ಗೋಲ್ಡ್ ಲೋನ್ ಮೇಲೆ ತೆರಿಗೆ ಪ್ರಯೋಜನ ಪಡೆಯುವುದು ಹೇಗೆ
ಗೋಲ್ಡ್ ಲೋನ್‌ಗಳು ಆಕರ್ಷಕ ಫೀಚರ್ ಮತ್ತು ಪ್ರಯೋಜನಗಳೊಂದಿಗೆ ಬರುವ ಜನಪ್ರಿಯ ಫಂಡಿಂಗ್ ಆಯ್ಕೆಗಳಾಗಿವೆ. ದೀರ್ಘ ಮರುಪಾವತಿ ಅವಧಿಯೊಂದಿಗೆ ಹೆಚ್ಚಿನ ಮೌಲ್ಯದ ಹಣಕಾಸು ಸಹಾಯವು ನಿಮಗೆ ದೊಡ್ಡ ವೆಚ್ಚಗಳನ್ನು ಕವರ್ ಮಾಡಲು ಮತ್ತು ಸುಲಭವಾಗಿ ಮರುಪಾವತಿಗಳನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ. ಅಂತಹ ಮುಂಗಡಗಳನ್ನು ಪಡೆಯುವಾಗ ನೋಡಬೇಕಾದ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಗೋಲ್ಡ್ ಲೋನ್ ತೆರಿಗೆ ಪ್ರಯೋಜನಗಳು.
ಸಾಲಗಾರರು ಪಡೆಯಬಹುದಾದ ಯಾವುದೇ ತೆರಿಗೆ ಕಡಿತ ಅಥವಾ ವಿನಾಯಿತಿಯು ಹಣದ ಬಳಕೆ ಮತ್ತು ಬಳಸಿದ ಲೋನಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಗೋಲ್ಡ್ ಲೋನ್ ಸಾಲಗಾರರು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾದ ಮಾರ್ಗಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಗೋಲ್ಡ್ ಲೋನಿನ ತೆರಿಗೆ ಪ್ರಯೋಜನಗಳು ಯಾವುವು
1. ಹೋಮ್ ಇಂಪ್ರೂಮೆಂಟ್ ಫೈನಾನ್ಸಿಂಗ್
ಸಾಲಗಾರರು ಮನೆ ಸುಧಾರಣೆಗೆ ಹಣಕಾಸು ಒದಗಿಸಲು ಬಳಸಿದ ಗೋಲ್ಡ್ ಲೋನ್ ಮೊತ್ತದ ಮೇಲೆ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು. ರೂ. 1.5 ಲಕ್ಷದ ವಾರ್ಷಿಕ ಮಿತಿಯೊಂದಿಗೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80ಸಿ ಅಡಿಯಲ್ಲಿ ಮನೆ ಸುಧಾರಣೆ ತೆರಿಗೆ ಪ್ರಯೋಜನಗಳು ಲಭ್ಯವಿವೆ. ಅಂತಹ ಕಡಿತವು ಲೋನ್ ಅಸಲಿಗೆ ಮಾತ್ರ ಲಭ್ಯವಿದೆ ಮತ್ತು ಎಲ್ಲಾ ರೀತಿಯ ಮನೆ ರಿಪೇರಿ, ಬದಲಿ ಮತ್ತು ಸುಧಾರಣೆ ವೆಚ್ಚಗಳಿಗೆ ಅನ್ವಯವಾಗುತ್ತದೆ.
2. ವಸತಿ ಆಸ್ತಿ ಖರೀದಿ ಅಥವಾ ನಿರ್ಮಾಣ
ವಸತಿ ಆಸ್ತಿ ಖರೀದಿ ಅಥವಾ ನಿರ್ಮಾಣಕ್ಕಾಗಿ ಆ ಹಣವನ್ನು ಬಳಸಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ಅಡಿಯಲ್ಲಿ ಸಾಲಗಾರರು ಗೋಲ್ಡ್ ಲೋನ್ ತೆರಿಗೆ ವಿನಾಯಿತಿಗೆ ಅರ್ಹರಾಗಿರುತ್ತಾರೆ. ವಾರ್ಷಿಕವಾಗಿ ಲಭ್ಯವಿರುವ ಕಡಿತದ ಮೊತ್ತವು ರೂ. 2 ಲಕ್ಷಕ್ಕೆ ಸೀಮಿತವಾಗಿರುತ್ತದೆ ಮತ್ತು ಅಂತಹ ಲೋನ್ ಮರುಪಾವತಿಗೆ ಪಾವತಿಸಬೇಕಾದ ಬಡ್ಡಿಗೆ ಅನ್ವಯವಾಗುತ್ತದೆ. ತೆರಿಗೆ ವಿನಾಯಿತಿಯು ಅನ್ವಯವಾಗಲು ವಸತಿ ಆಸ್ತಿಯು ಸ್ವಯಂ ಸ್ವಾಧೀನವಾಗಿರಬೇಕು.
3. ಬಿಸಿನೆಸ್ ವೆಚ್ಚಗಳಿಗಾಗಿ ಬಳಕೆ
ಸಾಲಗಾರರು ಬಿಸಿನೆಸ್ ವೆಚ್ಚಗಳಿಗಾಗಿ ಲೋನ್ ಮೊತ್ತವನ್ನು ಬಳಸಿದರೆ ಗೋಲ್ಡ್ ಲೋನ್ ತೆರಿಗೆ ಪ್ರಯೋಜನಗಳು ಲಭ್ಯವಿರುತ್ತವೆ. ಬಿಸಿನೆಸ್‌ನಿಂದ ಉಂಟಾದ ವೆಚ್ಚಗಳನ್ನು ಪೂರೈಸಲು ಲೋನನ್ನು ಬಳಸಿದರೆ, ಅಂತಹ ಲೋನ್ ಮೊತ್ತಕ್ಕೆ ಅನ್ವಯಿಸುವ ಬಡ್ಡಿಯನ್ನು ಆದಾಯ ತೆರಿಗೆ ಕಾಯ್ದೆಯ ಅನ್ವಯವಾಗುವ ನಿಬಂಧನೆಗಳ ಅಡಿಯಲ್ಲಿ ಬಿಸಿನೆಸ್ ವೆಚ್ಚವಾಗಿ ಕಡಿತಗೊಳಿಸಲಾಗುತ್ತದೆ.
4. ಆಸ್ತಿ ಖರೀದಿ
ಆಸ್ತಿಯನ್ನು ಹೊರತುಪಡಿಸಿ ಇತರ ಸಂಪತ್ತನ್ನು ಖರೀದಿಸಲು ಪಡೆದ ಮೊತ್ತವನ್ನು ಬಳಸಿದರೂ ಕೂಡ ಗೋಲ್ಡ್ ಲೋನ್ ತೆರಿಗೆ ವಿನಾಯಿತಿ ಅನ್ವಯವಾಗುತ್ತದೆ. ಆಸ್ತಿಯನ್ನು ಮಾರಾಟ ಮಾಡಿದ ಹಣಕಾಸು ವರ್ಷದಲ್ಲಿ ಮಾತ್ರ ಸಾಲಗಾರರು ಅಂತಹ ಪ್ರಯೋಜನವನ್ನು ಪಡೆಯಬಹುದು. ಆಸ್ತಿ ಖರೀದಿಗೆ ಬಳಸಿದ ಲೋನ್ ಮೊತ್ತಕ್ಕೆ ಪಾವತಿಸಲಾದ ಬಡ್ಡಿಯನ್ನು ಸ್ವಾಧೀನದ ವೆಚ್ಚವೆಂದು ಪರಿಗಣಿಸಲಾಗುತ್ತದೆ, ಇದು ತೆರಿಗೆ ಪ್ರಯೋಜನಗಳ ಮೇಲೆ ಪರಿಣಾಮ ಬೀರುತ್ತದೆ.
ನಮೂದಿಸಿದ ಗೋಲ್ಡ್ ಲೋನ್ ತೆರಿಗೆ ಕಡಿತಗಳನ್ನು ಹೊರತುಪಡಿಸಿ, ಪಡೆದ ಒಟ್ಟು ಲೋನ್ ಮೊತ್ತವನ್ನು ಆದಾಯದ ಮೇಲ್ವಿಚಾರಣೆಯಿಂದ ಹೊರಗಿಡಲಾಗುತ್ತದೆ ಎಂದು ಸಾಲಗಾರರು ತಿಳಿದುಕೊಳ್ಳಬೇಕು, ಇದು ಲೋನ್ ಮೇಲೆ ತೆರಿಗೆ ವಿಧಿಸದಂತೆ ಮಾಡುತ್ತದೆ.
ಗೋಲ್ಡ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು
ಗೋಲ್ಡ್ ಲೋನ್ ಅಪ್ಲಿಕೇಶನ್‌ಗಾಗಿ ಸಲ್ಲಿಸಬೇಕಾದ ಅಗತ್ಯ ಡಾಕ್ಯುಮೆಂಟ್‌ಗಳು ಸಾಲ ನೀಡುವ ಸಂಸ್ಥೆಗಳು ನಿಗದಿಪಡಿಸಿದ ಕೆವೈಸಿ ನಿಯಮಗಳ ಅನ್ವಯ ಅಗತ್ಯವಿರುತ್ತದೆ. ಅರ್ಜಿ ಸಲ್ಲಿಸಲು ಅಗತ್ಯವಿರುವ ಸಾಮಾನ್ಯ ಗೋಲ್ಡ್ ಲೋನ್ ಡಾಕ್ಯುಮೆಂಟ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ.
- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ಗುರುತಿನ ಪುರಾವೆ.
- ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಯುಟಿಲಿಟಿ ಬಿಲ್‌ಗಳು ಮತ್ತು ಇತರೆ ವಿಳಾಸದ ಪುರಾವೆ.
- ಸಾಲಗಾರರ ಉದ್ಯೋಗವನ್ನು ಅವಲಂಬಿಸಿ ಆದಾಯ ಪುರಾವೆ, ಸಂಬಳದ ಸ್ಲಿಪ್‌ಗಳು, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು, ಹಣಕಾಸಿನ ಸ್ಟೇಟ್ಮೆಂಟ್‌ಗಳು ಇತ್ಯಾದಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಬಜಾಜ್ ಫಿನ್‌ಸರ್ವ್‌ನ ಗೋಲ್ಡ್ ಲೋನ್ ಬಡ್ಡಿ ದರವನ್ನು ಅದರ ಸುರಕ್ಷಿತ ಸ್ವರೂಪ ಮತ್ತು ಹಣಕಾಸಿನ ಬೇಡಿಕೆಯ ಕಾರಣದಿಂದಾಗಿ ಕೈಗೆಟಕುವಂತೆ ಮತ್ತು ಸ್ಪರ್ಧಾತ್ಮಕವಾಗಿ ಇರಿಸಲಾಗುತ್ತದೆ. ರೂ. 99/- ನಾಮಮಾತ್ರದ ಶುಲ್ಕದೊಂದಿಗೆ ಗೋಲ್ಡ್ ಲೋನ್ ದರಗಳು 9.50% ರಿಂದ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಆರಂಭವಾಗುತ್ತವೆ.
ಮುಂಗಡ ಮರುಪಾವತಿಗಾಗಿ ಹೆಚ್ಚು ಕೈಗೆಟಕುವ ಸಾಲದ ಆಯ್ಕೆಯನ್ನು ಕಂಡುಹಿಡಿಯಲು ಗೋಲ್ಡ್ ಲೋನ್ ಮೇಲಿನ ಬಡ್ಡಿ ದರಗಳು ಮತ್ತು ಶುಲ್ಕಗಳನ್ನು ಹೋಲಿಕೆ ಮಾಡಿ. ಲೋನ್ ಮರುಪಾವತಿಯ ಮೇಲೆ ಉಳಿತಾಯವನ್ನು ಹೆಚ್ಚಿಸಲು ಲಭ್ಯವಿರುವ ಗೋಲ್ಡ್ ಲೋನ್ ತೆರಿಗೆ ಪ್ರಯೋಜನಗಳನ್ನು ಪಡೆಯಿರಿ.