ಆಗಾಗ ಕೇಳುವ ಪ್ರಶ್ನೆಗಳು

ನಾನು ಪಡೆಯಬಹುದಾದ ಲೋನ್ ಮೊತ್ತಗಳ ಶ್ರೇಣಿ ಎಷ್ಟು?

ಉದಾಹರಣೆಗೆ, ನೀವು ಅಗತ್ಯವಿರುವ ಅನುಭವದೊಂದಿಗೆ ಪ್ರಾಕ್ಟೀಸಿಂಗ್ ಡಾಕ್ಟರ್ ಆಗಿದ್ದೀರಿ ಮತ್ತು ಇತರ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಿ. ಅದರಲ್ಲಿ, ನೀವು ಯಾವುದೇ ಅಡಮಾನ ಇಡದೆ ರೂ. 55 ಲಕ್ಷದವರೆಗಿನ ಪರ್ಸನಲ್ ಲೋನ್ ಅಥವಾ ಬಿಸಿನೆಸ್ ಲೋನ್ (ಇನ್ಶೂರೆನ್ಸ್ ಪ್ರೀಮಿಯಂ, ವಿಎಎಸ್ ಶುಲ್ಕಗಳು, ಡಾಕ್ಯುಮೆಂಟೇಶನ್ ಶುಲ್ಕಗಳು, ಫ್ಲೆಕ್ಸಿ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಒಳಗೊಂಡಂತೆ) ಪಡೆಯಬಹುದು. ಆದಾಗ್ಯೂ, ದೊಡ್ಡ ವೆಚ್ಚಗಳಿಗಾಗಿ ನೀವು ರೂ. 5 ಕೋಟಿಯವರೆಗಿನ ಆಸ್ತಿ ಮೇಲಿನ ಲೋನ್ ಆಯ್ಕೆ ಮಾಡಬಹುದು.

ಈ ಲೋನ್‍ಗಳ ಜೊತೆಗೆ ಲಭ್ಯವಿರುವ ಅವಧಿಗಳ ವ್ಯಾಪ್ತಿಯೆಷ್ಟು?

ಬಜಾಜ್ ಫಿನ್‌ಸರ್ವ್ ಸುರಕ್ಷಿತ ಮತ್ತು ಸುರಕ್ಷಿತವಲ್ಲದ ಕ್ರೆಡಿಟ್ ಸೌಲಭ್ಯಗಳನ್ನು ಹೊಂದಿಕೊಳ್ಳುವ ಮರುಪಾವತಿ ಅವಧಿಗಳೊಂದಿಗೆ ಒದಗಿಸುತ್ತದೆ. ನೀವು ಸುರಕ್ಷಿತವಲ್ಲದ ಬಿಸಿನೆಸ್ ಅಥವಾ ಡಾಕ್ಟರ್‌ಗಳಿಗೆ ಪರ್ಸನಲ್ ಲೋನ್ ಅನ್ನು 96 ತಿಂಗಳುಗಳಲ್ಲಿ ಮರುಪಾವತಿ ಮಾಡಬಹುದು, ಆದರೆ ಆಸ್ತಿ ಮೇಲಿನ ಲೋನ್‌ನಂತಹ ಭದ್ರತೆ ಇರುವ ಲೋನ್ ಗಳು 216 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ.

ಕ್ರೆಡಿಟ್ ಸೌಲಭ್ಯದ ಮೇಲೆ ಬಡ್ಡಿ ದರವನ್ನು ಫಿಕ್ಸೆಡ್ ಅಥವಾ ಫ್ಲೋಟಿಂಗ್ ವಿಧಿಸಲಾಗುತ್ತದೆಯೇ?

ಬಜಾಜ್ ಫಿನ್‌ಸರ್ವ್ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರಗಳನ್ನು ಆಫರ್ ಮಾಡುತ್ತದೆ. ಆದಾಗ್ಯೂ, ನೀವು ಪಡೆಯಲು ಬಯಸುವ ಲೋನ್ ಪ್ರಕಾರವನ್ನು ಅವಲಂಬಿಸಿರುತ್ತದೆ.

ಮರುಪಾವತಿಯ ವಿಧಾನವೇನು?

NACH (ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್) ಮೂಲಕ ನೀವು ನಿಮ್ಮ ಬಜಾಜ್ ಫಿನ್‌ಸರ್ವ್ ಡಾಕ್ಟರ್ ಲೋನ್ ಅನ್ನು ಮರುಪಾವತಿ ಮಾಡಬಹುದು.

ಡಾಕ್ಟರ್ ಲೋನನ್ನು ಆನ್‌ಲೈನ್‌ನಲ್ಲಿ ಪಡೆಯಲು ನಾನೇನು ಮಾಡಬೇಕು?

ಡಾಕ್ಟರ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಲು, ನೀವು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬೇಕು:

  • ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ
  • ಒಟಿಪಿ ಪಡೆಯಲು ನಿಮ್ಮ ಹೆಸರು ಮತ್ತು ಕಾಂಟಾಕ್ಟ್ ನಂಬರನ್ನು ಭರ್ತಿ ಮಾಡಿ
  • ಒಟಿಪಿಯನ್ನು ಹಂಚಿಕೊಳ್ಳಿ ಮತ್ತು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಯನ್ನು ಭರ್ತಿ ಮಾಡುವುದರೊಂದಿಗೆ ಮುಂದುವರೆಯಿರಿ
  • ನಿಮ್ಮ ಅರ್ಜಿ ಸಲ್ಲಿಸಿ

ನಮ್ಮ ಪ್ರತಿನಿಧಿ ಮುಂದಿನ ಹಂತಗಳಲ್ಲಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ.

ನಾನು ನನ್ನ ಡಾಕ್ಟರ್ ಲೋನ್ ಮೇಲೆ ಭಾಗಶಃ ಪಾವತಿಗಳನ್ನು ಮಾಡಬಹುದೇ?

ಹೌದು, ನಿಮ್ಮ ಮೊದಲ ಇಎಂಐ ಪಾವತಿಸಿದ ನಂತರ ಒಂದು ಕ್ಯಾಲೆಂಡರ್ ವರ್ಷದಲ್ಲಿ ಆರು ಬಾರಿ ನಿಮ್ಮ ಡಾಕ್ಟರ್ ಲೋನ್ ಮೇಲೆ ನೀವು ಭಾಗಶಃ ಪಾವತಿಗಳನ್ನು ಮಾಡಬಹುದು. ನೀವು ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿದ್ದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಲೋನನ್ನು ಮುಂಗಡ ಪಾವತಿ ಮಾಡಬಹುದು.

ಯಾವುದೇ ಫೋರ್‌ಕ್ಲೋಸರ್ ಮತ್ತು ಭಾಗಶಃ ಮರುಪಾವತಿ ಶುಲ್ಕಗಳಿವೆಯೇ?

ನೀವು ಫ್ಲೆಕ್ಸಿ ಫಾರ್ಮ್ಯಾಟ್‌ನಲ್ಲಿ ಡಾಕ್ಟರ್ ಲೋನನ್ನು ಆಯ್ಕೆ ಮಾಡಿದ್ದರೆ, ನೀವು ಭಾಗಶಃ ಮುಂಗಡ ಪಾವತಿಯ ಮೇಲೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನಿಯಮಿತ ಟರ್ಮ್ ಲೋನಿಗೆ ಪ್ರಿಪೇಯ್ಡ್ ಮೊತ್ತದ ಮೇಲೆ ನಿಮಗೆ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಶುಲ್ಕ ವಿಧಿಸಲಾಗುತ್ತದೆ.

ನೀವು ನಿಯಮಿತ ಟರ್ಮ್ ಲೋನ್ ಸಾಲಗಾರರಾಗಿದ್ದರೆ, ನೀವು ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಶುಲ್ಕವನ್ನು ಫೋರ್‌ಕ್ಲೋಸರ್ ಶುಲ್ಕವಾಗಿ ಪಾವತಿಸಬೇಕು. ಫ್ಲೆಕ್ಸಿ ಗ್ರಾಹಕರಿಗೆ, ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಫೋರ್‌ಕ್ಲೋಸರ್ ಶುಲ್ಕ ಅನ್ವಯವಾಗುತ್ತದೆ.

ಫ್ಲೆಕ್ಸಿ ಲೋನ್ ಮತ್ತು ಟರ್ಮ್ ಲೋನ್ ನಡುವಿನ ವ್ಯತ್ಯಾಸವೇನು?

ಫ್ಲೆಕ್ಸಿ ಲೋನ್‌ನೊಂದಿಗೆ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಂಜೂರಾದ ಮಿತಿಯಿಂದ ಅನೇಕ ಬಾರಿ ವಿತ್‌ಡ್ರಾ ಮಾಡುವ ಸೌಲಭ್ಯವನ್ನು ನೀವು ಹೊಂದಿದ್ದೀರಿ. ಆದಾಗ್ಯೂ, ಬಳಸಿದ ಮೊತ್ತದ ಮೇಲೆ ಮಾತ್ರ ನಿಮಗೆ ಬಡ್ಡಿಯನ್ನು ವಿಧಿಸಲಾಗುತ್ತದೆ ಮತ್ತು ಸಂಪೂರ್ಣ ಲೋನ್ ಮಿತಿಯಲ್ಲ. ಆರಂಭಿಕ ಅವಧಿಗೆ ಬಡ್ಡಿ-ಮಾತ್ರದ ಇಎಂಐ ಗಳನ್ನು ಪಾವತಿಸಲು ನೀವು ಆಯ್ಕೆ ಮಾಡಬಹುದು ಮತ್ತು ನಿಮ್ಮ ಮಾಸಿಕ ಕಂತುಗಳನ್ನು 45% ವರೆಗೆ ಕಡಿಮೆ ಮಾಡಬಹುದು*. ಟರ್ಮ್ ಲೋನನ್ನು ಸಾಮಾನ್ಯವಾಗಿ ಮಾಸಿಕ ಇಎಂಐ ಗಳಲ್ಲಿ ಮರುಪಾವತಿಸಲಾಗುತ್ತದೆ, ಅದು ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ.

ನೀವು ಹೆಚ್ಚುವರಿ ಮೊತ್ತವನ್ನು ಹೊಂದಿರುವಾಗ ಲೋನನ್ನು ಮುಂಗಡ ಪಾವತಿ ಮಾಡಬಹುದು, ಆದರೆ ಟರ್ಮ್ ಲೋನಿನೊಂದಿಗೆ ಅನೇಕ ವಿತ್‌ಡ್ರಾವಲ್‌ಗಳಿಗೆ ಯಾವುದೇ ಆಯ್ಕೆ ಇಲ್ಲ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

BFL ಮಂಜೂರು ಮಾಡಬಹುದಾದ ಆಸ್ತಿ ಮೇಲಿನ ಲೋನಿನ ಅಂತಿಮ ಬಳಕೆ ಏನು?

ನಿಮ್ಮ ಕ್ಲಿನಿಕ್ ಅನ್ನು ವಿಸ್ತರಿಸುವುದು, ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡುವುದು ಅಥವಾ ನಿಮ್ಮ ಇತರ ಲೋನ್ ಗಳನ್ನು ಒಟ್ಟುಗೂಡಿಸುವಂತಹ ಅನೇಕ ಬಳಕೆಗಳಿಗಾಗಿ ನೀವು ಆಸ್ತಿ ಮೇಲಿನ ಲೋನನ್ನು ಬಳಸಬಹುದು. ನೀವು ವೈದ್ಯಕೀಯ ಅಭ್ಯಾಸಗಾರರಾಗಿದ್ದರೆ, ನಿಮ್ಮ ಅರ್ಹತೆಯ ಆಧಾರದ ಮೇಲೆ ಕೈಗೆಟಕುವ ದರದಲ್ಲಿ ರೂ. 5 ಕೋಟಿಯವರೆಗಿನ ಆಸ್ತಿ ಮೇಲಿನ ಲೋನನ್ನು ಸುಲಭವಾಗಿ ಪಡೆಯಬಹುದು.

ನನ್ನ ಸಂಬಂಧಿಕರು ಮತ್ತು ನಾನು ಜಂಟಿಯಾಗಿ ಸ್ವಂತ ಆಸ್ತಿಯ ಮೇಲೆ ಲೋನ್ ತೆಗೆದುಕೊಳ್ಳಬಹುದೇ?

ಒಂದು ವೇಳೆ ನೀವು ಮತ್ತು ನಿಮ್ಮ ಸಂಬಂಧಿಕರು ಸ್ವಂತ ಆಸ್ತಿಯನ್ನು ಹೊಂದಿದ್ದರೆ, ಆ ಆಸ್ತಿಯ ಮೇಲೆ ನೀವು ಇನ್ನೂ ಲೋನ್ ಪಡೆಯಬಹುದು. ಆದಾಗ್ಯೂ, ಆ ಆಸ್ತಿಯ ಎಲ್ಲಾ ಸಹ-ಮಾಲೀಕರು ಲೋನಿಗೆ ಸಹ-ಅರ್ಜಿದಾರರಾಗಬೇಕು.

ಡಾಕ್ಟರ್‌ಗಳಿಗೆ ಪರ್ಸನಲ್ ಲೋನ್‌ಗಳ ಅಂತಿಮ ಬಳಕೆ ಏನು?

ವೈದ್ಯರಿಗೆ ಪರ್ಸನಲ್ ಲೋನ್ ಯಾವುದೇ ಅಂತಿಮ ಬಳಕೆಯ ನಿರ್ಬಂಧವಿಲ್ಲದೆ ಬರುತ್ತದೆ ಮತ್ತು ಅನೇಕ ವೆಚ್ಚಗಳನ್ನು ಪೂರೈಸಲು ಬಳಸಬಹುದು. ನಿಮ್ಮ ಯಾವುದೇ ವೈಯಕ್ತಿಕ ಹಣಕಾಸಿನ ಗುರಿಗಳಾದ ಉನ್ನತ ಶಿಕ್ಷಣ, ಮಕ್ಕಳ ಮದುವೆ ಅಥವಾ ಪ್ರಯಾಣಕ್ಕೆ ಸಹ ನೀವು ಈ ಫಂಡ್‌ಗಳನ್ನು ಬಳಸಬಹುದು.

ಲೋನ್ ಪ್ರಕ್ರಿಯೆಯಲ್ಲಿ ನನಗೆ ಯಾವ ರೀತಿಯ ಫೀಗಳು ಮತ್ತು ಶುಲ್ಕಗಳನ್ನು ವಿಧಿಸಲಾಗುತ್ತದೆ?

ಬಜಾಜ್ ಫಿನ್‌ಸರ್ವ್‌ ಡಾಕ್ಟರ್ ಲೋನಿನೊಂದಿಗೆ, ನೀವು 100% ಪಾರದರ್ಶಕತೆ ಮತ್ತು ಶೂನ್ಯ ಗುಪ್ತ ಶುಲ್ಕಗಳನ್ನು ಖಚಿತಪಡಿಸಿಕೊಳ್ಳಬಹುದು. ಡಾಕ್ಟರ್ ಲೋನ್ ಮೇಲೆ ಲೋನ್ ಮೊತ್ತದ 2.95% ವರೆಗೆ ನಾಮಮಾತ್ರದ ಪ್ರಕ್ರಿಯಾ ಶುಲ್ಕವನ್ನು (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ವಿಧಿಸಲಾಗುತ್ತದೆ. ಫೀಸು ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಓದಿ.

ಫೋರ್‌ಕ್ಲೋಸರ್ ಸ್ಟೇಟ್ಮೆಂಟಿಗೆ TAT (ಟರ್ನ್ ಅರೌಂಡ್ ಟೈಮ್) ಎಂದರೇನು?

ಫೋರ್‌ಕ್ಲೋಸರ್ ಸ್ಟೇಟ್ಮೆಂಟ್ ನೀಡುವ ಕನಿಷ್ಠ ಟರ್ನ್‌ಅರೌಂಡ್ ಸಮಯವು ಸುಮಾರು 12 ಕೆಲಸದ ದಿನಗಳಾಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ