ಮುದ್ರಾ ಲೋನಿಗೆ ಅಪ್ಲೈ ಮಾಡುವುದು ಹೇಗೆ?
ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ), 8ನೇ ಏಪ್ರಿಲ್ 2015 ರಂದು ಪ್ರಾರಂಭಿಸಲಾಗಿದ್ದು, ಸಣ್ಣ ಬಿಸಿನೆಸ್ ಮಾಲೀಕರಿಗೆ ರೂ. 10 ಲಕ್ಷದವರೆಗೆ ಲೋನ್‌ಗಳನ್ನು ಒದಗಿಸುತ್ತದೆ. ಹಣಕಾಸು ಸಂಸ್ಥೆಯಲ್ಲಿ ಮುದ್ರಾ ಲೋನಿಗೆ ಅಪ್ಲೈ ಮಾಡಲು ಅನುಸರಿಸಬೇಕಾದ ಹಂತಗಳು ಇಲ್ಲಿವೆ:
ಹಂತ 1. ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಿ:
- ಐಡಿ ಪುರಾವೆ (ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ)
- ವಿಳಾಸದ ಪುರಾವೆ (ವಿದ್ಯುತ್ ಬಿಲ್, ದೂರವಾಣಿ ಬಿಲ್, ಗ್ಯಾಸ್ ಬಿಲ್, ನೀರಿನ ಬಿಲ್ ಇತ್ಯಾದಿ)
- ಬಿಸಿನೆಸ್ ಪುರಾವೆ (ಬಿಸಿನೆಸ್ ನೋಂದಣಿ ಪ್ರಮಾಣಪತ್ರ, ಇತ್ಯಾದಿ)
ಹಂತ 2. ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ:
ಭಾರತದಲ್ಲಿ ಬಹುತೇಕ ಎಲ್ಲಾ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಮುದ್ರಾ ಲೋನಿಗೆ ವ್ಯಕ್ತಿಗಳು ಅಪ್ಲೈ ಮಾಡಬಹುದು.
ಹಂತ 3. ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ:
ಅರ್ಜಿದಾರರು ಮುದ್ರಾ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ತಮ್ಮ ವೈಯಕ್ತಿಕ ಮತ್ತು ವ್ಯಾಪಾರ ದಾಖಲೆಗಳನ್ನು ಒದಗಿಸಬೇಕು.
ಪಿಎಂಎಂವೈ ಲೋನ್‌ಗಳು ಗರಿಷ್ಠ ರೂ. 10 ಲಕ್ಷದ ಮಂಜೂರಾತಿಯನ್ನು ಹೊಂದಿವೆ; ಆದಾಗ್ಯೂ, ನಿಮ್ಮ ಅಗತ್ಯಗಳಿಗೆ ಹಣಕಾಸು ಒದಗಿಸಲು ನಿಮಗೆ ಹೆಚ್ಚಿನ ಮೊತ್ತದ ಅಗತ್ಯವಿರಬಹುದು. ಅಂತಹ ಸಂದರ್ಭಗಳಲ್ಲಿ, ಬಜಾಜ್ ಫಿನ್‌ಸರ್ವ್ ಎಂಎಸ್ಎಂಇ ಗಳಿಗೆ ಅದೇ ರೀತಿಯ ಬಿಸಿನೆಸ್ ಲೋನ್‌ಗಳನ್ನು ಒದಗಿಸುತ್ತದೆ, ಅಲ್ಲಿ ನೀವು ಅಡಮಾನವಿಲ್ಲದೆ ರೂ. 50 ಲಕ್ಷದವರೆಗೆ ಅನುಮೋದನೆ ಪಡೆಯಬಹುದು. ಈ ಲೋನ್‌ಗಳನ್ನು ಪಡೆಯುವುದು ಸುಲಭ, ತ್ವರಿತ ಹಣಕಾಸು ಒದಗಿಸುವುದು ಮತ್ತು ಸುಲಭವಾಗಿ ಅನೇಕ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಬಹುದು.
ಹಕ್ಕುತ್ಯಾಗ:
ನಾವು ಈ ಸಮಯದಲ್ಲಿ ಈ ಪ್ರಾಡಕ್ಟ್ ಅನ್ನು (ಮುದ್ರಾ ಲೋನ್) ನಿಲ್ಲಿಸಿದ್ದೇವೆ. ನಮ್ಮಿಂದ ಒದಗಿಸಲಾದ ಪ್ರಸ್ತುತ ಹಣಕಾಸು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91-8698010101 ನಲ್ಲಿ ನಮ್ಮನ್ನು ಸಂಪರ್ಕಿಸಿ.