ಹಕ್ಕುತ್ಯಾಗ
ಕ್ಯಾಲ್ಕುಲೇಟರ್(ಗಳು) ಜನರೇಟ್ ಮಾಡಿದ ಫಲಿತಾಂಶಗಳು ಸೂಚಕವಾಗಿವೆ. ಲೋನ್ ಮೇಲೆ ಅಪ್ಲೈ ಮಾಡಲಾದ ಬಡ್ಡಿ ದರವು ಲೋನ್ ಬುಕಿಂಗ್ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ. ಕ್ಯಾಲ್ಕುಲೇಟರ್ (ಗಳು) ಅದರ ಬಳಕೆದಾರರಿಗೆ/ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್")ನಿಂದ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ಯಾವುದೇ ಸಂದರ್ಭಗಳಲ್ಲಿ ಬಿಎಫ್ಎಲ್‌ನಿಂದ ಬಾಧ್ಯತೆ, ಭರವಸೆ, ಖಾತರಿ, ಕೈಗೊಳ್ಳುವುದು ಅಥವಾ ಬದ್ಧತೆ, ಹಣಕಾಸು ಮತ್ತು ವೃತ್ತಿಪರ ಸಲಹೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಕ್ಯಾಲ್ಕುಲೇಟರ್(ಗಳು) ಬಳಕೆದಾರರು/ಗ್ರಾಹಕರು ಡೇಟಾ ಇನ್ಪುಟ್‌ನಿಂದ ಜನರೇಟ್ ಮಾಡಲಾದ ವಿವಿಧ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯುವ ಸಾಧನವಾಗಿದೆ. ಕ್ಯಾಲ್ಕುಲೇಟರ್ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ಗ್ರಾಹಕರ ಹೊಣೆಯಾಗಿದೆ, ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೆ ಜವಾಬ್ದಾರರಲ್ಲ.
ಆಗಾಗ ಕೇಳುವ ಪ್ರಶ್ನೆಗಳು
ಟರ್ಮ್ ಲೋನ್ ಎಂಬುದು ನಿರ್ದಿಷ್ಟ ಲೋನ್ ಮೊತ್ತ, ಮರುಪಾವತಿಯ ಅವಧಿ ಮತ್ತು ಮರುಪಾವತಿ ಶೆಡ್ಯೂಲ್‌ನೊಂದಿಗೆ ಬರುವ ಸಾಲವಾಗಿದೆ. ಟರ್ಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ಆನ್‌ಲೈನ್ ಟೂಲ್ ಆಗಿದ್ದು, ಇದು ಸಾಲಗಾರರು ಪಡೆದ ಲೋನ್ ಮರುಪಾವತಿಸಲು ಮಾಸಿಕ ಕಂತುಗಳನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಸಾಲಗಾರರು ಮರುಪಾವತಿ ಅವಧಿಯುದ್ದಕ್ಕೂ ಪಾವತಿಸಬೇಕಾದ ಇಎಂಐಗಳನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ.
ಟರ್ಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅವಧಿಯ ಕೊನೆಗೆ ಸಾಲಗಾರರು ಬಡ್ಡಿಯೂ ಸೇರಿದಂತೆ ಒಟ್ಟು ಎಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಕೂಡ ಲೆಕ್ಕ ಹಾಕುತ್ತದೆ. ಇದನ್ನು ಬಳಸುವುದರಿಂದ ಸಾಲಗಾರರಿಗೆ ಅವರು ಪ್ರತಿ ತಿಂಗಳು ಕಟ್ಟಬೇಕಿರುವ ಇಎಂಐ ಮೊತ್ತವನ್ನು ಅಂದಾಜು ಮಾಡಲು ನೆರವಾಗುತ್ತದೆ, ಇದರಿಂದ ಅವರು ಸರಿಯಾದ ಹಣಕಾಸು ಯೋಜನೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಟರ್ಮ್ ಲೋನ್ ಬಡ್ಡಿ ಕ್ಯಾಲ್ಕುಲೇಟರ್ ಎಂದೂ ಕರೆಯಲ್ಪಡುವ ಇದು ಇಎಂಐ, ಬಡ್ಡಿ ಮತ್ತು ಪಾವತಿಸಬೇಕಾದ ಒಟ್ಟು ಮೊತ್ತವನ್ನು ಲೆಕ್ಕ ಹಾಕಲು ಗಣಿತದ ಸೂತ್ರ ಒಂದನ್ನು ಬಳಸುತ್ತದೆ.
ಇಲ್ಲಿ ಉಪಯೋಗಿಸಲಾಗುವ ಸೂತ್ರ ಹೀಗಿದೆ
E = P x r x (1 + r) ^ n / [(1 + r) ^ n - 1]
ಇಲ್ಲಿ,
- E = ಇಎಂಐ
- P = ಅಸಲು ಅಥವಾ ಲೋನ್ ಮೊತ್ತ
- r = ಟರ್ಮ್ ಲೋನ್ ಬಡ್ಡಿ ದರ
- n = ಲೋನ್ ಅವಧಿ ಅಥವಾ ಕಾಲಾವಧಿ (ತಿಂಗಳುಗಳಲ್ಲಿ)
ಅಸಲು, ಬಡ್ಡಿದರ ಮತ್ತು ಅವಧಿಯನ್ನು ನಮೂದಿಸಿದಾಗ, ಇದು ಮೂರು ಫಲಿತಾಂಶಗಳನ್ನು ತೋರಿಸುತ್ತದೆ:
- ಪಾವತಿಸಬೇಕಾದ ಒಟ್ಟು ಬಡ್ಡಿ
- ಪಾವತಿಸಬೇಕಾದ ಒಟ್ಟು ಮೊತ್ತ (ಅಸಲು + ಬಡ್ಡಿ)
- EMI ಮೊತ್ತ
ಟರ್ಮ್ ಲೋನ್ ಇಎಂಐ ಲೆಕ್ಕ ಮಾಡುವ ಹಂತಗಳು
- ಪಡೆಯಲು ಬಯಸುವ ಲೋನ್ ಮೊತ್ತವನ್ನು ನಮೂದಿಸಿ
- ಲೋನ್ ಅವಧಿಯನ್ನು ಆಯ್ಕೆಮಾಡಿ
- ಅನ್ವಯವಾಗುವ ಬಡ್ಡಿದರವನ್ನು ನಮೂದಿಸಿ
ಈ ಮಾಹಿತಿಯನ್ನು ಸೇರಿಸಿದ ನಂತರ, ಕ್ಯಾಲ್ಕುಲೇಟರ್ ಇಎಂಐಗಳ ರೂಪದಲ್ಲಿ ಫಲಿತಾಂಶ ತೋರಿಸುತ್ತದೆ.
ಟರ್ಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ವಿವಿಧ ಲೋನ್ ಆಯ್ಕೆಗಳು ಹಾಗೂ ಲೋನ್ ಅವಧಿಗಳನ್ನು ಹೋಲಿಸಿ ನೋಡುವ ಒಂದು ಉಪಯುಕ್ತ ಹಣಕಾಸು ಟೂಲ್ ಆಗಿದೆ. ಎಲ್ಲಕ್ಕಿಂತ ಉತ್ತಮವಾದ ಆಯ್ಕೆ ಮಾಡಲು ಬೇರೆ ಬೇರೆ ಸಂಸ್ಥೆಗಳ ಅನ್ವಯವಾಗುವ ಟರ್ಮ್ ಲೋನ್ ಬಡ್ಡಿದರಗಳನ್ನು ಹೋಲಿಸಿ ನೋಡಿ.. ಜೊತೆಗೆ, ಇಎಂಐ ಹಾಗೂ ಒಟ್ಟು ಲೋನ್ ವೆಚ್ಚದ ನಡುವೆ ಲಾಭದಾಯಕ ಸಮತೋಲನ ಸಾಧಿಸಲು ಬೇರೆಬೇರೆ ಅವಧಿಗಳನ್ನು ಪ್ರಯತ್ನಿಸಿ ನೋಡಿ.