ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ನಾನು ಹೇಗೆ ಅನ್‌ಬ್ಲಾಕ್ ಮಾಡಬಹುದು?
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ನಿಮ್ಮ ಶಾಪಿಂಗ್ ಅನುಭವವನ್ನು ಹೆಚ್ಚಿಸುವ ಹಲವಾರು ಫೀಚರ್ ಮತ್ತು ಪ್ರಯೋಜನಗಳಿಗೆ ಅಕ್ಸೆಸ್ ಅನ್ನು ಒದಗಿಸುತ್ತದೆ. ಇದರ ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿ ಮತ್ತು ವ್ಯಾಪಕ ಶ್ರೇಣಿಯ ಪಾಲುದಾರ ಬ್ರ್ಯಾಂಡ್‌ಗಳೊಂದಿಗೆ, ಈ ಕಾರ್ಡ್ ಬಳಸಿಕೊಂಡು ಗೃಹಬಳಕೆ ವಸ್ತುಗಳಿಂದ ಸ್ಮಾರ್ಟ್‌ಫೋನ್‌ಗಳವರೆಗೆ ನಿಮಗೆ ಬೇಕಾದ ಎಲ್ಲವನ್ನು ನೀವು ಈಗ ಖರೀದಿಸಬಹುದು.
ರಿಲೇಶನ್‌ಶಿಪ್ ಪೇಜಿನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಆಯ್ಕೆ ಮಾಡುವ ಮೂಲಕ ಮತ್ತು ಬ್ಲಾಕ್/ಅನ್‌ಬ್ಲಾಕ್ ಟ್ಯಾಬ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ನಮ್ಮ ಗ್ರಾಹಕ ಸೇವಾ ಪೋರ್ಟಲ್- ನನ್ನ ಅಕೌಂಟ್‌ನಲ್ಲಿ ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ನೀವು ಅನ್‌ಬ್ಲಾಕ್ ಮಾಡಬಹುದು.
ಫೀಚರ್‌ಗಳು ಮತ್ತು ಪ್ರಯೋಜನಗಳು
ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ಕಾರ್ಡ್ ಅನ್‌ಬ್ಲಾಕ್ ಮಾಡುವ ಕೆಲವು ಸೂಕ್ತ ಪ್ರಯೋಜನಗಳು ಇಲ್ಲಿವೆ –
-
ಮುಂಚಿತ ಅನುಮೋದಿತ ಆಫರ್
ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ಕಾರ್ಡ್ ಅನ್ನು ನೀವು ಅನ್‌ಬ್ಲಾಕ್ ಮಾಡಿದ ನಂತರ, ನೀವು ರೂ. 2 ಲಕ್ಷದವರೆಗಿನ ಮುಂಚಿತ-ಅನುಮೋದಿತ ಆಫರನ್ನು ಪಡೆಯುತ್ತೀರಿ. 1.2 ಲಕ್ಷ ಪಾಲುದಾರ ಮಳಿಗೆಗಳಲ್ಲಿ ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸಲು ನೀವು ಇದನ್ನು ಬಳಸಬಹುದು.
-
ಫೋರ್‌ಕ್ಲೋಸರ್ ಶುಲ್ಕಗಳಿಲ್ಲ
ಸೂಕ್ತ ಅವಧಿಯನ್ನು ಆಯ್ಕೆ ಮಾಡುವುದರ ಜೊತೆಗೆ, ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸದೆ ನೀವು ಬಯಸಿದಾಗ ಯಾವುದೇ ಸಮಯದಲ್ಲಿ ನಿಮ್ಮ ಇಎಂಐ ಮರುಪಾವತಿಯನ್ನು ಫೋರ್‌ಕ್ಲೋಸ್ ಮಾಡಬಹುದು. ನೀವು ನಿಮ್ಮ ಮೊದಲ ಕಂತು ಪಾವತಿಸಿದ ನಂತರ, ಯಾವುದೇ ತೊಂದರೆಯಿಲ್ಲದೆ ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.
-
ನೋ ಕಾಸ್ಟ್ ಇಎಂಐಗಳು
ನೋ-ಕಾಸ್ಟ್ ಇಎಂಐ ಫೀಚರ್ ಎಂದರೆ ನೀವು ಅಸಲು ಶಾಪಿಂಗ್ ಮೊತ್ತದ ಮೇಲೆ ಯಾವುದೇ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ.
-
ಸುಲಭವಾದ ಮರುಪಾವತಿ ಕಾಲಾವಧಿ
ನೀವು ಈಗ 3 ರಿಂದ 24 ತಿಂಗಳ ಅವಧಿಯಲ್ಲಿ ನಿಮ್ಮ ಖರೀದಿಯ ವೆಚ್ಚವನ್ನು ಮರುಪಾವತಿ ಮಾಡಬಹುದು.
-
ಸುಲಭ ಅಕ್ಸೆಸ್
ಕೊನೆಯದಾಗಿ, ಬಜಾಜ್ ಫಿನ್‌ಸರ್ವ್ ಆ್ಯಪ್ ಮೂಲಕ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ಈಗ ಸುಲಭವಾಗಿ ಅಕ್ಸೆಸ್ ಮಾಡಬಹುದು. ಈಗ ನೀವು ಯಾವುದೇ ತೊಂದರೆಯಿಲ್ಲದೆ ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ಆನ್ಲೈನ್‌ನಲ್ಲಿ ಅನ್‌ಬ್ಲಾಕ್ ಮಾಡಬಹುದು.
ನನ್ನ ಅಕೌಂಟ್ ಪೋರ್ಟಲ್‌ನಲ್ಲಿ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡಿ
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನನ್ನ ಅಕೌಂಟ್ ಪೋರ್ಟಲ್‌ನಲ್ಲಿ ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡನ್ನು ನೀವು ಅನ್‌ಬ್ಲಾಕ್ ಮಾಡಬಹುದು:
ಹಂತ 1: ನಿಮ್ಮ ನೋಂದಾಯಿತ ಮೊಬೈಲ್ ನಂಬರ್, ಗ್ರಾಹಕ ಐಡಿ ಅಥವಾ ಇಮೇಲ್ ಐಡಿ ಜೊತೆಗೆ ಒಟಿಪಿ ಪಾಸ್‌ವರ್ಡ್ ಬಳಸಿಕೊಂಡು ಬಜಾಜ್ ಫಿನ್‌ಸರ್ವ್ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಲಾಗ್ ಆನ್ ಮಾಡಿ
ಹಂತ 2: 'ನನ್ನ ಸಂಬಂಧಗಳು' ವಿಭಾಗಕ್ಕೆ ಹೋಗಿ
ಹಂತ 3: 'ಇಎಂಐ ನೆಟ್ವರ್ಕ್ ಕಾರ್ಡ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'ಎಲ್ಲಾ ನೋಡಿ' ಆಯ್ಕೆಯನ್ನು ಆರಿಸಿ
ಹಂತ 5: 'ಇಎಂಐ ಕಾರ್ಡ್ ವಿವರಗಳು' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಬ್ಲಾಕ್, ಅನ್‌ಬ್ಲಾಕ್ ಅಥವಾ ಮರುವಿತರಣೆ ಆಯ್ಕೆಗಳಿಂದ ಆರಿಸಿ.
ಗ್ರಾಹಕ ಸಹಾಯವಾಣಿ ಮೂಲಕ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡಿ
ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನ್‌ಬ್ಲಾಕ್ ಮಾಡಲು, ನೀವು ಬಜಾಜ್ ಫಿನ್‌ಸರ್ವ್ ಗ್ರಾಹಕ ಸಹಾಯವಾಣಿಗೆ ಕರೆ ಮಾಡಬಹುದು.
ಹಂತ 1: ಗ್ರಾಹಕ ಸಹಾಯವಾಣಿ ನಂಬರ್‌ಗೆ ಕರೆ ಮಾಡಿ- 0869 801 0101
ಹಂತ 2: ಈ ಕೆಳಗಿನ ವಿವರಗಳನ್ನು ಒದಗಿಸಿ:
- ಗ್ರಾಹಕರ ಐಡಿ
- ಇಎಂಐ ನೆಟ್ವರ್ಕ್ ಕಾರ್ಡ್ ನಂಬರ್
- ನೀವು ಎದುರಿಸುತ್ತಿರುವ ಸಮಸ್ಯೆಯ ವಿವರಗಳು
ಹಂತ 3: ಈ ಸಮಸ್ಯೆಯನ್ನು ಪರಿಹರಿಸಿದಾಗ ನೀವು ನೋಟಿಫಿಕೇಶನ್ ಪಡೆಯುತ್ತೀರಿ
ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಏಕೆ ಬ್ಲಾಕ್ ಆಗಿರಬಹುದು ಎಂಬುದಕ್ಕೆ ಕಾರಣಗಳು
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಅನೇಕ ಕಾರಣಗಳಿಂದ ಬ್ಲಾಕ್ ಆಗಿರಬಹುದು, ಅವುಗಳೆಂದರೆ:
- ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡದೇ ಇರುವುದು
- ಇಸಿಎಸ್ ಮ್ಯಾಂಡೇಟ್ ಅನ್ನು ಸರಿಯಾಗಿ ಸಲ್ಲಿಸಲು ಸಾಧ್ಯವಾಗದೇ ಇರುವುದು
- ನಿಮ್ಮ ಸಿಬಿಲ್ ಸ್ಕೋರ್ 750 ಕ್ಕಿಂತ ಕೆಳಗೆ ಕುಸಿದಿದೆ
ಗ್ರಾಹಕರು ಮೇಲಿನ ಯಾವುದೇ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು:
- ಸಾಧ್ಯವಾದಷ್ಟು ಬೇಗ ಇಎಂಐ ಪಾವತಿ ಮಾಡುವುದು
- ನಿಮ್ಮ ಬ್ಯಾಂಕಿನೊಂದಿಗೆ ಮಾತನಾಡುವ ಮೂಲಕ ನಿಮ್ಮ ಇಸಿಎಸ್ ಮ್ಯಾಂಡೇಟ್‌ನ ಸಮಸ್ಯೆಗಳನ್ನು ಪರಿಹರಿಸಿ; ಇಲ್ಲದಿದ್ದರೆ, ಬಜಾಜ್ ಫಿನ್‌ಸರ್ವ್‌ಗೆ ಹೊಸ ಇಸಿಎಸ್ ಮ್ಯಾಂಡೇಟ್ ಸಲ್ಲಿಸಿ
- ನಿಮ್ಮ ಸಿಬಿಲ್ ಸ್ಕೋರನ್ನು 750 ಕ್ಕಿಂತ ಮೇಲ್ಪಟ್ಟು ಹೆಚ್ಚಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ
ಆಗಾಗ ಕೇಳುವ ಪ್ರಶ್ನೆಗಳು
ನನ್ನ ಅಕೌಂಟ್ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಈಗ ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡನ್ನು ಮರುಪಡೆಯಬಹುದು. ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ನಿಮ್ಮ ಗ್ರಾಹಕ ಐಡಿ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. 'ನನ್ನ ಸಂಬಂಧಗಳು' ಆಯ್ಕೆಗೆ ಹೋಗಿ, 'ಇಎಂಐ ಕಾರ್ಡ್ ವಿವರಗಳು' ಮೇಲೆ ಕ್ಲಿಕ್ ಮಾಡಿ ಮತ್ತು ಬ್ಲಾಕ್, ಅನ್‌ಬ್ಲಾಕ್ ಅಥವಾ ಮರುವಿತರಣೆ ಆಯ್ಕೆಯನ್ನು ಆರಿಸಿ.
ಇಸಿಎಸ್ ಸಂಬಂಧಿತ ಸಮಸ್ಯೆಗಳಿಂದಾಗಿ ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡನ್ನು ಬ್ಲಾಕ್ ಮಾಡಿದರೆ, ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ನೀವು ಮೊದಲು ಬಜಾಜ್ ಫಿನ್‌ಸರ್ವ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಅದರ ನಂತರ, ಯಾವುದೇ ಸಮಸ್ಯೆಗಳನ್ನು ನೋಡಲು ಮತ್ತು ಅವುಗಳನ್ನು ಪರಿಹರಿಸಲು ನೀವು ನಿಮ್ಮ ಬ್ಯಾಂಕಿನೊಂದಿಗೆ ಮಾತನಾಡಬಹುದು. ಇಲ್ಲದಿದ್ದರೆ, ನೀವು ಯಾವುದೇ ಸಮಯದಲ್ಲಿ ಹೊಸ ಮ್ಯಾಂಡೇಟ್ ಸಲ್ಲಿಸಬಹುದು ಮತ್ತು ಪರಿಹಾರವನ್ನು ಹುಡುಕಬಹುದು.
ನೀವು ಮಾಸಿಕ ಕಂತು ತಪ್ಪಿಸಿಕೊಂಡಿದ್ದರೆ ಮತ್ತು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡನ್ನು ಈಗ ಬ್ಲಾಕ್ ಮಾಡಲಾಗಿದ್ದರೆ, ನೀವು ಯಾವಾಗಲೂ ಬಾಕಿ ಮೊತ್ತವನ್ನು ಪಾವತಿಸಬಹುದು ಮತ್ತು ಅದನ್ನು ಆ್ಯಕ್ಟಿವೇಟ್ ಮಾಡಬಹುದು. ನೀವು ಅದನ್ನು ಮಾನ್ಯುಯಲ್ ಆಗಿ ಅಥವಾ ಮೈ ಅಕೌಂಟ್ ಪೋರ್ಟಲ್ ಮೂಲಕ ಮಾಡಬಹುದು.
ಮೈ ಅಕೌಂಟ್ ಪೋರ್ಟಲ್ ಅಥವಾ ವಾಲೆಟ್ ಆ್ಯಪ್ ಬಳಸಿಕೊಂಡು ನಿಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್ ಕಾರ್ಡಿನ ಸ್ಟೇಟಸ್ ಅನ್ನು ನೀವು ಪರಿಶೀಲಿಸಬಹುದು. ನೀವು ಮೈ ಅಕೌಂಟ್ ಪೋರ್ಟಲ್‌ಗೆ ಲಾಗಿನ್ ಮಾಡಿ, 'ನನ್ನ ಸಂಬಂಧಗಳು' ವಿಭಾಗಕ್ಕೆ ಹೋಗಿ ಮತ್ತು 'ಇಎಂಐ ನೆಟ್ವರ್ಕ್ ಕಾರ್ಡ್' ಮೇಲೆ ಕ್ಲಿಕ್ ಮಾಡಿ’. ಇಲ್ಲದಿದ್ದರೆ, ನೀವು ಬಜಾಜ್ ವಾಲೆಟ್ ಆ್ಯಪ್‌ಗೆ ಲಾಗಿನ್ ಮಾಡಿ, 'ಇನ್ನಷ್ಟು ತಿಳಿಯಿರಿ' ವಿಭಾಗಕ್ಕೆ ಹೋಗಿ, ಮತ್ತು ನಿಮ್ಮ ಇಎಂಐ ನೆಟ್ವರ್ಕ್ ಕಾರ್ಡ್ ಬ್ಲಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು 'ಈಗಲೇ ಇಎಂಐ ಕಾರ್ಡ್ ನೋಡಿ' ಮೇಲೆ ಕ್ಲಿಕ್ ಮಾಡಿ.