ಎಸ್ಎಂಇ ಲೋನ್ ಪಡೆಯುವುದು ಹೇಗೆ?

2 ನಿಮಿಷದ ಓದು

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ನಿಂದ ಸಣ್ಣ ಮತ್ತು ಮಧ್ಯಮ ಉದ್ಯಮ (ಎಸ್ಎಂಇ) ಲೋನನ್ನು ಪಡೆಯಬಹುದು:

ಹಂತ 1: ಮೂಲಭೂತ ಎಸ್ಎಂಇ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ

ನೀವು 24 ವರ್ಷದಿಂದ 70 ವರ್ಷಗಳ ನಡುವಿನ ವಯಸ್ಸಿನ ಭಾರತದ ನಿವಾಸಿ ನಾಗರಿಕರಾಗಿರಬೇಕು*. (*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು). ನೀವು ಕನಿಷ್ಠ 3 ವರ್ಷಗಳ ಬಿಸಿನೆಸ್ ವಿಂಟೇಜ್ ಹೊಂದಿರುವ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿರಬೇಕು.

ನಿಮ್ಮ CIBIL ಸ್ಕೋರ್ 685 ಅಥವಾ ಅದಕ್ಕಿಂತ ಹೆಚ್ಚು ಇರಬೇಕು ಆನ್ಲೈನ್ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ನಿಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ವಿವರಗಳೊಂದಿಗೆ ಪೂರ್ಣಗೊಳಿಸಬೇಕು ಮತ್ತು ನೀವು ಈ ಮಾನದಂಡಗಳನ್ನು ಪೂರೈಸಿದರೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಹಂತ 2: ನಿಮ್ಮ ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು, ಬಿಸಿನೆಸ್ ಮಾಲೀಕತ್ವದ ಪುರಾವೆ, ಕಳೆದ ವರ್ಷಕ್ಕೆ ಫೈಲ್ ಮಾಡಲಾದ ಆದಾಯ ತೆರಿಗೆ ರಿಟರ್ನ್‌ಗಳು, ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು ಮತ್ತು ಕಳೆದ ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಹಂಚಿಕೊಳ್ಳಬೇಕು.

ಹಂತ 3: ನಮ್ಮ ಪ್ರತಿನಿಧಿಯನ್ನು ಭೇಟಿ ಮಾಡಿ

ನಿಮ್ಮ ಅಪ್ಲಿಕೇಶನ್ ಅನುಮೋದನೆಗೊಂಡ ನಂತರ ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುತ್ತಾರೆ ಮತ್ತು ನಿಮ್ಮ ಪ್ರೊಫೈಲನ್ನು ಪರಿಶೀಲಿಸುತ್ತಾರೆ.

ಹಂತ 4: ನಿಮ್ಮ ಹಣವನ್ನು ಪಡೆಯಿರಿ

ನಿಮ್ಮ ಅಪ್ಲಿಕೇಶನ್ ಪರಿಶೀಲನೆಯ ನಂತರ, ಲೋನ್ ಮೊತ್ತವನ್ನು ಆದಷ್ಟು ಬೇಗ ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ.

ಹೆಚ್ಚುವರಿ ಓದು: Meaning of SME

ಇನ್ನಷ್ಟು ಓದಿರಿ ಕಡಿಮೆ ಓದಿ