ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಸ್ಟೇಟ್ಮೆಂಟನ್ನು ಪರಿಶೀಲಿಸಿ

2 ನಿಮಿಷದ ಓದು

ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಮಾಸಿಕ ಲೋನ್ ಅಕೌಂಟ್ ಸ್ಟೇಟ್‌ಮೆಂಟ್ ನೀಡುತ್ತವೆ. ಈ ಡಾಕ್ಯುಮೆಂಟ್‌ನಲ್ಲಿ ಪಾವತಿಯ ಗಡುವು ದಿನಾಂಕ, ಲೋನ್‌ಗೆ ಪಾವತಿಸಬೇಕಾದ ಇಎಂಐ, ಬಾಕಿ ಉಳಿದಿರುವ ಮೊತ್ತ ಮತ್ತು ಇತರ ಉಪಯುಕ್ತ ವಿವರಗಳನ್ನು ಪಟ್ಟಿ ಮಾಡಲಾಗಿರುತ್ತದೆ. ಸಾಲಗಾರರಾಗಿ, ನಿಮ್ಮ ಪರ್ಸನಲ್ ಲೋನ್ ಸ್ಟೇಟ್‌ಮೆಂಟ್ ಪರಿಶೀಲಿಸುವುದರಿಂದ, ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಹಾಗೂ ಎಷ್ಟು ಮರುಪಾವತಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಬಹುತೇಕ ಹಣಕಾಸು ಸಂಸ್ಥೆಗಳು ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡರಲ್ಲೂ ಪರ್ಸನಲ್ ಲೋನ್‌ ಸ್ಟೇಟ್ಮೆಂಟ್‌ ಒದಗಿಸುತ್ತವೆ. ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅಕೌಂಟ್ ಸ್ಟೇಟ್ಮೆಂಟ್ ಪರಿಶೀಲಿಸಲು ಹೀಗೆ ಮಾಡಿ:

1. ವೆಬ್‌ಸೈಟ್ ಮೂಲಕ

ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ಮತ್ತು ಇತರ ಲೋನ್ ವಿವರಗಳನ್ನು ಪರಿಶೀಲಿಸಲು ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಬಳಸಿ.

  • ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಗ್ರಾಹಕ ಐಡಿ ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ಪಡೆಯುವ ಒಟಿಪಿ ನಮೂದಿಸಿ, ಲಾಗಿನ್ ಆಗಿರಿ.
  • ಲಾಗಿನ್ ಆದ ನಂತರ, 'ಸೇವೆಗಳು' ಮೇಲೆ ಕ್ಲಿಕ್ ಮಾಡಿ, ನಂತರ 'ವಿವರಗಳನ್ನು ನೋಡಿ' ಮೇಲೆ ಕ್ಲಿಕ್ಕಿಸಿ.’
  • ನಿಮ್ಮ ಲೋನ್ ಸ್ಟೇಟ್ಮೆಂಟನ್ನು ಆನ್ಲೈನಿನಲ್ಲಿ ನೋಡಲು 'ಇ-ಸ್ಟೇಟ್ಮೆಂಟ್‌ಗಳು' ಆಯ್ಕೆಮಾಡಿ. ನಿಮ್ಮ ವೈಯಕ್ತಿಕ ದಾಖಲೆಗಳಿಗೆ ನೀವು ಸ್ಟೇಟ್ಮೆಂಟ್‌ಗಳನ್ನು ಕೂಡ ಡೌನ್ಲೋಡ್ ಮಾಡಬಹುದು.

2. ಮೊಬೈಲ್ ಆ್ಯಪ್ ಮೂಲಕ

ಸ್ಟೇಟ್ಮೆಂಟ್‌ಗಳನ್ನು ನೋಡಲು ಮತ್ತು ಇತರ ಲೋನ್ ವಿವರಗಳನ್ನು ಟ್ರ್ಯಾಕ್ ಮಾಡಲು ನೀವು ಬಜಾಜ್ ಫಿನ್‌ಸರ್ವ್‌ ಲೋನ್ ಆ್ಯಪ್‌ ಅನ್ನು ಕೂಡ ಬಳಸಬಹುದು.

  • ನಿಮ್ಮ ಸ್ಮಾರ್ಟ್‌ಫೋನಿನ ಆ್ಯಪ್‌ ಸ್ಟೋರಿನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
  • ನಿಮ್ಮ ಗ್ರಾಹಕ ಐಡಿ, ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಮತ್ತು ನಿಮ್ಮ ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ.
  • ಒಮ್ಮೆ ಲಾಗಿನ್ ಆದ ನಂತರ, ನಿಮ್ಮ ಪರ್ಸನಲ್ ಲೋನ್ ಅಕೌಂಟಿಗೆ ಹೋಗಿ ಮತ್ತು ನಿಮ್ಮ ಸ್ಟೇಟ್ಮೆಂಟನ್ನು ನೋಡಲು 'ಇ-ಸ್ಟೇಟ್ಮೆಂಟ್‌ಗಳನ್ನು' ಆಯ್ಕೆ ಮಾಡಿ.

3. ಶಾಖೆಯ ಮೂಲಕ

ನೀವು ನಿಮ್ಮ ಲೋನ್ ಅಕೌಂಟ್ ಸ್ಟೇಟ್ಮೆಂಟನ್ನು ಆನ್ಲೈನಿನಲ್ಲಿ ಪರಿಶೀಲಿಸಲು ಬಯಸದಿದ್ದರೆ, ನಿಮ್ಮ ಲೋನ್ ಸ್ಟೇಟ್ಮೆಂಟಿಗೆ ತ್ವರಿತ ಅಕ್ಸೆಸ್ ಪಡೆಯಲು ಹತ್ತಿರದ ಶಾಖೆಗೆ ಭೇಟಿ ನೀಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ