ಮುದ್ರಾ ಲೋನ್ ಪಡೆಯಲು ಅರ್ಹತೆಯ ಮಾನದಂಡಗಳು ಯಾವುದು?

2 ನಿಮಿಷದ ಓದು

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ ) ಅನ್ನು ಏಪ್ರಿಲ್ 8, 2015 ರಂದು ಭಾರತದ ಪ್ರಧಾನ ಮಂತ್ರಿ ಪ್ರಾರಂಭಿಸಿದ್ದಾರೆ. ಕಾರ್ಪೊರೇಟ್ ಅಲ್ಲದ ಮತ್ತು ಕೃಷಿಯೇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲವನ್ನು ಒದಗಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.

ಯೋಜನೆಯ ಪ್ರಯೋಜನಗಳನ್ನು ಪಡೆಯಲು ವ್ಯಕ್ತಿಗಳು ಮುದ್ರಾ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಅವರ ಅರ್ಹತೆಯ ಆಧಾರದ ಮೇಲೆ, ಅವರು ರೂ. 10 ಲಕ್ಷದವರೆಗಿನ ಲೋನ್‌ಗಳನ್ನು ಪಡೆಯಬಹುದು.

ಹಕ್ಕುತ್ಯಾಗ: ಈ ಸಮಯದಲ್ಲಿ ನಾವು ಈ ಉತ್ಪನ್ನವನ್ನು (ಮುದ್ರಾ ಲೋನ್) ನಿಲ್ಲಿಸಿದ್ದೇವೆ. ನಮ್ಮಿಂದ ಒದಗಿಸಲಾದ ಪ್ರಸ್ತುತ ಹಣಕಾಸು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91-8698010101 ನಲ್ಲಿ ನಮ್ಮನ್ನು ಸಂಪರ್ಕಿಸಿ. ಈ ಯೋಜನೆಯು ಅದರ ಅಡಿಯಲ್ಲಿ ಮೂರು ಉತ್ಪನ್ನಗಳನ್ನು ಹೊಂದಿದೆ:

  • ಶಿಶು: ವ್ಯವಹಾರವನ್ನು ಪ್ರಾರಂಭಿಸಲು ಅಥವಾ ಕಾರ್ಯಾಚರಣೆಯ ಆರಂಭಿಕ ಹಂತಗಳಲ್ಲಿರುವ ವ್ಯಕ್ತಿಗಳಿಗೆ ರೂ. 50,000 ವರೆಗೆ ಲೋನ್‌ಗಳನ್ನು ನೀಡುತ್ತದೆ.
  • ಕಿಶೋರ್: ವಿಸ್ತರಣೆಗಾಗಿ ಹೆಚ್ಚುವರಿ ಹಣಕಾಸು ಪಡೆಯಲು ಬಯಸುವ ಸ್ಥಾಪಿತ ವ್ಯವಹಾರಗಳಿಗೆ ರೂ. 5 ಲಕ್ಷದವರೆಗಿನ ಲೋನ್‌ಗಳನ್ನು ಒದಗಿಸುತ್ತದೆ.
  • ತರುಣ್: ಸಂಪೂರ್ಣವಾಗಿ ಸ್ಥಾಪಿತ ವ್ಯವಹಾರಗಳಿಗೆ ರೂ. 10 ಲಕ್ಷದವರೆಗಿನ ಲೋನ್‌ಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಮುದ್ರಾ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಮುದ್ರಾ ಲೋನ್‌ಗಳ ಅರ್ಹತಾ ಮಾನದಂಡ

ಮುದ್ರಾ ಲೋನಿಗೆ ಈ ಕೆಳಗಿನವುಗಳು ಅರ್ಹರಾಗಬಹುದು:

  1. ಸಣ್ಣ ತಯಾರಕರು
  2. ಕರಕುಶಲ ಕೆಲಸಗಾರರು
  3. ಹಣ್ಣು ಮತ್ತು ತರಕಾರಿ ವಿತರಕರು
  4. ಅಂಗಡಿಯವರು
  5. ಕೃಷಿಯೊಂದಿಗೆ ತೊಡಗಿಸಿಕೊಂಡ ವ್ಯಕ್ತಿಗಳು (ಜಾನುವಾರು, ಕೋಳಿ, ಮೀನುಗಾರಿಕೆ, ಇತ್ಯಾದಿ)

ವ್ಯಕ್ತಿಗಳಿಗೆ ವಿವಿಧ ಬಿಸಿನೆಸ್ ಸ್ಟೇಟ್ಮೆಂಟ್‌ಗಳು ಮತ್ತು ತಮ್ಮ ಆದಾಯವನ್ನು ಮುದ್ರಾ ಲೋನ್ ಅರ್ಹತಾ ಮಾನದಂಡದ ಭಾಗವಾಗಿ ಯೋಜಿಸುವ ವರದಿಯ ಅಗತ್ಯವಿದೆ.

ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ಗಳೊಂದಿಗೆ, ಎಸ್ಎಂಇ ಗಳು ಮತ್ತು ಎಂಎಸ್ಎಂಇ ಗಳು ಅದರ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಮತ್ತು ಅಪ್ಲಿಕೇಶನ್‌ಗಾಗಿ ಕೇವಲ ಎರಡು ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ರೂ. 50 ಲಕ್ಷದವರೆಗಿನ ದೊಡ್ಡ ಲೋನ್‌ಗಳನ್ನು ಪಡೆಯಬಹುದು. 96 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ನೀವು ಸುಲಭ ಇಎಂಐ ಗಳಲ್ಲಿ ಲೋನನ್ನು ಮರುಪಾವತಿ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ