ಅಲ್ಪಸಂಖ್ಯಾತರು ಪಢೋ ಪರದೇಶ್ ಯೋಜನೆಯನ್ನು ಪಡೆಯುವುದು ಹೇಗೆ?

2 ನಿಮಿಷ

ಭಾರತ ಸರ್ಕಾರವು ಪ್ರಾರಂಭಿಸಿದ ಪಢೋ ಪರದೇಶ್ ಯೋಜನೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿ ಹೊಂದಿದೆ. ಈ ಯೋಜನೆಯ ಅಡಿಯಲ್ಲಿ, ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶದಲ್ಲಿ ತಮ್ಮ ಅಧ್ಯಯನಗಳನ್ನು ಮುಂದುವರಿಸಲು ತಮ್ಮ ಶಿಕ್ಷಣ ಲೋನ್‌ಗಳ ಮೇಲೆ 100% ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು.

ಅಭ್ಯರ್ಥಿಗಳು ಮೊರಟೋರಿಯಂ ಅವಧಿಯಲ್ಲಿ ಈ ಬಡ್ಡಿ ಸಬ್ಸಿಡಿಯನ್ನು ಆನಂದಿಸಬಹುದು. ಈ ಅವಧಿಯು ಉದ್ಯೋಗವನ್ನು ಪಡೆದ 6 ತಿಂಗಳ ನಂತರ ಅಥವಾ ಕೋರ್ಸ್ ಮುಗಿದ 1 ವರ್ಷದ ನಂತರ, ಯಾವುದು ಮೊದಲು ಬರುತ್ತದೆಯೋ ಅದರ ಜೊತೆಗೆ ಕೋರ್ಸ್ ಅವಧಿಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಯಾವುದೇ ಹಣಕಾಸು ಸಂಸ್ಥೆಯಿಂದ ಈ ಶಿಕ್ಷಣ ಲೋನ್ ಯೋಜನೆ ತೆಗೆದುಕೊಳ್ಳಬಹುದು.

ಅಲ್ಪಸಂಖ್ಯಾತರಿಗೆ ಈ ಯೋಜನೆಯನ್ನು ಪಡೆಯುವುದು ಹೇಗೆ?

ಈ ಯೋಜನೆಯನ್ನು ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಮುಖ್ಯವಾಗಿದೆ.

  • ಅರ್ಜಿದಾರರು ಇಡಬ್ಲ್ಯುಎಸ್ ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿರಬೇಕು
  • ಅವರ ಮನೆಯ ಒಟ್ಟು ಆದಾಯವು ವರ್ಷಕ್ಕೆ ರೂ. 6 ಲಕ್ಷಕ್ಕಿಂತ ಕಡಿಮೆ ಇರಬೇಕು

ಹೆಚ್ಚುವರಿಯಾಗಿ, ಅವರು ರಾಜ್ಯ ಸರ್ಕಾರ ನೀಡಿದ ಆದಾಯ ಪ್ರಮಾಣಪತ್ರವನ್ನು ಪುರಾವೆಯಾಗಿ ಸಲ್ಲಿಸಬೇಕು.

ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅರ್ಜಿದಾರರು ಸ್ಟಡಿ ಲೋನ್ ತೆಗೆದುಕೊಳ್ಳುವಾಗ ಆಯಾ ಹಣಕಾಸು ಸಂಸ್ಥೆಗೆ ತಿಳಿಸಬೇಕಾಗುತ್ತದೆ. ಸಬ್ಸಿಡಿ ಪಡೆಯಲು ಪ್ರತಿನಿಧಿಗಳು ಪಢೋ ಪರದೇಶ್ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಬೇಕು.

ಇದನ್ನೂ ಪರಿಶೀಲಿಸಿ: ಆಸ್ತಿ ಮೇಲಿನ ಲೋನ್ ವರ್ಸಸ್ ಎಜುಕೇಶನ್ ಲೋನ್: ನಿಮಗೆ ಯಾವುದು ಉತ್ತಮ?

ಭಾರತದಲ್ಲಿ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಲೋನ್‌ಗಳು

ಸರ್ಕಾರಿ ಯೋಜನೆಯು ವಿದೇಶದಲ್ಲಿ ಅಧ್ಯಯನ ಮಾಡಲು ಮಾತ್ರ ಲಭ್ಯವಿರುವಾಗ, ಅರ್ಹ ವ್ಯಕ್ತಿಗಳು ಭಾರತದಲ್ಲಿ ಶಿಕ್ಷಣಕ್ಕೆ ಹಣಕಾಸು ಒದಗಿಸಲು ವಿದ್ಯಾರ್ಥಿಗಳಿಗೆ ಕೈಗೆಟಕುವ ಲೋನ್‌ಗಳನ್ನು ಕೂಡ ಪಡೆಯಬಹುದು.

ಬಜಾಜ್ ಫಿನ್‌ಸರ್ವ್ ಹೆಚ್ಚಿನ ಮೌಲ್ಯದ ಉನ್ನತ ಶಿಕ್ಷಣಕ್ಕಾಗಿ ಆಸ್ತಿ ಮೇಲಿನ ಲೋನ್‌ಗಳನ್ನು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ರೂ. 5 ಕೋಟಿಯವರೆಗೆ* ಹಣ ಒದಗಿಸುತ್ತದೆ. ಟ್ಯೂಷನ್ ಶುಲ್ಕ, ವಸತಿ ಶುಲ್ಕ, ವಿಮಾನದ ಟಿಕೆಟ್‌, ವೈದ್ಯಕೀಯ ಖರ್ಚುಗಳು ಹಾಗೂ ಇತರೆ ಅಗತ್ಯಗಳಿಗೆ ಈ ಹಣ ಬಳಸಬಹುದು. ಇದಕ್ಕೆ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಸರಳ ಅರ್ಹತಾ ಮಾನದಂಡಗಳಿವೆ.

ಭಾರತದಲ್ಲಿ ವಿದ್ಯಾರ್ಥಿ ಲೋನಿಗೆ ಅಪ್ಲೈ ಮಾಡಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

  • ಎಲ್ಲಾ ಸರಿಯಾದ ವಿವರಗಳೊಂದಿಗೆ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ
  • ನಮ್ಮ ಪ್ರತಿನಿಧಿಗಳು 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ
  • 48 ಗಂಟೆಗಳ ಒಳಗೆ ತ್ವರಿತ ಅನುಮೋದನೆಯನ್ನು ಪಡೆಯಿರಿ
  • ನಮ್ಮ ಪ್ರತಿನಿಧಿಗಳಿಗೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಹಸ್ತಾಂತರಿಸಿ

ಇದನ್ನೂ ಓದಿ: ಶಿಕ್ಷಣ ಲೋನ್ ಪಡೆಯುವುದು ಹೇಗೆ?

ಒಮ್ಮೆ ಮುಗಿದ ನಂತರ, ನಿಮ್ಮ ಅಕೌಂಟಿನಲ್ಲಿ ಒಟ್ಟು ಹಣವನ್ನು ಪಡೆಯಿರಿ. ಎಲ್ಲಾ ಶೈಕ್ಷಣಿಕ ಲೋನ್ ವಿವರಗಳನ್ನು ತಿಳಿದುಕೊಳ್ಳಿ ಮತ್ತು ಬಜಾಜ್ ಫಿನ್‌ಸರ್ವ್‌ನೊಂದಿಗೆ ಮಾತ್ರ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ