ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಈ ಕೆಳಗೆ ನಮೂದಿಸಿದ ಐದು ಮೂಲಭೂತ ಮಾನದಂಡಗಳನ್ನು ಪೂರೈಸಿದರೆ ಯಾರಾದರೂ ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಬಹುದು. ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಡಾಕ್ಯುಮೆಂಟ್‌ಗಳ ಸೆಟ್ ಅಗತ್ಯವಿರುತ್ತದೆ.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ಭಾರತೀಯ
- ಬಿಸಿನೆಸ್ ವಿಂಟೇಜ್: ಕನಿಷ್ಠ 3 ವರ್ಷಗಳು
- ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು
- ಕೆಲಸದ ಸ್ಥಿತಿ: ಸ್ವಯಂ ಉದ್ಯೋಗಿ
- ವಯಸ್ಸು: 24 ವರ್ಷಗಳಿಂದ 70 ವರ್ಷಗಳು*
ಡಾಕ್ಯುಮೆಂಟ್‌ಗಳು
- ಕೆವೈಸಿ ಡಾಕ್ಯುಮೆಂಟ್‌ಗಳು - ಆಧಾರ್/ ಪ್ಯಾನ್ ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ
- ಬಿಸಿನೆಸ್ ಮಾಲೀಕತ್ವದ ಪುರಾವೆ
- ಇತರ ಹಣಕಾಸಿನ ಡಾಕ್ಯುಮೆಂಟ್‌ಗಳು
*ಲೋನ್ ಅವಧಿಯ ಕೊನೆಯಲ್ಲಿ ನೀವು 70 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
ಆಗಾಗ ಕೇಳುವ ಪ್ರಶ್ನೆಗಳು
ಬಿಸಿನೆಸ್ ಲೋನನ್ನು ಮರುಪಾವತಿಸಲು ಗರಿಷ್ಠ ಕಾಲಾವಧಿ ಎಷ್ಟು?
96 ತಿಂಗಳವರೆಗಿನ ನಮ್ಮ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳ ಪ್ರಯೋಜನವನ್ನು ನೀವು ಪಡೆಯಬಹುದು.
ಬಜಾಜ್ ಫಿನ್‌ಸರ್ವ್ ಬಿಸಿನೆಸ್ ಲೋನಿಗೆ ಅರ್ಹತೆ ಪಡೆಯಲು ಬೇಕಾದ ಸಿಬಿಲ್ ಸ್ಕೋರ್ ಎಷ್ಟು?
ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು 685 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಬೇಕಾಗುತ್ತದೆ.
ಮರುಪಾವತಿಯ ವಿಧಾನವೇನು?
ನಾಚ್ ಮ್ಯಾಂಡೇಟ್ ಮೂಲಕ ನೀವು ನಿಮ್ಮ ಬಿಸಿನೆಸ್ ಲೋನನ್ನು ಮರುಪಾವತಿ ಮಾಡಬಹುದು.
ಬಿಸಿನೆಸ್ ಲೋನ್ ಪಡೆಯಲು ನಾನು ಯಾವುದೇ ಭದ್ರತೆಯನ್ನು ಒದಗಿಸಬೇಕೇ?
ನಮ್ಮ ಬಿಸಿನೆಸ್ ಲೋನಿಗೆ ಅಪ್ಲೈ ಮಾಡಲು ನೀವು ಆಸ್ತಿ ಅಥವಾ ಚಿನ್ನದ ಆಭರಣಗಳಂತಹ ಯಾವುದೇ ಅಡಮಾನ ಅಥವಾ ಭದ್ರತೆಯನ್ನು ಒದಗಿಸಬೇಕಾಗಿಲ್ಲ.
ಇನ್ನಷ್ಟು ತೋರಿಸಿ
ಕಡಿಮೆ ತೋರಿಸಿ