ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್ ಇಲ್ಲದೆ ನಿಮ್ಮ ಸಾಲ ಪಡೆಯುವ ಅರ್ಹತೆಯನ್ನು ಹೇಗೆ ಸಾಬೀತುಪಡಿಸಬಹುದು ಎಂದು ನೋಡಿ

2 ನಿಮಿಷದ ಓದು

ಪರ್ಸನಲ್ ಲೋನ್‌ಗಳು ಅಡಮಾನ ಬೇಕಿಲ್ಲದ, ಅಲ್ಪಾವಧಿ ಲೋನ್‌ಗಳಾಗಿದ್ದು, ಹಣಕಾಸು ಸಂಸ್ಥೆಗಳು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಮೌಲ್ಯಮಾಪನ ಮಾಡಿದ ನಂತರ ಅವುಗಳನ್ನು ನಿಮಗೆ ನೀಡುತ್ತವೆ. ಬ್ಯಾಂಕ್ ಸ್ಟೇಟ್ಮೆಂಟ್‌ಗಳು ನಿಮ್ಮ ಹಣಕಾಸು ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡುವುದರಿಂದ, ಪರ್ಸನಲ್ ಲೋನ್ ಮರುಪಾವತಿಗೆ ನೀವು ಸಾಕಷ್ಟು ಹಣವನ್ನು ಹೊಂದಿದ್ದೀರೋ ಇಲ್ಲವೋ ಎಂಬುದನ್ನು ನಿರ್ಣಯಿಸಲು ಸಾಲದಾತರು ಬ್ಯಾಂಕ್ ಸ್ಟೇಟ್ಮೆಂಟ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಅದಕ್ಕೆ ಅನುಗುಣವಾಗಿ, ಅವರು ನಿಮ್ಮ ಅಪ್ಲಿಕೇಶನ್ ಅನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು.

ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸಾಬೀತುಪಡಿಸಲು, ನಿಮ್ಮ ಹತ್ತಿರ ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಇಲ್ಲವಾದಲ್ಲಿ, ಈ ಚೆಕ್‌ಲಿಸ್ಟ್ ಅನ್ನು ಅನುಸರಿಸಿ.

  • 50% ಕ್ಕಿಂತ ಹೆಚ್ಚಿರದ, ಕಡಿಮೆ ಎಫ್ಒಐಆರ್ (ಫಿಕ್ಸೆಡ್ ಆಬ್ಲಿಗೇಶನ್ಸ್ ಟು ಇನ್‌ಕಮ್ ರೇಶಿಯೊ) ಇರಲಿ. ಸಮಯಕ್ಕೆ ಸರಿಯಾಗಿ ಮರುಪಾವತಿಸಲು ನಿಮ್ಮ ಬಳಿ ಸಾಕಷ್ಟು ಬಳಸತಕ್ಕ ಹಣವಿದೆ ಎಂಬುದನ್ನು ಇದು ತೋರಿಸುತ್ತದೆ.
  • ಅನುಮೋದನೆಗಾಗಿ 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ತೋರಿಸುತ್ತದೆ ಮತ್ತು ಸಾಲದಾತರನ್ನು ಸುಲಭವಾಗಿ ಇರಿಸುತ್ತದೆ ಎಂಬುದನ್ನು ನೆನಪಿಡಿ.
  • ತಪ್ಪದೆ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಪಾವತಿಗಳನ್ನು ಮಾಡಿ ಒಳ್ಳೆಯ ಮರುಪಾವತಿ ಹಿನ್ನೆಲೆಯನ್ನು ಸೃಷ್ಟಿಸಿ. ಇದು ನೀವು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಸಾಲಗಾರರಾಗಿದ್ದೀರಿ ಎಂಬುದನ್ನು ಸಾಬೀತುಪಡಿಸುತ್ತದೆ.
  • ಸಂಬಳದ ಸ್ಲಿಪ್‌ಗಳನ್ನು ಸಲ್ಲಿಸಿ. ಅವುಗಳು ನೀವು ನಿಯಮಿತವಾಗಿ ಆದಾಯವನ್ನು ಪಡೆಯುವ ಪುರಾವೆಯಾಗಿದೆ, ಆದ್ದರಿಂದ ಸಮಯಕ್ಕೆ ಸರಿಯಾಗಿ ಮತ್ತು ಸಂಪೂರ್ಣವಾಗಿ ಪರ್ಸನಲ್ ಲೋನನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.
  • ನಿಮಗೆ ಬಹಳ ಕಾಲದಿಂದ ಪರಿಚಯವಿರುವ ಸಾಲದಾತರನ್ನು ಸಂಪರ್ಕಿಸಿ. ಆಗ ಬ್ಯಾಂಕ್ ಸ್ಟೇಟ್ಮೆಂಟ್‌ಗಳಿಲ್ಲದೆ ಪರ್ಸನಲ್ ಲೋನ್ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ, ಸಾಲದಾತರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾಗ, ಲೋನ್ ಬಡ್ಡಿದರಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಲೂ ಸಾಧ್ಯವಿದೆ.

ಜೊತೆಗೆ, ಬೇರೆಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಬ್ಯಾಂಕ್ ಸ್ಟೇಟ್ಮೆಂಟ್‌ಗಳ ಕೊರತೆಯನ್ನು ಸರಿದೂಗಿಸಿ. ಪರ್ಸನಲ್ ಲೋನ್ ಆ್ಯಪ್ ಮೂಲಕ ನಿಮ್ಮ ಅಪ್ಲಿಕೇಶನ್‌ ಪ್ರಕ್ರಿಯೆಗೊಳಿಸಲು ಬೇಕಾದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಇನ್ನಷ್ಟು ಓದಿರಿ: ಡಾಕ್ಯುಮೆಂಟ್‌ಗಳಿಲ್ಲದೆ ತ್ವರಿತ ಲೋನ್ ಪಡೆಯುವುದು ಹೇಗೆ?

ಇನ್ನಷ್ಟು ಓದಿರಿ ಕಡಿಮೆ ಓದಿ