ಹೋಮ್ ಲೋನ್ ತೆಗೆದುಕೊಳ್ಳುವುದರಿಂದ ನಿಮ್ಮ ಕನಸಿನ ಮನೆ ಖರೀದಿಸುವುದು ಸುಲಭವಾಗುತ್ತದೆ, ಆದರೆ ನೀವು ಕಡಿಮೆ ಬಡ್ಡಿ ದರ ಮತ್ತು ವ್ಯಾಲ್ಯೂ ಆ್ಯಡೆಡ್ ಸೇವೆಗಳಿರುವ ಒಂದು ಉತ್ತಮ ಹೋಮ್ ಲೋನನ್ನು ಆರಿಸಬೇಕಾಗುತ್ತದೆ. ಈ ರೀತಿಯ ಸಂದರ್ಭದಲ್ಲಿ ನೀವು ನಿಮ್ಮ ಹೋಮ್ ಲೋನನ್ನು ಹೊಸ ಸಾಲದಾತರು ಒದಗಿಸುವ ಉತ್ತಮ ಸೇವೆಗಳಿಗಾಗಿ ವರ್ಗಾಯಿಸಲೂ ಬಯಸಬಹುದು. ಒಂದು ಸಾಲದಾತರಿಂದ ಮತ್ತೊಂದು ಸಾಲದಾತರಿಗೆ ನಿಮ್ಮ ಹೋಮ್ ಲೋನನ್ನು ವರ್ಗಾಯಿಸುವ ಅಥವಾ ಬದಲಾಯಿಸುವ ಈ ಪ್ರಕ್ರಿಯೆಯನ್ನು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಎಂದು ಕರೆಯಲಾಗುತ್ತದೆ.
ನಿಮ್ಮ ಈಗಿನ ಸಾಲದಾತರು ನಿಮ್ಮ ಪರವಾಗಿರದಿದ್ದಲ್ಲಿ ಮತ್ತು ಆ ಸಂಸ್ಥೆಯು ಹೊಂದಾಣಿಕೆ ಮಾಡಿಕೊಳ್ಳಲು ಇಚ್ಛಿಸದಿದ್ದಲ್ಲಿ, ನೀವು ನಿಮ್ಮ ಹೋಮ್ ಲೋನಿನ ಬಾಕಿ ಮೊತ್ತವನ್ನು ಹೊಸ ಸಾಲದಾತರಿಗೆ ವರ್ಗಾಯಿಸುತ್ತೀರಿ. ಲೋನ್ ವರ್ಗಾಯಿಸಲು ಹಲವಾರು ಕಾರಣಗಳಿದ್ದರೂ, ಬ್ಯಾಲೆನ್ಸ್ ಟ್ರಾನ್ಸ್ಫರ್ಗೆ ಹೆಚ್ಚು ಸಾಮಾನ್ಯ ಕಾರಣವೆಂದರೆ ಅಧಿಕ ಬಡ್ಡಿ ದರವನ್ನು ಪಾವತಿಸುತ್ತಿರುವುದು. ಕಠಿಣ ನಿಯಮಗಳು, ಅತಿಯಾದ ಹೆಚ್ಚುವರಿ ಶುಲ್ಕಗಳು ಮತ್ತು ಕಳಪೆ ಗ್ರಾಹಕ ಸೇವೆ ಮೊದಲಾದ ಕಾರಣಗಳು ಕೂಡ ಆಗಿರಬಹುದು.
ನಿಮ್ಮ ಅವಧಿಯ ಆರಂಭದ ವರ್ಷಗಳಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡುವುದು ಉತ್ತಮ. ಏಕೆಂದರೆ ಆರಂಭದಲ್ಲಿ ಪ್ರತಿಯೊಂದು EMI ಯ ಬಡ್ಡಿಯ ಕಾಂಪೊನೆಂಟ್ ಅಸಲಿನ ಕಾಂಪೊನೆಂಟ್ಗಿಂತ ಬಹಳಷ್ಟು ಹೆಚ್ಚಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಬಡ್ಡಿ ದರವು ಕಡಿಮೆಯಾದರೆ ನಿಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಹಾಗೆಯೇ, ನೀವು ಹೊಸ ಸಾಲದಾತರಿಗೆ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಲು ಶುಲ್ಕವನ್ನು ಪಾವತಿಸಬೇಕಾಗಬಹುದು ಮತ್ತು ಪ್ರಕ್ರಿಯೆ ಶುಲ್ಕವನ್ನು ಮರುಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ. ಹಾಗಾಗಿ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ನಿವ್ವಳ ಲಾಭವನ್ನು ತಿಳಿದುಕೊಂಡು ನಂತರ ನಿರ್ಧಾರವನ್ನು ಮಾಡಿ. ಅದರಿಂದ ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್ಫರ್ ನಿಮ್ಮ ಉಳಿತಾಯಕ್ಕೆ ನೆರವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ನೀವು ಆನಂದಿಸಬಹುದಾದ ಕೆಲವು ಹೋಮ್ ಲೋನ್ ಮೊತ್ತ ವರ್ಗಾವಣೆಯ ಪ್ರಯೋಜನಗಳು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಎಷ್ಟು ಪ್ರಯೋಜನಕಾರಿ ಎಂಬುದು ಈಗ ನಿಮಗೆ ತಿಳಿದಿದೆ, ಪ್ರತಿಷ್ಠಿತ NBFC ಆದ ಬಜಾಜ್ ಪಿನ್ಸರ್ವ್ನೊಂದಿಗೆ ಅದನ್ನು ಮಾಡುವ ಪ್ರಕ್ರಿಯೆಯ ಬಗ್ಗೆ ನೋಡಿ.
ನಿಮ್ಮ ಈಗಿನ ಸಾಲದಾತರಿಗೆ ಅಪ್ಲಿಕೇಶನ್ ಸಲ್ಲಿಸಿ:
ನೀವು ಬ್ಯಾಲೆನ್ಸ್ ವರ್ಗಾವಣೆ ಪಡೆಯಲು ಸಿದ್ಧರಾದಾಗ, ಅದನ್ನು ನಿಮ್ಮ ಸಾಲದಾತರಿಗೆ ಅಪ್ಲಿಕೇಶನ್ ಮೂಲಕ ತಿಳಿಸುವುದು ಮುಖ್ಯ. ಈ ಅಪ್ಲಿಕೇಶನ್ ಒಂದು ಪತ್ರ ಅಥವಾ ಫಾರಂ ಅನ್ನು ಒಳಗೊಂಡಿರುತ್ತದೆ. ಎರಡೂ ಸಂದರ್ಭಗಳಲ್ಲಿ, ಅಪ್ಲಿಕೇಶನ್ ಅನ್ನು ಜಾಗರೂಕತೆಯಿಂದ ನಿರ್ವಹಿಸಿ ಮತ್ತು ವರ್ಗಾವಣೆಗೆ ನಿಮ್ಮ ಕಾರಣಗಳ ಪಟ್ಟಿ ಕೊಡಿ. ಅದು ಒಂದುವೇಳೆ ಫಾರಂ ಆಗಿದ್ದಲ್ಲಿ, ನಿಖರವಾಗಿ ಭರ್ತಿ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
NOC ಅಥವಾ ಸಮ್ಮತಿ ಪತ್ರವನ್ನು ಸಂಗ್ರಹಿಸಿ:
ನೀವು ಮೊದಲ ಫಾರ್ಮಾಲಿಟಿಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಸಾಲದಾತರು ನೋ ಅಬ್ಜೆಕ್ಷನ್ ಪ್ರಮಾಣಪತ್ರ (NOC) ಅಥವಾ ಸಮ್ಮತಿ ಪತ್ರವನ್ನು ನಿಮಗೆ ನೀಡುತ್ತಾರೆ. ಈ ದಾಖಲೆಯು ಅತಿಮುಖ್ಯ, ಏಕೆಂದರೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸುವಾಗ ನಿಮ್ಮ ಹೊಸ ಸಾಲದಾತರು ಇದನ್ನು ಕೇಳುತ್ತಾರೆ.
ನಿಮ್ಮ ಡಾಕ್ಯುಮೆಂಟ್ಗಳನ್ನು ಹಸ್ತಾಂತರಿಸಿ:
ನೀವು NOC ಸ್ವೀಕರಿಸಿದ ನಂತರ, ಹೊಸ ಸಾಲದಾತರನ್ನು ಸಂಪರ್ಕಿಸಬಹುದು ಮತ್ತು ನಿಮ್ಮೆಲ್ಲಾ ಡಾಕ್ಯುಮೆಂಟ್ಗಳನ್ನು ಅವರಿಗೆ ಹಸ್ತಾಂತರಿಸಬಹುದು. NOC ಮತ್ತು KYC ಡಾಕ್ಯುಮೆಂಟ್ಗಳಂತಹ ಅವಶ್ಯಕ ಡಾಕ್ಯುಮೆಂಟ್ಗಳನ್ನು ಸಲ್ಲಿಸುವುದನ್ನು ಹೊರತುಪಡಿಸಿ, ನೀವು ನಿಮ್ಮ ಲೋನ್ ಬ್ಯಾಲೆನ್ಸ್ ಸ್ಟೇಟ್ಮೆಂಟ್ಗಳು, ಬಡ್ಡಿ ಸ್ಟೇಟ್ಮೆಂಟ್ಗಳು ಮತ್ತು ಆಸ್ತಿ ಪೇಪರ್ಗಳ ಒಂದು ಪ್ರತಿಯನ್ನು ಹಾಗೂ ಭರ್ತಿ ಮಾಡಿದ ಅಪ್ಲಿಕೇಶನ್ ಫಾರಂ ಅನ್ನು ಸಲ್ಲಿಸಬೇಕಾಗುತ್ತದೆ.
ಹಳೆಯ ಸಾಲದಾತರಿಂದ ದೃಢೀಕರಣವನ್ನು ಪಡೆಯಿರಿ:
ನಿಮ್ಮೆಲ್ಲಾ ಡಾಕ್ಯುಮೆಂಟ್ಗಳನ್ನು ಹೊಸ ಸಾಲದಾತರಿಗೆ ಸಲ್ಲಿಸಿದ ನಂತರ, ನಿಮ್ಮ ಲೋನ್ ಅಕೌಂಟಿನ ಕ್ಲೋಸರ್ಗೆ ಸಂಬಂಧಿಸಿದಂತೆ ನಿಮ್ಮ ಹಳೆಯ ಸಾಲದಾತರಿಂದ ಅಂತಿಮ ದೃಢೀಕರಣವನ್ನು ಪಡೆಯಲು ಕಾಯಿರಿ. ಇದು ಲೋನ್ ಒಪ್ಪಂದವು ಹಾಗೂ ಅದನ್ನು ನಿಯಂತ್ರಿಸುವ ನಿಯಮಗಳೂ ಕೊನೆಗೊಂಡಿವೆ ಎಂಬುದನ್ನು ಪ್ರಮಾಣೀಕರಿಸುತ್ತದೆ.
ಒಳಗೊಂಡ ಎಲ್ಲಾ ಶುಲ್ಕಗಳನ್ನು ಪಾವತಿಸಿ ಮತ್ತು ಹೊಸದಾಗಿ ಆರಂಭಿಸಿ:
ಈಗ ಉಳಿದಿರುವುದು ನಿಮ್ಮ ಹೊಸ ಸಾಲದಾತರೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕುವುದು ಮತ್ತು ಬಾಕಿ ಉಳಿದಿರುವ ಶುಲ್ಕಗಳನ್ನು ಪಾವತಿಸುವುದು. ಇದು ಪೂರ್ಣಗೊಂಡ ನಂತರ ನೀವು ನಿಮ್ಮ ಮುಂದಿನ ತಿಂಗಳ EMI ಅನ್ನು ಹೊಸ ಸಾಲದಾತರಿಗೆ ಪಾವತಿಸಬಹುದು. ನಿಮ್ಮ ಆಯ್ಕೆಯ ಸಾಲದಾತರೊಂದಿಗೆ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯನ್ನು ಸುಲಭವಾಗಿ ಮಾಡಲು ಈ ಹಂತಹಂತವಾದ ಮಾರ್ಗದರ್ಶಿ ನೆರವಾಗಬಹುದು.