ಪರ್ಸನಲ್ ಲೋನ್ ಅರ್ಹರಾಗಲು ಕನಿಷ್ಠ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು?

2 ನಿಮಿಷದ ಓದು

ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಸಾಲ ಪಡೆಯುವ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ನೀವು ಅನ್‌‌ಸೆಕ್ಯೂರ್ಡ್ ಲೋನ್‌ ಪಡೆಯಲು ಬಯಸಿದಾಗಲಂತೂ ಇದು ಅತ್ಯಂತ ಪ್ರಮುಖ ಅರ್ಹತಾ ಮಾನದಂಡವಾಗಿದೆ. ಏಕೆಂದರೆ ಮೇಲಾಧಾರ ಇಲ್ಲದಿರುವುದರಿಂದ, ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಸಾಲದಾತರಿಗೆ ನೀವು ಸಮಯಕ್ಕೆ ಸರಿಯಾಗಿ ಮರುಪಾವತಿಸುವಿರಿ ಎಂಬ ಭರವಸೆ ನೀಡುತ್ತದೆ.

ಇದಲ್ಲದೆ, ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವುದರಿಂದ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವಾಗ ಆಕರ್ಷಕ ಬಡ್ಡಿ ದರಗಳು ಮತ್ತು ಆಫರ್‌ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.

ಪರ್ಸನಲ್ ಲೋನಿಗೆ ಕನಿಷ್ಠ ಸಿಬಿಲ್ ಸ್ಕೋರ್

ಸಾಮಾನ್ಯವಾಗಿ, ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿದ್ದಷ್ಟೂ ಒಳ್ಳೆಯದು. ಆದರೆ, ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್ ತ್ವರಿತ ಅನುಮೋದನೆಗೆ ಕನಿಷ್ಠ ಸಿಬಿಲ್ ಸ್ಕೋರ್ 750 ಆಗಿದೆ. ಇದು ನಿಮಗೆ ಜವಾಬ್ದಾರಿಯಿಂದ ಕ್ರೆಡಿಟ್ ನಿರ್ವಹಣೆ ಮಾಡುವ ಅನುಭವವಿದೆ ಹಾಗೂ ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡುತ್ತೀರಿ ಎಂಬುದನ್ನು ಸೂಚಿಸುತ್ತದೆ.

ಇನ್ನಷ್ಟು ಓದಿರಿ: 550-600 ಸಿಬಿಲ್ ಸ್ಕೋರ್‌ಗಾಗಿ ಪರ್ಸನಲ್ ಲೋನ್

685 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ನೊಂದಿಗೆ, ನೀವು ಬೇಸಿಕ್ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳ ಮೂಲಕ ನಮ್ಮಿಂದ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದು. ಅರ್ಹತಾ ಮಾನದಂಡಗಳು ವಯಸ್ಸು, ರಾಷ್ಟ್ರೀಯತೆ ಮತ್ತು ಕನಿಷ್ಠ ಆದಾಯಕ್ಕೆ ಸಂಬಂಧಿಸಿರುತ್ತವೆ. ಇದಕ್ಕಾಗಿ ನೀವು ಕೆವೈಸಿ ಡಾಕ್ಯುಮೆಂಟ್‌ಗಳು, ಉದ್ಯೋಗಿ ಐಡಿ, ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮತ್ತು ಸಂಬಳದ ಸ್ಲಿಪ್‌ಗಳಂತಹ ಕೆಲವೇ ಕೆಲವು ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಬೇಕು.

ಒಳ್ಳೆಯ ಸಿಬಿಲ್ ಸ್ಕೋರ್ ಹೊಂದಿರುವುದರಿಂದ ದೊಡ್ಡ ಮೊತ್ತದ ಲೋನ್ ಮಂಜೂರಾಗುವುದಷ್ಟೇ ಅಲ್ಲದೆ ಬಜಾಜ್ ಫಿನ್‌ಸರ್ವ್‌ನ ಸುಲಭ ಆನ್‌ಲೈನ್ ಅಪ್ಲಿಕೇಶನ್, ಸ್ಪರ್ಧಾತ್ಮಕ ಬಡ್ಡಿದರ, ಅತಿ ಕಡಿಮೆ ಶುಲ್ಕಗಳು ಮತ್ತು ವಿಶಿಷ್ಟ ಫ್ಲೆಕ್ಸಿ ಸೌಲಭ್ಯದ ಪ್ರಯೋಜನಗಳೂ ಸಿಗುತ್ತವೆ. ಪೂರ್ವ-ಅನುಮೋದಿತ ಆಫರ್ ಬಳಸಿ ಫಂಡ್‌ಗಳಿಗೆ ಇನ್ನೂ ಬೇಗನೆ ಆಕ್ಸೆಸ್ ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ