ಸಾಮಾನ್ಯ ಪರ್ಸನಲ್ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿ ಎಂದರೇನು?

2 ನಿಮಿಷದ ಓದು

ಮಂಜೂರಾದ ಪರ್ಸನಲ್ ಲೋನ್ ಮೊತ್ತವು ಯಾವುದೇ ಅಂತಿಮ ಬಳಕೆಯ ನಿರ್ಬಂಧವನ್ನು ಹೊಂದಿಲ್ಲವಾದ್ದರಿಂದ, ಹಣಕಾಸಿನ ಸಂಕಷ್ಟದಲ್ಲಿ ಅಂತಹ ಮುಂಗಡಗಳು ಉತ್ತಮ ಆಯ್ಕೆಯಾಗಿವೆ. ಮದುವೆ, ಉನ್ನತ ಶಿಕ್ಷಣ ಮತ್ತು ಆಸ್ತಿ ನವೀಕರಣ ಸೇರಿದಂತೆ ವಿವಿಧ ವೆಚ್ಚಗಳನ್ನು ಪೂರೈಸಲು ನೀವು ಈ ಲೋನ್ ಅನ್ನು ಬಳಸಬಹುದು.

ಈ ಅನ್‌ಸೆಕ್ಯೂರ್ಡ್‌ ಲೋನ್‌ಗೆ ಯಾವುದೇ ಅಡಮಾನದ ಅಗತ್ಯವಿಲ್ಲ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯು ತಡೆರಹಿತವಾಗಿದೆ. ಹಾಗಾಗಿ, ಈ ಲೋನ್ ಪಡೆಯುವುದು ಬಹಳ ಅನುಕೂಲಕರ. ಈ ಕ್ರೆಡಿಟ್ ಪಡೆಯಲು ಮತ್ತು ಹಲವಾರು ಲಾಭದಾಯಕ ಫೀಚರ್‌ಗಳನ್ನು ಆನಂದಿಸಲು, ನೀವು ಸರಳವಾದ ಲೋನ್ ಅರ್ಹತೆ ಮಾನದಂಡ ಮತ್ತು ಡಾಕ್ಯುಮೆಂಟೇಶನ್ ಅನ್ನು ಪೂರೈಸಬೇಕು.

ಪರ್ಸನಲ್ ಲೋನ್ ಮೊತ್ತ

ನೀವು ಕೆಲವೇ ನಿಮಿಷಗಳಲ್ಲಿ ಅನುಮೋದನೆ ಸಿಗುವ ರೂ. 40 ಲಕ್ಷದವರೆಗಿನ ಆನ್ಲೈನ್ ಪರ್ಸನಲ್ ಲೋನ್ ಪಡೆಯಬಹುದು. ಅಂತಹ ಮುಂಗಡಗಳು ಹಲವಾರು ಲಾಭದಾಯಕ ಫೀಚರ್‌ಗಳನ್ನು ಹೊಂದಿರುತ್ತವೆ:

  • ತ್ವರಿತ ವಿತರಣೆ
  • ಯಾವುದೇ ಗುಪ್ತ ಶುಲ್ಕಗಳಿಲ್ಲ
  • ಸುಲಭ ಅಪ್ಲಿಕೇಶನ್ ಪ್ರಕ್ರಿಯೆ
  • ಮುಂಚಿತ ಅನುಮೋದಿತ ಆಫರ್‌ಗಳು

ಬಜಾಜ್ ಫಿನ್‌ಸರ್ವ್ ಅನನ್ಯ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಅವರ ಪರ್ಸನಲ್ ಲೋನಿನೊಂದಿಗೆ ಒದಗಿಸುತ್ತದೆ, ಇದರ ಅಡಿಯಲ್ಲಿ ನೀವು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುತ್ತೀರಿ ಮತ್ತು ಒಟ್ಟು ಅಸಲಿನ ಮೇಲೆ ಅಲ್ಲ. ನೀವು ಬಳಸಿದ ಕ್ರೆಡಿಟ್ ಮೊತ್ತದ ಮೇಲೆ ಬಡ್ಡಿ-ಮಾತ್ರದ ಇಎಂಐಗಳನ್ನು ಪಾವತಿಸಬಹುದು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅಸಲನ್ನು ಮರುಪಾವತಿ ಮಾಡಬಹುದು.

ಇನ್ನಷ್ಟು ಓದಿರಿ: ಪರ್ಸನಲ್ ಲೋನ್ ಕನಿಷ್ಠ ಮತ್ತು ಗರಿಷ್ಠ ಕಾಲಾವಧಿ

ಲೋನ್‌ನ ಅವಧಿ

ಬಜಾಜ್ ಫಿನ್‌ಸರ್ವ್ ನಿಮಗೆ 96 ತಿಂಗಳವರೆಗಿನ ಫ್ಲೆಕ್ಸಿಬಲ್ ಲೋನ್ ಮರುಪಾವತಿ ಅವಧಿಯನ್ನು ನೀಡುತ್ತದೆ. ಇದು ನಿಮ್ಮ ಸದ್ಯದ ಹಣಕಾಸು ಸ್ಥಿರತೆಗೆ ಸೂಕ್ತವಾದ ಅಮೊರ್ಟೈಸೇಶನ್ ಅವಧಿಯನ್ನು ಆಯ್ಕೆ ಮಾಡಲು ನೆರವಾಗುತ್ತದೆ. ಹೀಗಾಗಿ, ನೀವು ಇದನ್ನು ಆಯ್ಕೆ ಮಾಡಬಹುದು:

  • ಒಂದು ವೇಳೆ ನೀವು ಆರ್ಥಿಕವಾಗಿ ಸ್ಥಿರವಾಗಿದ್ದರೆ ಹೆಚ್ಚಿನ EMI ಇರುವ ಅಲ್ಪಾವಧಿ
  • ನೀವು ಹಣಕಾಸಿನ ಕೊರತೆಯನ್ನು ಎದುರಿಸುತ್ತಿದ್ದರೆ ದೀರ್ಘ ಅವಧಿಯು ಕಡಿಮೆ EMI ಆಗುತ್ತದೆ

ಆದಾಗ್ಯೂ, ಲೋನ್ ಅವಧಿಯನ್ನು ಆಯ್ಕೆ ಮಾಡುವುದಕ್ಕೂ ಮುಂಚೆ, ಕಂತುಗಳನ್ನು ಲೆಕ್ಕ ಹಾಕಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಲು ಮರೆಯದಿರಿ. ಇದರಲ್ಲಿ ನೀವು ಲೋನ್ ಮೊತ್ತ ಹಾಗೂ ಪರ್ಸನಲ್ ಲೋನ್ ಬಡ್ಡಿದರ ದಂತಹ ಕೆಲವು ಅಗತ್ಯ ವಿವರಗಳನ್ನು ನಮೂದಿಸಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಲಾವಧಿಯನ್ನು ಬದಲಾಯಿಸಬೇಕು ಅಷ್ಟೇ. ಇದು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಅವಧಿಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಪರ್ಸನಲ್ ಲೋನ್‌ನಿಂದ ಆರಾಮದಾಯಕ ಮರುಪಾವತಿ ಸೌಲಭ್ಯ ಸೇರಿದಂತೆ ಅನೇಕ ಪ್ರಯೋಜನಗಳು ಸಿಗುವುದರಿಂದ, ನಿಮ್ಮ ಹತ್ತು ಹಲವಾರು ಖರ್ಚುಗಳನ್ನು ನಿಭಾಯಿಸಲು ಈ ಹಣವನ್ನು ಬಳಸಬಹುದು. ಆದಾಗ್ಯೂ, ನೀವು ಯಾವುದೇ ಲೋನ್ ಮೊತ್ತವನ್ನು ಆಯ್ಕೆ ಮಾಡುವ ಮುಂಚೆ ನಿಮ್ಮ ಸದ್ಯದ ಹಣಕಾಸು ಜವಾಬ್ದಾರಿಗಳನ್ನು ಪರಿಶೀಲಿಸಲು ಮರೆಯದಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ