ಟರ್ಮ್ ಲೋನ್ ಎಂದರೆ ಏನು?

ಟರ್ಮ್ ಲೋನ್‌ಗಳು ಅಲ್ಪಾವಧಿಯ ಲೋನ್‌ಗಳಾಗಿವೆ ಇವುಗಳನ್ನು ಬಂಡವಾಳ ವೆಚ್ಚ ಮತ್ತು ವಿಸ್ತರಣೆಗಾಗಿ ಬಿಸಿನೆಸ್‌ಗಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ 84 ತಿಂಗಳವರೆಗಿನ ಅವಧಿಯನ್ನು ಹೊಂದಿರುವುದರಿಂದ, ಬಿಸಿನೆಸ್‌ಗಳ ವಿವಿಧ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾಗಿ ಈ ಲೋನ್‌ಗಳನ್ನು ರೂಪಿಸಲಾಗಿದೆ. ಕನಿಷ್ಠ ಡಾಕ್ಯುಮೆಂಟೇಶನ್, ಫಂಡ್‌ಗಳ ತ್ವರಿತ ವಿತರಣೆ ಮತ್ತು ಮರುಪಾವತಿಯಲ್ಲಿನ ಫ್ಲೆಕ್ಸಿಬಿಲಿಟಿ ಈ ಲೋನ್‌ಗಳ ಕೆಲವು ಪ್ರಮುಖ ಪ್ರಯೋಜನಗಳಾಗಿವೆ.

 

ಎ) ಟರ್ಮ್ ಲೋನಿನ ಬಗೆಗಳು

ಸಾಲಗಾರರ ಹಣಕಾಸಿನ ಅವಶ್ಯಕತೆಗಳಿಗೆ ಅನುಗುಣವಾಗಿ, ಟರ್ಮ್ ಲೋನ್‌ಗಳು ಹಲವು ಬಗೆಗಳಲ್ಲಿ ಇವೆ, ಅವರ ಹಣಕಾಸಿನ ಅವಶ್ಯಕತೆಗಳಿಗೆ ಈ ಕೆಳಗಿನ ಅಂಶಗಳು ಕಾರಣವಾಗಿರಬೇಕು

 • ಅಗತ್ಯವಿರುವ ಫಂಡಿಂಗ್ ಮೊತ್ತ

 • ಸಾಲಗಾರರ ಮರುಪಾವತಿ ಸಾಮರ್ಥ್ಯ

 • ನಿಯಮಿತ ನಗದು ಹರಿವು ಮತ್ತು ಫಂಡ್‌ಗಳ ಇನ್-ಹ್ಯಾಂಡ್ ಲಭ್ಯತೆ

ಇವುಗಳ ಆಧಾರದ ಮೇಲೆ ಟರ್ಮ್ ಲೋನ್ ಬಡ್ಡಿ ದರಗಳು, ಲೋನಿನ ಇತರ ನಿಯಮಗಳೊಂದಿಗೆ ಬದಲಾಗುತ್ತವೆ. ಟರ್ಮ್ ಲೋನ್ ಸೂಚನೆಯ ಪ್ರಕಾರ, ಈ ಮುಂಗಡ ಪಾವತಿಗಳು ಈ ಕೆಳಗಿನ ರೂಪಾಂತರಗಳಲ್ಲಿ ಲಭ್ಯವಿವೆ.

- ಶಾರ್ಟ್ ಟರ್ಮ್ ಲೋನ್‌ಗಳು
ಶಾರ್ಟ್‌ ಟರ್ಮ್ ಲೋನ್, ಒಂದು ಬಗೆಯ ಮುಂಗಡ ಪಾವತಿಯ ಲೋನ್ ಆಗಿದ್ದು, ಇದರಲ್ಲಿ 12 ರಿಂದ 18 ತಿಂಗಳಿನವರೆಗೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಕೆಲವು ಸಾಲದಾತರು 5 ವರ್ಷಗಳ ಅಥವಾ 84 ತಿಂಗಳುಗಳ ಅಲ್ಪಾವಧಿಯ ಲೋನ್‌ಗಳನ್ನು ಸಹ ಶಾರ್ಟ್ ಟರ್ಮ್‌ ಲೋನ್‌ಗಳೆಂದು ಪರಿಗಣಿಸುತ್ತಾರೆ. ಸಾಲಗಾರರು ಸಾಮಾನ್ಯವಾಗಿ ತಮ್ಮ ತುರ್ತು, ಮಧ್ಯಮ ಪ್ರಮಾಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಲೋನ್‌ಗಳಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ, ಏಕೆಂದರೆ ಅವರು ಅಲ್ಪಾವಧಿಯಲ್ಲಿ ಈ ಲೋನನ್ನು ಸುಲಭವಾಗಿ ಮರುಪಾವತಿಸಬಹುದು.

- ಇಂಟರ್‌ಮಿಡಿಯೇಟ್-ಟರ್ಮ್ ಲೋನ್‌ಗಳು
ಹಣಕಾಸು ಸಂಸ್ಥೆಗಳು 84 ತಿಂಗಳವರೆಗಿನ ಅವಧಿಯೊಂದಿಗೆ ಬರುವ ಲೋನ್ ಅನ್ನು ಸಾಮಾನ್ಯವಾಗಿ ಮಧ್ಯಂತರ ಅಥವಾ ಮಧ್ಯಮ ಅವಧಿಯ ಲೋನ್‌ಗಳಾಗಿ ವಿಭಾಗಿಸುತ್ತವೆ. ಗಣನೀಯ ಟಿಕೆಟ್ ಸೈಜಿನಲ್ಲಿ ಲಭ್ಯವಿದೆ, ಈ ಮುಂಗಡಗಳನ್ನು ದೊಡ್ಡ-ಬಜೆಟ್ ಹಣಕಾಸಿನ ಅಗತ್ಯಗಳಾದ ಯಂತ್ರೋಪಕರಣಗಳನ್ನು ಖರೀದಿಸುವುದು, ವರ್ಕಿಂಗ್ ಕ್ಯಾಪಿಟಲ್ ಅನ್ನು ಹೆಚ್ಚಿಸಲು ಮಾಡಲಾಗಿದೆ. ಈ ಲೋನ್‌ಗಳ ಕೈಗೆಟಕುವ EMI ಗಳು ನಿಯಮಿತ ನಗದು ಹರಿವಿನಿಂದ ಲೋನನ್ನು ಮರುಪಾವತಿಸಲು ಅನುವು ಮಾಡಿಕೊಡುತ್ತವೆ.

- ದೀರ್ಘಾವಧಿಯ ಲೋನ್‌ಗಳು
ಆಕರ್ಷಕ ಟರ್ಮ್ ಲೋನ್ ಬಡ್ಡಿ ದರಗಳಲ್ಲಿ ಲಭ್ಯವಿದೆ, ದೀರ್ಘಾವಧಿಯ ಲೋನ್‌ಗಳು 84 ತಿಂಗಳವರೆಗೆ ತಲುಪಬಹುದಾದ ವಿಸ್ತರಿತ ಅವಧಿಯೊಂದಿಗೆ ಬರುತ್ತವೆ. ಬಿಸಿನೆಸ್‌ನ ಅವಶ್ಯಕತೆಯನ್ನು ಪೂರೈಸುವಾಗ ದೊಡ್ಡ ಮೊತ್ತದ ಹಣಕಾಸಿನ ಮೇಲೆ ಸುಲಭ EMI ಆಯ್ಕೆಯು ಈ ಮುಂಗಡಗಳನ್ನು ದೀರ್ಘಾವಧಿಯಲ್ಲಿ ಮರುಪಾವತಿಸುವುದರೊಂದಿಗೆ ಅನುಕೂಲಕರವಾಗಿಸುತ್ತದೆ. ಸ್ವಾಭಾವಿಕವಾಗಿ ಇಂತಹ ಲೋನ್‍ಗಳು ಸುರಕ್ಷಿತ ಲೋನ್‍ಗಳಾಗಿರುತ್ತವೆ.

 

b) ಟರ್ಮ್ ಲೋನ್ ಹೇಗೆ ಕೆಲಸ ಮಾಡುತ್ತದೆ?

ಲಭ್ಯವಿರುವ ಅನೇಕ ಫೈನಾನ್ಸಿಂಗ್ ಆಯ್ಕೆಗಳಲ್ಲಿ, ಟರ್ಮ್ ಲೋನ್‍ಗಳು, ಪೂರ್ವ-ನಿರ್ಧಾರಿತ ಲೋನ್ ಮೌಲ್ಯ, ಬಡ್ಡಿ ದರಗಳು, EMI ಗಳು, ಮುಂತಾದ ಸೌಲಭ್ಯಗಳೊಂದಿಗೆ ದೊರಕುವುದರಿಂದ, ಇವನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ಅಲ್ಲದೇ ಇವು ಒಂದೇ ಬಗೆಯ ಲೋನ್ ಅಡಿಯಲ್ಲಿ ಬರುವುದರಿಂದ ಟರ್ಮ್ ಲೋನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.
ಟರ್ಮ್ ಲೋನಿನ ಕಾರ್ಯನಿರ್ವಹಣೆಯ ಬಗ್ಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಕೆಳಗೆ ವಿವರಣೆಯನ್ನು ಕೊಡಲಾಗಿದೆ.

- ಫಿಕ್ಸೆಡ್ ಲೋನ್ ಮೊತ್ತ
ಟರ್ಮ್ ಲೋನ್‌ಗಳು ಫಿಕ್ಸೆಡ್ ಮೊತ್ತದೊಂದಿಗೆ ಬರುತ್ತವೆ. ಆಯ್ಕೆ ಮಾಡಿದ ಟರ್ಮ್ ಲೋನ್ ವಿಧಕ್ಕೆ ಅನುಗುಣವಾಗಿ, ಲೋನ್ ಮೌಲ್ಯವು ಬದಲಾಗಬಹುದು. ಸಾಲದಾತರ ಅರ್ಹತೆಯ ಮಾನದಂಡವನ್ನು ಪೂರೈಸುವುದು ಸಹ ವಾಸ್ತವಿಕ ಲೋನ್ ಮೊತ್ತವನ್ನು ನಿರ್ಧರಿಸುವಲ್ಲಿ ಅಗತ್ಯವಾಗಿದೆ.

ಫಿಕ್ಸೆಡ್ ಮರುಪಾವತಿಯ ಅವಧಿ
ಲೋನ್ ಪಡೆದುಕೊಳ್ಳುವಾಗ ನಿರ್ಧರಿಸಿದ ಮರುಪಾವತಿ ಅವಧಿಯವರೆಗೆ ನೀವು ಲೋನ್ ಮೊತ್ತವನ್ನು EMI ಗಳಲ್ಲಿ ಮರುಪಾವತಿ ಮಾಡಬೇಕು. ಲೋನ್ ಮರುಪಾವತಿಯ ಅವಧಿಯನ್ನು ಆಧರಿಸಿ, ಅದನ್ನು ಕಿರು, ಮಧ್ಯಮ ಅಥವಾ ದೀರ್ಘಾವಧಿಯ ಲೋನ್ ಎಂದು ವರ್ಗೀಕರಿಸಲಾಗುತ್ತದೆ.

- ಅಡಮಾನದ ಅಗತ್ಯವಿರಬಹುದು ಅಥವಾ ಇಲ್ಲದಿರಬಹುದು
ಅಗತ್ಯವಿರುವ ಲೋನ್ ಮೊತ್ತ, ಸಾಲಗಾರರ ಅರ್ಹತೆ ಮತ್ತು ಆಯ್ಕೆ, ಇವುಗಳ ಆಧಾರದ ಮೇಲೆ, ಟರ್ಮ್ ಲೋನ್‌ಗಳು, ಸುರಕ್ಷತೆ ಮತ್ತು ಅಸುರಕ್ಷಿತ ಕ್ರೆಡಿಟ್‌ಗಳು ಎಂಬ ಎರಡೂ ಬಗೆಯಲ್ಲಿ ಲಭ್ಯವಿರುತ್ತವೆ. ಪರ್ಸನಲ್ ಲೋನ್‌ಗಳು, ಬಿಸಿನೆಸ್ ಲೋನ್‌ಗಳು ಮುಂತಾದವು ಸುರಕ್ಷಿತವಲ್ಲದ ಟರ್ಮ್ ಲೋನ್‌ಗಳಾಗಿದ್ದು, ಅಡಮಾನದ ಮೇಲೆ ಮಂಜೂರಾದ ಹೋಮ್ ಲೋನ್‌ಗಳು ಸುರಕ್ಷಿತ ಟರ್ಮ್ ಲೋನ್‌ಗಳಾಗಿವೆ.

- ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿದರ
ಟರ್ಮ್ ಲೋನ್‌ಗಳನ್ನು ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರಗಳಲ್ಲಿ ಪಡೆಯಬಹುದು. ಯಾವ ಬಗೆಯ ಬಡ್ಡಿದರವನ್ನು ಆರಿಸಬೇಕೆಂದು ಸಾಲಗಾರನು ನಿರ್ಧರಿಸಬೇಕು.

- ಫಿಕ್ಸೆಡ್ ಮರುಪಾವತಿ ಅವಧಿ
ಪ್ರತಿ ಟರ್ಮ್ ಲೋನಿಗೆ ಮರುಪಾವತಿ ಶೆಡ್ಯೂಲ್ ಇರುತ್ತದೆ ಮತ್ತು ಈ ಶೆಡ್ಯೂಲ್ ಆಧಾರದ ಮೇಲೆ ಸಾಲಗಾರರು EMI ಗಳನ್ನು ಪಾವತಿಸಬೇಕಾಗುತ್ತದೆ. EMI ಮೊತ್ತವು, ಅನ್ವಯವಾಗುವ ಟರ್ಮ್ ಲೋನ್ ಬಡ್ಡಿ ದರಗಳ ಪ್ರಕಾರ ಲೆಕ್ಕಾಚಾರ ಮಾಡಿದ ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ, ಆ ಮೂಲಕ ಸಾಲಗಾರರಿಗೆ ಮರುಪಾವತಿ ಸುಲಭವಾಗುತ್ತದೆ. ನೀವು ಲೋನ್ ಪಡೆಯುವ ಮೊದಲು, ಆನ್ಲೈನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು EMI ಮೊತ್ತವನ್ನು ನಿರ್ಧರಿಸಬಹುದು.

c) ಟರ್ಮ್ ಲೋನ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳು

ದೊಡ್ಡ ಮೊತ್ತದ ಫಂಡಿಂಗ್ ಅವಶ್ಯಕತೆಗಳನ್ನು ಪೂರೈಸಲು, ಟರ್ಮ್ ಲೋನ್‌ಗಳು ಹೊರಗಿನಿಂದ ಫೈನಾನ್ಸ್ ಪಡೆಯುವ ಆಯ್ಕೆಗಳಾಗಿವೆ, ಜೊತೆಗೆ ಅವು ಇತರ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ.

- ಟರ್ಮ್ ಲೋನ್‌ಗಳ ಅನುಕೂಲಗಳು

 • ಮರುಪಾವತಿ ಅವಧಿಯ ಅನುಕೂಲ - ಸಾಲಗಾರರು ಲೋನ್ ಮರುಪಾವತಿಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದರ ಜತೆಗೆ, ತಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ EMI ಗಳನ್ನು ಪಾವತಿಸಲು ಸೂಕ್ತ ಟರ್ಮ್ ಅನ್ನು ಆಯ್ಕೆ ಮಾಡಬಹುದು.

 • ಕೈಗೆಟಕುವ EMI ಗಳೊಂದಿಗೆ ಮರುಪಾವತಿಯನ್ನು ಸುಲಭವಾಗಿಸುವುದು - ನಿಮ್ಮ ಆದಾಯದ ಪ್ರಕಾರ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ ಮತ್ತು EMI ಗಳನ್ನು ಕೈಗೆಟುಕುವಂತೆ ಮಾಡಿ.

 • ಕನಿಷ್ಟ ಅರ್ಹತೆಯ ಅವಶ್ಯಕತೆಗಳು ಹಾಗೂ ಯಾವುದೇ ತೊಂದರೆ ಇಲ್ಲದ ಡಾಕ್ಯುಮೆಂಟ್ ಸಲ್ಲಿಕೆ ಪ್ರಕ್ರಿಯೆ – ನೀವು ಈ ಲೋನ್‌ಗಳನ್ನು ಕನಿಷ್ಠ ಅರ್ಹತೆಯ ಮೇಲೆ ಸುಲಭವಾಗಿ ಪಡೆಯಬಹುದು ಮತ್ತು ಇದಕ್ಕಾಗಿ ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕಾಗಿದೆ, ಇದು ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆಯನ್ನು ತೊಂದರೆಯಿಲ್ಲದಂತೆ ಮಾಡಿದೆ.

 • ಲೋನ್ ವೆಚ್ಚವನ್ನು ಮಿತಿಗೊಳಿಸಲಾಗಿದೆ – ನೀವು ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿಯೇ, ಪಾವತಿಸಬೇಕಾದ ಲೋನ್‌ನ ಒಟ್ಟು ವೆಚ್ಚವನ್ನು ತಿಳಿಯಬಹುದು. ಇದು ನಿಮ್ಮ ಫೈನಾನ್ಸ್‌ಗಳ ಲೆಕ್ಕವನ್ನು ಸುಲಭವಾಗಿಸುತ್ತದೆ.

- ಟರ್ಮ್ ಲೋನ್‌ಗಳ ಅನಾನುಕೂಲಗಳು
ಟರ್ಮ್ ಲೋನ್‌ಗಳು ಲೋನಿನ ಅತ್ಯುತ್ತಮ ಮೂಲಗಳಾಗಿದ್ದರೂ, ಸಂದಿಗ್ಧ ಹಣಕಾಸಿನ ಪರಿಸ್ಥಿತಿಯ ಅಪಾಯವನ್ನು ತಪ್ಪಿಸಲು ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಇದನ್ನು ಮಾಡಲು, ಸಾಲಗಾರರು ಇದನ್ನು ಪಾಲಿಸಬೇಕು –

 • EMI ಪಾವತಿಗೆ ಬಾಕಿ ಇರುವ ದಿನಾಂಕಗಳ ಮೇಲೆ ಗಮನವಿಡಿ

 • EMI ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ

 • ಲೋನ್ ಮೊತ್ತವನ್ನು ಚೆನ್ನಾಗಿ ಬಳಸಿಕೊಳ್ಳಿ

 

d) ಟರ್ಮ್ ಲೋನಿನ ಉದಾಹರಣೆ

ಟರ್ಮ್ ಲೋನ್ ಒಂದು ರೀತಿಯ ಮುಂಗಡವಾಗಿದ್ದು, ಇದು ಮರುಪಾವತಿಯ ಪೂರ್ವ ನಿರ್ಧರಿತ ಅವಧಿ, ಪೂರ್ವ ನಿರ್ಧರಿತವಾದ ಲೋನ್ ಮೊತ್ತ, ಮರುಪಾವತಿ ಶೆಡ್ಯೂಲ್ ಮತ್ತು ಪೂರ್ವ-ನಿರ್ಧರಿತ ಬಡ್ಡಿ ದರದೊಂದಿಗೆ ಬರುತ್ತದೆ. ಸಾಲಗಾರರು ಮುಂಗಡವನ್ನು ಮರುಪಾವತಿ ಮಾಡಲು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲಿನದ್ದರಲ್ಲಿ ಒಂದೇ ರೀತಿಯ ಬಡ್ಡಿ ದರವನ್ನು ಪೂರ್ತಿ ಅವಧಿಗೆ ನಿಗದಿಪಡಿಸಲಾಗಿರುತ್ತದೆ, ನಂತರದ್ದು ಮಾರುಕಟ್ಟೆ ಟ್ರೆಂಡ್‍ನ ಬದಲಾವಣೆಗಳ ಆಧಾರದ ಮೇಲೆ ವೇರಿಯಬಲ್ ದರಗಳಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ..
ಒಂದು ಉದ್ಯಮ ಅಥವಾ ಉತ್ತಮ ಹಣಕಾಸಿನ ಹಿನ್ನೆಲೆಯ ವ್ಯಕ್ತಿಯು, ಮಾತುಕತೆಯ ಮೂಲಕ ದೀರ್ಘಾವಧಿಯ ಪ್ರಯೋಜನಗಳಿಗಾಗಿ ಇತರ ಫೀಚರ್‌ಗಳೊಂದಿಗೆ, ಅತ್ಯಂತ ಆಕರ್ಷಕ ಬಡ್ಡಿ ದರದಲ್ಲಿ ಟರ್ಮ್ ಲೋನನ್ನು ಪಡೆಯಬಹುದು.
ಟರ್ಮ್ ಲೋನ್ ಕಾರ್ಯನಿರ್ವಹಿಸುವ ಬಗೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯವಾಗುವ ಉದಾಹರಣೆ ಈ ಕೆಳಗಿದೆ.
ಒಬ್ಬ ಉದ್ಯಮಿಗೆ ಕಂಪನಿಯ ಚೆನ್ನಾಗಿ ನಡೆಯಲು ಸಲಕರಣೆಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ‎ರೂ. 45 ಲಕ್ಷ ಫಂಡ್ ಅವಶ್ಯಕತೆ ಇರುತ್ತದೆ. ಅವರು ಲೋನ್‌ಗೆ ಅಪ್ಲೈ ಮಾಡುತ್ತಾರೆ ಮತ್ತು ಅವಶ್ಯಕ ಡಾಕ್ಯುಮೆಂಟ್‌ಗಳನ್ನು ಒದಗಿಸುತ್ತಾರೆ. ಆದಾಗ್ಯೂ, ಮೌಲ್ಯಮಾಪನ ಮಾಡಿದ ನಂತರ, ಅವರು ‎ರೂ. 45 ಲಕ್ಷದವರೆಗಿನ ಲೋನಿಗೆ ಅರ್ಹರಾಗಿರುತ್ತಾರೆ ಎಂದು ಸಾಲದಾತರು ನಿರ್ಣಯಿಸುತ್ತಾರೆ.
ಹಣಕಾಸು ಸಂಸ್ಥೆಯು ಅನ್ವಯವಾಗುವ ಬಡ್ಡಿ ದರದೊಂದಿಗೆ ಲೋನಿನ ನಿಯಮಗಳನ್ನು ಒದಗಿಸುತ್ತದೆ. ನಿರ್ಧರಿಸಲಾದ ಅವಧಿಯು 84 ತಿಂಗಳುಗಳವರೆಗೆ ಇತ್ತು. ಆದ್ದರಿಂದ ಮರುಪಾವತಿ ಶೆಡ್ಯೂಲ್ –

EMI ಗಳ ಸಂಖ್ಯೆ = 7x12 ತಿಂಗಳು = 84

ಸಾಲಗಾರರು 84 EMI ಗಳಲ್ಲಿ ಪೂರ್ಣ ಮತ್ತು ಅಂತಿಮ ಸೆಟಲ್ಮೆಂಟ್ ಮೂಲಕ ಲೋನನ್ನು ಮರುಪಾವತಿಸಬೇಕಾಗುತ್ತದೆ. EMI ಪ್ರಮಾಣವು ಅನ್ವಯವಾಗುವ ಬಡ್ಡಿದರ ಮತ್ತು ಸಾಲದಾತರು ಅನುಸರಿಸುವ ಭೋಗ್ಯ ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ. ಒಂದು ದೊಡ್ಡ ಮೊತ್ತದಲ್ಲಿ ಹಣ ಲಭ್ಯವಿದ್ದರೆ, ಸಾಲಗಾರರು ಅವಧಿಯ ಮುಂಚೆ ಯಾವುದೇ ಸಮಯದಲ್ಲಿ ಭಾಗಶಃ ಮುಂಪಾವತಿ ಅಥವಾ ಲೋನ್ ಮೊತ್ತವನ್ನು ಫೋರ್‌ಕ್ಲೋಸರ್ ಮಾಡಬಹುದು.

ಸಂಬಂಧಿತ ಪೋಸ್ಟ್: ಟರ್ಮ್ ಲೋನ್ EMI ಕ್ಯಾಲ್ಕುಲೇಟರ್

MSME ಎಂದರೇನು?

MSME ಎಂದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ. 2006 ರ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ (ಎಂಎಸ್ಎಂಇಡಿ) ಕಾಯ್ದೆಯೊಂದಿಗಿನ ಒಪ್ಪಂದದಲ್ಲಿ ಭಾರತ ಸರ್ಕಾರ ಇದನ್ನು ಪರಿಚಯಿಸಿತು. ಈ ಕಾಯ್ದೆಯ ಪ್ರಕಾರ, MSME ಗಳೆಂದರೆ ಸರಕುಗಳು ಮತ್ತು ಸರಕುಗಳ ಉತ್ಪಾದನೆ, ಪ್ರಕ್ರಿಯೆ ಅಥವಾ ಸಂರಕ್ಷಣೆಯಲ್ಲಿ ಒಳಗೊಂಡಿರುವ ಉದ್ಯಮಗಳಾಗಿವೆ. ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿದೆ, ಈ ವಲಯವು ದೇಶದ GDP ಗೆ ಮೂರನೇ ಒಂದು ಭಾಗದ ಕೊಡುಗೆ ನೀಡುತ್ತದೆ ಮತ್ತು ಸುಮಾರು 110 ಮಿಲಿಯನ್ ಜನಸಂಖ್ಯೆಗೆ ಉದ್ಯೋಗವನ್ನು ಸೃಷ್ಟಿಸುತ್ತದೆ.

ಭಾರತದಲ್ಲಿ MSME

ಈ ಹಲವಾರು ಉದ್ಯಮಗಳು ಗ್ರಾಮೀಣ ಭಾರತದಲ್ಲಿ ಕಾರ್ಯನಿರ್ವಹಿಸುವುದರಿಂದ ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018-2019 ರ ಸರ್ಕಾರದ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ 6 ಲಕ್ಷಕ್ಕಿಂತ ಹೆಚ್ಚು MSME ಗಳು ಕಾರ್ಯನಿರ್ವಹಿಸುತ್ತವೆ.

ಆರಂಭದಲ್ಲಿ, ಎರಡು ಅಂಶಗಳ ಆಧಾರದ ಮೇಲೆ MSME ಗಳನ್ನು ವರ್ಗೀಕರಿಸಲಾಯಿತು - ಕಾರ್ಖಾನೆ/ಯಂತ್ರೋಪಕರಣಗಳಲ್ಲಿ ಹೂಡಿಕೆ ಮತ್ತು ಉದ್ಯಮಗಳ ವಾರ್ಷಿಕ ವಹಿವಾಟು. ಆದಾಗ್ಯೂ, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಇತ್ತೀಚೆಗೆ ಈ ಎರಡು ಅಂಶಗಳನ್ನು ಒಂದೇ ಮಾನದಂಡವಾಗಿ ಸಂಯೋಜಿಸುವ ಮೂಲಕ ವರ್ಗೀಕರಣವನ್ನು ಪರಿಷ್ಕರಿಸಿದೆ.

ಮುದ್ರಾ ಲೋನ್ ಎಂದರೆ ಏನು?

ಮುದ್ರಾ ಲೋನ್ ಎಂಬುದು ಕೃಷಿ ಅಲ್ಲದ ಮತ್ತು ಕಾರ್ಪೊರೇಟ್ ಅಲ್ಲದ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯ (PMMY) ಅಡಿಯಲ್ಲಿ ನೀಡಲಾಗುವ ಲೋನ್ ಆಗಿದೆ. ಈ ಉದ್ಯಮಗಳು ಮುದ್ರಾ (ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ & ರಿಫೈನಾನ್ಸ್ ಏಜೆನ್ಸಿ ಲಿಮಿಟೆಡ್) ಯೋಜನೆಯಡಿ ರೂ. 10 ಲಕ್ಷಗಳವರೆಗೆ ಲೋನ್ ಪಡೆಯಬಹುದು.

ಹಕ್ಕುತ್ಯಾಗ:
ನಾವು ಈ ಸಮಯದಲ್ಲಿ ಈ ಪ್ರಾಡಕ್ಟ್ ಅನ್ನು (ಮುದ್ರಾ ಲೋನ್) ನಿಲ್ಲಿಸಿದ್ದೇವೆ. ನಮ್ಮಿಂದ ಒದಗಿಸಲಾದ ಪ್ರಸ್ತುತ ಹಣಕಾಸು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91-8698010101 ನಲ್ಲಿ ನಮ್ಮನ್ನು ಸಂಪರ್ಕಿಸಿ.

ಪ್ರಧಾನ್ ಮಂತ್ರಿ ಮುದ್ರಾ ಲೋನ್ ಯೋಜನೆಯ ಫೀಚರ್‌ಗಳು:

ಶಿಶು ಅಡಿಯಲ್ಲಿ ಲೋನ್ ಮೊತ್ತ ಗರಿಷ್ಠ ರೂ. 50,000
ತರುಣ್ ಅಡಿಯಲ್ಲಿ ಲೋನ್ ಮೊತ್ತ ರೂ. 50,001 ರಿಂದ ರೂ. 500,000
ಕಿಶೋರ್ ಅಡಿಯಲ್ಲಿ ಲೋನ್ ಮೊತ್ತ ರೂ. 500,001 ರಿಂದ ರೂ. 10,00,000
ಪ್ರಕ್ರಿಯಾ ಶುಲ್ಕಗಳು ತರುಣ್ ಲೋನ್‌ಗೆ 0.5%, ಬೇರೆಯವರಿಗೆ ಶೂನ್ಯ
ಅರ್ಹತಾ ಮಾನದಂಡ ಹೊಸ ಮತ್ತು ಅಸ್ತಿತ್ವದಲ್ಲಿರುವ ಯೂನಿಟ್‌ಗಳು
ಮರುಪಾವತಿ ಅವಧಿ 3-5 ವರ್ಷಗಳು

ಪ್ರಧಾನ್ ಮಂತ್ರಿ ಮುದ್ರಾ ಲೋನ್ ಯೋಜನೆಯಡಿ 3 ಪ್ರಾಡಕ್ಟ್‌ಗಳಿವೆ:

1 ಶಿಶು
ಮುದ್ರಾ ಲೋನ್ ಯೋಜನೆಯಡಿಯಲ್ಲಿ ಶಿಶು, ತಮ್ಮ ವ್ಯವಹಾರದ ಆರಂಭಿಕ ಹಂತಗಳಲ್ಲಿರುವ ಅಥವಾ ಒಂದನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳಿಗೆ ರೂ. 50,000 ವರೆಗೆ ಒದಗಿಸುತ್ತದೆ.
ಚೆಕ್‌ಲಿಸ್ಟ್
 • ಖರೀದಿಸಲು ಬಯಸುವ ಮಶಿನರಿಗಳ ಕೊಟೇಶನ್ ಮತ್ತು ಇತರ ವಸ್ತುಗಳು.
 • ಖರೀದಿಸಲು ಬಯಸುವ ಮಶಿನರಿಗಳ ವಿವರಗಳು.
ಸಾಲಗಾರರು ಮಶಿನರಿ ಸರಬರಾಜುದಾರರ ವಿವರಗಳನ್ನು ಕೂಡ ಒದಗಿಸಬೇಕು.

 

24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ
ಅಪ್ಲೈ

ದಯವಿಟ್ಟು PAN ಪ್ರಕಾರ ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ದಯವಿಟ್ಟು ನಿಮ್ಮ ವಿಳಾಸವನ್ನು ನಮೂದಿಸಿ

ನಿಮ್ಮ ಸಂಸ್ಥೆಯು CA ನಿಂದ ಆಡಿಟ್ ಮಾಡಲ್ಪಟ್ಟಿದೆಯೆ?

ಜನರು ಇವನ್ನೂ ಪರಿಗಣಿಸಿದ್ದಾರೆ

Machinery Loan

ಮಶಿನರಿ ಲೋನ್‌

ಸಲಕರಣೆಗಳನ್ನು ಅಪ್ಗ್ರೇಡ್ ಮಾಡಲು ರೂ. 45 ಲಕ್ಷದವರೆಗೆ ಪಡೆಯಿರಿ | ಬಡ್ಡಿಯನ್ನು ಮಾತ್ರ EMI ಆಗಿ ನೀಡಿ

ತಿಳಿಯಿರಿ
Flexi Business Loan

ಫ್ಲೆಕ್ಸಿ ಲೋನ್ ಪರಿವರ್ತನೆ

ನಿಮ್ಮ ಅಸ್ತಿತ್ವದಲ್ಲಿರುವ ಲೋನನ್ನು ಪರಿವರ್ತಿಸಿ | 45% ವರೆಗೆ ಕಡಿಮೆ EMI ಗಳನ್ನು ಪಾವತಿಸಿ*

ತಿಳಿಯಿರಿ
Working Capital Loan People Considered Image

ವರ್ಕಿಂಗ್ ಕ್ಯಾಪಿಟಲ್ ಲೋನ್

ಕಾರ್ಯಾಚರಣೆಗಳನ್ನು ನಿರ್ವಹಿಸಲು ರೂ. 45 ಲಕ್ಷದವರೆಗೆ ಪಡೆಯಿರಿ | ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು

ತಿಳಿಯಿರಿ
Business Loan for Women People Considered Image

ಮಹಿಳೆಯರಿಗೆ ಬಿಸಿನೆಸ್ ಲೋನ್‌

ರೂ. 45 ಲಕ್ಷದವರೆಗೆ ಹಣ ಪಡೆಯಿರಿ | ಕಡಿಮೆ ಡಾಕ್ಯುಮೆಂಟೇಶನ್

ತಿಳಿಯಿರಿ