪ್ರಾವಿಡೆಂಟ್ ಫಂಡ್ ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಹೆಚ್ಚಿನ ಆದಾಯವನ್ನು ಗಳಿಸಲು ಮತ್ತು ನಿಮ್ಮ ನಿವೃತ್ತಿಯ ಉಳಿತಾಯವನ್ನು ಬೆಳೆಸಲು ಈ ಉಳಿತಾಯವನ್ನು ಇತರ ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಬಹುದು.

ಸ್ಟಾಕ್‌ಗಳು ಮತ್ತು ಇಕ್ವಿಟಿಗಳು ಹೆಚ್ಚಿನ ಆದಾಯವನ್ನು ಗಳಿಸಲು ನಿಮಗೆ ಸಹಾಯ ಮಾಡಬಹುದಾದರೂ, ಈ ಹೂಡಿಕೆಗಳೊಂದಿಗೆ ಯಾವಾಗಲೂ ಕೆಲವು ಅಪಾಯಗಳು ಸಂಬಂಧಿಸಿರುತ್ತವೆ. ಖಚಿತ ಆದಾಯವನ್ನು ಪಡೆದುಕೊಳ್ಳುವ ಜನರಿಗೆ, ಫಿಕ್ಸೆಡ್ ಡೆಪಾಸಿಟ್‌ಗಳು ಹೆಚ್ಚು ಆದ್ಯತೆಯ ಹೂಡಿಕೆ ಮಾರ್ಗಗಳಲ್ಲಿ ಒಂದಾಗಿದೆ.

ನನ್ನ PF ಮೊತ್ತವನ್ನು ಆನ್ಲೈನಿನಲ್ಲಿ ನಾನು ಹೇಗೆ ವಿತ್‌ಡ್ರಾ ಮಾಡಬಹುದು?

ಆನ್ಲೈನ್ ಪಿಎಫ್ ವಿತ್‌ಡ್ರಾವಲ್ ಕ್ಲೈಮ್‌ಗಾಗಿ, ನೀವು ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಅಕೌಂಟ್‌ನೊಂದಿಗೆ ಲಿಂಕ್ ಆದ ಸಕ್ರಿಯ ಯುಎಎನ್ ಅನ್ನು ಹೊಂದಿರಬೇಕು. ಇದರ ಹೊರತಾಗಿ, ಯುಎಎನ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ನಂಬರ್ ಕಾರ್ಯಾಚರಣೆಯಲ್ಲಿರಬೇಕು.

ಆನ್ಲೈನ್ PF ವಿತ್‌ಡ್ರಾವಲ್ ಪ್ರಕ್ರಿಯೆ:

 • ಹಂತ 1 - ನೀಡಲಾದ ಯುಎಎನ್ ಮತ್ತು ಅದರ ಪಾಸ್ವರ್ಡ್ ಬಳಸಿ ನಿಮ್ಮ ಇಪಿಎಫ್‌‌ಒ ಅಕೌಂಟಿಗೆ ಲಾಗಿನ್ ಆಗಿ
 • ಹಂತ 2 - 'ಆನ್ಲೈನ್ ಸೇವೆಗಳು' ಟ್ಯಾಬ್‌ಗೆ ಹೋಗಿ ಮತ್ತು 'ಕ್ಲೈಮ್ (ಫಾರ್ಮ್-31, 19 ಮತ್ತು 10C) ಆಯ್ಕೆಯನ್ನು ಆರಿಸಿ
 • ಹಂತ 3 - ನಿಮ್ಮ ಪಿಇಫ್/ ಇಪಿಇಫ್ ಅಕೌಂಟ್ ವಿವರಗಳು ಕಂಪ್ಯೂಟರ್ ಮಾನಿಟರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಬ್ಯಾಂಕ್ ಅಕೌಂಟ್ ನಂಬರಿನ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ ಮತ್ತು 'ವೆರಿಫೈ' ಬಟನ್ ಮೇಲೆ ಕ್ಲಿಕ್ ಮಾಡಿ
 • ಹಂತ 4 - 'ನಿಯಮ ಮತ್ತು ಷರತ್ತುಗಳನ್ನು' ಖಚಿತಪಡಿಸಿ
 • ಹಂತ 5 - 'ಆನ್ಲೈನ್ ಕ್ಲೈಮ್ ಮುಂದುವರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ
 • ಹಂತ 6 - 'ಪಿಎಫ್ ಮುಂಗಡ (ಫಾರ್ಮ್ 31)' ಆಯ್ಕೆಮಾಡಿ ಮತ್ತು ಪಿಎಫ್ ವಿತ್‌ಡ್ರಾವಲ್‌ಗೆ ಕಾರಣವನ್ನು ನಿರ್ದಿಷ್ಟಪಡಿಸಿ
 • ಹಂತ 7 - ಅಗತ್ಯವಿರುವ ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಸಂಪೂರ್ಣ ವಿಳಾಸವನ್ನು ಭರ್ತಿ ಮಾಡಿ
 • ಹಂತ 8 - ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಭರ್ತಿ ಮಾಡಿ ಮತ್ತು ಬ್ಯಾಂಕ್ ಅಕೌಂಟ್ ಚೆಕ್ ಅಪ್ಲೋಡ್ ಮಾಡಿ
 • ಹಂತ 9 - 'ಒಟಿಪಿ ಕಳುಹಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ
 • ಹಂತ 10 - ಒಟಿಪಿ ಪಡೆದ ನಂತರ, ಒಟಿಪಿ ನಮೂದಿಸಿ
 • ಹಂತ 11 - ನೀವು ಒಟಿಪಿ ಸಲ್ಲಿಸಿದ ನಂತರ ನಿಮ್ಮ ಆನ್ಲೈನ್ ಪಿಎಫ್ ಕ್ಲೈಮ್ ನೋಂದಣಿಯಾಗುತ್ತದೆ.

ನಿಮ್ಮ ಆನ್ಲೈನ್ ಪಿಎಫ್ ವಿತ್‌ಡ್ರಾವಲ್ ಕ್ಲೈಮ್‌ಗೆ ನಿಮ್ಮ ಉದ್ಯೋಗದಾತರಿಂದ ದೃಢೀಕರಣದ ಅಗತ್ಯವಿದೆ ಎಂಬುದನ್ನು ಇಪಿಎಫ್ಒ ಸದಸ್ಯರು ಗಮನಿಸಬೇಕು. ಉದ್ಯೋಗದಾತರಿಂದ ದೃಢೀಕರಣದ ನಂತರ ವಿತ್‌ಡ್ರಾವಲ್ ಮೊತ್ತವನ್ನು ನೀಡಲಾದ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಏಕೆ ಹೂಡಿಕೆ ಮಾಡಬೇಕು?

ನೀವು ನಿಮ್ಮ ಪ್ರಾವಿಡೆಂಟ್ ಫಂಡ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡಿದಾಗ, ನಿಮ್ಮ ನಿವೃತ್ತಿ ಫಂಡ್ ಆಗಿ ಬಳಸಲು ನೀವು ಹೆಚ್ಚುವರಿ ಮೊತ್ತವನ್ನು ಪಡೆಯುತ್ತೀರಿ. ನಿಮ್ಮ ಪ್ರಾವಿಡೆಂಟ್ ಫಂಡ್ ಮೊತ್ತವನ್ನು ಮಾರುಕಟ್ಟೆಯ ಏರಿಳಿತಗಳಿಂದ ರಕ್ಷಿಸಲು ಮತ್ತು ಹೆಚ್ಚಿನ ಆದಾಯವನ್ನು ಗಳಿಸಲು ನೀವು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳು 6.80% ವರೆಗಿನ ಅತ್ಯಧಿಕ ಬಡ್ಡಿ ದರಗಳಲ್ಲಿ ಒಂದಾಗಿದ್ದು, ಹಿರಿಯ ನಾಗರಿಕರಿಗೆ 7.05% ವರೆಗೆ ಹೋಗುತ್ತವೆ. ನಿಮ್ಮ ಬಡ್ಡಿ ಪಾವತಿಗಳ ಅವಧಿ ಮತ್ತು ಫ್ರೀಕ್ವೆನ್ಸಿಯನ್ನು ನೀವು ಆಯ್ಕೆ ಮಾಡಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳು ಕ್ರಿಸಿಲ್ ಮತ್ತು ಐಸಿಆರ್‌‌ಎ ನಿಂದ ಅತ್ಯಧಿಕ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿವೆ, ಆದ್ದರಿಂದ ನಿಮ್ಮ ಹೂಡಿಕೆಗಳು ಯಾವಾಗಲೂ ಸುರಕ್ಷಿತವಾಗಿರುತ್ತವೆ. ಎಫ್‌‌ಡಿ ಅಕೌಂಟ್ ತೆರೆಯಲು ಆನ್ಲೈನ್ ಪ್ರಕ್ರಿಯೆಯನ್ನು ಪರಿಶೀಲಿಸಿ ಮತ್ತು ಹೂಡಿಕೆ ಮಾಡಲು ಆರಂಭಿಸಿ.

ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

ನೀಡಲಾದ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ತ್ವರಿತವಾಗಿ ನೋಡಿ.

ಬಡ್ಡಿ ದರ

5.65% ರಿಂದ 7.05% ವರೆಗೆ

ಕನಿಷ್ಠ ಕಾಲಾವಧಿ

1 ವರ್ಷ

ಗರಿಷ್ಠ ಕಾಲಾವಧಿ

5 ವರ್ಷಗಳು

ಡೆಪಾಸಿಟ್ ಮೊತ್ತ

ಕನಿಷ್ಠ ರೂ. 25,000

ಅಪ್ಲಿಕೇಶನ್ ಪ್ರಕ್ರಿಯೆ

ಸುಲಭ ಮತ್ತು ಕಾಗದರಹಿತ ಆನ್ಲೈನ್ ಪ್ರಕ್ರಿಯೆ

ಆನ್ಲೈನ್ ಪಾವತಿ ಆಯ್ಕೆಗಳು

ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ

* ರೂ. 1 ಲಕ್ಷದವರೆಗಿನ ಪಾವತಿಗಳಿಗೆ UPI ಪಾವತಿ ಆಯ್ಕೆ ಲಭ್ಯವಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ