ಹೋಮ್ ಲೋನ್ ಮುಂಪಾವತಿ ಕ್ಯಾಲ್ಕುಲೇಟರ್
ಪೂರ್ವಪಾವತಿ ಎಂಬುದು ಲೋನಿನ ಪೂರ್ಣ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಭಾಗಶಃ (ಅಥವಾ ಪೂರ್ಣ) ಲೋನನ್ನು ಮರುಪಾವತಿಸುವ ಮೂಲಕ ನಿಮ್ಮ ಲೋನನ್ನು ಕಡಿಮೆ ಮಾಡಬಹುದಾದ ಅಥವಾ ಒಟ್ಟುಗೂಡಿಸಬಹುದಾದ ಕೆಲವು ಮಾರ್ಗಗಳಲ್ಲಿ ಒಂದಾಗಿದೆ. ಇದು ನಿಮ್ಮ ಸಾಲವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಬಡ್ಡಿಯ ರೂಪದಲ್ಲಿ ಹೆಚ್ಚುವರಿ ಹಣವನ್ನು ಪಾವತಿಸುವುದರಿಂದಲೂ ನಿಮ್ಮನ್ನು ಉಳಿಸಬಹುದು.
ಮುಂಗಡ ಪಾವತಿಯೊಂದಿಗೆ ಹೋಮ್ ಲೋನ್ ಕ್ಯಾಲ್ಕುಲೇಟರ್ ನೀವು ಮುಂಗಡ ಪಾವತಿಯನ್ನು ಬಳಸಿಕೊಂಡು ಉಳಿತಾಯ ಮಾಡಬಹುದಾದ ಮೊತ್ತವನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ. ಬಳಸಲು ಸುಲಭವಾದ ಕ್ಯಾಲ್ಕುಲೇಟರ್‌ಗೆ ನೀವು ಜಾಗಗಳನ್ನು ನಮೂದಿಸಬೇಕಾಗುತ್ತದೆ:
- ಬಾಕಿ ಮೊತ್ತ
- ಅವಧಿ
- ಬಡ್ಡಿದರ
- ಮುಂಗಡ ಪಾವತಿ ಮೊತ್ತ
ನೀವು ಜಾಗಗಳಲ್ಲಿ ನಮೂದಿಸುವ ಮೌಲ್ಯಗಳ ಆಧಾರದ ಮೇಲೆ, ಮುಂಗಡ ಪಾವತಿಯ ನಂತರ ಕ್ಯಾಲ್ಕುಲೇಟರ್‌ನಲ್ಲಿ ಹೊಸ ಇಎಂಐ ಅನ್ನು ನೀವು ನೋಡಬಹುದು.
ಹೋಮ್ ಲೋನ್ ಭಾಗಶಃ-ಮುಂಪಾವತಿ ಎಫ್ಎಕ್ಯೂಗಳು
ಮುಂಗಡ ಪಾವತಿಯು ಲೋನಿನ ಮುಂಚಿತ ಮರುಪಾವತಿಯನ್ನು ಸೂಚಿಸುತ್ತದೆ. ಇದು ಅದರ ಗಡುವು ದಿನಾಂಕಕ್ಕಿಂತ ಮೊದಲು ಕಂತಿನ ಪಾವತಿಯಾಗಿದೆ ಮತ್ತು ಇದು ಸಾಮಾನ್ಯವಾಗಿ ಒಟ್ಟು ಮೊತ್ತವಾಗಿರುತ್ತದೆ. ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ಹೋಮ್ ಲೋನ್ ಮುಂಪಾವತಿಯನ್ನು ಆರಂಭಿಸಲು ಬೇಕಾದ ಕನಿಷ್ಠ ಮೊತ್ತವು ನಿಮ್ಮ ಮೂರು ಇಎಂಐ ಗಳಿಗೆ ಸಮನಾಗಿರುತ್ತದೆ. ನೀವು ನಿಮ್ಮ ಬಾಕಿಗಳ ಭಾಗವನ್ನು ಸಮಯಕ್ಕಿಂತ ಮೊದಲು ಪಾವತಿಸುವುದರಿಂದ, ಪೂರ್ವಪಾವತಿಯು ಕಡಿಮೆಗೊಳಿಸಲಾದ ಅವಧಿಯನ್ನು ಹೊಂದಿರಬಹುದು ಅಥವಾ ನಿಮ್ಮ ಇಎಂಐ ಮೊತ್ತದಲ್ಲಿ ಕಡಿಮೆ ಇರಬಹುದು.
ಹೋಮ್ ಲೋನ್ ಭಾಗಶಃ-ಮುಂಪಾವತಿ ಕ್ಯಾಲ್ಕುಲೇಟರ್ ಎಂಬುದು ನಿಮ್ಮ ಲೋನಿನ ಮುಂಚಿತ ಮರುಪಾವತಿಯ ಸಕಾರಾತ್ಮಕ ಪರಿಣಾಮವನ್ನು ತೋರಿಸುವ ಸಾಧನವಾಗಿದೆ.
ನೀವು ಮಾಡಬೇಕಾಗಿರುವುದು ಕೇವಲ ನಿಮ್ಮ ಲೋನ್ ವಿವರಗಳನ್ನು ನಮೂದಿಸಿ ಮತ್ತು ನೀವು ಮುಂಚಿತವಾಗಿ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ. ಈ ಮೊತ್ತವು ಲೆಕ್ಕ ಹಾಕಲಾದ ಇಎಂಐಗಿಂತ ಕನಿಷ್ಠ ಮೂರು ಪಟ್ಟು ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಮೌಲ್ಯಗಳನ್ನು ಅಡ್ಜಸ್ಟ್ ಮಾಡಲು ಸ್ಲೈಡರ್‌ಗಳನ್ನು ನಿಮ್ಮ ಎಡ ಅಥವಾ ಬಲಬದಿಗೆ ನೀವು ಮೂವ್ ಮಾಡಬಹುದು ಅಥವಾ ಈ ಕೆಳಗಿನವುಗಳಿಗೆ ಮೌಲ್ಯಗಳನ್ನು ನೇರವಾಗಿ ಟೈಪ್ ಮಾಡಬಹುದು:
- ಲೋನ್ ಮೊತ್ತಗಳು
- ಅವಧಿ (ತಿಂಗಳುಗಳಲ್ಲಿ)
- ಬಡ್ಡಿದರ
- ನೀವು ಪಾವತಿಸಲು ಬಯಸುವ ಭಾಗಶಃ ಮುಂಪಾವತಿ ಮೊತ್ತ
ನೀವು ಈ ವಿವರಗಳನ್ನು ನಮೂದಿಸಿದ ನಂತರ, “ಆಯಿತು” ಮೇಲೆ ಕ್ಲಿಕ್ ಮಾಡಿ. ಆಗ ನೀವು ಎರಡು ಆಯ್ಕೆಗಳನ್ನು ನೋಡಬಹುದು:
- ಉಳಿಸಿದ EMI: ಈ ಪಟ್ಟಿಯಲ್ಲಿ, ನಿಮ್ಮ EMI ನಲ್ಲಿ ಇಳಿಕೆ ಹಾಗೂ ಫೋಸ್ಟ್ EMI ಭಾಗಶಃ - ಮುಂಗಡ ಪಾವತಿಯಲ್ಲಿ, ತಿಂಗಳಿನ ಉಳಿತಾಯಗಳನ್ನು ತಿಳಿಸಲಾಗಿದೆ
- ಉಳಿಸಿದ ಮರುಪಾವತಿ ಅವಧಿ: ಈ ಪಟ್ಟಿಯಲ್ಲಿ, ನಿಮ್ಮ ಫೋಸ್ಟ್ ಮರುಪಾವತಿ ಅವಧಿಯಲ್ಲಿನ ಭಾಗಶಃ - ಮುಂಗಡ ಪಾವತಿಯ ಇಳಿಕೆಯನ್ನು ತೋರಿಸಲಾಗಿದೆ.
ಹೋಮ್ ಲೋನ್ ಮುಂಪಾವತಿಯು ಕಡಿಮೆಯಾಗುವ ಬಾಕಿ, ಕಡಿಮೆ ಅವಧಿ ಮತ್ತು ಸಣ್ಣ ಇಎಂಐ ಗಳು ಮುಂತಾದ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ. ದೀರ್ಘಾವಧಿಯಲ್ಲಿ, ಮುಂಚಿತವಾಗಿ ಸಾಲ ಮುಕ್ತರಾಗಲು ಮುಂಚಿತ ಪಾವತಿಗಳು ನಿಮಗೆ ಸಹಾಯ ಮಾಡುತ್ತವೆ, ಇದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತದೆ.
ನೀವು ನಿಮ್ಮ ಹೋಮ್ ಲೋನಿನ ಭಾಗವನ್ನು ಮುಂಗಡ ಪಾವತಿ ಮಾಡಿದಾಗ, ನೀವು ಎರಡು ಆಯ್ಕೆಗಳನ್ನು ಹೊಂದಿರುತ್ತೀರಿ. ನೀವು ಅಥವಾ ನಿಮ್ಮ ಸಾಲದಾತರು ಅವಧಿಯನ್ನು ಕಡಿಮೆ ಮಾಡಬಹುದು, ಈ ಸಂದರ್ಭದಲ್ಲಿ ನೀವು ಅದೇ ಮೊತ್ತವನ್ನು ಇಎಂಐ ಆಗಿ ಪಾವತಿಸುತ್ತೀರಿ ಅಥವಾ ನಿಮ್ಮ ಇಎಂಐ ಗಳು ಕಡಿಮೆಯಾದ ಸಂದರ್ಭದಲ್ಲಿ ನೀವು ಅದೇ ಅವಧಿಯೊಂದಿಗೆ ಮುಂದುವರಿಯಬಹುದು.
ಇದು ಹೋಮ್ ಲೋನ್ ಬಡ್ಡಿ ದರ ಪ್ರಕಾರವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಫ್ಲೋಟಿಂಗ್ ಬಡ್ಡಿ ದರದ ಹೋಮ್ ಲೋನ್ ಹೊಂದಿರುವ ವ್ಯಕ್ತಿಗಳು ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸುವುದಿಲ್ಲ. ಮತ್ತೊಂದೆಡೆ, ಫಿಕ್ಸೆಡ್ ಬಡ್ಡಿ ದರದ ಹೋಮ್ ಲೋನ್‌ಗಳು ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ನಾಮಮಾತ್ರದ ಶುಲ್ಕವನ್ನು ಆಕರ್ಷಿಸುತ್ತವೆ.