ಬಿಸಿನೆಸ್ ಲೋನಿಗೆ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ?
2 ನಿಮಿಷದ ಓದು
ಸಣ್ಣ ಬಿಸಿನೆಸ್ ಮಾಲೀಕರಾಗಿ, ನೀವು ಅಪ್ಲೈ ಮಾಡುವ ಬಿಸಿನೆಸ್ ಲೋನಿನ ಅನುಮೋದನೆಯಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಕಂಪನಿಯ ಬಗ್ಗೆ ಸಾಕಷ್ಟು ಹಣಕಾಸಿನ ಮಾಹಿತಿ ಇಲ್ಲದಿದ್ದಾಗ ನಿಮ್ಮ ವೈಯಕ್ತಿಕ ಸಿಬಿಲ್ ಸ್ಕೋರ್ ಕೂಡ ಮುಖ್ಯವಾಗಿರುತ್ತದೆ. ಹೆಚ್ಚಿನ ಸಿಬಿಲ್ ಸ್ಕೋರ್ ಬಿಸಿನೆಸ್ ಲೋನನ್ನು ತ್ವರಿತವಾಗಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ನೀವು ಈಗ ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಉಚಿತವಾಗಿ.
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರದೆ ಇದನ್ನು ಮಾಡಲು, ಕೇವಲ 3 ನಿಮಿಷಗಳಲ್ಲಿ*, ಈ ಸರಳ ಹಂತಗಳನ್ನು ಅನುಸರಿಸಿ:
- ಆನ್ಲೈನ್ ಫಾರ್ಮ್ ನಲ್ಲಿ ಕೆಲವು ಮೂಲಭೂತ ವಿವರಗಳನ್ನು ನಮೂದಿಸಿ
- ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಯಲ್ಲಿ ಒಟಿಪಿ ಪಡೆಯಲು ಫಾರ್ಮ್ ಸಲ್ಲಿಸಿ
- ಒಟಿಪಿಯನ್ನು ಖಚಿತಪಡಿಸುವ ಮೂಲಕ ನಿಮ್ಮ ಗುರುತನ್ನು ವೆರಿಫೈ ಮಾಡಿ
- ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆನ್ಲೈನಿನಲ್ಲಿ ಪರಿಶೀಲಿಸಿ
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಮತ್ತು ಅದನ್ನು ಸುಧಾರಿಸಲು ನೀವು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿಯಲು ನಿಮ್ಮ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಅನ್ನು ನೀವು ಡೌನ್ಲೋಡ್ ಮಾಡಬಹುದು.
ಇನ್ನಷ್ಟು ಓದಿರಿ
ಕಡಿಮೆ ಓದಿ