35000 ಸಂಬಳದ ವಿವರಗಳ ಮೇಲೆ ಹೋಮ್ ಲೋನ್

ವ್ಯಕ್ತಿಗಳು ಹೌಸಿಂಗ್ ಲೋನ್ ಗೆ ಅಪ್ಲೈ ಮಾಡುವ ಮೊದಲು, ಅವರು ತಮ್ಮ ಲೋನ್ ಮೊತ್ತದ ಅರ್ಹತೆಗೆ ಹೊಣೆ ಹೊಂದಿರುವ ವಿವಿಧ ಅಂಶಗಳ ಬಗ್ಗೆ ತಿಳಿದಿರಬೇಕು. ಈ ಅಂಶಗಳು ವ್ಯಕ್ತಿಯ ಸಂಬಳ, ವಯಸ್ಸು, ಪ್ರಸ್ತುತ ಜವಾಬ್ದಾರಿಗಳು, ಬಯಸಿದ ಆಸ್ತಿ ಸ್ಥಳ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ.

ಆದಾಗ್ಯೂ, ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಸಹಾಯದಿಂದ ಅಪ್ಲೈ ಮಾಡುವ ಮೊದಲು ಒಬ್ಬರು ಯಾವಾಗಲೂ ಅವರ ಲೋನ್ ಮೊತ್ತದ ಅರ್ಹತೆಯನ್ನು ಕಂಡುಕೊಳ್ಳಬಹುದು.

ರೂ. 35,000 ಸಂಬಳದ ಮೇಲೆ ನಾನು ಎಷ್ಟು ಹೋಮ್ ಲೋನ್ ಪಡೆಯಬಹುದು?

ಈ ಕೆಳಗಿನ ಪಟ್ಟಿಯು ಒಬ್ಬ ವ್ಯಕ್ತಿಯು ತನ್ನ ಪ್ರಸ್ತುತ ಸಂಬಳ, ಪ್ರಸ್ತುತ ಜವಾಬ್ದಾರಿಗಳು, ಸ್ಥಳ ಮತ್ತು 20 ವರ್ಷಗಳ ಅವಧಿಯ ಆಧಾರದ ಮೇಲೆ ಅರ್ಹರಾಗಿರುವ ಲೋನ್ ಮೊತ್ತದ ಸಂಪೂರ್ಣ ಮೇಲ್ನೋಟವನ್ನು ಒದಗಿಸುತ್ತದೆ.

ಒಟ್ಟು ತಿಂಗಳ ಆದಾಯ

ಹೋಮ್ ಲೋನ್ ಮೊತ್ತ**

ರೂ. 35,000

ರೂ. 29,19,460

ರೂ. 34,000

ರೂ. 28,36,047

ರೂ. 33,000

ರೂ. 27,52,633

ರೂ. 32,000

ರೂ. 26,69,220

ರೂ. 31,000

ರೂ. 25,85,807


**ಮೇಲೆ ದೊರೆತಿರುವ ಹೋಮ್‌ ಲೋನ್‌ ಮೊತ್ತವನ್ನು ಬಜಾಜ್‌ ಫಿನ್ಸರ್ವ್ ಅರ್ಹತೆ ಕ್ಯಾಲ್ಕುಲೇಟರ್‌ ಬಳಸಿ ಕಂಡುಕೊಳ್ಳಲಾಗಿದೆ. ನಿಜವಾದ ಸಾಲದ ಮೊತ್ತ ನಗರ, ವಯಸ್ಸು ಮತ್ತು ಇತರ ಅಂಶಗಳೊಂದಿಗೆ ಬದಲಾಗುತ್ತದೆ.

ಇದರೊಂದಿಗೆ, ವ್ಯಕ್ತಿಗಳು 35000 ಸಂಬಳದ ಮೇಲೆ ಹೋಮ್ ಲೋನಿಗೆ ಅರ್ಹರಾಗಿರುವ ಮೊತ್ತವನ್ನು ಕಂಡುಹಿಡಿಯಬಹುದು. ಇತರ ಆದಾಯದ ಮೂಲಗಳನ್ನು ಒಳಗೊಂಡಂತೆ ಅವರು ತಮ್ಮ ಲೋನ್ ಮೊತ್ತದ ಅರ್ಹತೆಯನ್ನು ಹೆಚ್ಚಿಸಬಹುದು.

ನಿರಾಕರಣೆಗಳನ್ನು ತಪ್ಪಿಸಲು ಅಪ್ಲೈ ಮಾಡುವ ಮೊದಲು ವ್ಯಕ್ತಿಗಳು ಹೋಮ್ ಲೋನ್ ಅರ್ಹತಾ ಮಾನದಂಡಗಳ ಬಗ್ಗೆ ಕೂಡ ತಿಳಿದಿರಬೇಕು.

ನನ್ನ ಹೋಮ್ ಲೋನ್ ಅರ್ಹತೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ಬಜಾಜ್ ಫಿನ್‌ಸರ್ವ್‌ನಿಂದ ಆನ್ಲೈನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ವ್ಯಕ್ತಿಗಳು ತಮ್ಮ ಹೋಮ್ ಲೋನ್‌ಗಳ ಅರ್ಹತೆಯನ್ನು ಪರಿಶೀಲಿಸಬಹುದು. ಇದನ್ನು ಬಳಸುವ ಹಂತವಾರು ಮಾರ್ಗದರ್ಶಿ ಇಲ್ಲಿದೆ:

ಹಂತ 1: ವೆಬ್‌ಸೈಟ್‌ನಲ್ಲಿ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಪುಟವನ್ನು ತೆರೆಯಿರಿ.

ಹಂತ 2: ಈ ಕೆಳಗಿನ ವಿವರಗಳನ್ನು ನಮೂದಿಸಿ:

  • ಜನ್ಮ ದಿನಾಂಕ
  • ನಿವಾಸದ ನಗರ
  • ನಿವ್ವಳ ಮಾಸಿಕ ಸಂಬಳ
  • ಪ್ರಸ್ತುತ ಹಣಕಾಸಿನ ಜವಾಬ್ದಾರಿಗಳು ಮತ್ತು ಇಎಂಐಗಳು

ಹಂತ 3: 'ನಿಮ್ಮ ಅರ್ಹತೆಯನ್ನು ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ

ಹಂತ 4: ಕ್ಯಾಲ್ಕುಲೇಟರ್ ಲೆಕ್ಕ ಹಾಕುತ್ತದೆ ಮತ್ತು ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ತೋರಿಸುತ್ತದೆ. ಸೂಕ್ತ ಲೋನ್ ಆಫರನ್ನು ಹುಡುಕಲು ವಿವಿಧ ಟ್ಯಾಬ್‌ಗಳಲ್ಲಿನ ಎಲ್ಲಾ ವಿವರಗಳನ್ನು ಸರಿಹೊಂದಿಸಿ.

ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಹೋಮ್ ಲೋನಿಗೆ ಅಪ್ಲೈ ಮಾಡುವಾಗ ಅರ್ಹ ವ್ಯಕ್ತಿಗಳು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ಆದಾಯದ ಪುರಾವೆ (ಸಂಬಳದ ಸ್ಲಿಪ್‌ಗಳು, ಬಿಸಿನೆಸ್‌ನ ಹಣಕಾಸಿನ ಡಾಕ್ಯುಮೆಂಟ್‌ಗಳು, ಫಾರ್ಮ್ 16)
  • ಕೆವೈಸಿ ಡಾಕ್ಯುಮೆಂಟ್‌ಗಳು
  • ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಬಿಸಿನೆಸ್ ಮುಂದುವರಿಕೆಯ ಪುರಾವೆ

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಪ್ರಯೋಜನಗಳು ಯಾವುವು?

ಬಜಾಜ್ ಫಿನ್‌ಸರ್ವ್‌ನಿಂದ 35000 ಸಂಬಳದ ಮೇಲಿನ ಹೋಮ್ ಲೋನ್ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ:

  • Longer repayment tenor

    ದೀರ್ಘ ಮರುಪಾವತಿ ಅವಧಿ

    ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನ್‌ಗಳನ್ನು ಆಯ್ಕೆ ಮಾಡುವ ವ್ಯಕ್ತಿಗಳು ಗರಿಷ್ಠ 30 ವರ್ಷಗಳ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ದೀರ್ಘ ಮರುಪಾವತಿ ಅವಧಿಯು ಇಎಂಐಗಳನ್ನು ಕೈಗೆಟಕುವಂತೆ ಮಾಡುತ್ತದೆ ಮತ್ತು ಜನರು ಯಾವುದೇ ತೊಂದರೆಯಿಲ್ಲದೆ ಕ್ರೆಡಿಟ್ ಮೊತ್ತವನ್ನು ಮರುಪಾವತಿ ಮಾಡಬಹುದು. ಈ ವಿಷಯದಲ್ಲಿ, ಜನರು ತಮ್ಮ ಅತ್ಯುತ್ತಮವಾದ ಮರುಪಾವತಿ ಅವಧಿಯನ್ನು ಕಂಡುಹಿಡಿಯಲು ಇಎಂಐ ಕ್ಯಾಲ್ಕುಲೇಟರ್ ಅನ್ನು ಕೂಡ ಬಳಸಬಹುದು.

  • High loan amount

    ಹೆಚ್ಚಿನ ಲೋನ್ ಮೊತ್ತ

    ಬಜಾಜ್ ಫಿನ್‌ಸರ್ವ್‌ ಅರ್ಹತೆಯ ಆಧಾರದ ಮೇಲೆ ಗರಿಷ್ಠ ರೂ. 5 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನ್ ಮೊತ್ತವನ್ನು ಒದಗಿಸುತ್ತದೆ. ಅರ್ಜಿದಾರರ ಅರ್ಹತೆಯ ಆಧಾರದ ಮೇಲೆ ಈ ಲೋನ್ ಮೊತ್ತವು ಅದಕ್ಕಿಂತಲೂ ಹೆಚ್ಚು ಹೋಗಬಹುದು.

  • Disbursal within 48 hours*

    48 ಗಂಟೆಗಳ ಒಳಗೆ ವಿತರಣೆ*

    ಅಗತ್ಯವಿರುವ ಪೇಪರ್‌ವರ್ಕ್ ಮತ್ತು ಆಸ್ತಿ ಪರಿಶೀಲನೆಯ ನಂತರ ಲೋನ್ ಅಪ್ಲಿಕೇಶನ್ ಅನುಮೋದನೆ ಪಡೆದ ನಂತರ, ಜನರು 48 ಗಂಟೆಗಳ ಅವಧಿಯಲ್ಲಿ ಲೋನ್ ಮೊತ್ತವನ್ನು ಪಡೆಯುವುದನ್ನು ನಿರೀಕ್ಷಿಸಬಹುದು*.

  • PMAY benefits

    PMAY ಪ್ರಯೋಜನಗಳು

    ನೋಂದಾಯಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿ, ಬಜಾಜ್ ಫಿನ್‌ಸರ್ವ್ ಈ ಎನ್‌‌ಬಿಎಫ್‌‌ಸಿಯಿಂದ ಹೋಮ್ ಲೋನ್‌ಗಳನ್ನು ಪಡೆಯುವ ವ್ಯಕ್ತಿಗಳಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸುತ್ತದೆ.

  • Easy balance transfer

    ಸುಲಭವಾದ ಬ್ಯಾಲೆನ್ಸ್ ವರ್ಗಾವಣೆ

    ಬಜಾಜ್ ಫಿನ್‌ಸರ್ವ್‌ನೊಂದಿಗೆ, ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಹಿಂದೆಂದಿಗಿಂತಲೂ ಸುಲಭವಾಗಿದೆ. ಈ ಸೌಲಭ್ಯದೊಂದಿಗೆ ವ್ಯಕ್ತಿಗಳು ಗರಿಷ್ಠ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನನ್ನು ಪಡೆಯಬಹುದು.

  • Online account management

    ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ಆನ್ಲೈನ್ ಬಜಾಜ್ ಫಿನ್‌ಸರ್ವ್‌ ಗ್ರಾಹಕ ಪೋರ್ಟಲ್‌ನೊಂದಿಗೆ, ಮೊತ್ತವನ್ನು ವಿತರಿಸಿದ ನಂತರ ವ್ಯಕ್ತಿಗಳು ಸುಲಭವಾಗಿ ತಮ್ಮ ಲೋನ್‌ಗಳನ್ನು ನಿರ್ವಹಿಸಬಹುದು. ಇದಲ್ಲದೆ, ವ್ಯಕ್ತಿಗಳು ಲೋನ್ ಡಾಕ್ಯುಮೆಂಟ್‌ಗಳು, ಸ್ಟೇಟ್ಮೆಂಟ್‌ಗಳನ್ನು ಅಕ್ಸೆಸ್ ಮಾಡಬಹುದು ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲಿಂದಲಾದರೂ ಇಎಂಐಗಳನ್ನು ಪಾವತಿಸಬಹುದು.

  • Zero additional charges on part-prepayments or foreclosure

    ಭಾಗಶಃ-ಮುಂಗಡ ಪಾವತಿಗಳು ಅಥವಾ ಫೋರ್‌ಕ್ಲೋಸರ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

    ನಿಯಮಿತ ಹೋಮ್ ಲೋನ್ ಇಎಂಐಗಳ ಹೊರತಾಗಿ, ವ್ಯಕ್ತಿಗಳು ತಮ್ಮ ಲೋನ್ ಅಕೌಂಟ್‌ಗಳನ್ನು ಫೋರ್‌ಕ್ಲೋಸ್ ಮಾಡಬಹುದು ಅಥವಾ ಅವರು ಇಷ್ಟಪಡುವಾಗ ಭಾಗಶಃ ಪಾವತಿಗಳನ್ನು ಮಾಡಬಹುದು. ಅದಕ್ಕೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ.

    ಇವುಗಳ ಹೊರತಾಗಿ, ವ್ಯಕ್ತಿಗಳು ಸೆಕ್ಷನ್‌ಗಳಾದ 80C ಮತ್ತು 24B ಅಡಿಯಲ್ಲಿ ಹೋಮ್ ಲೋನ್‌ಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದು.

ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

35000 ಸಂಬಳದ ಮೇಲೆ ಹೋಮ್ ಲೋನಿಗೆ ಅಪ್ಲೈ ಮಾಡಲು ಇಚ್ಛಿಸುವ ವ್ಯಕ್ತಿಗಳು ಈ ಸರಳ ಹಂತಗಳನ್ನು ಅನುಸರಿಸಬಹುದು:

  1. 1 ಬಜಾಜ್ ಫಿನ್‌ಸರ್ವ್‌ನ ಅಧಿಕೃತ ವೆಬ್‌ಸೈಟಿಗೆ ಹೋಗಿ
  2. 2 ಎಲ್ಲಾ ಅಗತ್ಯ ವಿವರಗಳೊಂದಿಗೆ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ
  3. 3 ಆರಂಭಿಕ ಅನುಮೋದನೆಯನ್ನು ಪಡೆದ ನಂತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
  4. 4 ಆಸ್ತಿ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲು ಬಜಾಜ್ ಫಿನ್‌ಸರ್ವ್‌ನ ಪ್ರತಿನಿಧಿಗಳು ಅವರನ್ನು ಸಂಪರ್ಕಿಸುತ್ತಾರೆ
  5. 5 ಯಶಸ್ವಿ ಆಸ್ತಿ ಮತ್ತು ಡಾಕ್ಯುಮೆಂಟ್ ಪರಿಶೀಲನೆಯ ನಂತರ ವ್ಯಕ್ತಿಗಳು ಲೋನ್ ಮಂಜೂರಾತಿ ಪತ್ರವನ್ನು ಪಡೆಯುತ್ತಾರೆ
  6. 6 ಲೋನ್ ಒಪ್ಪಂದಕ್ಕೆ ಸಹಿ ಮಾಡಿ ಮತ್ತು ಅಗತ್ಯವಿರುವ ಶುಲ್ಕವನ್ನು ಪಾವತಿಸಿದ ನಂತರ, ವ್ಯಕ್ತಿಗಳು ಲೋನ್ ಮೊತ್ತವನ್ನು ಪಡೆಯುತ್ತಾರೆ

ಹೋಮ್ ಲೋನ್‌ಗೆ ನನ್ನ ಅರ್ಹತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು?

ವ್ಯಕ್ತಿಗಳು ಈ ಸಲಹೆಗಳೊಂದಿಗೆ ತಮ್ಮ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸಬಹುದು:

  • ಸಹ-ಅರ್ಜಿದಾರರನ್ನು ಸೇರಿಸುವುದು
  • ಸ್ಪಷ್ಟ ಮರುಪಾವತಿ ಇತಿಹಾಸವನ್ನು ನಿರ್ವಹಿಸುವುದು
  • ದೀರ್ಘ ಲೋನ್ ಅವಧಿಯನ್ನು ಆಯ್ಕೆ ಮಾಡುವುದು
  • ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸುವುದು
  • ಹೆಚ್ಚುವರಿ ಆದಾಯದ ಮೂಲವನ್ನು ನಮೂದಿಸುವುದು

35000 ಸಂಬಳದ ಮೇಲೆ ಹೋಮ್ ಲೋನ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನವನ್ನು ಪಡೆಯಲು ವ್ಯಕ್ತಿಗಳು ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.