ಮುದ್ರಾ ಲೋನ್‌ ಪಡೆಯಲು ಅಗತ್ಯವಾದ ಡಾಕ್ಯುಮೆಂಟ್‌ಗಳು ಯಾವುದು?

2 ನಿಮಿಷದ ಓದು

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ ) ಕಾರ್ಪೊರೇಟ್ ಅಲ್ಲದ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ರೂ. 10 ಲಕ್ಷದವರೆಗಿನ ಲೋನ್‌ಗಳನ್ನು ಒದಗಿಸುತ್ತದೆ. ಫಂಡಿಂಗ್ ಪಡೆಯಲು ಸಾಲಗಾರರು ನಿರ್ದಿಷ್ಟ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗುತ್ತದೆ. ನೀವು ಉಲ್ಲೇಖಿಸಬಹುದಾದ ಸಮಗ್ರ ಪಟ್ಟಿ ಇಲ್ಲಿದೆ.

ಗುರುತಿನ ಪುರಾವೆ

ಸ್ವಯಂ ದೃಢೀಕರಿಸಿದ ಫೋಟೋಕಾಪಿಗಳು:

 • ಆಧಾರ್ ಕಾರ್ಡ್
 • ಪ್ಯಾನ್
 • ಮತದಾರರ ಐಡಿ
 • ಡ್ರೈವಿಂಗ್ ಲೈಸೆನ್ಸ್
 • ಪಾಸ್‌ಪೋರ್ಟ್
 • ಸರ್ಕಾರಿ ಉದ್ಯೋಗದಾತ ನೀಡಿದ ಮಾನ್ಯವಾದ ಫೋಟೋ ಐಡಿ ಕಾರ್ಡ್

ವಿಳಾಸದ ಪುರಾವೆ

 • ಯುಟಿಲಿಟಿ ಬಿಲ್ (ವಿದ್ಯುತ್, ದೂರವಾಣಿ, ನೀರು, ಅನಿಲ, ಪೋಸ್ಟ್-ಪಾವತಿಸಿದ ಮೊಬೈಲ್ ಫೋನ್, ಆಸ್ತಿ ತೆರಿಗೆ)
 • ಆಧಾರ್ ಕಾರ್ಡ್
 • ಪಾಸ್‌ಪೋರ್ಟ್
 • ಮತದಾರರ ಐಡಿ
 • ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಬ್ಯಾಂಕ್ ಪಾಸ್‌ಬುಕ್ ಅಥವಾ ಇತ್ತೀಚಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
 • ಸ್ಥಳೀಯ ಸರ್ಕಾರಿ ಸಂಸ್ಥೆ (ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್, ಇತ್ಯಾದಿ) ನೀಡಿದ ನಿವಾಸ ಪ್ರಮಾಣಪತ್ರ ಅಥವಾ ಪ್ರಮಾಣಪತ್ರ

ವ್ಯಾಪಾರ ಧೃಡೀಕರಣ

ಪ್ರಮಾಣಪತ್ರ, ಪರವಾನಗಿ, ನೋಂದಣಿ ಅಥವಾ ಬಿಸಿನೆಸ್ಸಿನ ಅಸ್ತಿತ್ವ, ವಿಳಾಸ, ಮತ್ತು ಮಾಲೀಕತ್ವವನ್ನು ದೃಢೀಕರಿಸುವ ಯಾವುದೇ ಇತರ ಡಾಕ್ಯುಮೆಂಟ್‌ಗಳು.

ಇತರ ಮುದ್ರಾ ಲೋನ್ ಡಾಕ್ಯುಮೆಂಟ್‌ಗಳು

 • ವ್ಯಾಪಾರ ಮಾಲೀಕರು, ಪಾಲುದಾರರು, ಇತ್ಯಾದಿಗಳ ಫೋಟೋಗಳು.
 • SC, ST, OBC, ಇತ್ಯಾದಿಗಳ ಪುರಾವೆ.
 • ಕೊನೆಯ 2 ವರ್ಷಗಳ ಬ್ಯಾಲೆನ್ಸ್ ಶೀಟ್
 • ಆದಾಯ/ ಮಾರಾಟ ತೆರಿಗೆ ರಿಟರ್ನ್ಸ್
 • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
 • ಪಾಲುದಾರಿಕೆ ಪತ್ರ ಅಥವಾ ಮೆಮೊರಾಂಡಮ್ ಮತ್ತು ಅಸೋಸಿಯೇಷನ್ ಲೇಖನಗಳು
 • ಪ್ರಸ್ತುತ ಹಣಕಾಸು ವರ್ಷ ಮತ್ತು ಲೋನಿನ ಅಪ್ಲೈ ಮಾಡುವ ಸಮಯದವರೆಗೆ ಆದ ಮಾರಾಟಗಳು
 • 1 ವರ್ಷಕ್ಕೆ ಅಥವಾ ಲೋನ್ ಅವಧಿಗೆ ಅಂದಾಜು ಬ್ಯಾಲೆನ್ಸ್ ಶೀಟ್
 • ಬಿಸಿನೆಸ್ಸಿನ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆ ಪ್ರಮಾಣಿಕರಿಸುವ ಬಿಸಿನೆಸ್ ವರದಿ

For businesses with higher capital requirements, Bajaj Finserv provides SMEs and MSMEs with collateral-free business loans up to Rs. 45 lacs. These loans are easy to qualify for and require minimal documentation.

ಹಕ್ಕುತ್ಯಾಗ:
ನಾವು ಈ ಪ್ರಾಡಕ್ಟನ್ನು ನಿಲ್ಲಿಸಿದ್ದೇವೆ (ಮುದ್ರಾ ಲೋನ್). ನಾವು ಒದಗಿಸುವ ಪ್ರಸ್ತುತ ಹಣಕಾಸು ಸೇವೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು +91-8698010101 ನಲ್ಲಿ ನಮ್ಮನ್ನು ಸಂಪರ್ಕಿಸಿ.

ಇದನ್ನೂ ಓದಿ: ಮುದ್ರಾ ಲೋನ್ ಅರ್ಹತಾ ಮಾನದಂಡ

ಇನ್ನಷ್ಟು ಓದಿರಿ ಕಡಿಮೆ ಓದಿ