ಬಂಡವಾಳ ಬಜೆಟ್ ಎಂದರೇನು, ಮತ್ತು ಬಿಸಿನೆಸ್‌ಗೆ ಅದು ಏಕೆ ಮುಖ್ಯವಾಗಿದೆ?

2 ನಿಮಿಷಗಳು

ಕ್ಯಾಪಿಟಲ್ ಬಜೆಟಿಂಗ್ ಎಂದರೆ ಬಿಸಿನೆಸ್ ಘಟಕಗಳು ದೀರ್ಘಾವಧಿಯ ಸ್ವತ್ತುಗಳು ಅಥವಾ ಗಮನಾರ್ಹ ಯೋಜನೆಗಳ ಮೇಲೆ ಹೂಡಿಕೆಯ ನಿರ್ಧಾರಗಳನ್ನು ಹೇಗೆ ಮಾಡುತ್ತವೆ ಎಂಬುದಾಗಿದೆ. ಎಲ್ಲಾ ಹೂಡಿಕೆ ಅವಕಾಶಗಳು ಲಾಭದಾಯಕವಾಗಿಲ್ಲ ಎಂದು ಪರಿಗಣಿಸುವ ಮೂಲಕ, ಇದು ಒಂದು ನಿರ್ದಿಷ್ಟ ಯೋಜನೆಯಲ್ಲಿ ಹೂಡಿಕೆ ಮಾಡುವುದು ಯೋಗ್ಯವಾಗಿದೆಯೇ ಎಂಬುದನ್ನು ಬಿಸಿನೆಸ್ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯಾಗಿದೆ. ಹೊರಗಿನ ಉದ್ಯಮದಲ್ಲಿ ಹೂಡಿಕೆ ಅಥವಾ ದೊಡ್ಡ ಪ್ಲಾಂಟ್ ನಿರ್ಮಾಣವು ಕ್ಯಾಪಿಟಲ್ ಬಜೆಟಿಂಗ್ ಅಗತ್ಯವಿರುವ ಯೋಜನೆಗಳಾಗಿವೆ.

ಈ ಪ್ರಕ್ರಿಯೆಯ ಭಾಗವಾಗಿ, ಕಂಪನಿಯು ನಿರ್ದಿಷ್ಟ ಯೋಜನೆಯ ಅವಧಿಯ ನಗದು ಹೊರಹರಿವು ಮತ್ತು ಒಳಹರಿವುಗಳನ್ನು ಮೌಲ್ಯಮಾಪನ ಮಾಡಬಹುದು. ಇದನ್ನು ಅನುಸರಿಸಿ, ಯೋಜನೆಯು ಜನರೇಟ್ ಮಾಡಬಹುದಾದ ಆದಾಯವು ನಿಗದಿತ ಗುರಿ ಮಾನದಂಡವನ್ನು ಪೂರೈಸುತ್ತದೆಯೇ ಎಂದು ಮ್ಯಾನೇಜ್ಮೆಂಟ್ ನಿರ್ಧರಿಸುತ್ತದೆ.

ಕ್ಯಾಪಿಟಲ್ ಬಜೆಟಿಂಗ್ ಪ್ರಾಮುಖ್ಯತೆ

ಕ್ಯಾಪಿಟಲ್ ಬಜೆಟಿಂಗ್ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದರ ಹೊರತಾಗಿ, ಬಿಸಿನೆಸ್ ಸಂಸ್ಥೆಯಲ್ಲಿ ಈ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ಅದರ ಪ್ರಾಮುಖ್ಯತೆಯನ್ನು ತೋರಿಸುವ ಕೆಲವು ಅಂಶಗಳು ಇಲ್ಲಿವೆ:

  • ಬಿಸಿನೆಸ್ ಲಾಭವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
    ಸಾಂಸ್ಥಿಕ ಬೆಳವಣಿಗೆಯನ್ನು ಸಾಧಿಸಲು ದೀರ್ಘಾವಧಿಯ ದೃಷ್ಟಿಯನ್ನು ಹೊಂದುವುದು ತುಂಬಾ ನಿರ್ಣಾಯಕವಾಗಿದೆ. ದೀರ್ಘಾವಧಿಯ ಗುರಿಗಳನ್ನು ಮಾಡುವುದು ಒಂದು ಸಂಸ್ಥೆಗೆ ನಿರ್ಣಾಯಕ ಏರಿಯಾವಾಗಿದೆ ಮತ್ತು ಯಾವುದೇ ತಪ್ಪಾದ ನಿರ್ಧಾರವು ಬಿಸಿನೆಸ್‌ನ ಲಾಭದ ಮೇಲೆ ತೀವ್ರ ಪರಿಣಾಮ ಬೀರಬಹುದು. ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆಯು ಭವಿಷ್ಯದ ವೆಚ್ಚಗಳು ಮತ್ತು ನಿರೀಕ್ಷಿತ ನಗದು ಹರಿವುಗಳ ಕಲ್ಪನೆಯನ್ನು ಒದಗಿಸುವಾಗ ದೀರ್ಘಾವಧಿಯ ಗುರಿಗಳನ್ನು ಗಳಿಸಲು ಬಿಸಿನೆಸ್‌ಗೆ ಸಹಾಯ ಮಾಡುತ್ತದೆ.
  • ಭವಿಷ್ಯದ ನಗದು ಹರಿವುಗಳನ್ನು ಮೌಲ್ಯಮಾಪನ ಮಾಡುತ್ತದೆ
    ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆಯು ಭವಿಷ್ಯದ ನಗದು ಒಳಹರಿವು ಮತ್ತು ಹೊರಹರಿವುಗಳನ್ನು ಮೌಲ್ಯಮಾಪನ ಮಾಡಲು ಕಂಪನಿಗೆ ಸಹಾಯ ಮಾಡುತ್ತದೆ. ರಿಟರ್ನ್ ದರ ಮತ್ತು ಇತರ ವಿವಿಧ ತಂತ್ರಗಳನ್ನು ಪರಿಗಣಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಹೀಗಾಗಿ, ಸಂಸ್ಥೆಯು ತನ್ನ ನಿವ್ವಳ ಲಾಭ ಮತ್ತು ಬಂಡವಾಳ ಬಜೆಟ್ ಮೂಲಕ ಪ್ರಸ್ತುತ ಹೂಡಿಕೆಯ ಒಟ್ಟು ಭವಿಷ್ಯದ ಮೌಲ್ಯದ ಬಗ್ಗೆ ಒಂದು ಕಲ್ಪನೆಯನ್ನು ಪಡೆಯುತ್ತದೆ.
  • ವೆಚ್ಚವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ
    ಬೆಳವಣಿಗೆಯನ್ನು ಸಾಧಿಸಲು ಒಂದು ಸಂಸ್ಥೆಗೆ ಎಚ್ಚರಿಕೆಯುಳ್ಳ ವೆಚ್ಚದ ಮ್ಯಾನೇಜ್ಮೆಂಟ್ ತುಂಬಾ ನಿರ್ಣಾಯಕವಾಗಿದೆ. ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆಯು ಬಿಸಿನೆಸ್‌ನ ಭವಿಷ್ಯದ ನಗದು ಹರಿವಿನ ಕಲ್ಪನೆಯನ್ನು ಒದಗಿಸುತ್ತದೆ, ಇದು ಕಂಪನಿಗೆ ಒಟ್ಟು ವೆಚ್ಚ ಮತ್ತು ಭವಿಷ್ಯದ ವೆಚ್ಚಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ಣಯಿಸಲು ಸಹಾಯ ಮಾಡುತ್ತದೆ.
  • ಸಂಪತ್ತನ್ನು ಹೆಚ್ಚಿಸುತ್ತದೆ
    ಕಂಪನಿಯಲ್ಲಿ ಸಂಭಾವ್ಯ ಷೇರುದಾರರ ಹೂಡಿಕೆಯ ಆಲೋಚನೆಗಳು ಅದರ ದೀರ್ಘಾವಧಿಯ ಹೂಡಿಕೆಯ ನಿರ್ಧಾರಗಳನ್ನು ಅವಲಂಬಿಸಿರುತ್ತವೆ. ಒಂದು ವೇಳೆ ಕಂಪನಿಯು ಪರಿಣಾಮಕಾರಿ ದೀರ್ಘಾವಧಿಯ ಹೂಡಿಕೆ ನಿರ್ಧಾರಗಳನ್ನು ಅನುಷ್ಠಾನಗೊಳಿಸಿದರೆ, ಇದು ಷೇರುದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ, ಕಂಪನಿಯಲ್ಲಿ ಹೆಚ್ಚು ಹೂಡಿಕೆ ಮಾಡಲು ಅವರನ್ನು ಆಕರ್ಷಿಸುತ್ತದೆ. ಇದು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆ

ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆಯನ್ನು ವಿವರವಾಗಿ ತೋರಿಸುವ ಕೆಲವು ಅಂಶಗಳನ್ನು ಕೆಳಗೆ ನಮೂದಿಸಲಾಗಿದೆ:

  • ಪ್ರಾಜೆಕ್ಟ್‌ಗಳನ್ನು ಜನರೇಟ್ ಮಾಡಲಾಗುತ್ತಿದೆ
    ಹೂಡಿಕೆ ಅವಕಾಶಗಳನ್ನು ಗುರುತಿಸುವುದು ಮತ್ತು ಸೃಷ್ಟಿಸುವುದು ಕ್ಯಾಪಿಟಲ್ ಬಜೆಟಿಂಗ್‌ಗೆ ಮೊದಲ ಮತ್ತು ಅಗ್ರಗಣ್ಯ ಹಂತವಾಗಿದೆ. ಹೊಸ ಯಂತ್ರೋಪಕರಣಗಳು ಅಥವಾ ಹೊಸ ಪ್ರಾಡಕ್ಟ್ ಅನ್ನು ಸೇರಿಸುವಂತಹ ವಿವಿಧ ಕಾರಣಗಳಿಗಾಗಿ ಬಿಸಿನೆಸ್ ಹೂಡಿಕೆ ಮಾಡಬಹುದು. ಇದಲ್ಲದೆ, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಅಥವಾ ಇಳಿಕೆಯನ್ನು ಸಹ ಸೂಚಿಸಬಹುದು.
  • ಪ್ರಾಜೆಕ್ಟ್ ಮೌಲ್ಯಮಾಪನ
    ಈ ಹಂತದಲ್ಲಿ ಪ್ರಸ್ತಾವನೆಯನ್ನು ನಿರ್ಣಯಿಸಲು ಕಂಪನಿಯು ಅಗತ್ಯವಿರುವ ಮಾನದಂಡವನ್ನು ಆಯ್ಕೆ ಮಾಡಬೇಕು. ಹೆಚ್ಚುವರಿಯಾಗಿ, ಬಿಸಿನೆಸ್ ಮ್ಯಾನೇಜರ್ ನಿರ್ಧರಿಸುವ ಮೊದಲು ಯೋಜನೆಯ ಎಲ್ಲಾ ಸಾಧಕಗಳು ಮತ್ತು ಬಾಧಕಗಳನ್ನು ಕೂಡ ತೂಕ ಮಾಡಬೇಕು.
  • ಪ್ರಾಜೆಕ್ಟ್ ಆಯ್ಕೆ
    ವಿವಿಧ ಬಿಸಿನೆಸ್‌ಗಳು ವಿವಿಧ ಅವಶ್ಯಕತೆಗಳನ್ನು ಹೊಂದಿರುವುದರಿಂದ ಯೋಜನೆಯನ್ನು ಆಯ್ಕೆ ಮಾಡಲು ಯಾವುದೇ ವ್ಯಾಖ್ಯಾನಿತ ವಿಧಾನವಿಲ್ಲ. ಹೀಗಾಗಿ, ನಿರ್ದಿಷ್ಟ ಸಂಸ್ಥೆಯ ಮಾನದಂಡಗಳ ಪ್ರಕಾರ ಯೋಜನೆಯ ಆಯ್ಕೆಯನ್ನು ಮಾಡಲಾಗುತ್ತದೆ. ಹೂಡಿಕೆಯ ಪ್ರಾಥಮಿಕ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಕೈಗೊಳ್ಳಲಾಗುತ್ತದೆ.
  • ಪ್ರಾಜೆಕ್ಟ್‌ನ ಅನುಷ್ಠಾನ
    ಪ್ರಾಜೆಕ್ಟ್ ಅನ್ನು ಆಯ್ಕೆ ಮಾಡಿದ ನಂತರ, ಅನುಷ್ಠಾನವು ಪರಿಣಾಮಕಾರಿ ಬಂಡವಾಳ ಬಜೆಟಿಂಗ್ ವಿಧಾನಕ್ಕೆ ಮುಂದಿನ ನಿರ್ಣಾಯಕ ಹಂತವಾಗಿದೆ. ಅದರ ಮೇಲೆ, ಕಂಪನಿ ಮ್ಯಾನೇಜರ್ ಯೋಜನೆಯನ್ನು ಅನುಷ್ಠಾನಗೊಳಿಸುವ ಒಟ್ಟಾರೆ ಪರಿಣಾಮವನ್ನು ಮೇಲ್ವಿಚಾರಣೆ ಮಾಡುತ್ತಾರೆ.
  • ಕಾರ್ಯಕ್ಷಮತೆ ರಿವ್ಯೂ
    ಆಯ್ದ ಯೋಜನೆಯ ಒಟ್ಟಾರೆ ಫಲಿತಾಂಶವನ್ನು ವಿಶ್ಲೇಷಿಸಲು ಮತ್ತು ಮೌಲ್ಯಮಾಪನ ಮಾಡಲು ಕಂಪನಿಯು ಈ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ. ಇದು ಸಾಧ್ಯವಾದ ದೋಷಗಳನ್ನು ಗುರುತಿಸಲು ಮತ್ತು ಭವಿಷ್ಯದ ಪ್ರಸ್ತಾಪಗಳಿಗಾಗಿ ಅವುಗಳನ್ನು ನಿವಾರಿಸಲು ಮ್ಯಾನೇಜ್ಮೆಂಟ್‌ಗೆ ಸಹಾಯ ಮಾಡುತ್ತದೆ.

ಕ್ಯಾಪಿಟಲ್ ಬಜೆಟ್ ತಂತ್ರಗಳ ಒಂದು ನೋಟ

ಕ್ಯಾಪಿಟಲ್ ಬಜೆಟಿಂಗ್ ಸಂಸ್ಥೆಯು ವಿವಿಧ ತಂತ್ರಗಳ ಮೂಲಕ ನಗದು ಒಳಹರಿವು ಮತ್ತು ಹೊರಹರಿವುಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಎಲ್ಲಾ ಮೆಟ್ರಿಕ್‌ಗಳ ಮೇಲೆ ಸಕಾರಾತ್ಮಕ ಉತ್ತರಗಳನ್ನು ನೀಡುವ ಅತ್ಯಂತ ಆದ್ಯತೆಯ ಬಂಡವಾಳ ಬಜೆಟಿಂಗ್ ವಿಧಾನವೆಂದು ತೋರಬಹುದು. ಆದಾಗ್ಯೂ, ಹೆಚ್ಚಾಗಿ, ಈ ವಿಧಾನಗಳು ವಿರೋಧಾಭಾಸದ ಫಲಿತಾಂಶಗಳನ್ನು ವಿಸ್ತರಿಸುತ್ತವೆ.

ಕ್ಯಾಪಿಟಲ್ ಬಜೆಟಿಂಗ್‌ನ ಕೆಲವು ಸಾಮಾನ್ಯ ವಿಧಾನಗಳು ಇಲ್ಲಿವೆ:

  1. ಪೇಬ್ಯಾಕ್ ಅವಧಿಯ ವಿಧಾನ
    ಈ ತಂತ್ರದ ಹಿಂದಿನ ಕಾರ್ಯಸೂಚಿಯು ತ್ವರಿತ ಪೇಬ್ಯಾಕ್ ಉತ್ಪಾದಿಸುವ ಯೋಜನೆಯನ್ನು ಆಯ್ಕೆ ಮಾಡುವುದು.
    ಮರುಪಾವತಿ ಅವಧಿ = ಆರಂಭಿಕ ನಗದು ಹೂಡಿಕೆ/ ವಾರ್ಷಿಕ ನಗದು ಹರಿವು
    ಅನುಕೂಲಕರ ವಿಧಾನವಾಗಿದ್ದರೂ, ಪೇಬ್ಯಾಕ್ ಅವಧಿಯ ಮೂಲಕ ಬಂಡವಾಳ ಬಜೆಟ್ ಅನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ವಿಧಾನವು ಹಣದ ಸಮಯದ ಮೌಲ್ಯವನ್ನು ಪರಿಗಣಿಸುವುದಿಲ್ಲ.
  2. ನೆಟ್ ಪ್ರೆಸೆಂಟ್ ವ್ಯಾಲ್ಯೂ (ಎನ್‌ಪಿವಿ)
    ಎನ್‌ಪಿವಿ ಎಂದರೆ ನಗದು ಒಳಹರಿವು ಮತ್ತು ಹೊರಹರಿವುಗಳ ಪ್ರಸ್ತುತ ಮೌಲ್ಯದ ನಡುವಿನ ವ್ಯತ್ಯಾಸವಾಗಿದೆ. ಯೋಜನೆಯ ಲಾಭವನ್ನು ನಿರ್ಧರಿಸಲು ಹೂಡಿಕೆ ಯೋಜನೆಯಲ್ಲಿ ಈ ವಿಧಾನವನ್ನು ಬಳಸಲಾಗುತ್ತದೆ.
    ನಿವ್ವಳ ಪ್ರಸ್ತುತ ಮೌಲ್ಯ = Rt/ (1+i)t .
    ಇಲ್ಲಿ, t = ನಗದು ಹರಿವಿನ ಸಮಯ, i = ರಿಯಾಯಿತಿ ದರ, ಮತ್ತು Rt = ನಿವ್ವಳ ನಗದು ಹರಿವು.
  3. ಆಂತರಿಕ ಲಾಭದ ದರ (ಐಆರ್‌ಆರ್)
    ಎನ್‌ಪಿವಿ ಶೂನ್ಯವಾದಾಗ ಐಆರ್‌ಆರ್ ಕೆಲಸಕ್ಕೆ ಬರುತ್ತದೆ. ಅಂತಹ ಪರಿಸ್ಥಿತಿಯು ನಗದು ಒಳಹರಿವಿನ ದರವು ನಗದು ಹೊರಹರಿವಿಗೆ ಸಮನಾಗಿರುತ್ತದೆ ಎಂದು ಸೂಚಿಸುತ್ತದೆ.
    ಈ ವಿಧಾನದ ಪ್ರಕಾರ, ಐಆರ್‌ಆರ್ ಬಂಡವಾಳದ ಸರಾಸರಿ ವೆಚ್ಚವನ್ನು ಮೀರಿದರೆ ಕಂಪನಿಯು ಒಂದು ನಿರ್ದಿಷ್ಟ ಯೋಜನೆಯನ್ನು ಸ್ವೀಕರಿಸುತ್ತದೆ. ಇಲ್ಲದಿದ್ದರೆ, ಇದು ಯೋಜನೆಯನ್ನು ತಿರಸ್ಕರಿಸುತ್ತದೆ. ಒಂದು ವೇಳೆ ಕಂಪನಿಯು ಅನೇಕ ಯೋಜನೆಗಳನ್ನು ಪಡೆದರೆ, ಅತ್ಯಧಿಕ ಐಆರ್‌ಆರ್ ನೀಡುವ ಯೋಜನೆಯನ್ನು ಇದು ಆಯ್ಕೆ ಮಾಡುತ್ತದೆ.
  4. ಲಾಭದ ಸೂಚ್ಯಂಕ
    1.0 ಕ್ಕಿಂತ ಕಡಿಮೆ ಲಾಭದಾಯಕತೆಯ ಸೂಚ್ಯಂಕವು ಆರಂಭಿಕ ಹೂಡಿಕೆಗಿಂತ ಕಡಿಮೆ ನಗದು ಹರಿವನ್ನು ಸೂಚಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, 1.0 ಕ್ಕಿಂತ ಹೆಚ್ಚಿನ ಸೂಚ್ಯಂಕದ ಮೌಲ್ಯವು ಉತ್ತಮ ನಗದು ಒಳಹರಿವುಗಳನ್ನು ತೋರಿಸುತ್ತದೆ. ಹೀಗಾಗಿ, ಕಂಪನಿಯು ಆ ನಿರ್ದಿಷ್ಟ ಯೋಜನೆಯನ್ನು ಅಂಗೀಕರಿಸುವ ಸಾಧ್ಯತೆ ಇದೆ.

ಲಾಭದಾಯಕತೆ ಸೂಚ್ಯಂಕ = ನಗದು ಹರಿವುಗಳ ಪ್ರಸ್ತುತ ಮೌಲ್ಯ/ ಆರಂಭಿಕ ಹೂಡಿಕೆ

ಕ್ಯಾಪಿಟಲ್ ಬಜೆಟಿಂಗ್ ಪ್ರಕ್ರಿಯೆಯು ಸಂಸ್ಥೆಯು ಭವಿಷ್ಯಕ್ಕಾಗಿ ಕಾರ್ಯತಂತ್ರದ ಹೂಡಿಕೆ ಮತ್ತು ಹಣಕಾಸಿನ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ. ಪರಿಣಾಮಕಾರಿಯಲ್ಲದ ತಂತ್ರಗಳು ಹಠಾತ್ ವೆಚ್ಚದ ಹೆಚ್ಚಳ, ಯೋಜನೆಯ ಅಭಿವೃದ್ಧಿಯಲ್ಲಿನ ವಿಳಂಬ ಮತ್ತು ಕ್ಯಾಶ್ ಮ್ಯಾನೇಜ್ಮೆಂಟ್‌ನಲ್ಲಿ ಅಡ್ಡಿ ಉಂಟಾಗಬಹುದು.

ಹೀಗಾಗಿ, ಪ್ರತಿ ಕಂಪನಿಯು ದೀರ್ಘಾವಧಿಯ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸುವ ಮೊದಲು ಸಮರ್ಥ ಬಂಡವಾಳ ಬಜೆಟ್ ಪ್ರಕ್ರಿಯೆಯನ್ನು ಒಳಗೊಂಡಿರಬೇಕು. ಒಂದು ವೇಳೆ ಅದು ವರ್ಕಿಂಗ್ ಕ್ಯಾಪಿಟಲ್ ಮೇಲೆ ಪರಿಣಾಮ ಬೀರಿದರೆ, ಹಣಕಾಸಿನ ಅಂತರವನ್ನು ಕವರ್ ಮಾಡಲು ಬಿಸಿನೆಸ್‌ಗಳು ಸುರಕ್ಷಿತವಲ್ಲದ ಬಿಸಿನೆಸ್ ಲೋನ್‌ಗಳನ್ನು ಅನುಸರಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ