ಫೀಚರ್‌ಗಳು ಮತ್ತು ಪ್ರಯೋಜನಗಳು
-
ಅಸುರಕ್ಷಿತ ಫೈನಾನ್ಸ್
ಅಡಮಾನವನ್ನು ಒತ್ತೆ ಇಡುವ ಅಗತ್ಯವಿಲ್ಲದೆ ನಿಮ್ಮ ಅಲ್ಪಾವಧಿಯ ಅಗತ್ಯಗಳಿಗೆ ಸಾಕಷ್ಟು ಹಣವನ್ನು ಪಡೆಯಿರಿ.
-
48 ಗಂಟೆಗಳಲ್ಲಿ ಹಣಕಾಸು*
ಆನ್ಲೈನಿನಲ್ಲಿ ಅಪ್ಲೈ ಮಾಡುವ ಮೂಲಕ ಮತ್ತು ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ 48 ಗಂಟೆಗಳ ಒಳಗೆ ಲಿಕ್ವಿಡಿಟಿ ಪಡೆಯಿರಿ.
-
ಫ್ಲೆಕ್ಸಿ ಲೋನ್ ಸೌಲಭ್ಯ
ಅಗತ್ಯ ಬಂದಾಗ ನಿಮ್ಮ ಲೋನ್ ಮಿತಿಯಿಂದ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಉಚಿತವಾಗಿ ಪೂರ್ವ ಪಾವತಿ ಮಾಡಿ.
-
45%* ವರೆಗೆ ಕಡಿಮೆ EMI ಗಳು
ನಿಮ್ಮ ಮಾಸಿಕ ಸಾಲದ ಹೊರೆಯನ್ನು ಕಡಿಮೆ ಮಾಡಲು ಅವಧಿಯ ಆರಂಭಿಕ ಭಾಗಕ್ಕೆ ಬಡ್ಡಿ-ಮಾತ್ರ ಇಎಂಐ ಗಳನ್ನು ಪಾವತಿಸಿ.
-
ಡಿಜಿಟಲ್ ಲೋನ್ ನಿರ್ವಹಣೆ
ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ನಿಮ್ಮ ಬಿಸಿನೆಸ್ ಲೋನ್ ಅಕೌಂಟನ್ನು ಅಕ್ಸೆಸ್ ಮಾಡಿ
ಸಣ್ಣ- ಅವಧಿಯ ಬಿಸಿನೆಸ್ ಲೋನ್‌ಗಳು
ಬಿಸಿನೆಸ್ ಮಾಲೀಕರಾಗಿ, ನಿಮ್ಮ ವರ್ಕಿಂಗ್ ಕ್ಯಾಪಿಟಲನ್ನು ಬಲಪಡಿಸಲು, ನಿಮ್ಮ ಕಾರ್ಯಾಚರಣೆಯ ವೆಚ್ಚಗಳನ್ನು ಕವರ್ ಮಾಡಲು, ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಮತ್ತು ಇನ್ನೂ ಹೆಚ್ಚಿನದನ್ನು ಪಡೆಯಲು ನಿಮಗೆ ಅಲ್ಪಾವಧಿಯ ಫಂಡ್‌ಗಳ ಅಕ್ಸೆಸ್ ಬೇಕಾಗಬಹುದು. ಮೂಲ ಡಾಕ್ಯುಮೆಂಟೇಶನ್‌ನೊಂದಿಗೆ ಬಜಾಜ್ ಫಿನ್‌ಸರ್ವ್‌ನಿಂದ ಅಲ್ಪಾವಧಿಯ ಬಿಸಿನೆಸ್ ಲೋನ್ ಪಡೆಯಿರಿ ಮತ್ತು ತ್ವರಿತ 48 ಗಂಟೆಗಳ* ಫಂಡ್‌ಗಳ ವಿತರಣೆ ಪ್ರಯೋಜನ ಪಡೆಯಿರಿ. ಆಕರ್ಷಕ ಬಡ್ಡಿ ದರದಲ್ಲಿ ನೀಡಲಾಗುವ ತ್ವರಿತ ಬಿಸಿನೆಸ್ ಲೋನ್ ಫೈನಾನ್ಸಿಂಗ್‌ನೊಂದಿಗೆ ನಿಮ್ಮ ಲಾಭವನ್ನು ಗರಿಷ್ಠಗೊಳಿಸಿ.
ಆಸ್ತಿಯನ್ನು ಭದ್ರತೆಯಾಗಿ ಅಡವಿಡದೆ ರೂ. 50 ಲಕ್ಷದವರೆಗೆ* ಪಡೆಯಿರಿ (*ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಫೀಸ್ ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡು). ಎಲ್ಲಾ ವ್ಯಾಪಾರದ ಅಗತ್ಯಗಳಿಗೆ ಹಣವನ್ನು ತೊಡಗಿಸಿ ಮತ್ತು ಆರಾಮದಾಯಕ ಅವಧಿಯಲ್ಲಿ ನಿಮ್ಮ ಲೋನನ್ನು ಮರುಪಾವತಿಸಿ. ಲೋನ್ ಮೊತ್ತ ಮತ್ತು ಅವಧಿಯು ನಿಮ್ಮ ಇಎಂಐ ಅನ್ನು ಬಜೆಟ್‌ನೊಳಗೆ ಇರಿಸಲು ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ನೋಡಲು, ಇಎಂಐ ಗಳನ್ನು ಪಾವತಿಸಲು, ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಮಾಡಲು, ಲೋನ್ ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಲು ಮತ್ತು ಇನ್ನೂ ಮುಂತಾದವುಗಳನ್ನು ನೋಡಲು ನಮ್ಮ ಗ್ರಾಹಕ ಪೋರ್ಟಲ್, ಮೈ ಅಕೌಂಟ್ ಬಳಸಿ.
ಬಿಸಿನೆಸ್‌ನ ಹಣಕಾಸಿನ ಅಗತ್ಯಗಳು ಬೇಡಿಕೆಯಲ್ಲಿನ ಸರ್ಜ್‌ಗಳ ಆಧಾರದ ಮೇಲೆ ಏರಿಕೆಯಾಗಬಹುದು, ಸ್ವೀಕರಿಸಬಹುದಾದ ಅಕೌಂಟ್‌ಗಳಲ್ಲಿ ಹೆಚ್ಚಳ, ಸಪ್ಲೈ ಚೈನ್ ಸಮಸ್ಯೆಗಳು ಮತ್ತು ಮುಂತಾದವು. ನಮ್ಮ ಫ್ಲೆಕ್ಸಿ ಬಿಸಿನೆಸ್ ಲೋನ್ ಸೌಲಭ್ಯದೊಂದಿಗೆ ಅಲ್ಪಾವಧಿಯ ಫಂಡಿಂಗನ್ನು ಹೆಚ್ಚು ಅನುಕೂಲಕರವಾಗಿ ಹೊಂದಿಸಿ. ಅಗತ್ಯವಿದ್ದಾಗ ನೀವು ವಿತ್‌ಡ್ರಾ ಮಾಡಬಹುದಾದ ಮುಂಚಿತ-ಅನುಮೋದಿತ ಲೋನ್ ಮಿತಿಯನ್ನು ಪಡೆಯಿರಿ ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಪೂರ್ವಪಾವತಿ ಮಾಡಬಹುದು, ಎಲ್ಲವನ್ನೂ ಉಚಿತವಾಗಿ ಪಡೆಯಿರಿ. ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಿ ಮತ್ತು ಕಾಲಾವಧಿಯ ಆರಂಭಿಕ ಭಾಗಕ್ಕೆ ಬಡ್ಡಿ-ಮಾತ್ರ ಇಎಂಐ ಗಳನ್ನು ಪಾವತಿಸಿ. ಇದು ನಿಮ್ಮ ಇಎಂಐ ಅನ್ನು 45% ವರೆಗೆ ಕಡಿಮೆ ಮಾಡುತ್ತದೆ*.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
-
ರಾಷ್ಟ್ರೀಯತೆ
ನಿವಾಸಿ ಭಾರತೀಯ
-
ವಯಸ್ಸು
24 ವರ್ಷಗಳಿಂದ 70 ವರ್ಷಗಳು*
(*ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು 70 ವರ್ಷಗಳಾಗಿರಬೇಕು)
-
ಕೆಲಸದ ಸ್ಥಿತಿ
ಸ್ವಯಂ ಉದ್ಯೋಗಿ
-
ಬಿಸಿನೆಸ್‌ನ ಅವಧಿ
ಕನಿಷ್ಠ 3 ವರ್ಷಗಳು
-
ಸಿಬಿಲ್ ಸ್ಕೋರ್
ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ685 ಅಥವಾ ಅದಕ್ಕಿಂತ ಹೆಚ್ಚು
ಅಪ್ಲೈ ಮಾಡಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:
- ಕೆವೈಸಿ ಡಾಕ್ಯುಮೆಂಟ್‌ಗಳು
- ಬಿಸಿನೆಸ್ ಮಾಲೀಕತ್ವದ ಪುರಾವೆ
- ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು
ಅಲ್ಪಾವಧಿಯ ಬಿಸಿನೆಸ್ ಲೋನ್ ಬಡ್ಡಿ ದರ ಮತ್ತು ಶುಲ್ಕಗಳು
ಆಕರ್ಷಕ ಬಿಸಿನೆಸ್ ಲೋನ್ ಬಡ್ಡಿ ದರಗಳಲ್ಲಿ ನಾವು ಅಲ್ಪಾವಧಿಯ ಹಣಕಾಸನ್ನು ಒದಗಿಸುತ್ತೇವೆ.
ಶುಲ್ಕಗಳ ಪ್ರಕಾರಗಳು |
ಅನ್ವಯವಾಗುವ ಶುಲ್ಕಗಳು |
ಬಡ್ಡಿದರ |
ವಾರ್ಷಿಕ 9.75% ರಿಂದ 25%. |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 2.95% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಬೌನ್ಸ್ ಶುಲ್ಕಗಳು |
ರೂ. 1,500 ಪ್ರತಿ ಬೌನ್ಸ್‌ಗೆ |
ದಂಡದ ಬಡ್ಡಿ |
ಮಾಸಿಕ ಕಂತು ಪಾವತಿಯಲ್ಲಿ ಆಗುವ ವಿಳಂಬವು ಆಯಾ ಗಡುವು ದಿನಾಂಕದಿಂದ ಮಾಸಿಕ ಕಂತು ಸ್ವೀಕರಿಸುವ ದಿನಾಂಕದವರೆಗೆ ಮಾಸಿಕ ಬಾಕಿ ಮೇಲೆ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ. |
ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆಗಿದೆ) |
ರೂ. 2,360 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಹೊರಪ್ರದೇಶದ ಸಂಗ್ರಹಣಾ ಶುಲ್ಕಗಳು |
ಅನ್ವಯಿಸುವುದಿಲ್ಲ |
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು | ಗ್ರಾಹಕರ ಪೋರ್ಟಲ್ - ನನ್ನ ಅಕೌಂಟಿಗೆ ಲಾಗಿನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಲೋನ್ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಿ. ನಮ್ಮ ಯಾವುದೇ ಬ್ರಾಂಚ್ಗಳಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50/- (ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕದಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳ ಹಸ್ತ ಪ್ರತಿಯನ್ನು ಕೂಡ ನೀವು ಪಡೆಯಬಹುದು. |
ವಾರ್ಷಿಕ ನಿರ್ವಹಣಾ ಶುಲ್ಕಗಳು
ಲೋನ್ ವೈವಿಧ್ಯ |
ಶುಲ್ಕಗಳು |
ಫ್ಲೆಕ್ಸಿ ಟರ್ಮ್ ಲೋನ್ |
ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ (ಮರುಪಾವತಿ ಶೆಡ್ಯೂಲಿನಂತೆ) 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). |
ಫ್ಲೆಕ್ಸಿ ಹೈಬ್ರಿಡ್ ಲೋನ್ |
ಆರಂಭಿಕ ಲೋನ್ ಅವಧಿಯಲ್ಲಿ ಒಟ್ಟು 7 ವಿತ್‌ಡ್ರಾ ಮಾಡಬಹುದಾದ ಮೊತ್ತದ 1.18% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). ನಂತರದ ಲೋನ್ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತ 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). |
ಫೋರ್ಕ್ಲೋಸರ್ ಶುಲ್ಕಗಳು
ಲೋನ್ ವೈವಿಧ್ಯ |
ಶುಲ್ಕಗಳು |
ಲೋನ್ (ಟರ್ಮ್ ಲೋನ್/ ಅಡ್ವಾನ್ಸ್ ಇಎಂಐ/ ಸ್ಟೆಪ್-ಅಪ್ ರಚನಾತ್ಮಕ ಮಾಸಿಕ ಕಂತು/ ಸ್ಟೆಪ್-ಡೌನ್ ರಚನಾತ್ಮಕ ಮಾಸಿಕ ಕಂತು) |
ಪೂರ್ತಿ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಫ್ಲೆಕ್ಸಿ ಟರ್ಮ್ ಲೋನ್ |
ಪೂರ್ತಿ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). |
ಫ್ಲೆಕ್ಸಿ ಹೈಬ್ರಿಡ್ ಲೋನ್ |
ಪೂರ್ತಿ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). |
ಭಾಗಶಃ ಪಾವತಿ ಶುಲ್ಕಗಳು
ಸಮಯಾವಧಿ |
ಶುಲ್ಕಗಳು |
ಲೋನ್ ವಿತರಣೆಯ ದಿನಾಂಕದಿಂದ ಒಂದು ತಿಂಗಳಿಗಿಂತ ಹೆಚ್ಚು |
ಬಾಕಿ ಅಸಲಿನ ಮೊತ್ತದ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಫ್ಲೆಕ್ಸಿ ಲೋನ್ ರೂಪಾಂತರದೊಂದಿಗೆ ಸಾಲಗಾರರು ವ್ಯಕ್ತಿಯಾಗಿದ್ದರೆ ಭಾಗಶಃ-ಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ.
ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕ: ರೂ. 450.
ಗ್ರಾಹಕರ ಬ್ಯಾಂಕ್ ಹಿಂದಿನ ಮ್ಯಾಂಡೇಟ್ ಫಾರ್ಮ್ ಅನ್ನು ಯಾವುದೇ ಕಾರಣಕ್ಕಾಗಿ ತಿರಸ್ಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಹೊಸ ಮ್ಯಾಂಡೇಟ್ ಫಾರ್ಮ್ ಅನ್ನು ನೋಂದಾಯಿಸದಿದ್ದರೆ ಶುಲ್ಕಗಳನ್ನು ವಿಧಿಸಲಾಗುತ್ತದೆ.
ಅಲ್ಪಾವಧಿಯ ಬಿಸಿನೆಸ್ ಲೋನಿಗೆ ಅಪ್ಲೈ ಮಾಡುವುದು ಹೇಗೆ
ಆನ್ಲೈನ್‌ನಲ್ಲಿ ಅಲ್ಪಾವಧಿಯ ಬಿಸಿನೆಸ್ ಲೋನ್‌ಗೆ ಅಪ್ಲೈ ಮಾಡಲು ಈ ಮೂಲಭೂತ ಹಂತಗಳನ್ನು ಅನುಸರಿಸಿ.
- 1 ಇದರ ಮೇಲೆ ಕ್ಲಿಕ್ ಮಾಡಿ 'ಆನ್ಲೈನ್ ಅಪ್ಲೈ ಮಾಡಿ’ ಅಪ್ಲಿಕೇಶನ್ ಫಾರ್ಮ್ ತೆರೆಯಲು
- 2 ನಿಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ವಿವರಗಳನ್ನು ನಮೂದಿಸಿ
- 3 ನಿಮ್ಮ ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳನ್ನು ಅಪ್ಲೋಡ್ ಮಾಡಿ
- 4 ಮುಂದಿನ ಹಂತಗಳ ಮೇಲೆ ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
ಒಮ್ಮೆ ಅನುಮೋದನೆ ಪಡೆದ ನಂತರ, ನೀವು ಕೇವಲ 48 ಗಂಟೆಗಳಲ್ಲಿ ಹಣವನ್ನು ಪಡೆಯುತ್ತೀರಿ*.
*ಷರತ್ತು ಅನ್ವಯ
**ಡಾಕ್ಯುಮೆಂಟ್ ಪಟ್ಟಿ ಸೂಚನಾತ್ಮಕವಾಗಿದೆ