ಚಿನ್ನದ ಆಭರಣಗಳ ಮೇಲಿನ ಲೋನ್ ಬಗ್ಗೆ ತಿಳಿಯಿರಿ

2 ನಿಮಿಷದ ಓದು
17 ಏಪ್ರಿಲ್ 2023

ಇತರ ಯಾವುದೇ ಸುರಕ್ಷಿತ ಲೋನ್‌ನಂತೆ, ಕನಿಷ್ಠ ಅರ್ಹತಾ ಮಾನದಂಡ ಮತ್ತು ಸರಳ ಡಾಕ್ಯುಮೆಂಟೇಶನ್ ಮೇಲೆ ಚಿನ್ನದ ಆಭರಣಗಳ ಮೇಲಿನ ಲೋನನ್ನು ಪಡೆಯುವುದು ಸುಲಭ. ಹೆಚ್ಚಿನ ಪ್ರತಿಷ್ಠಿತ ಸಾಲದಾತರು ಚಿನ್ನದ ಆಭರಣಗಳ ಮೇಲೆ ಲೋನನ್ನು ಒದಗಿಸುತ್ತಾರೆ. ಹಣಕಾಸು ಪಡೆಯುವುದು ತ್ವರಿತ ಮತ್ತು ಸುಲಭ, ಏಕೆಂದರೆ ನೀವು ಅಡಮಾನವಾಗಿ ಚಿನ್ನವನ್ನು ಮಾತ್ರ ಒದಗಿಸಬೇಕು, ಇದು ಸಾಲ ನೀಡುವಲ್ಲಿ ಕೈಗೊಳ್ಳುವ ಹೆಚ್ಚಿನ ಅಪಾಯಗಳ ವಿರುದ್ಧ ಸಾಕಾಗುತ್ತದೆ.

ಅತ್ಯುತ್ತಮ ಸಾಲ ನೀಡುವ ಸಂಸ್ಥೆಗಳೊಂದಿಗೆ, ನೀವು ಜ್ಯುವೆಲ್ ಲೋನ್ ರೂಪದಲ್ಲಿ ಪ್ರತಿ ಗ್ರಾಮ್ ಫೈನಾನ್ಸಿಂಗ್‌ಗೆ ಅತಿ ಹೆಚ್ಚಿನ ಹಣವನ್ನು ಪಡೆಯಬಹುದು. ತಕ್ಷಣದ ಹಣದ ಅಗತ್ಯವಿದ್ದಾಗ, ಹಣಕಾಸು ಪಡೆಯಲು ನಿಮ್ಮ ನಿಷ್ಕ್ರಿಯ ಚಿನ್ನದ ಆಭರಣಗಳ ಮೌಲ್ಯವನ್ನು ಬಳಸಿ. ಸುಲಭವಾಗಿ ಲೋನಿಗೆ ಅಕ್ಸೆಸ್ ಪಡೆಯಲು ಕೆಲವು ಸರಳ ಹಂತಗಳನ್ನು ಅನುಸರಿಸಿ.

ಚಿನ್ನದ ಆಭರಣಗಳ ಮೇಲೆ ಲೋನ್ ಪಡೆಯಲು ಹಂತಗಳು

ಹಂತ 1: ನಿಮ್ಮ ಸ್ವಂತ ಚಿನ್ನದ ಆಭರಣಗಳ ಮೌಲ್ಯದ ಆಧಾರದ ಮೇಲೆ ನಿಮ್ಮ ಲೋನ್ ಮೊತ್ತದ ಅರ್ಹತೆಯನ್ನು ಮೌಲ್ಯಮಾಪನ ಮಾಡಿ.

ಹಂತ 2: ಅನೇಕ ಬಳಕೆದಾರ-ಸ್ನೇಹಿ ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ಗೋಲ್ಡ್ ಲೋನ್ ಅನ್ನು ಒದಗಿಸುವ ಬಜಾಜ್ ಫಿನ್‌ಸರ್ವ್‌ನಂತಹ ಸೂಕ್ತ ಸಾಲದಾತರನ್ನು ಆಯ್ಕೆಮಾಡಿ.

ಹಂತ 3: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಗೋಲ್ಡ್ ಲೋನಿಗಾಗಿ ಆನ್ಲೈನ್ ಅಪ್ಲಿಕೇಶನ್ ಪುಟಕ್ಕೆ ನ್ಯಾವಿಗೇಟ್ ಮಾಡಿ.

ಹಂತ 4: ನಿಮ್ಮ ಪ್ಯಾನ್ ಕಾರ್ಡಿನಲ್ಲಿ ಕಾಣಿಸಿಕೊಳ್ಳುವಂತೆ ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ಭರ್ತಿ ಮಾಡಿ.

ಹಂತ 5: ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ನಗರವನ್ನು ಆಯ್ಕೆಮಾಡಿ.

ಹಂತ 6: ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸಲ್ಲಿಸಿ.

ಹಂತ 7: ನಿಮಗೆ ಪ್ರದರ್ಶಿಸಲಾದ ಆಯ್ಕೆಗಳಿಂದ ಹತ್ತಿರದ ಗೋಲ್ಡ್ ಲೋನ್ ಬ್ರಾಂಚ್ ಆಫೀಸಿನಲ್ಲಿ ನಿಮ್ಮ ಅಪಾಯಿಂಟ್ಮೆಂಟ್ ಸೆಟಪ್ ಮಾಡಿ ಮತ್ತು ಮೌಲ್ಯಮಾಪನಕ್ಕಾಗಿ ನಿಮ್ಮ ಚಿನ್ನದ ಆಭರಣವನ್ನು ಅಲ್ಲಿ ತನ್ನಿ.

ಈ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ, ಸಾಲದಾತರು ಆಭರಣಗಳ ಮೌಲ್ಯವನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ನಿಮಗಾಗಿ ಚಿನ್ನದ ಆಭರಣಗಳ ಮೇಲೆ ಸೂಕ್ತವಾದ ಲೋನ್ ಮೊತ್ತವನ್ನು ಅನುಮೋದಿಸುತ್ತಾರೆ, ಇದು ಸಾಮಾನ್ಯವಾಗಿ ತ್ವರಿತ ವಿತರಣೆಯನ್ನು ಅನುಸರಿಸುತ್ತದೆ. ಪರ್ಯಾಯವಾಗಿ, ನೀವು ಫೋನ್ ಕರೆ ಮತ್ತು ಬ್ರಾಂಚ್ ಭೇಟಿ ಮೂಲಕ ಅಪ್ಲೈ ಮಾಡಬಹುದು.

ಆಭರಣ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ಗೋಲ್ಡ್ ಲೋನ್‌ನ ಕೆಲವು ಸಾಮಾನ್ಯ ಫೀಚರ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ.
  • ರೂ. 2 ಕೋಟಿಯವರೆಗಿನ ಹಣಕಾಸು: ರೂ. 2 ಕೋಟಿಯವರೆಗಿನ ಹೆಚ್ಚಿನ ಮೌಲ್ಯದ ಗೋಲ್ಡ್ ಲೋನ್‌ನೊಂದಿಗೆ ಸಾಲಗಾರರು ತಮ್ಮ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು.
  • ಚಿನ್ನದ ಸಂಗ್ರಹ ಮತ್ತು ಸಂಗ್ರಹಣೆಗಾಗಿ ಉನ್ನತ ಸುರಕ್ಷತಾ ಪ್ರೋಟೋಕಾಲ್‌ಗಳು: ನಿಮ್ಮ ಚಿನ್ನದ ಆಭರಣಗಳನ್ನು 24/7 ಕಣ್ಗಾವಲು ಅಡಿಯಲ್ಲಿ ಹೆಚ್ಚು ಸುರಕ್ಷಿತ ವಾಲ್ಟ್‌ಗಳಲ್ಲಿ ಇಡಲಾಗುತ್ತದೆ.
  • ನಿಖರತೆ ಮತ್ತು ಪಾರದರ್ಶಕತೆ: ಚಿನ್ನದ ಆಭರಣಗಳ ಮೌಲ್ಯಮಾಪನದ ಸಮಯದಲ್ಲಿ, ಸಾಲಗಾರರಿಗೆ ನಿಖರತೆ ಮತ್ತು ಪಾರದರ್ಶಕತೆಯ ಬಗ್ಗೆ ಖಚಿತವಾಗಿರಬಹುದು. ನಾವು ಉದ್ಯಮ-ದರ್ಜೆಯ ಕ್ಯಾರಟ್ ಮೀಟರ್‌ಗಳನ್ನು ಬಳಸುತ್ತೇವೆ, ಆದ್ದರಿಂದ ನೀವು ನಿಮ್ಮಪ್ರತಿ ಗ್ರಾಂಗೆ ಗೋಲ್ಡ್ ಲೋನ್‌ನ ಸರಿಯಾದ ಹಣಕಾಸಿನ ಮೌಲ್ಯವನ್ನು ಪಡೆಯುತ್ತೀರಿ.
  • ಅನುಕೂಲಕರ ಮರುಪಾವತಿ: ಸಾಲಗಾರರು ತಮ್ಮ ಬಜೆಟ್‌ಗಳಿಗೆ ಸರಿಹೊಂದುವಂತೆ ಹಲವಾರು ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಮಾಸಿಕ, ದ್ವಿ-ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಬಹುದು.
  • ಭಾಗಶಃ ಬಿಡುಗಡೆಯ ಸೌಲಭ್ಯ: ನಿಮಗೆ ಅಡವಿಡಲಾದ ಆಭರಣಗಳ ಭಾಗದ ಅಗತ್ಯವಿದ್ದರೆ, ಚಿನ್ನದ ವಸ್ತುಗಳ ಭಾಗಶಃ ಬಿಡುಗಡೆಯನ್ನು ಪಡೆಯಲು ಆಯ್ಕೆ ಇದೆ ಆದರೆ ಅದಕ್ಕಾಗಿ ನೀವು ಸಮಾನ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ.
  • ಮುಂಪಾವತಿ ಆಯ್ಕೆಗಳು: ಯಾವುದೇ ವೆಚ್ಚವಿಲ್ಲದೆ ಕಾಲಾವಧಿ ಮುಗಿಯುವ ಮೊದಲು ಯಾವುದೇ ಸಮಯದಲ್ಲಿ ನಿಮ್ಮ ಲೋನ್ ಅಕೌಂಟನ್ನು ಭಾಗಶಃ-ಮುಂಪಾವತಿ ಅಥವಾ ಫೋರ್‌ಕ್ಲೋಸ್ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.
  • ಅಡವಿಡಲಾದ ಚಿನ್ನದ ಉಚಿತ ಇನ್ಶೂರೆನ್ಸ್: ನಾವು ಅಡವಿಡಲಾದ ಚಿನ್ನದ ಉಚಿತ ಇನ್ಶೂರೆನ್ಸ್ ಅನ್ನು ಒದಗಿಸುತ್ತೇವೆ, ಇದು ಅದನ್ನು ಕಳ್ಳತನ, ಬೆಂಕಿ ಮತ್ತು ಇತರ ನೈಸರ್ಗಿಕ ವಿಕೋಪಗಳ ವಿರುದ್ಧ ಕವರ್ ಮಾಡುತ್ತದೆ, ಇದು ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.

ಜ್ಯುವೆಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಚಿನ್ನದ ಆಭರಣಗಳನ್ನು ಅಡವಿಡುವ ಮೂಲಕ ಮತ್ತು ನಾಮಮಾತ್ರದ ಜ್ಯುವೆಲ್ ಲೋನ್ ಬಡ್ಡಿ ದರಗಳಲ್ಲಿ ಮರುಪಾವತಿಸುವ ಮೂಲಕ ನೀವು ಅಗತ್ಯ ಹಣಕಾಸಿಗೆ ಅಕ್ಸೆಸ್ ಪಡೆಯಬಹುದು. ಅಂತಹ ಮುಂಗಡಗಳ ಮೇಲಿನ ಇತರ ದರಗಳು ಮತ್ತು ಶುಲ್ಕಗಳು ಪಾರದರ್ಶಕ ಮತ್ತು ಕೈಗೆಟಕುವಂತಿವೆ.

ನಿಮ್ಮ ಹಣಕಾಸನ್ನು ಸರಿಯಾಗಿ ಲೆಕ್ಕ ಹಾಕಲು ಗೋಲ್ಡ್ ಮಾರುಕಟ್ಟೆ ದರಗಳು ಮತ್ತು ಹಣದುಬ್ಬರದ ದರಗಳನ್ನು ಪರಿಶೀಲಿಸಿ. ನಿಮ್ಮ ಅಪ್ಲಿಕೇಶನ್ನಿನ ತೊಂದರೆ ರಹಿತ ಪ್ರಕ್ರಿಯೆಯನ್ನು ಅನುಭವಿಸಲು ಆಭರಣಗಳ ಮೇಲಿನ ಲೋನಿಗೆ ಅಪ್ಲೈ ಮಾಡುವ ಮೊದಲು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ವ್ಯವಸ್ಥೆ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಜ್ಯುವೆಲ್ ಲೋನ್ ಎಂದರೇನು?

ಜ್ಯುವೆಲ್ ಲೋನ್ ಸುರಕ್ಷಿತ ಹಣಕಾಸಿನ ರೂಪವಾಗಿದೆ, ಇಲ್ಲಿ ನೀವು ಸಾಲದಾತರಿಗೆ ಅಡಮಾನವಾಗಿ ಸಲ್ಲಿಸಲಾಗುವ ನಿಮ್ಮ 22-ಕ್ಯಾರಟ್ ಚಿನ್ನದ ಆಭರಣಗಳ ಮೇಲೆ ಹಣವನ್ನು ಪಡೆಯಬಹುದು.

ಜ್ಯುವೆಲ್ ಲೋನ್ ಮೇಲಿನ ಬಡ್ಡಿ ದರ ಎಷ್ಟು?

ಬಜಾಜ್ ಫಿನ್‌ಸರ್ವ್ ವಾರ್ಷಿಕ 9.50% ರಿಂದ ಆರಂಭವಾಗುವ ನಾಮಮಾತ್ರದ ಜ್ಯುವೆಲ್ ಲೋನ್ ಬಡ್ಡಿ ದರಗಳನ್ನು ವಿಧಿಸುತ್ತದೆ.

ಜ್ಯುವೆಲ್ ಲೋನ್ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ನಿಮ್ಮ ಮರುಪಾವತಿ ಯೋಜನೆಯ ಆವರ್ತನವು ನಿಮ್ಮ ಜ್ಯುವೆಲ್ ಲೋನ್ ಮೇಲೆ ವಿಧಿಸಲಾಗುವ ಬಡ್ಡಿಯ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಆಗಾಗ್ಗೆ ಮತ್ತು ನಿಯಮಿತ ಬಡ್ಡಿ ಪಾವತಿಗಳೊಂದಿಗೆ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ, ನೀವು ಕಡಿಮೆ ಆಭರಣ ಲೋನ್ ಬಡ್ಡಿ ದರವನ್ನು ಪಡೆಯುತ್ತೀರಿ.

ನಾವು ಆಭರಣಗಳ ಮೇಲೆ ಲೋನ್ ಪಡೆಯಬಹುದೇ?

ಹೌದು, ನೀವು 22-ಕ್ಯಾರಟ್ ಚಿನ್ನದ ಆಭರಣಗಳ ಮೇಲೆ ರೂ. 2 ಕೋಟಿಯವರೆಗಿನ ಲೋನನ್ನು ಪಡೆಯಬಹುದು. ಬೇರೆ ಸ್ವರೂಪದ ಚಿನ್ನವನ್ನು ಅಡಮಾನವಾಗಿ ಅಂಗೀಕರಿಸಲಾಗುವುದಿಲ್ಲ ಎಂಬುದನ್ನು ಗಮನಿಸಿ.