ಆಗಾಗ ಕೇಳುವ ಪ್ರಶ್ನೆಗಳು

ಇಎಂಐ ಎಂದರೇನು?

ಇಎಂಐ ಎಂದರೆ ಸಮನಾದ ಮಾಸಿಕ ಕಂತುಗಳು (ಇಎಂಐ ಗಳು), ಇದು ಸಾಲಗಾರರು ಲೋನ್ ಮರುಪಾವತಿಗೆ ಮಾಡಿದ ನಿಗದಿತ ಮಾಸಿಕ ಪಾವತಿಯಾಗಿದೆ. ಇದು ಅಸಲು ಮೊತ್ತ ಮತ್ತು ಬಡ್ಡಿ ಎರಡನ್ನು ಒಳಗೊಂಡಿದೆ. ಇದು ಪರ್ಸನಲ್ ಲೋನ್ ಮೊತ್ತವನ್ನು ಸಣ್ಣ ಮತ್ತು ಸುಲಭ ಕಂತುಗಳಲ್ಲಿ ಮರಳಿ ಪಾವತಿಸುವ ಸುಲಭವಾದ ಮತ್ತು ಪ್ರಯೋಜನವನ್ನು ನಿಮಗೆ ನೀಡುತ್ತದೆ.

ಪರ್ಸನಲ್ ಲೋನ್‌ಗಳ ಮೇಲೆ ಫೋರ್‌ಕ್ಲೋಸರ್ ಮತ್ತು ಭಾಗಶಃ ಮುಂಗಡ ಪಾವತಿ ಶುಲ್ಕಗಳಿವೆಯೇ?

ಹೌದು, ನಿಮ್ಮ ಪರ್ಸನಲ್ ಲೋನ್ ಮೇಲೆ ಫೋರ್‌ಕ್ಲೋಸರ್ ಮತ್ತು ಭಾಗಶಃ ಮುಂಗಡ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ. ನೀವು ಹೆಚ್ಚುವರಿ ಹಣವನ್ನು ಹೊಂದಿದ್ದರೆ ಮತ್ತು ನಿಮ್ಮ ಲೋನಿನ ಒಂದು ಭಾಗವನ್ನು ಭಾಗಶಃ-ಮುಂಪಾವತಿ ಮಾಡಲು ಬಯಸಿದರೆ, ನಿಮಗೆ 4.72% (ಅಂದರೆ. ತೆರಿಗೆಗಳು) ಭಾಗಶಃ-ಪಾವತಿ ಮೊತ್ತದ ಮೇಲೆ ಫೀಸ್ ಆಗಿ ಶುಲ್ಕ ವಿಧಿಸಲಾಗುತ್ತದೆ. ಮೊದಲ ಇಎಂಐ ಪಾವತಿಸಿದ ನಂತರವಷ್ಟೇ ಪರ್ಸನಲ್ ಲೋನ್ ಅನ್ನು ಭಾಗಶಃ ಮುಂಗಡ ಪಾವತಿ ಮಾಡಬಹುದು. ನಿಮ್ಮ ಭಾಗಶಃ-ಮುಂಗಡ ಪಾವತಿ ಮೊತ್ತವು ಒಂದು ಇಎಂಐಗಿಂತ ಹೆಚ್ಚಾಗಿರಬೇಕು.

ನೀವು ನಿಮ್ಮ ಪರ್ಸನಲ್ ಲೋನ್ ಅಕೌಂಟನ್ನು ಫೋರ್‌ಕ್ಲೋಸ್ ಮಾಡಲು ಬಯಸಿದರೆ, ಬಾಕಿ ಉಳಿದ ಮೊತ್ತದ ಮೇಲೆ 4.72%. ಫೋರ್‌ಕ್ಲೋಸರ್ ಶುಲ್ಕ (ತೆರಿಗೆಗಳನ್ನು ಒಳಗೊಂಡು) ಅನ್ವಯವಾಗುತ್ತವೆ.

ಸಂಬಳದ ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ ನೀವು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತ ಎಷ್ಟು?

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಅನೇಕ ಪ್ರಯೋಜನಗಳು ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ರೂ. 40 ಲಕ್ಷದವರೆಗೆ lಲೋನ್ ಪಡೆಯಬಹುದು. ಆದರೆ, ಅಂತಿಮವಾಗಿ ನೀವು ಪಡೆಯುವ ಪರ್ಸನಲ್ ಲೋನ್ ಮೊತ್ತವು ನಿಮ್ಮ ಅರ್ಹತೆ, ನಿಮ್ಮ ಸಿಬಿಲ್ ಸ್ಕೋರ್, ಮಾಸಿಕ ಆದಾಯ, ಉದ್ಯೋಗದಾತರು ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ.

ಟೆನರ್ (ಅವಧಿ) ಆಯ್ಕೆಗಳಲ್ಲಿ ಯಾವುವು ಲಭ್ಯವಿದೆ?

ಬಜಾಜ್ ಫಿನ್‌ಸರ್ವ್ 96 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಗಳನ್ನು ಒದಗಿಸುತ್ತದೆ. ನಿಮ್ಮ ಬಜೆಟ್ ಮತ್ತು ಆದ್ಯತೆಗೆ ಸೂಕ್ತವಾಗುವಂತೆ ನಿಮಗೆ ಬೇಕಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು ಮತ್ತು ನಿಮಗೆ ಸೂಕ್ತವೆನಿಸುವ ಅವಧಿ ಹಾಗೂ ಇಎಂಐ ಆಯ್ಕೆ ಮಾಡಿ, ಇದರಿಂದ ಲೋನ್ ನಿಮಗೆ ಹೊರೆಯಾಗುವುದಿಲ್ಲ.

ಬಜಾಜ್ ಫಿನ್‌ಸರ್ವ್‌ನಿಂದ ‌ಪರ್ಸನಲ್ ಲೋನನ್ನು ತೆಗೆದುಕೊಳ್ಳುವ ಪ್ರಯೋಜನಗಳು ಅಥವಾ ಅನುಕೂಲಗಳು ಯಾವುವು?

ಬಜಾಜ್ ಫಿನ್‌ಸರ್ವ್ ನಿಮ್ಮ ದೊಡ್ಡ ಖರ್ಚುಗಳನ್ನು ಪೂರೈಸಲು ನಿಮ್ಮ ನೆರವಿಗೆ ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್ ಕೊಡುತ್ತದೆ. ಈ ಪರ್ಸನಲ್ ಲೋನ್‍ಗೆ ಕೆಲವೇ ನಿಮಿಷಗಳಲ್ಲಿ ತಕ್ಷಣ ಅನುಮೋದನೆ ಸಿಗುತ್ತದೆ ಮತ್ತು ನೀವು ಕೇವಲ 24 ಗಂಟೆಗಳಲ್ಲಿ ತ್ವರಿತವಾಗಿ ಹಣ ಪಡೆಯಬಹುದು*. ಬಜಾಜ್ ಫಿನ್‌ಸರ್ವ್‌ನಲ್ಲಿ, ನೀವು ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಬಹುದು ಮತ್ತು ಬಡ್ಡಿ-ಮಾತ್ರ ಕಟ್ಟುವ ಇಎಂಐ ಗಳನ್ನು ಪಾವತಿಸುವ ಮೂಲಕ ನಿಮ್ಮ ಮಾಸಿಕ ಕಂತುಗಳನ್ನು 45%* ರಷ್ಟು ಕಡಿಮೆ ಮಾಡಿಕೊಳ್ಳಬಹುದು.

ಬಜಾಜ್ ಫಿನ್‌ಸರ್ವ್‌ನ ಪ್ರಸ್ತುತ ಗ್ರಾಹಕರು ವೇಗವಾದ ಪ್ರಕ್ರಿಯೆ ಮತ್ತು ತ್ವರಿತ ವಿತರಣೆಯನ್ನು ಒಳಗೊಂಡಂತೆ ಹಲವಾರು ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುವ ಪೂರ್ವ-ಅನುಮೋದಿತ ಆಫರ್‌ಗಳಿಗೆ ಕೂಡ ಅರ್ಹರಾಗಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಸಂಬಳದ ಪರ್ಸನಲ್‌ ಲೋನ್‌ಗಾಗಿ ನಾನು ಹೇಗೆ ಅಪ್ಲಿಕೇಶನ್‌ ಸಲ್ಲಿಸಬಹುದು?

ನೀವು ಕೆಲವು ಸುಲಭ ಹಂತಗಳಲ್ಲಿ ಸಂಬಳದಾರ ವ್ಯಕ್ತಿಗಳಿಗೆ ನೀಡುವ ಪರ್ಸನಲ್ ಲೋನ್‍ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು:

  • ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್‍' ಮೇಲೆ ಕ್ಲಿಕ್ ಮಾಡಿ
  • ಒಟಿಪಿ ಪಡೆಯಲು ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ
  • ಒಟಿಪಿ ಹಂಚಿಕೊಳ್ಳುವ ಮೂಲಕ ನಿಮ್ಮ ಗುರುತನ್ನು ಧೃಡಪಡಿಸಿ
  • ವೈಯಕ್ತಿಕ ಮತ್ತು ಹಣಕಾಸಿನ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
  • ನಿಮ್ಮ ಅವಶ್ಯಕತೆಗೆ ತಕ್ಕಂತೆ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ, ಫಾರ್ಮ್ ಸಲ್ಲಿಸಿ
  • ನಿಮ್ಮನ್ನು ಸಂಪರ್ಕಿಸುವ ಪ್ರತಿನಿಧಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ
  • ಅನುಮೋದನೆಯಾದ 24 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‍ನಲ್ಲಿ ಲೋನ್ ಮೊತ್ತವನ್ನು ಪಡೆಯಿರಿ

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಸಂಬಳದ ಪರ್ಸನಲ್ ಲೋನ್ ಅನ್ನು ನಾನು ಯಾವಾಗ ಪಡೆಯುತ್ತೇನೆ?

ನಿಮ್ಮ ತುರ್ತು ಅಗತ್ಯಗಳನ್ನು ಪೂರೈಸಲು ಕೆಲವೇ ನಿಮಿಷಗಳಲ್ಲಿ ಬಜಾಜ್ ಫಿನ್‌ಸರ್ವ್ ತ್ವರಿತ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವ ಮೂಲಕ ಮತ್ತು ತ್ವರಿತವಾಗಿ ಅನುಮೋದನೆ ಪಡೆಯುವ ಮೂಲಕ ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು. ಸಾಮಾನ್ಯವಾಗಿ ದಾಖಲೆಗಳು ಪರಿಶೀಲನೆಯಾದ ಮತ್ತು ಅನುಮೋದನೆಯಾದ 24 ಗಂಟೆಗಳ ಒಳಗೆ ಹಣವನ್ನು ವಿತರಿಸಲಾಗುತ್ತದೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ನಾನು ಲೋನನ್ನು ಮರುಪಾವತಿ ಮಾಡುವುದು ಹೇಗೆ?

ಪೋಸ್ಟ್-ಡೇಟೆಡ್ ಚೆಕ್‌ಗಳ ಮೂಲಕ ಅಥವಾ ECS ಸೌಲಭ್ಯವನ್ನು ಬಳಸಿ ನೀವು ಸಮನಾದ ಮಾಸಿಕ ಕಂತುಗಳಲ್ಲಿ EMI ಗಳನ್ನು ಮರುಪಾವತಿ ಮಾಡಬಹುದು. ಬಜಾಜ್ ಫಿನ್‌ಸರ್ವ್ 96 ತಿಂಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಗಳನ್ನು ಒದಗಿಸುತ್ತದೆ. ಈ ಫ್ಲೆಕ್ಸಿಬಲ್ ಕಾಲಾವಧಿಯು ನಿಮ್ಮ ಬಜೆಟ್‌ಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮರುಪಾವತಿಯನ್ನು ಸ್ಮಾರ್ಟ್ ಆಗಿ ಯೋಜಿಸಲು ನೀವು ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.

ಸಂಬಳದ ಪರ್ಸನಲ್ ಲೋನಿಗೆ ಆನ್ಲೈನ್ ಅನುಮೋದನೆ ಪ್ರಕ್ರಿಯೆ ಏನು?

ನೀವು ಬೇಸಿಕ್ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಕೆಲವೇ ನಿಮಿಷಗಳಲ್ಲಿ ತ್ವರಿತ ಅನುಮೋದನೆಯೊಂದಿಗೆ ಬರುವ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅನ್ನು ಅನುಮೋದನೆಯಾದ 24 ಗಂಟೆಗಳ* ಒಳಗೆ ಪಡೆಯಬಹುದು. ಆನ್‍ಲೈನ್ ಅನುಮೋದನೆಗಾಗಿ ಈ ಸುಲಭ ಹಂತಗಳನ್ನು ಅನುಸರಿಸಿ:

  • ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್‍' ಮೇಲೆ ಕ್ಲಿಕ್ ಮಾಡಿ’
  • ಒಟಿಪಿ ಪಡೆಯಲು ನಿಮ್ಮ ಸಂಪರ್ಕ ವಿವರಗಳನ್ನು ಒದಗಿಸಿ
  • ಗುರುತನ್ನು ಖಚಿತಪಡಿಸಲು ಒಟಿಪಿ ಹಂಚಿಕೊಳ್ಳಿ
  • ವೈಯಕ್ತಿಕ ಮತ್ತು ಹಣಕಾಸಿನ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
  • ನಿಮ್ಮ ಲೋನ್ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆಮಾಡಿ ಮತ್ತು ಫಾರ್ಮ್ ಸಲ್ಲಿಸಿ
  • ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ ಲೋನ್ ಆಫರ್ ಬಗ್ಗೆ ವಿವರಿಸುತ್ತಾರೆ
  • ನಮ್ಮ ಪ್ರತಿನಿಧಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ
  • ತ್ವರಿತವಾಗಿ ಲೋನ್ ಬಟವಾಡೆ ಪಡೆಯಿರಿ

ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ, ನೀವು ಮುಂಚಿತ-ಅನುಮೋದಿತ ಆಫರ್‌ಗಳನ್ನು ಆನಂದಿಸಬಹುದು ಮತ್ತು ತ್ವರಿತವಾಗಿ ಪರ್ಸನಲ್ ಲೋನ್ ಪಡೆಯಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಯಾವ ಮಾನದಂಡದಲ್ಲಿ ನನಗೆ ಲೋನನ್ನು ಮಂಜೂರು ಮಾಡಲಾಗುತ್ತದೆ?

ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡ ಮತ್ತು ಕನಿಷ್ಠ ಪೇಪರ್ ವರ್ಕ್ ಪೂರೈಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತವಾಗಿ ಪರ್ಸನಲ್ ಲೋನ್ ಪಡೆಯಬಹುದು. ನೀವು ಕೆಳಗಿನ ಮಾನದಂಡಗಳನ್ನು ಪೂರೈಸಿದರೆ ಪರ್ಸನಲ್ ಲೋನ್ ಪಡೆಯಬಹುದು-

  • ಭಾರತದ ವಾಸಿಸುತ್ತಿರುವ ನಾಗರಿಕರಾಗಿರಬೇಕು
  • ನೀವು 21 ರಿಂದ 80 ವರ್ಷಗಳ ನಡುವಿನವರಾಗಿರಬೇಕು*
  • MNC, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯೊಂದಿಗೆ ಕೆಲಸ ಮಾಡುತ್ತಿರಬೇಕು
  • 685 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು

ಮೇಲಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದಷ್ಟೇ ಅಲ್ಲದೆ, ನೀವು ವಾಸಿಸುತ್ತಿರುವ ನಗರದ ಆಧಾರದ ಮೇಲೆ ಕನಿಷ್ಠ ಸಂಬಳದ ಅವಶ್ಯಕತೆಯನ್ನು ಸಹ ಪೂರೈಸಬೇಕು. ಒಮ್ಮೆ ನೀವು ಅರ್ಹತಾ ಮಾನದಂಡವನ್ನು ಪೂರ್ಣಗೊಳಿಸಿದ ನಂತರ, ಕೆವೈಸಿ, ಕಳೆದ ಎರಡು ತಿಂಗಳ ಸಂಬಳದ ಸ್ಲಿಪ್‌ಗಳು, ಹಿಂದಿನ ಮೂರು ತಿಂಗಳ ನಿಮ್ಮ ಸಂಬಳದ ಅಕೌಂಟಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳಂತಹ ಕೆಲವು ಡಾಕ್ಯುಮೆಂಟ್‌ಗಳನ್ನು ಒದಗಿಸುವ ಮೂಲಕ ನೀವು ಲೋನ್ ಪಡೆಯಬಹುದು.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಪರ್ಸನಲ್ ಲೋನಿಗಾಗಿ ಆನ್ಲೈನ್ ಮೂಲಕ ಅಪ್ಲೈ ಮಾಡುವುದರ ಲಾಭಗಳೇನು?

ನಿಮಗೆ ಹಣಕಾಸು ನೆರವು ಬೇಕಾದಾಗ, ಒಂದೊಂದು ನಿಮಿಷವೂ ಅಮೂಲ್ಯವಾಗಿರುತ್ತದೆ. ಆನ್ಲೈನ್ ಪರ್ಸನಲ್ ಲೋನ್ ನಿಮ್ಮ ಹಣದ ಅಗತ್ಯಗಳನ್ನು ಪೂರೈಸುವ ಅನುಕೂಲಕರ ಮಾರ್ಗವಾಗಿದೆ. ಆನ್‌ಲೈನ್‌ ಪ್ರಕ್ರಿಯೆಯು ನಿಮಗೆ ಮನೆಯಿಂದಲೇ ಅರ್ಜಿ ಸಲ್ಲಿಸುವ ಅವಕಾಶ ನೀಡುತ್ತದೆ. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಗೊಳಿಸಲು ನೀವು ಕ್ಯೂನಲ್ಲಿ ಕಾಯುವ ಅಗತ್ಯವಿಲ್ಲ, ಮತ್ತು ನಿಮ್ಮ ಅಪ್ಲಿಕೇಶನ್ ಅನುಮೋದನೆಯು ರಿಯಲ್-ಟೈಮ್‌ನಲ್ಲಿ ಆಗುತ್ತದೆ. ಆನ್ಲೈನಿನಲ್ಲಿ ಅಪ್ಲೈ ಮಾಡುವುದು ತ್ವರಿತ, ಸುಲಭ ಮತ್ತು ತೊಂದರೆ ರಹಿತವಾಗಿದೆ ಮತ್ತು ಕೇವಲ 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡಲಾಗುತ್ತದೆ*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಫ್ಲೆಕ್ಸಿ ಲೋನ್ ವೈಶಿಷ್ಟ್ಯಗಳೇನು?

ಫ್ಲೆಕ್ಸಿ ಲೋನ್ ಸೌಲಭ್ಯವು ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಕಡಿಮೆ ಮಾಡಿ, ಲೋನ್ ಅನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಲು ಸಹಾಯ ಮಾಡುವ ಒಂದು ವಿಶಿಷ್ಟ ಹಣಕಾಸಿನ ಕೊಡುಗೆಯಾಗಿದೆ. ನೀವು ಫ್ಲೆಕ್ಸಿ ಲೋನ್ ಪಡೆಯಲು ಬಯಸಿದಾಗ, ಅರ್ಹ ಲೋನ್ ಮೊತ್ತವನ್ನು ನಿಮಗೆ ನಿಯೋಜಿಸಲಾಗುತ್ತದೆ. ಮಂಜೂರಾದ ಮೊತ್ತದಿಂದ ನೀವು ನಿಮಗೆ ಬೇಕಾದಂತೆ ವಿತ್‌ಡ್ರಾ ಮಾಡಬಹುದು. ನೀವು ಬಳಸುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ, ಮತ್ತು ನೀವು ಯಾವುದೇ ಹೆಚ್ಚಿನ ಬೆಲೆ ತೆರದೆ ಹಣ ವಿತ್‍ಡ್ರಾ ಮಾಡಬಹುದು ಮತ್ತು ಭಾಗಶಃ ಮುಂಗಡ ಪಾವತಿ ಮಾಡಬಹುದು. ಲೋನ್ ಮರುಪಾವತಿ ಅವಧಿಯ ಮೊದಲ ಭಾಗದಲ್ಲಿ ಬಡ್ಡಿ-ಮಾತ್ರ ಕಟ್ಟುವ ಇಎಂಐಗಳನ್ನು ಆಯ್ದುಕೊಳ್ಳುವ ಮೂಲಕ, ನೀವು ಇಎಂಐಗಳ ಹೊರೆಯನ್ನು 45% ವರೆಗೆ ಕಡಿಮೆ ಮಾಡಬಹುದು*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಸಾಮಾನ್ಯ ಟರ್ಮ್ ಲೋನ್‍ಗೆ ಹೋಲಿಸಿದರೆ ಫ್ಲೆಕ್ಸಿ ಸೌಲಭ್ಯದ ಪ್ರಯೋಜನಗಳೇನು?

ಫ್ಲೆಕ್ಸಿ ಸೌಲಭ್ಯವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಗ್ರಾಹಕರಿಗೆ ಮರುಪಾವತಿಯಲ್ಲಿ ಹೆಚ್ಚಿನ ಫ್ಲೆಕ್ಸಿಬಿಲಿಟಿ ಒದಗಿಸುವ ಗುರಿ ಹೊಂದಿದೆ. ಸಾಮಾನ್ಯ ಟರ್ಮ್ ಲೋನ್‌ಗೆ ವ್ಯತಿರಿಕ್ತವಾಗಿ, ಇದರಲ್ಲಿ ನಿಮಗೆ ನೀಡಲಾದ ಒಟ್ಟು ಲೋನ್ ಮೊತ್ತದಿಂದ ನಿಮಗೆ ಬೇಕಾದಾಗ ಹಣ ವಿತ್‌ಡ್ರಾ ಮಾಡಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ಲೋನ್ ಮುಂಗಡ ಪಾವತಿ ಮಾಡುವ ಫ್ಲೆಕ್ಸಿಬಿಲಿಟಿ ಹೊಂದಿರುತ್ತೀರಿ, ಜೊತೆಗೆ ನೀವು ವಿತ್‌ಡ್ರಾ ಮಾಡುವ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಒಟ್ಟು ಮಂಜೂರಾದ ಮಿತಿಯ ಮೇಲೆ ಅಲ್ಲ.
ಇದಲ್ಲದೆ, ಅವಧಿಯ ಮೊದಲ ಭಾಗದಲ್ಲಿ ಬಡ್ಡಿ ಮಾತ್ರ ಕಟ್ಟುವ ಇಎಂಐ ಆಯ್ಕೆ ಮಾಡುವ ಮೂಲಕ ನಿಮ್ಮ ಮಾಸಿಕ ಕಂತುಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಬಹುದು - ಟರ್ಮ್ ಲೋನ್‍ನಲ್ಲಿ ಈ ಸೌಲಭ್ಯ ಇರುವುದಿಲ್ಲ.

ಮರುಪಾವತಿಯ ದೃಷ್ಟಿಯಿಂದ, ಅನೇಕ ಬಳಕೆದಾರರಿಗೆ ಫ್ಲೆಕ್ಸಿ ಆಯ್ಕೆಯು ಟರ್ಮ್ ಲೋನ್‍‍‍ಗಿಂತ ಹೆಚ್ಚು ಅನುಕೂಲಕರ ಎನಿಸುತ್ತದೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಡ್ರಾಪ್‌ಲೈನ್ ಸೌಲಭ್ಯದ ಪ್ರಮುಖ ಅಂಶಗಳು ಯಾವುವು?

ಡ್ರಾಪ್‌ಲೈನ್ ಆಧಾರಿತ ಅಮಾರ್ಟೈಸೇಶನ್‌ನಲ್ಲಿ ಮೂರು ಪ್ರಮುಖ ಅಂಶಗಳಿವೆ:

  • ಡ್ರಾಪ್‌ಲೈನ್ ಬ್ಯಾಲೆನ್ಸ್: ಇದು ಕಾಲಾವಧಿಯುದ್ದಕ್ಕೂ ಕಡಿಮೆ ಆಗುವ ಲೋನ್ ಮೊತ್ತವಾಗಿದೆ.
  • ಬಳಸಿದ ಮೊತ್ತ: ಇದು ನೀವು ಬಳಸುವ ಮೊತ್ತವಾಗಿದೆ, ಇದನ್ನು ಅಸಲು ಬಾಕಿ ಎಂದು ಕೂಡ ಕರೆಯಲಾಗುತ್ತದೆ.
  • ಲಭ್ಯವಿರುವ ಬ್ಯಾಲೆನ್ಸ್: ಇದು ಡ್ರಾಪ್‌ಲೈನ್ ಬ್ಯಾಲೆನ್ಸ್ ಮತ್ತು ನೀವು ಬಳಸಿದ ಮೊತ್ತದ ನಡುವಿನ ವ್ಯತ್ಯಾಸವಾಗಿದೆ.
ಫ್ಲೆಕ್ಸಿ ಸೌಲಭ್ಯದ ಬಡ್ಡಿ ದರಗಳು ಸಾಮಾನ್ಯ ಟರ್ಮ್ ಲೋನ್‌ನಂತೆಯೇ ಇರುತ್ತವೆಯೇ?

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಮತ್ತು ಸಾಮಾನ್ಯ ಟರ್ಮ್ ಲೋನ್‌ಗಳ ಮೇಲೆ 11% ರಿಂದ ಶುರುವಾಗುವ ಆಕರ್ಷಕ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಆದರೆ, ಫ್ಲೆಕ್ಸಿ ಸೌಲಭ್ಯದೊಂದಿಗೆ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಮಂಜೂರಾದ ಒಟ್ಟು ಮಿತಿಯ ಮೇಲೆ ಅಲ್ಲ.

ಪರ್ಸನಲ್ ಲೋನ್‌ಗಳ ಮೇಲೆ ಲೋನ್ ಮೊತ್ತದ 3.93% ವರೆಗಿನ ಪ್ರಕ್ರಿಯಾ ಶುಲ್ಕ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಕೂಡ ಅನ್ವಯವಾಗುತ್ತದೆ. ಇದರ ಜೊತೆಗೆ, ನೀವು ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿದರೆ, ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಯನ್ನು ಹೊರತುಪಡಿಸಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ ನೀವು 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ವಾರ್ಷಿಕ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇನ್ನಷ್ಟು ತಿಳಿದುಕೊಳ್ಳಲು, ಪರ್ಸನಲ್ ಲೋನ್ ಬಡ್ಡಿದರ ಮತ್ತು ಶುಲ್ಕಗಳು. ವಿಭಾಗ ನೋಡಿ

ಫ್ಲೆಕ್ಸಿ ಸೌಲಭ್ಯದಲ್ಲಿ ಡ್ರಾಬ್ಯಾಕ್/ಪಾವತಿ ವಿಧಾನಕ್ಕಾಗಿ ಉಪಯೋಗಿಸಲು ಚೆಕ್ ಬುಕ್ ಸಿಗುತ್ತದೆಯೇ?

ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟ್, ಓವರ್‌ಡ್ರಾಫ್ಟ್ ಸೌಲಭ್ಯವಿರುವ ಕರೆಂಟ್ ಅಕೌಂಟ್‌ನಂತೆ ಕೆಲಸ ಮಾಡುವುದಿಲ್ಲ. ಇದೊಂದು ಲೋನ್ ಆಗಿದೆ, ಇದರೊಂದಿಗೆ ನಾವು ಚೆಕ್ ಬುಕ್ ಸೌಲಭ್ಯ ಒದಗಿಸುವುದಿಲ್ಲ. ನಾನ್‌ ಬ್ಯಾಂಕಿಂಗ್ ಫೈನಾನ್ಸ್ ಕಂಪನಿ (ಎನ್‍‍ಬಿಎಫ್‍ಸಿ) ಆಗಿರುವ ಬಜಾಜ್ ಫಿನ್‌ಸರ್ವ್ ಅಥವಾ ಅದರ ಗ್ರೂಪ್ ಕಂಪನಿಗಳು ಚೆಕ್ ಬುಕ್ ಸೌಲಭ್ಯ ಒದಗಿಸುವುದಿಲ್ಲ.

ನಾನು ವೆಲ್ಕಮ್ ಕಿಟ್ ಪಡೆಯದಿದ್ದರೆ?

ಪ್ರತಿ ಗ್ರಾಹಕರಿಗೂ ವೆಲ್‌ಕಮ್ ಕಿಟ್‌ ಕಳುಹಿಸುವಲ್ಲಿ ಹೆಚ್ಚಿನ ಜಾಗರೂಕತೆ ವಹಿಸಲಾಗುವುದು, ಪರ್ಸನಲ್ ಲೋನ್ ಪಡೆಯುವ ಸಮಯದಲ್ಲಿ ಕಿಟ್ ಪಡೆಯದಿದ್ದರೆ cs@bajajfinserv.in ಗೆ ದೂರು ಬರೆಯಬಹುದು. ಅದನ್ನು ಆದಷ್ಟು ಬೇಗ ನಿಮ್ಮ ನೋಂದಾಯಿತ ವಿಳಾಸಕ್ಕೆ ಖಂಡಿತ ಕಳಿಸುತ್ತೇವೆ.

ನನ್ನ ಅಕೌಂಟ್ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ನಾನು ಯಾವಾಗ ಪಡೆಯುತ್ತೇನೆ?

ನಮ್ಮ ಗ್ರಾಹಕ ಪೋರ್ಟಲ್‌ಗೆ ಐಡಿ ಮತ್ತು ಪಾಸ್ವರ್ಡ್ - ನನ್ನ ಅಕೌಂಟ್ - ವೆಲ್ಕಮ್ ಕಿಟ್‌ನ ಭಾಗವಾಗಿ ನಿಮಗೆ ಕಳುಹಿಸಲಾಗುತ್ತದೆ. ಲೋನ್ ವಿತರಣೆಯಾದ 10 ದಿನಗಳ ಒಳಗೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಲೋನ್ ಕುರಿತ ಮಾಹಿತಿಯ ಎಸ್ಎಂಎಸ್ ಕಳಿಸಲಾಗುವುದು.

ನನ್ನ ಮರುಪಾವತಿ ಶೆಡ್ಯೂಲ್/ಬಡ್ಡಿ ಪ್ರಮಾಣಪತ್ರಗಳು/ಅಕೌಂಟ್‌ ಸ್ಟೇಟ್‍ಮೆಂಟ್/ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ನಮ್ಮ ಗ್ರಾಹಕ ಪೋರ್ಟಲ್ ಮೂಲಕ ಎಲ್ಲ ಲೋನ್ ಅಕೌಂಟ್ ಸ್ಟೇಟ್‍ಮೆಂಟ್‍ಗಳನ್ನು ಆನ್‍ಲೈನ್‍ನಲ್ಲಿ ಪಡೆಯಬಹುದು. ನಿಮ್ಮ ಗ್ರಾಹಕ ಐಡಿ ಮತ್ತು ಪಾಸ್‍ವರ್ಡ್ ಬಳಸಿ ಲಾಗಿನ್ ಆಗುವ ಮೂಲಕ ಉಚಿತವಾಗಿ ನಿಮ್ಮ ಸ್ಟೇಟ್‍ಮೆಂಟ್ ನೋಡಬಹುದು ಅಥವಾ ಡೌನ್‍ಲೋಡ್ ಮಾಡಬಹುದು.

ನೀವು ಹತ್ತಿರದ ಬಜಾಜ್ ಫೈನಾನ್ಸ್ ಲಿಮಿಟೆಡ್ ಬ್ರಾಂಚ್‍ಗೆ ಭೇಟಿ ನೀಡಿ ರೂ. 50 ಕೊಟ್ಟು ನಿಮ್ಮ ಲೋನ್ ಸ್ಟೇಟ್‍ಮೆಂಟ್ ಹಾರ್ಡ್ ಕಾಪಿಯನ್ನು ಪಡೆಯಬಹುದು. ನಮ್ಮ ಗ್ರಾಹಕ ಸಹಾಯವಾಣಿ ಸೇವಾ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಅಥವಾ ಇಮೇಲ್ ಕೋರಿಕೆಯ ಮೂಲಕ ನಿಮ್ಮ ಸ್ಟೇಟ್ಮೆಂಟಿನ ಹಸ್ತ ಪ್ರತಿಯನ್ನು ನೀವು ಕೇಳಬಹುದು.

ನನ್ನ ಸಂಪೂರ್ಣ ಲೋನ್ ವಿವರಗಳನ್ನು ನಾನು ಹೇಗೆ ಪಡೆಯಬಹುದು?

ಲೋನ್ ಅನುಮೋದನೆಯಾಗಿ, ಪರಿವರ್ತನೆಯಾದ ಮೇಲೆ ನಿಮ್ಮ ಇಮೇಲ್ ಐಡಿಗೆ ವೆಲ್‍ಕಮ್ ಕಿಟ್ ಬರುತ್ತದೆ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

  • ನಿಮ್ಮ ಲೋನ್ ವಿವರಗಳು - ಟರ್ಮ್ ಲೋನ್ ಅಥವಾ ಫ್ಲೆಕ್ಸಿ ಲೋನ್
  • ನನ್ನ ಅಕೌಂಟಿಗೆ ಬಳಕೆದಾರ ಐಡಿ ಮತ್ತು ಪಾಸ್ವರ್ಡ್
  • ಡ್ರಾಡೌನ್ ಟ್ರಾನ್ಸಾಕ್ಷನ್‌ಗಳಿಗಾಗಿ ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟ್ ವಿವರಗಳು
  • ಯೂನಿಕ್ ವರ್ಚುವಲ್ ಅಕೌಂಟ್ ನಂಬರ್
  • ನೋಂದಾಯಿತ ಮೊಬೈಲ್ ನಂಬರ್
  • ಪ್ರಾಡಕ್ಟ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವಯಂ-ಸೇವಾ ಸಾಧನವನ್ನು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡಲು ರೆಫರೆನ್ಸ್ ಸೇವಾ ಮಾರ್ಗದರ್ಶಿ.
ನನ್ನ ಫ್ಲೆಕ್ಸಿ ಟರ್ಮ್ ಲೋನ್ ಬ್ಯಾಲೆನ್ಸ್ ಅನ್ನು ನಾನು ಹೇಗೆ ಪರಿಶೀಲಿಸಬಹುದು?

ನಮ್ಮ ಗ್ರಾಹಕ ಪೋರ್ಟಲ್ ನನ್ನ ಅಕೌಂಟ್ ಮೂಲಕ ನೀವು ಎಲ್ಲಿಂದಲಾದರೂ ನಿಮ್ಮ ಫ್ಲೆಕ್ಸಿ ಟರ್ಮ್ ಲೋನ್ ಅಕೌಂಟಿಗೆ ಸಂಬಂಧಿಸಿದ ನಿಮ್ಮ ಲೋನ್ ಸ್ಟೇಟ್ಮೆಂಟ್‌ಗಳು ಮತ್ತು ಇತರ ವಿವರಗಳನ್ನು ಸುಲಭವಾಗಿ ಅಕ್ಸೆಸ್ ಮಾಡಬಹುದು. ನಿಮ್ಮ ಅಸ್ತಿತ್ವದಲ್ಲಿರುವ ಅಕೌಂಟ್ ಐಡಿ ಮತ್ತು ಪಾಸ್ವರ್ಡ್‌ನೊಂದಿಗೆ ನನ್ನ ಅಕೌಂಟಿಗೆ ಲಾಗಿನ್ ಮಾಡುವ ಮೂಲಕ ನಿಮ್ಮ ಲೋನ್ ಸ್ಟೇಟ್ಮೆಂಟನ್ನು ನೀವು ನೋಡಬಹುದು ಅಥವಾ ಡೌನ್ಲೋಡ್ ಮಾಡಬಹುದು. ನೀವು ಈ ಗ್ರಾಹಕ ಪೋರ್ಟಲ್‌ನಲ್ಲಿ ಡ್ರಾಡೌನ್ ಕೋರಿಕೆಯನ್ನು ಸಹ ಸಲ್ಲಿಸಬಹುದು.

ಭಾಗಶಃ ಮುಂಪಾವತಿ ಪ್ರಕ್ರಿಯೆ ಎಂದರೇನು?

ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್ ಪಡೆದ ನಂತರ, ನಿಮಗೊಂದು ಯೂನಿಕ್ ಅಕೌಂಟ್ ನಂಬರ್ ನೀಡಲಾಗುತ್ತದೆ. ನಿಮ್ಮ ನೆಟ್ ಬ್ಯಾಂಕಿಂಗ್ ಅಕೌಂಟ್ ಮೂಲಕ ಈ ನಿರ್ದಿಷ್ಟ ಅಕೌಂಟಿಗೆ ನೀವು ಸುಲಭವಾಗಿ ಎಲ್ಲಾ ಪಾವತಿಗಳು ಮತ್ತು ಭಾಗಶಃ-ಮುಂಪಾವತಿಗಳನ್ನು ಮಾಡಬಹುದು.

ಫ್ಲೆಕ್ಸಿ ಟರ್ಮ್ ಲೋನ್ ಸಂದರ್ಭದಲ್ಲಿ, ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ನಿಗದಿತ ಸಮಯದೊಳಗೆ ಅದನ್ನು ನಿಮ್ಮ ಫ್ಲೆಕ್ಸಿ ಲೋನ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ.

ಫ್ಲೆಕ್ಸಿ ಲೋನ್‌ನಲ್ಲಿ ಮುಂಪಾವತಿಗೆ ಯಾವುದೇ ಶುಲ್ಕವಿದೆಯೇ?

ಫ್ಲೆಕ್ಸಿ ಲೋನ್ ಗ್ರಾಹಕರಾಗಿ, ನೀವು ವಿವಿಧ ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು, ಅಂತಹ ಒಂದು ಪ್ರಯೋಜನವೆಂದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭಾಗಶಃ ಮುಂಗಡ ಪಾವತಿಸುವುದು. ಫ್ಲೆಕ್ಸಿ ಲೋನ್ ಗ್ರಾಹಕರಾಗಿ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮಗೆ ಬೇಕಾದಷ್ಟು ಸಲ ಟ್ರಾನ್ಸಾಕ್ಷನ್ (ನಿಮ್ಮ ಅಕೌಂಟ್‍ನಲ್ಲಿ ಪಾವತಿಗಳನ್ನು ಮಾಡುವುದು ಮತ್ತು ಲಭ್ಯವಿರುವ ಬ್ಯಾಲೆನ್ಸ್ ಮೊತ್ತವನ್ನು ವಿತ್‌ಡ್ರಾ ಮಾಡುವುದು) ಮಾಡಬಹುದು.

ನಾನು ಮೊದಲ ಭಾಗಶಃ-ಮುಂಗಡ ಪಾವತಿಯನ್ನು ಯಾವಾಗ ಮಾಡಬಹುದು?

ಒಂದು ವೇಳೆ ನಿಮ್ಮ ಬಳಿ ಹೆಚ್ಚಿನ ಹಣವಿದ್ದರೆ ಹಾಗೂ ಅದರಿಂದ ನಿಮ್ಮ ಪರ್ಸನಲ್ ಲೋನ್ ಭಾಗಶಃ ಮುಂಗಡ ಪಾವತಿ ಮಾಡಲು ಬಯಸಿದರೆ, ಲೋನ್ ವಿತರಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಾಗಿದ್ದರೆ ಆಗ ಭಾಗಶಃ-ಮುಂಗಡ ಪಾವತಿಯನ್ನು ಮಾಡಬಹುದು.

ಒಂದು ದಿನದಲ್ಲಿ ನನ್ನ ಫ್ಲೆಕ್ಸಿ ಟರ್ಮ್ ಲೋನ್‌ನಿಂದ ಎಷ್ಟು ಬಾರಿ ನಾನು ಹಿಂಪಡೆಯಬಹುದು?

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿಬಲ್ ವಿತ್‌ಡ್ರಾವಲ್ ಮತ್ತು ಭಾಗಶಃ-ಮುಂಗಡ ಪಾವತಿ ಸೌಲಭ್ಯದೊಂದಿಗೆ ಬರುವ ಫ್ಲೆಕ್ಸಿ ಪರ್ಸನಲ್ ಲೋನನ್ನು ಒದಗಿಸುತ್ತದೆ. ನೀವು ಫ್ಲೆಕ್ಸಿ ಟರ್ಮ್ ಲೋನ್ ಆಯ್ಕೆ ಮಾಡಿದ್ದರೆ, ನೀವು ದಿನಕ್ಕೆ ಗರಿಷ್ಠ ಐದು ಬಾರಿ ವಿತ್‌ಡ್ರಾ ಮಾಡಬಹುದು.

ನಾನು ಒಂದೇ ದಿನ ವಿತ್‌ಡ್ರಾ ಮಾಡಬಹುದೇ ಮತ್ತು ಭಾಗಶಃ-ಮುಂಗಡ ಪಾವತಿ ಮಾಡಬಹುದೇ?

ಫ್ಲೆಕ್ಸಿ ಸೌಲಭ್ಯದೊಂದಿಗೆ, ನೀವು ಒಂದೇ ದಿನ ಹಣವನ್ನು ವಿತ್‌ಡ್ರಾ ಮಾಡಬಹುದು ಮತ್ತು ಭಾಗಶಃ ಮುಂಗಡ ಪಾವತಿ ಮಾಡಬಹುದು.

ನನ್ನ EMI ದಿನಾಂಕದ ಮೊದಲು ನಾನು ಮುಂಪಾವತಿಯನ್ನು ಮಾಡಿದ್ದೇನೆ. ನಾನು ಈಗಲೂ ನನ್ನ ಕಂತು ಪಾವತಿಸಬೇಕೇ?

ಹೌದು, ಮೊದಲೇ ಮುಂಗಡ ಪಾವತಿ ಮಾಡಿದ್ದರೂ ಸಹ, ವಾಯಿದೆಯ ದಿನಾಂಕದಂದು ನಿಮ್ಮ ಇಎಂಐ ಕಡಿತಗೊಳಿಸಲಾಗುತ್ತದೆ. ಏಕೆಂದರೆ ಬಿಲ್ಲಿಂಗ್ ಅವಧಿಯಲ್ಲಿ ಬಳಸಿದ ಮೊತ್ತದ ಮೇಲೆ ಮಾಸಿಕ ಕಂತನ್ನು ಸಂಗ್ರಹಿಸಲಾಗುವುದು. ಆದರೂ ಕೂಡ, ಭಾಗಶಃ ಮುಂಗಡ ಪಾವತಿ ಮಾಡುವುದರಿಂದ ನಿಮ್ಮ ಲೋನ್ ಮೊತ್ತ ಕಡಿಮೆಯಾಗುತ್ತದೆ, ಇದರಿಂದ ಮುಂದೆ ಉಳಿದ ಅವಧಿಯಲ್ಲಿ ಕಡಿಮೆ ಇಎಂಐ ಗಳನ್ನು ಪಾವತಿಸಿದಂತಾಗುತ್ತದೆ.

ವಿತ್‌ಡ್ರಾವಲ್ ಅಥವಾ ಭಾಗಶಃ-ಮುಂಗಡ ಪಾವತಿಯ ಸಮಯದಲ್ಲಿ ಗ್ರಾಹಕರು ಯಾವುದೇ ಸಮಸ್ಯೆಯನ್ನು ಎದುರಿಸಿದರೆ - ಯಾರನ್ನು ಸಂಪರ್ಕಿಸಬೇಕು?

ವಿತ್‌ಡ್ರಾವಲ್ ಅಥವಾ ಭಾಗಶಃ ಮುಂಗಡ ಪಾವತಿಯ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ, ಹತ್ತಿರದ ಬಜಾಜ್ ಫಿನ್‌ಸರ್ವ್‌ ಬ್ರಾಂಚ್‍ಗೆ ಭೇಟಿ ನೀಡಬಹುದು. ಹಾಗೆಯೇ ನಿಮ್ಮ ಸಂದೇಹವನ್ನು ನಿವಾರಿಸಿಕೊಳ್ಳಲು ನಮ್ಮನ್ನು ಸಂಪರ್ಕಿಸಿ.

ನನ್ನ ವಿಳಾಸ/ ಮೊಬೈಲ್ ನಂಬರ್/ ಬ್ಯಾಂಕ್ ಅಕೌಂಟ್ ನಂಬರ್‌ನಂತಹ ನನ್ನ ವೈಯಕ್ತಿಕ ವಿವರಗಳನ್ನು ನಾನು ಹೇಗೆ ಬದಲಾಯಿಸಬಹುದು? ನಾನು ಯಾವುದೇ ಪುರಾವೆಗಳನ್ನು ಕಳುಹಿಸಬೇಕೇ?

ನಿಮ್ಮ ವಿಳಾಸ/ ಮೊಬೈಲ್ ನಂಬರ್/ ಅಕೌಂಟ್ ನಂಬರ್‌ನಂತಹ ವೈಯಕ್ತಿಕ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ, ನೀವು ನಿಮ್ಮ ರಿಲೇಶನ್‌ಶಿಪ್ ಮ್ಯಾನೇಜರ್‌ಗೆ ತಿಳಿಸಬಹುದು. ಸಂಬಂಧಪಟ್ಟ ಬದಲಾವಣೆಗಾಗಿ ನಿಮ್ಮನ್ನು ‍ದಾಖಲೆಗಳ ಪುರಾವೆಯೊಂದಿಗೆ ಸಹಿ ಮಾಡಲಾದ ಕೋರಿಕೆ ಪತ್ರವನ್ನು ರಿಲೇಶನ್‌ಶಿಪ್ ಮ್ಯಾನೇಜರ್‌ಗೆ ಸಲ್ಲಿಸಬಹುದು, ಅದರ ನಂತರ ನಿಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

ಫ್ಲೆಕ್ಸಿ ಲೋನಿಗೆ ಯಾವುದಾದರೂ ಫೋರ್‌ಕ್ಲೋಸರ್ ಶುಲ್ಕಗಳಿವೆಯೇ?

ಒಂದು ವೇಳೆ ನೀವು ಫ್ಲೆಕ್ಸಿ ಲೋನ್ ಅಕೌಂಟ್ ಫೋರ್‌ಕ್ಲೋಸ್ ಮಾಡಲು ಬಯಸಿದರೆ, ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ 4.72% (ಜೊತೆಗೆ ತೆರಿಗೆಗಳು) ಮತ್ತು ಸೆಸ್ ಅನ್ನು ಫೋರ್‌ಕ್ಲೋಸರ್ ಶುಲ್ಕವಾಗಿ ವಿಧಿಸಲಾಗುತ್ತದೆ.

ಫ್ಲೆಕ್ಸಿ ಟರ್ಮ್ ಲೋನಿನ ಮಾಸಿಕ ಕಂತು/ಇಎಂಐ ಅಸಲು ಮೊತ್ತವನ್ನು ಒಳಗೊಂಡಿರುತ್ತದೆಯೇ?

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ, ಇದು ಸಾಲಗಾರರಿಗೆ ಮೊದಲ ಭಾಗದ ಅವಧಿಯಲ್ಲಿ ಬಡ್ಡಿ-ಮಾತ್ರದ ಇಎಂಐಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ: ನೀವು ರೂ. 5 ಲಕ್ಷದ ಫ್ಲೆಕ್ಸಿ ಟರ್ಮ್ ಲೋನ್ ಮೊತ್ತವನ್ನು ಹೊಂದಿದ್ದರೆ, ನೀವು ರೂ. 12,000 ನಿಯಮಿತ ಇಎಂಐಗೆ ಬದಲಾಗಿ ಕೇವಲ ಬಡ್ಡಿಯನ್ನು ಒಳಗೊಂಡಿರುವ ಅಂದಾಜು ರೂ. 6,000 ಇಎಂಐ ಅನ್ನು ಪಾವತಿಸಬೇಕಾಗುತ್ತದೆ, ಇದು ಅಸಲು ಮತ್ತು ಬಡ್ಡಿ ಎರಡನ್ನೂ ಹೊಂದಿದೆ.

ವಾರ್ಷಿಕ ನಿರ್ವಹಣಾ ಶುಲ್ಕ ಸಂಗ್ರಹ ದಿನಾಂಕ ಎಂದರೇನು?

ಫ್ಲೆಕ್ಸಿ ಪರ್ಸನಲ್ ಲೋನನ್ನು ಆಯ್ಕೆ ಮಾಡುವ ಸಾಲಗಾರರು ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಯನ್ನು ಹೊರತುಪಡಿಸಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ವಾರ್ಷಿಕ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕು. ಲೋನ್‍ಗೆ ವರ್ಷ ತುಂಬಿದ ಕೂಡಲೇ ಈ ನಿರ್ವಹಣಾ ಶುಲ್ಕವು ನಿಮ್ಮ ಅಕೌಂಟ್‍ನಿಂದ ಆಟೋ ಡೆಬಿಟ್ ಆಗುತ್ತದೆ.

ಫ್ಲೆಕ್ಸಿ ಟರ್ಮ್ ಲೋನ್ ಅನ್ನು ಸಾಮಾನ್ಯ ಟರ್ಮ್ ಲೋನ್ ಆಗಿ ಬದಲಾಯಿಸುವುದು ಹೇಗೆ?

ನೀವು ನಿಮ್ಮ ಫ್ಲೆಕ್ಸಿ ಟರ್ಮ್ ಲೋನನ್ನು ನಿಯಮಿತ ಟರ್ಮ್ ಲೋನ್ ಆಗಿ ಪರಿವರ್ತಿಸಲು ಬಯಸಿದರೆ, ನಿಮ್ಮ ಫ್ಲೆಕ್ಸಿ ಟರ್ಮ್ ಲೋನನ್ನು ಸ್ಟ್ಯಾಂಡರ್ಡ್ ಲೋನ್ ಅಪ್ಲಿಕೇಶನ್ ಆಗಿ ಪರಿವರ್ತಿಸಲು ನಿಮ್ಮ ಸಮ್ಮತಿಯನ್ನು ನೀಡುವ ಮೂಲಕ ನಮ್ಮ ಗ್ರಾಹಕ ಸಹಾಯ ಕೇಂದ್ರಕ್ಕೆ ನೀವು ಇಮೇಲ್ ಬರೆಯಬೇಕು. ಒಮ್ಮೆ ಗ್ರಾಹಕ ಸೇವಾ ಕೇಂದ್ರವು ನಿಮ್ಮ ಅನುಮತಿಯನ್ನು ಪಡೆದ ನಂತರ, ಅವರು ನಿಮ್ಮ ಪರವಾಗಿ ಕೋರಿಕೆಯನ್ನು ಸಲ್ಲಿಸುತ್ತಾರೆ. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನಿಮ್ಮ ಫ್ಲೆಕ್ಸಿ ಟರ್ಮ್ ಲೋನನ್ನು 60 ತಿಂಗಳಿಗೆ ಟರ್ಮ್ ಲೋನ್ ಆಗಿ ಪರಿವರ್ತಿಸಲಾಗುತ್ತದೆ ಮತ್ತು ನೀವು ಅಸಲು ಮೊತ್ತವನ್ನು ಒಳಗೊಂಡಂತೆ ನಿಯಮಿತ ಇಎಂಐ ಅನ್ನು ಪಾವತಿಸಬೇಕಾಗುತ್ತದೆ.

ಅದೇ ರೀತಿ, ಹೊಸ ಒಪ್ಪಂದವೊಂದನ್ನು ಬುಕ್ ಮಾಡಿ, ಈಗಿನ ಟರ್ಮ್ ಲೋನ್ ಅಕೌಂಟ್ ಅನ್ನು ಮುಚ್ಚುವ ಮೂಲಕ ಟರ್ಮ್ ಲೋನ್ ಅನ್ನು ಫ್ಲೆಕ್ಸಿ ಟರ್ಮ್ ಲೋನ್ ಆಗಿ ಬದಲಾಯಿಸಬಹುದು.

12 ತಿಂಗಳುಗಳ ನಿರಂತರ ಡ್ರಾ ಅವಧಿ ಎಂದರೆ ಏನು?

ನೀವು ಫ್ಲೆಕ್ಸಿ ಸೌಲಭ್ಯವನ್ನು ಪಡೆದಿದ್ದರೆ, ಸೌಲಭ್ಯವನ್ನು ನವೀಕರಿಸಲು ಪ್ರತಿ 12 ತಿಂಗಳಿಗೊಮ್ಮೆ ನಿಮಗೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಬಳಕೆಯನ್ನು ಹೊರತುಪಡಿಸಿ, ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ 0.25% (ಜೊತೆಗೆ ತೆರಿಗೆಗಳು) ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ.

1ನೇ ಇಎಂಐ ಗಿಂತ ಮೊದಲು ನಾನು ಭಾಗಶಃ-ಮುಂಪಾವತಿ ಮಾಡಬಹುದೇ?

ನಿಮ್ಮ 1ನೇ ಇಎಂಐ ಪಾವತಿಸಿದ ನಂತರ ಮಾತ್ರ ನೀವು ನಿಮ್ಮ ಮೊದಲ ಭಾಗಶಃ-ಮುಂಗಡ ಪಾವತಿಯನ್ನು ಮಾಡಬಹುದು.

ನನ್ನ ಫ್ಲೆಕ್ಸಿ ಟರ್ಮ್ ಲೋನನ್ನು ನಾನು ಹೇಗೆ ಡ್ರಾ ಡೌನ್ ಮಾಡಬಹುದು?

ನಮ್ಮ ಗ್ರಾಹಕ ಪೋರ್ಟಲ್-ನನ್ನ ಅಕೌಂಟಿಗೆ ಲಾಗಿನ್ ಮಾಡುವ ಮೂಲಕ ನೀವು ನಿಮ್ಮ ಫ್ಲೆಕ್ಸಿ ಟರ್ಮ್ ಲೋನನ್ನು ಡ್ರಾಡೌನ್ ಮಾಡಬಹುದು.

ಯಾವ ಸನ್ನಿವೇಶಗಳಲ್ಲಿ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಬಳಸಲು ನಿರ್ಬಂಧಿಸಲಾಗಿದೆ?

ಈ ಕೆಳಗಿನ ಸಂದರ್ಭಗಳಲ್ಲಿ ನೀವು ಫ್ಲೆಕ್ಸಿ ಟರ್ಮ್ ಲೋನ್ ಸೌಲಭ್ಯವನ್ನು ಬಳಸಲಾಗುವುದಿಲ್ಲ:

  • ಒಂದು ವೇಳೆ ನೀವು ಬಜಾಜ್ ಫೈನಾನ್ಸ್ ಲಿಮಿಟೆಡ್ ಅಥವಾ ಇತರ ಯಾವುದೇ ಹಣಕಾಸು ಸಂಸ್ಥೆಯೊಂದಿಗೆ ಇಎಂಐ ಕಟ್ಟುವುದನ್ನು ತಪ್ಪಿಸಿದರೆ
  • ನಿಮ್ಮ ಕ್ರೆಡಿಟ್ ಬ್ಯೂರೋ ಸ್ಕೋರ್‌ನಲ್ಲಿ ಇಳಿಕೆಯಾದರೆ
  • ಉದ್ಯೋಗ ಬದಲಾಯಿಸಿದರೆ
  • ನಿಮ್ಮ ಸಂಪರ್ಕ ಮಾಹಿತಿಯಲ್ಲಿ ಬದಲಾವಣೆಯಾದರೆ (ಅದರ ಬಗ್ಗೆ ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಮೊದಲೇ ಮಾಹಿತಿ ನೀಡದ ಹೊರತು)
ನಾನು ಯಾವುದೇ ಸೆಕ್ಯೂರಿಟಿ, ಕೊಲ್ಯಾಟರಲ್ ಅಥವಾ ಖಾತರಿದಾರರನ್ನು ಒದಗಿಸಬೇಕೇ?

ಬಜಾಜ್ ಫಿನ್‌ಸರ್ವ್ ಅಡಮಾನ-ರಹಿತವಾದ ಸಂಬಳದ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ, ಆದ್ದರಿಂದ, ಹಣವನ್ನು ಪಡೆಯಲು ನೀವು ಯಾವುದೇ ಭದ್ರತೆಯನ್ನು ಅಡವಿಡುವ ಅಗತ್ಯವಿಲ್ಲ.

ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಮತ್ತು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ನೀವು ರೂ. 40 ಲಕ್ಷದವರೆಗಿನ ಪರ್ಸನಲ್ ಲೋನನ್ನು ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ