ಪರ್ಸನಲ್ ಲೋನ್

ಪರ್ಸನಲ್‌ ಲೋನ್‌ಗಾಗಿ CIBIL ಸ್ಕೋರನ್ನು ಹೇಗೆ ಪರಿಶೀಲಿಸುವುದು?

ಪರ್ಸನಲ್‌ ಲೋನ್‌ಗಾಗಿ CIBIL ಸ್ಕೋರನ್ನು ಹೇಗೆ ಪರಿಶೀಲಿಸುವುದು?

ಟ್ರಾನ್ಸ್ ಯೂನಿಯನ್ CIBIL ಲೋನಿನ ಮಾಹಿತಿ ಕಂಪನಿಯಾಗಿದ್ದು, ಇದು ಭಾರತದಲ್ಲಿನ ಆರ್ಥಿಕ ಗ್ರಾಹಕರ ಲೋನ್ ಮರುಪಾವತಿ ಇತಿಹಾಸವನ್ನು ಪತ್ತೆ ಹಚ್ಚುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
ನಿಮ್ಮ CIBIL ಸ್ಕೋರ್‌ ಮೂರು ಅಂಕಿಯ ನಂಬರಾಗಿದ್ದು, ಅದು 300 ರಿಂದ 900 ಆಗಿರುತ್ತದೆ, ಇದನ್ನು ಬ್ಯಾಂಕ್‌ ಹಾಗೂ NBFC ನವರು ನಿಮ್ಮ ಕ್ರೆಡಿಟ್‌ ಅರ್ಹತೆಯನ್ನು ಹಾಗೂ ಸಮಯಕ್ಕೆ ಸರಿಯಾಗಿ ಲೋನ್ ಮರುಪಾವತಿ ಮಾಡುವ ಸಂಭವನೀಯತೆಯನ್ನು ಖಚಿತ ಪಡಿಸಿಕೊಳ್ಳಲು ಬಳಸುತ್ತಾರೆ.

ಈ ಹಂತಗಳನ್ನು ಅನುಸರಿಸಿ ನಿಮ್ಮ CIBIL ಸ್ಕೋರನ್ನು ನೀವು ಪರಿಶೀಲಿಸಬಹುದು:

  1. ನೀವು ಸಿಬಿಲ್ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ತುಂಬುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.
  2. ಹೆಸರು, ಅಡ್ರೆಸ್‌ ಮತ್ತು ಸಂಪರ್ಕ ನಂಬ‌ರ್‌ಗಳಂಥ ನಿಮ್ಮ ವೈಯುಕ್ತಿಕ ವಿವರಗಳನ್ನು ನಮೂದಿಸಿ.
  3. ನೀವು CIBIL ಟ್ರಾನ್ಸ್ಯೂನಿಯನ್ ಸ್ಕೋರ್ ಮತ್ತು ನಿಮ್ಮ CIR (ಕ್ರೆಡಿಟ್ ಮಾಹಿತಿ ವರದಿ) ಬಯಸಿದರೆ, ನೀವು ನಾಮ ಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  4. ನೀವು ಫಾರ್ಮ್ ಅನ್ನು ಸಲ್ಲಿಸಿ ಪಾವತಿ ಮಾಡಿದ ನಂತರ, ನಿಮ್ಮ CIBIL ಸ್ಕೋರ್ ಮತ್ತು ವರದಿಯನ್ನು ನಿಮಗೆ ಮೇಲ್ ಮಾಡಲಾಗುತ್ತದೆ

ಆಫ್‌ಲೈನ್‌ ನಲ್ಲಿ ನಿಮ್ಮ CIBIL ಸ್ಕೋರ್‌ ಪಡೆಯಲು ನಿಮ್ಮ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಂಚೆ ಮೂಲಕ ಸಲ್ಲಿಸಿ ಮತ್ತು ಶುಲ್ಕವನ್ನು ಡಿಮಾಂಡ್‌ ಡ್ರಾಫ್ಟ್‌ ಮೂಲಕ ಮುಂಬೈನಲ್ಲಿರುವ CIBIL ಕಚೇರಿಗೆ ಕಳುಹಿಸಿ.