ಬಿಸಿನೆಸ್ ಲೋನ್ ಫೀಚರ್‌ಗಳು

ನಮ್ಮ ಬಿಸಿನೆಸ್ ಲೋನ್ ನಿಮಗೆ ಏಕೆ ಉತ್ತಮ ಆಯ್ಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಓದಿ.

ನಮ್ಮ ಬಿಸಿನೆಸ್ ಲೋನ್ ಫೀಚರ್ ಮತ್ತು ಪ್ರಯೋಜನಗಳು

ನಮ್ಮ ಬಿಸಿನೆಸ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ನಮ್ಮ ಬಿಸಿನೆಸ್ ಲೋನಿನ ಫೀಚರ್‌ಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

  • 3 unique variants

    3 ವಿಶಿಷ್ಟ ರೂಪಾಂತರಗಳು

    ನಿಮಗೆ ಸೂಕ್ತವಾದ ಲೋನ್ ಪ್ರಕಾರವನ್ನು ಆಯ್ಕೆಮಾಡಿ - ಟರ್ಮ್ ಲೋನ್, ಫ್ಲೆಕ್ಸಿ ಟರ್ಮ್ ಲೋನ್, ಫ್ಲೆಕ್ಸಿ ಹೈಬ್ರಿಡ್ ಲೋನ್.

  • No part-prepayment charge on Flexi variants

    ಫ್ಲೆಕ್ಸಿ ವೇರಿಯಂಟ್‌ಗಳಿಗೆ ಯಾವುದೇ ಭಾಗಶಃ-ಮುಂಪಾವತಿ ಶುಲ್ಕವಿಲ್ಲ

    ನಮ್ಮ ಫ್ಲೆಕ್ಸಿ ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನಿನೊಂದಿಗೆ ನೀವು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಲೋನಿನ ಒಂದು ಭಾಗವನ್ನು ಮುಂಗಡ ಪಾವತಿ ಮಾಡಬಹುದು.

    ನಮ್ಮ ಫ್ಲೆಕ್ಸಿ ಹೈಬ್ರಿಡ್ ಲೋನ್ ಬಗ್ಗೆ ಓದಿ

  • Loan of up to

    ರೂ. 50 ಲಕ್ಷದವರೆಗಿನ ಲೋನ್

    ರೂ. 50,000 ರಿಂದ ರೂ. 50 ಲಕ್ಷದವರೆಗಿನ ಲೋನ್‌ಗಳೊಂದಿಗೆ ನಿಮ್ಮ ಸಣ್ಣ ಅಥವಾ ದೊಡ್ಡ ಬಿಸಿನೆಸ್ ವೆಚ್ಚಗಳನ್ನು ನಿರ್ವಹಿಸಿ.

  • Convenient tenures of up to

    8 ವರ್ಷಗಳವರೆಗಿನ ಅನುಕೂಲಕರ ಕಾಲಾವಧಿಗಳು

    96 ತಿಂಗಳವರೆಗಿನ ಮರುಪಾವತಿ ಆಯ್ಕೆಗಳೊಂದಿಗೆ ನಿಮ್ಮ ಲೋನನ್ನು ಮರುಪಾವತಿಸಲು ಹೆಚ್ಚುವರಿ ಅನುಕೂಲತೆಯನ್ನು ಪಡೆಯಿರಿ.

  • Money in your bank account in

    48 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣ*

    ಹೆಚ್ಚಿನ ಸಂದರ್ಭಗಳಲ್ಲಿ, ಅನುಮೋದನೆಯ 48 ಗಂಟೆಗಳ ಒಳಗೆ ನೀವು ನಿಮ್ಮ ಅಕೌಂಟಿನಲ್ಲಿ ಲೋನ್ ಮೊತ್ತವನ್ನು ಪಡೆಯುತ್ತೀರಿ.

  • No hidden charges

    ಯಾವುದೇ ಗುಪ್ತ ಶುಲ್ಕಗಳಿಲ್ಲ

    ಈ ಪುಟ ಮತ್ತು ಲೋನ್ ಡಾಕ್ಯುಮೆಂಟ್‌ನಲ್ಲಿ ಎಲ್ಲಾ ಫೀಸ್ ಮತ್ತು ಶುಲ್ಕಗಳನ್ನು ಮುಂಗಡವಾಗಿ ನಮೂದಿಸಲಾಗಿದೆ. ಇವುಗಳನ್ನು ವಿವರವಾಗಿ ಓದಲು ನಾವು ನಿಮಗೆ ಸಲಹೆ ನೀಡುತ್ತೇವೆ.

    ನಮ್ಮ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿಯಿರಿ

  • No collateral required

    ಅಡಮಾನದ ಅವಶ್ಯಕತೆಯಿಲ್ಲ

    ನಮ್ಮ ಬಿಸಿನೆಸ್ ಲೋನ್ ಪಡೆಯಲು ಯಾವುದೇ ಅಡಮಾನ ಅಥವಾ ಭದ್ರತೆಯನ್ನು ಒದಗಿಸುವ ಕುರಿತು ನೀವು ಚಿಂತಿಸಬೇಕಾಗಿಲ್ಲ.

  • End-to-end online application process

    ಸಂಪೂರ್ಣ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

    ನೀವು ಎಲ್ಲಿಯೇ ಇದ್ದರೂ, ನಿಮಗೆ ಅನುಕೂಲಕರವಾದ ಸಮಯದಲ್ಲಿ ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು.

  • ಬಿಸಿನೆಸ್ ಲೋನ್ ಎಂಬುದು ನಿಮ್ಮ ಯೋಜಿತ ಮತ್ತು ಯೋಜಿತವಲ್ಲದ ಬಿಸಿನೆಸ್ ವೆಚ್ಚಗಳನ್ನು ಪೂರೈಸಲು ನೀವು ಬಳಸಬಹುದಾದ ಹಣಕಾಸಿನ ಕೊಡುಗೆಯಾಗಿದೆ. ಇದು ಸುರಕ್ಷಿತವಲ್ಲದ ಹಣಕಾಸು ವಿಧವಾಗಿದೆ, ಮತ್ತು ನೀವು ಯಾವುದೇ ಅಡಮಾನವನ್ನು ಒದಗಿಸದೆ ಇದನ್ನು ಪಡೆಯಬಹುದು.

    ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ರೂ. 50 ಲಕ್ಷದವರೆಗಿನ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನನ್ನು ಪಡೆಯಬಹುದು. ನಿಮ್ಮ ಕೆವೈಸಿ ಮತ್ತು ಬಿಸಿನೆಸ್ ಪುರಾವೆಯಂತಹ ಡಾಕ್ಯುಮೆಂಟ್‌ಗಳ ಪಟ್ಟಿಯು ನಂತರ ಅನುಮೋದನೆಗೆ ಅಗತ್ಯವಿರುತ್ತದೆ. ನಿಮ್ಮ ಅಪ್ಲಿಕೇಶನ್ ಅನುಮೋದನೆಗೊಂಡ ನಂತರ, ನೀವು 48 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಲೋನ್ ಮೊತ್ತವನ್ನು ಪಡೆಯಬಹುದು*.

    *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಬಿಸಿನೆಸ್‌ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
  3. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  4. ಒಮ್ಮೆ ನೀವು ನಿಮ್ಮ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು ದಯವಿಟ್ಟು 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಬಿಸಿನೆಸ್ ಲೋನ್ ವೇರಿಯಂಟ್‌ಗಳಿಂದ ಆಯ್ಕೆಮಾಡಿ - ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್. 
  6. ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 96 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’. 
  7. ನಿಮ್ಮ ಕೆವೈಸಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಬಿಸಿನೆಸ್ ಲೋನ್ ಅಪ್ಲಿಕೇಶನ್ ಸಲ್ಲಿಸಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಬಿಸಿನೆಸ್ ಲೋನಿಗೆ ಯಾರು ಅಪ್ಲೈ ಮಾಡಬಹುದು?

ಪಾಲುದಾರಿಕೆ ಸಂಸ್ಥೆಗಳು, ಪ್ರೈವೇಟ್ ಲಿಮಿಟೆಡ್ ಕಂಪನಿಗಳು, ಸ್ವಯಂ ಉದ್ಯೋಗಿ ವೃತ್ತಿಪರರು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಮುಂತಾದ ಬಿಸಿನೆಸ್ ಘಟಕಗಳು ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು.

ಎಲ್ಲಾ ಅರ್ಜಿದಾರರು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಅನುಮೋದನೆಗಾಗಿ ತಮ್ಮ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಫ್ಲೆಕ್ಸಿ ಹೈಬ್ರಿಡ್ ಲೋನ್ ಎಂದರೇನು?

ಫ್ಲೆಕ್ಸಿ ಹೈಬ್ರಿಡ್ ಲೋನ್ ನಮ್ಮ ಬಿಸಿನೆಸ್ ಲೋನಿನ ವಿಶಿಷ್ಟ ರೂಪಾಂತರವಾಗಿದೆ. ಇಲ್ಲಿ, ನಿಮ್ಮ ಲೋನ್ ಕಾಲಾವಧಿಯು ಆರಂಭಿಕ ಕಾಲಾವಧಿ ಮತ್ತು ನಂತರದ ಕಾಲಾವಧಿ ಎಂಬ ಎರಡು ಭಾಗಗಳಾಗಿ ವಿಂಗಡಿಸಲ್ಪಡುತ್ತದೆ.

ಆರಂಭಿಕ ಅವಧಿಯಲ್ಲಿ, ನಿಮ್ಮ ಇಎಂಐಗಳು ಅನ್ವಯವಾಗುವ ಬಡ್ಡಿಯನ್ನು ಮಾತ್ರ ಒಳಗೊಂಡಿರುತ್ತವೆ, ಇದು ಮರುಪಾವತಿಯನ್ನು ಕೈಗೆಟಕುವಂತೆ ಮಾಡುತ್ತದೆ.

ನಂತರದ ಅವಧಿಯಲ್ಲಿ, ನಿಮ್ಮ ಇಎಂಐಗಳು ಅಸಲು ಮತ್ತು ಬಡ್ಡಿ ಕಾಂಪೊನೆಂಟ್‌ಗಳನ್ನು ಒಳಗೊಂಡಿರುತ್ತವೆ.

ನೀವು ಪಡೆಯಬಹುದಾದ ಗರಿಷ್ಠ ಬಿಸಿನೆಸ್ ಲೋನ್ ಮೊತ್ತ ಎಷ್ಟು?

ನೀವು ರೂ. 50 ಲಕ್ಷದವರೆಗಿನ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು.

ನೀವು ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನನ್ನು ಏಕೆ ಆಯ್ಕೆ ಮಾಡಬೇಕು?

ನಮ್ಮ ಬಿಸಿನೆಸ್ ಲೋನ್ ಅನೇಕ ಫೀಚರ್ ಮತ್ತು ಪ್ರಯೋಜನಗಳೊಂದಿಗೆ ಬರುತ್ತದೆ, ಅವುಗಳೆಂದರೆ:

  1. ಫ್ಲೆಕ್ಸಿ ಸೌಲಭ್ಯ
  2. ಕಡಿಮೆ ಡಾಕ್ಯುಮೆಂಟೇಶನ್
  3. 48 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ*
  4. ಫ್ಲೆಕ್ಸಿಬಲ್ ಕಾಲಾವಧಿಗಳು
  5. ಯಾವುದೇ ಅಡಮಾನ ಅಥವಾ ಭದ್ರತೆ ಇಲ್ಲ
  6. ಯಾವುದೇ ಗುಪ್ತ ಶುಲ್ಕಗಳಿಲ್ಲ

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ