ಗ್ರಾಚ್ಯುಯಿಟಿ ಕ್ಯಾಲ್ಕುಲೇಟರ್

ಗ್ರಾಚ್ಯೂಟಿ ಎಂಬುದು ಉದ್ಯೋಗಿಯು ಸಂಸ್ಥೆಗೆ ನೀಡಿದ ಸೇವೆಗಳಿಗಾಗಿ ಉದ್ಯೋಗದಾತರು ಒದಗಿಸುವ ನಗದು ಹಣವಾಗಿದೆ. ಇದನ್ನು ನಿವೃತ್ತಿ, ರಾಜೀನಾಮೆ, ವಜಾ ಅಥವಾ ಕೆಲಸದಿಂದ ತೆಗೆದುಹಾಕಿರುವ ಸಂದರ್ಭದಲ್ಲಿ ಉದ್ಯೋಗದಾತರು ಉದ್ಯೋಗಿಗೆ ನೀಡುತ್ತಾರೆ, ಆದರೆ ಇದಕ್ಕಾಗಿ ಉದ್ಯೋಗಿಯು ಸಂಸ್ಥೆಯನ್ನು ಬಿಡುವ ಮೊದಲು ಐದು ವರ್ಷಗಳ ಸತತ ಸೇವೆ ಸಲ್ಲಿಸಿರಬೇಕು. ಕೆಲವು ಸಂದರ್ಭಗಳಲ್ಲಿ, ಅಂದರೆ ವ್ಯಕ್ತಿಯು ಮರಣ ಹೊಂದಿದರೆ, ಸತತ 5 ವರ್ಷ ಸೇವೆಯ ಷರತ್ತಿಗೆ ವಿನಾಯಿತಿ ಕೊಡಲಾಗುತ್ತದೆ.

ಹಕ್ಕುತ್ಯಾಗ

ಲೆಕ್ಕ ಹಾಕಲಾದ ಗ್ರಾಚ್ಯೂಟಿ ಮೊತ್ತವು ಅಂದಾಜು ಮಾತ್ರ ಮತ್ತು ಇದನ್ನು ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ, ನಿಜವಾದ ಮೊತ್ತವು ಸ್ವಲ್ಪ ಬೇರೆಯಾಗಿರಬಹುದು.

ಗ್ರಾಚ್ಯೂಟಿ ಕ್ಯಾಲ್ಕುಲೇಟರ್ ಎಂದರೇನು?

ನೀವು ಕನಿಷ್ಠ ಐದು ವರ್ಷಗಳ ಸೇವೆಯ ನಂತರ ಉದ್ಯೋಗವನ್ನು ಬಿಡಲು ಅಥವಾ ನಿವೃತ್ತಿ ಹೊಂದಲು ಬಯಸಿದರೆ ನೀವು ಪಡೆಯುವ ಹಣದ ಮೊತ್ತವನ್ನು ಅಂದಾಜು ಮಾಡಲು ಗ್ರಾಚ್ಯೂಟಿ ಕ್ಯಾಲ್ಕುಲೇಟರ್ ಬಳಸಬಹುದು. ಗ್ರಾಚ್ಯೂಟಿ ಲೆಕ್ಕಾಚಾರಕ್ಕಾಗಿ ನೀವು ಮೊದಲೇ ನೆನಪಿಡಬೇಕಾದ ಹಲವು ನಿಯಮಗಳಿವೆ. ಹಣ ಸಿಕ್ಕ ನಂತರ ನಿಮ್ಮ ಹೂಡಿಕೆಗಳನ್ನು ಸರಿಯಾಗಿ ಯೋಜಿಸಲು ನಿಟ್ಟಿನಲ್ಲಿ, ನಿಮ್ಮ ಗ್ರಾಚ್ಯೂಟಿ ಮೊತ್ತವನ್ನು ಅಂದಾಜು ಮಾಡಲು ನೆರವಾಗುವ ಅನೇಕ ನಿಯಮಗಳನ್ನು ನಾವೀಗ ನೋಡೋಣ.

ಗ್ರಾಚ್ಯೂಟಿ ಲೆಕ್ಕದ ಸೂತ್ರ

ಗ್ರಾಚ್ಯೂಟಿ ನಿಯಮಗಳು ಮತ್ತು ಲೆಕ್ಕಾಚಾರಗಳು ಗ್ರಾಚ್ಯೂಟಿ ಕಾಯಿದೆ, 1972 ನಿಂದ ಸೂಚಿತವಾಗಿವೆ.

ಅದರಲ್ಲಿ, ಈ ಕೆಳಗಿನ ಎರಡು ಪ್ರಮುಖ ಕೆಟಗರಿಗಳಿವೆ

  • ಕೆಟಗರಿ 1: ಕಾಯಿದೆಯ ವ್ಯಾಪ್ತಿಗೆ ಬರುವ ಉದ್ಯೋಗಿಗಳು
  • ಕೆಟಗರಿ 2: ಕಾಯ್ದೆಯ ವ್ಯಾಪ್ತಿಗೆ ಬರದ ಉದ್ಯೋಗಿಗಳು

ಈ ಎರಡು ಕೆಟಗರಿಗಳು ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳನ್ನು ಒಳಗೊಳ್ಳುತ್ತವೆ. ಸರ್ಕಾರಿ ಉದ್ಯೋಗಿಗಳಿಗೆ, ಅವರ ವೇತನದ ಅನುಗುಣವಾಗಿ ತುಟ್ಟಿ ಭತ್ಯೆಯಂತಹ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಜೊತೆಗೆ, ಕಳೆದ 12 ತಿಂಗಳಲ್ಲಿ ಒಂದೇ ದಿನದಂದು ಕನಿಷ್ಠ ಹತ್ತು ಉದ್ಯೋಗಿಗಳು ದುಡಿದಂತಹ ಎಲ್ಲ ಸಂಸ್ಥೆಗಳೂ ಗ್ರಾಚ್ಯೂಟಿ ಕೊಡಬೇಕು.

ಕೆಟಗರಿ 1: ಕಾಯ್ದೆಯ ವ್ಯಾಪ್ತಿಗೆ ಬರುವ ಉದ್ಯೋಗಿಗಳು

ಎರಡು ಪ್ರಮುಖ ಮಾನದಂಡಗಳನ್ನು ಬಳಸಿ ನೀವು ಈ ಕೆಳಗಿನಂತೆ ಗ್ರಾಚ್ಯೂಟಿಯನ್ನು ಲೆಕ್ಕ ಹಾಕಬಹುದು - ಅವುಗಳೆಂದರೆ ಸೇವೆ ಸಲ್ಲಿಸಿದ ವರ್ಷಗಳು ಮತ್ತು ಕಡೆಯಬಾರಿ ಪಡೆದ ವೇತನ:

ಗ್ರಾಚ್ಯೂಟಿ = ಕಡೆಯ ಬಾರಿ ಪಡೆದ ವೇತನ x (15/26*) x ಸೇವೆ ಸಲ್ಲಿಸಿದ ವರ್ಷಗಳು

*ಕೆಲಸದ ದಿನಗಳ ಸಂಖ್ಯೆಯನ್ನು ಪ್ರತಿ ತಿಂಗಳಿಗೆ 26 ದಿನಗಳೆಂದು ಪರಿಗಣಿಸಲಾಗುತ್ತದೆ.

**ಗ್ರಾಚ್ಯೂಟಿಯನ್ನು 15 ದಿನಗಳ ವೇತನದ ದರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಈ ಕೆಳಗಿನ ಘಟಕಗಳ ಲೆಕ್ಕಾಚಾರಕ್ಕೆ ಕೊನೆಯದಾಗಿ ಪಡೆದ ಸಂಬಳವನ್ನು ಪರಿಗಣಿಸಬೇಕು:

  • ಬೇಸಿಕ್
  • ತುಟ್ಟಿ ಭತ್ಯೆ - ಸರ್ಕಾರಿ ಉದ್ಯೋಗಿಗಳಿಗೆ
  • ಮಾರಾಟದ ಮೇಲೆ ಪಡೆದ ಕಮಿಷನ್

ಉದಾಹರಣೆ: ನಿಮ್ಮ ಉದ್ಯೋಗದ ಅವಧಿ 10 ವರ್ಷ ನಾಲ್ಕು ತಿಂಗಳು ಹಾಗೂ ಕಡೆಯ ಬಾರಿ ನೀವು ಪಡೆದ ಮೂಲ ವೇತನ ರೂ. 80,000 ಆಗಿದ್ದರೆ, ಸೂತ್ರದ ಪ್ರಕಾರ ನೀವು ಪಡೆಯುವ ಗ್ರಾಚ್ಯೂಟಿ ಮೊತ್ತ:

ಗ್ರಾಚ್ಯೂಟಿ = ರೂ. 80,000 x (15/26) x 10 = ರೂ. 4.62 ಲಕ್ಷ

ನಾಲ್ಕು ತಿಂಗಳು 5ಕ್ಕಿಂತ ಕಡಿಮೆಯಾಗಿದೆ, ಹೀಗಾಗಿ ಅದನ್ನು 10 ತಿಂಗಳೆಂದು ಪರಿಗಣಿಸಲಾಗುವುದು. ಐದಕ್ಕಿಂತ ಹೆಚ್ಚು ತಿಂಗಳಾಗಿದ್ದಲ್ಲಿ ಮುಂದಿನ ವರ್ಷಕ್ಕೆ ಸರಿಹೊಂದಿಸಲಾಗುತ್ತದೆ.

ಕೆಟಗರಿ 2: ಕಾಯಿದೆಯ ವ್ಯಾಪ್ತಿಗೆ ಬರದ ಉದ್ಯೋಗಿಗಳು

ಸಂಸ್ಥೆಯು ಕಾಯಿದೆಯ ವ್ಯಾಪ್ತಿಗೆ ಬರದಿದ್ದರೂ ನಿಮಗೆ ಗ್ರಾಚ್ಯೂಟಿ ಪಾವತಿಸಬಹುದು. ಅಂತಹ ಸಂದರ್ಭದಲ್ಲಿ, ಒಂದು ತಿಂಗಳಲ್ಲಿ ಕೆಲಸದ ದಿನಗಳ ಸಂಖ್ಯೆಯು 26 ದಿನಗಳ ಬದಲಾಗಿ 30 ದಿನಗಳಿಗೆ ಬದಲಾಗುತ್ತವೆ.

ಗ್ರಾಚ್ಯೂಟಿ = ಹಿಂದಿನ ತಿಂಗಳ ಸಂಬಳ x (15/30) x ಸೇವೆ ಸಲ್ಲಿಸಿದ ವರ್ಷಗಳು

ಒಂದು ವೇಳೆ ನಿಮ್ಮ ಸಂಸ್ಥೆಯು ಕಾಯ್ದೆಯ ವ್ಯಾಪ್ತಿಗೆ ಬರದಿದ್ದರೆ, ಆಗ ಲೆಕ್ಕಾಚಾರವು ಈ ಕೆಳಗಿನಂತೆ ಇರುತ್ತದೆ:

ಗ್ರಾಚ್ಯೂಟಿ = ರೂ. 80,000 x (15/30) x 10 = ರೂ. 4.00 ಲಕ್ಷ

ಕಾಯ್ದೆಯ ವ್ಯಾಪ್ತಿಗೆ ಬರುವ ಉದ್ಯೋಗಿಗಳಿಗೆ, ಕಡಿಮೆ ವರ್ಗದ ಪ್ರಯೋಜನವನ್ನು ನೀಡಲಾಗುತ್ತದೆ. ಹಾಗಾಗಿ, ಮಾಸಿಕ ಕೆಲಸದ ದಿನಗಳನ್ನು 30 ದಿನಗಳ ಬದಲು 26 ದಿನಗಳೆಂದು ಪರಿಗಣಿಸಲಾಗುತ್ತದೆ.

ಗ್ರಾಚ್ಯೂಟಿ ಫಂಡ್‌ಗಳನ್ನು ಎಲ್ಲಿ ಹೂಡಿಕೆ ಮಾಡಬೇಕು?

ಜಾಣ್ಮೆಯಿಂದ ಹೂಡಿಕೆ ಮಾಡಿದರೆ, ಗ್ರಾಚ್ಯೂಟಿ ಫಂಡ್‌ಗಳು ನಿಮಗೆ ಹೆಚ್ಚಿನ ಆದಾಯ ತರಬಲ್ಲವು. ಗ್ರಾಚ್ಯೂಟಿ ಹಣವನ್ನು ನಿಮ್ಮ ಉಳಿತಾಯ ಖಾತೆಯಲ್ಲಿ ನಿಷ್ಕ್ರಿಯವಾಗಿ ಇಡಬೇಡಿ, ಹಣದುಬ್ಬರದ ಕಾರಣದಿಂದ ಅಲ್ಲಿ ನಿಮಗೆ ಸಿಗುವುದು ಋಣಾತ್ಮಕ ಆದಾಯ ಮಾತ್ರ. ಅದನ್ನು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಸುಲಭವಾಗಿ ಉತ್ತಮ ಆದಾಯ ಗಳಿಸಬಹುದು. ಇದೊಂದು ಲಾಭದಾಯಕ, ಸುರಕ್ಷಿತ ಮತ್ತು ಸ್ಥಿರವಾದ ಹೂಡಿಕೆ ಆಯ್ಕೆಯಾಗಿದೆ.