ನಮ್ಮ ಗ್ರಾಹಕ ಪೋರ್ಟಲ್‌ನಿಂದ ಇನ್ನಷ್ಟು ಪಡೆಯಿರಿ
ನೀವು ಬಜಾಜ್ ಫಿನ್‌ಸರ್ವ್ ಪ್ರಾಡಕ್ಟ್ ಆಯ್ಕೆ ಮಾಡಿದಾಗ, ನಿಮ್ಮ ಕಾಂಟ್ಯಾಕ್ಟ್ ವಿವರಗಳು ಮತ್ತು ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ನಮ್ಮ ಗ್ರಾಹಕ ಸೇವಾ ವೇದಿಕೆ - ಮೈ ಅಕೌಂಟ್‌ನಲ್ಲಿ ನಿಮ್ಮ ಪ್ರೊಫೈಲ್ ರಚಿಸಲು ನಿಮ್ಮ ವಿವರಗಳನ್ನು ಬಳಸಲಾಗುತ್ತದೆ.
ಮೈ ಅಕೌಂಟ್‌ನಲ್ಲಿ, ನೀವು ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ಎಲ್ಲಾ ಚಾಲ್ತಿಯಲ್ಲಿರುವ ಸಂಬಂಧಗಳನ್ನು ನೋಡಬಹುದು ಮತ್ತು ನಿಮ್ಮ ಸ್ಟೇಟ್ಮೆಂಟ್‌ಗಳನ್ನು ಪರಿಶೀಲಿಸಬಹುದು, ನಿಮ್ಮ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಪಾವತಿಗಳನ್ನು ಮಾಡಬಹುದು.
ನಮ್ಮ ಎಲ್ಲಾ ಪ್ರಾಡಕ್ಟ್‌ಗಳಾದ ಲೋನ್‌ಗಳು, ಕಾರ್ಡ್‌ಗಳು, ಇನ್ಶೂರೆನ್ಸ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ಆಕರ್ಷಕ ಆಫರ್‌ಗಳ ಜಗತ್ತಿಗೆ ನೀವು ಅಕ್ಸೆಸ್ ಪಡೆಯುತ್ತೀರಿ.
ಅದಕ್ಕಾಗಿಯೇ ನಿಮ್ಮ ವಿವರಗಳನ್ನು ನಮ್ಮ ದಾಖಲೆಗಳಲ್ಲಿ ನಿಯಮಿತವಾಗಿ ಅಪ್ಡೇಟ್ ಮಾಡಲಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ನೀವು ನಿಮ್ಮ ಫೋನ್ ನಂಬರ್ ಬದಲಾಯಿಸಿದರೆ ಅಥವಾ ನೀವು ಬೇರೆ ವಿಳಾಸಕ್ಕೆ ಸ್ಥಳಾಂತರಿಸಿದರೆ - ಅದು ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿಯೂ ಕಾಣಿಸಿಕೊಳ್ಳಬೇಕು.
ನಿಮ್ಮ ಪ್ರೊಫೈಲನ್ನು ಅಪ್ಡೇಟ್ ಮಾಡುವುದು ಹಲವಾರು ಪ್ರಯೋಜನಗಳನ್ನು ಹೊಂದಿದೆ:
- ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ತ್ವರಿತ ಅಕ್ಸೆಸ್
- ಸಮಸ್ಯೆಗಳ ಸಂದರ್ಭದಲ್ಲಿ ತ್ವರಿತ ಸಹಾಯ
- ನಿಮ್ಮ ಇಮೇಲ್ ಇನ್‌ಬಾಕ್ಸಿಗೆ ಮಾಸಿಕ ಲೋನ್ ಸ್ಟೇಟ್ಮೆಂಟ್‌ಗಳನ್ನು ಡೆಲಿವರಿ ಮಾಡಲಾಗುತ್ತದೆ
- ಡೇಟಾ ರಕ್ಷಣೆಗಾಗಿ ಎರಡು-ಅಂಶಗಳ ದೃಢೀಕರಣ
- ಲೋನ್‌ಗಳು, ಕಾರ್ಡ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಮುಂಚಿತ-ಅನುಮೋದಿತ ಆಫರ್‌ಗಳು
ನಿಮ್ಮ ಸಂಪರ್ಕ ವಿವರಗಳನ್ನು ನಿರ್ವಹಿಸಿ
ನಿಮ್ಮ ಸಂಪರ್ಕ ವಿವರಗಳು ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಮತ್ತು ಪ್ರಸ್ತುತ ವಸತಿ ವಿಳಾಸವನ್ನು ಒಳಗೊಂಡಿವೆ. ನಮ್ಮ ದಾಖಲೆಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಅವುಗಳನ್ನು ಮೈ ಅಕೌಂಟ್‌ನಲ್ಲಿ ಎಡಿಟ್ ಮಾಡುವುದರಿಂದ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬಹುದು.
ದಯವಿಟ್ಟು ನಿಮ್ಮ ಪ್ಯಾನ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ವೋಟರ್ ಐಡಿಯ ಸ್ವಯಂ ದೃಢೀಕೃತ ಪ್ರತಿಯನ್ನು ತಮ್ಮಲ್ಲಿ ಇರಿಸಿಕೊಳ್ಳಿ.
ಇದನ್ನು ಮಾಡುವ ಮೂಲಕ, ನಮ್ಮಿಂದ ಯಾವುದೇ ಪ್ರಮುಖ ಸೇವಾ-ಸಂಬಂಧಿತ ಸಂವಹನವನ್ನು ನೀವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
-
ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಮೈ ಅಕೌಂಟಿನಲ್ಲಿ ನಿಮ್ಮ ಮೊಬೈಲ್ ನಂಬರನ್ನು ನೀವು ಅಪ್ಡೇಟ್ ಮಾಡಬಹುದು:
- ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡಿ.
- ಪ್ರೊಫೈಲ್ ವಿಭಾಗಕ್ಕೆ ಹೋಗಲು ನಿಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
- ಮೊಬೈಲ್ ನಂಬರ್ ಅಡಿಯಲ್ಲಿ 'ಎಡಿಟ್' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ.
- ಪರಿಶೀಲನೆಗಾಗಿ ನಿಮ್ಮ ಹುಟ್ಟಿದ ದಿನಾಂಕ/ ಬ್ಯಾಂಕ್ ಅಕೌಂಟ್ ನಂಬರ್/ ಇನ್ಸ್ಟಾ ಇಎಂಐ ಕಾರ್ಡ್ ನಂಬರ್ ಬಳಸಿ.
- ನಿಮ್ಮ ಹೊಸ ಮೊಬೈಲ್ ನಂಬರ್ ನಮೂದಿಸಿ ಮತ್ತು ಮುಂದುವರೆಯಿರಿ.
- ನಮ್ಮೊಂದಿಗೆ ನೋಂದಣಿಯಾದ ನಿಮ್ಮ ಹಳೆಯ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ಪರಿಶೀಲಿಸಿ.
ಈ ಕೆಳಗಿನ 'ನಿಮ್ಮ ಮೊಬೈಲ್ ನಂಬರ್ ಎಡಿಟ್ ಮಾಡಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅನ್ನು ಕೂಡ ಬದಲಾಯಿಸಬಹುದು. ಮೈ ಅಕೌಂಟ್‌ನ ಪ್ರೊಫೈಲ್ ವಿಭಾಗಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಫೋನ್ ನಂಬರನ್ನು ಅಪ್ಡೇಟ್ ಮಾಡಬಹುದು.
ಎರಡು ಕೆಲಸದ ದಿನಗಳ ಒಳಗೆ ನಮ್ಮೊಂದಿಗೆ ನೋಂದಣಿಯಾದ ನಿಮ್ಮ ಹಳೆಯ ಮೊಬೈಲ್ ನಂಬರಿನಲ್ಲಿ ಅಪ್ಡೇಟ್ ಆದ ವಿವರಗಳ ದೃಢೀಕರಣದ ಎಸ್ಎಂಎಸ್ ಅನ್ನು ನೀವು ಪಡೆಯುತ್ತೀರಿ.
-
ನಿಮ್ಮ ಇಮೇಲ್ ಐಡಿ ಅಪ್ಡೇಟ್ ಮಾಡಿ
ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಮೈ ಅಕೌಂಟ್‌ನಲ್ಲಿ ನಿಮ್ಮ ಇಮೇಲ್ ಐಡಿಯನ್ನು ಅಪ್ಡೇಟ್ ಮಾಡಬಹುದು:
- ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಲು ಈ ಪುಟದಲ್ಲಿನ 'ಸೈನ್-ಇನ್' ಬಟನ್ ಮೇಲೆ ಕ್ಲಿಕ್ ಮಾಡುವುದು.
- ನಿಮ್ಮ ಪ್ರೊಫೈಲ್ ನೋಡಲು ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್‌ನೊಂದಿಗೆ ಸೈನ್-ಇನ್ ಮಾಡಿ.
- ನಿಮ್ಮ 'ಇಮೇಲ್ ಐಡಿ' ಅಡಿಯಲ್ಲಿ 'ಎಡಿಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಪರಿಶೀಲನೆಗಾಗಿ ನಿಮ್ಮ ಹುಟ್ಟಿದ ದಿನಾಂಕ/ ಬ್ಯಾಂಕ್ ಅಕೌಂಟ್ ನಂಬರ್/ ಇನ್ಸ್ಟಾ ಇಎಂಐ ಕಾರ್ಡ್ ನಂಬರ್ ಬಳಸಿ.
- ನಿಮ್ಮ ಹೊಸ ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಈ ಐಡಿಗೆ ಕಳುಹಿಸಲಾದ ಒಟಿಪಿಯೊಂದಿಗೆ ಪರಿಶೀಲಿಸಿ.
ಈ ಕೆಳಗಿನ 'ನಿಮ್ಮ ಇಮೇಲ್ ಐಡಿ ಎಡಿಟ್ ಮಾಡಿ' ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಮೈ ಅಕೌಂಟ್‌ನಲ್ಲಿ ಪ್ರೊಫೈಲ್ ವಿಭಾಗಕ್ಕೆ ಭೇಟಿ ನೀಡಬಹುದು.
ಒಟಿಪಿಯನ್ನು ನಿಮ್ಮ ಹೊಸ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಒಮ್ಮೆ ಮುಗಿದ ನಂತರ, ಎರಡು ಕೆಲಸದ ದಿನಗಳ ಒಳಗೆ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಅಪ್ಡೇಟ್ ಆದ ವಿವರಗಳ ಬಗ್ಗೆ ನೀವು ದೃಢೀಕರಣದ ಸಂದೇಶವನ್ನು ಪಡೆಯುತ್ತೀರಿ.
-
ನಿಮ್ಮ ವಸತಿ ವಿಳಾಸವನ್ನು ಅಪ್ಡೇಟ್ ಮಾಡಿ
ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಮೈ ಅಕೌಂಟಿನಲ್ಲಿ ನಿಮ್ಮ ವಸತಿ ವಿಳಾಸವನ್ನು ಎಡಿಟ್ ಮಾಡಬಹುದು:
- ಈ ಪುಟದಲ್ಲಿನ 'ಸೈನ್-ಇನ್' ಬಟನ್ ಕ್ಲಿಕ್ ಮಾಡುವ ಮೂಲಕ ನಮ್ಮ ಗ್ರಾಹಕ ಪೋರ್ಟಲ್‌ಗೆ ಭೇಟಿ ನೀಡಿ.
- ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಲು ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ಪ್ರಸ್ತುತ ವಿಳಾಸ' ವಿಭಾಗದ ಕೆಳಗಿನ 'ಎಡಿಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹುಟ್ಟಿದ ದಿನಾಂಕ/ ಇನ್ಸ್ಟಾ ಇಎಂಐ ಕಾರ್ಡ್/ ಬ್ಯಾಂಕ್ ಅಕೌಂಟ್ ನಂಬರ್ ಬಳಸಿಕೊಂಡು ನಿಮ್ಮ ವಿವರಗಳನ್ನು ದೃಢೀಕರಿಸಿ.
- ನಿಮ್ಮ ಅಪ್ಡೇಟ್ ಆದ ವಿಳಾಸವನ್ನು ನಮೂದಿಸಿ ಮತ್ತು ಬೆಂಬಲಿತ ವಿಳಾಸದ ಪುರಾವೆ ಡಾಕ್ಯುಮೆಂಟಿನ ಸ್ವಯಂ ದೃಢೀಕರಿಸಿದ ಪ್ರತಿಯನ್ನು ಅಪ್ಲೋಡ್ ಮಾಡಿ.
-
ನಿಮ್ಮ ಪ್ರೊಫೈಲ್ ನೋಡಿ
ಮೈ ಅಕೌಂಟಿಗೆ ಸೈನ್-ಇನ್ ಮಾಡುವ ಮೂಲಕ ನಿಮ್ಮ ಮಾಹಿತಿಯನ್ನು ಪರಿಶೀಲಿಸಿ.
ನಿಮ್ಮ ವೈಯಕ್ತಿಕ ವಿವರಗಳನ್ನು ನಿರ್ವಹಿಸಿ
ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಹುಟ್ಟಿದ ದಿನಾಂಕದಂತಹ ನಿಮ್ಮ ವೈಯಕ್ತಿಕ ವಿವರಗಳು ನಿಮ್ಮ ಪ್ರೊಫೈಲನ್ನು ಪರಿಶೀಲಿಸಲು ಸುಲಭವಾದ ಮಾರ್ಗಗಳಾಗಿವೆ. ನಮ್ಮ ಸೇವೆಗಳಿಗೆ ತ್ವರಿತ ಅಕ್ಸೆಸ್ ನೀಡಲು ಇವುಗಳನ್ನು ನಮ್ಮ ದಾಖಲೆಗಳಲ್ಲಿ ನಿರ್ವಹಿಸಲಾಗುತ್ತದೆ.
ಮೈ ಅಕೌಂಟ್ ಮೂಲಕ, ನೀವು ಕೆಲವೇ ಕ್ಲಿಕ್‌ಗಳಲ್ಲಿ ಈ ವಿವರಗಳನ್ನು ಆನ್ಲೈನಿನಲ್ಲಿ ಪರಿಶೀಲಿಸಬಹುದು ಮತ್ತು ಅಪ್ಡೇಟ್ ಮಾಡಬಹುದು.
ದಯವಿಟ್ಟು ಈ ಅಧಿಕೃತವಾಗಿ ಮಾನ್ಯವಾದ ಡಾಕ್ಯುಮೆಂಟ್‌ಗಳಲ್ಲಿ (ಒವಿಡಿಗಳು) ಯಾವುದಾದರೂ ಒಂದರ ಸ್ವಯಂ ದೃಢೀಕೃತ ಪ್ರತಿಯನ್ನು (ಒವಿಡಿಗಳು) ತಮ್ಮಲ್ಲಿ ಇಟ್ಟುಕೊಳ್ಳಿ - ಪ್ಯಾನ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ, ನರೇಗಾ ಜಾಬ್ ಕಾರ್ಡ್ ಅಥವಾ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ.
-
ನಿಮ್ಮ ಹುಟ್ಟಿದ ದಿನಾಂಕವನ್ನು ಅಪ್ಡೇಟ್ ಮಾಡಿ
ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ಮೈ ಅಕೌಂಟಿನಲ್ಲಿ ನಿಮ್ಮ ಹುಟ್ಟಿದ ದಿನಾಂಕವನ್ನು ಎಡಿಟ್ ಮಾಡಬಹುದು:
- ನಮ್ಮ ಎರಡು-ಅಂಶಗಳ ದೃಢೀಕರಣವನ್ನು ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
- ಪ್ರೊಫೈಲ್ ವಿಭಾಗಕ್ಕೆ ಭೇಟಿ ನೀಡಿ ಮತ್ತು ಹುಟ್ಟಿದ ದಿನಾಂಕದ ಒಳಗೆ 'ಎಡಿಟ್' ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪ್ಯಾನ್/ ಇನ್ಸ್ಟಾ ಇಎಂಐ ಕಾರ್ಡ್/ ಬ್ಯಾಂಕ್ ಅಕೌಂಟ್ ನಂಬರ್ ಬಳಸಿಕೊಂಡು ನಿಮ್ಮ ಹುಟ್ಟಿದ ದಿನಾಂಕವನ್ನು ದೃಢೀಕರಿಸಿ.
- ನಿಮ್ಮ ಹುಟ್ಟಿದ ದಿನಾಂಕವನ್ನು ಅಪ್ಡೇಟ್ ಮಾಡಿ ಮತ್ತು ಬೆಂಬಲಿತ ಡಾಕ್ಯುಮೆಂಟಿನ ಸ್ವಯಂ-ದೃಢೀಕೃತ ಪ್ರತಿಯನ್ನು ಅಪ್ಲೋಡ್ ಮಾಡಿ.
ಆರಂಭಿಸಲು ಈ ಕೆಳಗಿನ 'ನಿಮ್ಮ ಹುಟ್ಟಿದ ದಿನಾಂಕವನ್ನು ಎಡಿಟ್ ಮಾಡಿ' ಆಯ್ಕೆಯ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು. 'ಮೈ ಅಕೌಂಟ್'ಗೆ ಸೈನ್-ಇನ್ ಮಾಡಲು ಮತ್ತು ಬದಲಾವಣೆ ಮಾಡಲು ಪ್ರೊಫೈಲ್ ವಿಭಾಗಕ್ಕೆ ಭೇಟಿ ನೀಡಲು ನಿಮ್ಮನ್ನು ಕೇಳಲಾಗುತ್ತದೆ. ಎರಡು ಕೆಲಸದ ದಿನಗಳ ಒಳಗೆ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಅಪ್ಡೇಟ್ ಆದ ವಿವರಗಳ ಬಗ್ಗೆ ನೀವು ದೃಢೀಕರಣದ ಎಸ್‌ಎಂಎಸ್ ಪಡೆಯುತ್ತೀರಿ.
ನಿಮ್ಮ ಪ್ಯಾನ್ ಅಪ್ಡೇಟ್ ಮಾಡುವುದು ಹೇಗೆ
ಕೆವೈಸಿ ಎಂದರೇನು? ಇದು ಏಕೆ ಮುಖ್ಯವಾಗಿದೆ?
ನೀವು ಹಣಕಾಸು ಪ್ರಾಡಕ್ಟ್ ಆಯ್ಕೆ ಮಾಡಿದಾಗ, ನಿಮ್ಮ ಕಾಂಟಾಕ್ಟ್ ಮಾಹಿತಿ ಮತ್ತು ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಲಾಗುತ್ತದೆ. ಇದನ್ನು ನಿಮ್ಮ ಗುರುತನ್ನು ಖಚಿತಪಡಿಸಲು ಮತ್ತು ನಿಮ್ಮ ಪ್ರೊಫೈಲನ್ನು ಪರಿಶೀಲಿಸಲು ಮಾಡಲಾಗುತ್ತದೆ.
ಗ್ರಾಹಕರ ಗುರುತನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು 'ನಿಮ್ಮ ಗ್ರಾಹಕರನ್ನು ತಿಳಿಯಿರಿ' (ಕೆವೈಸಿ) ಎಂದು ಕರೆಯಲಾಗುತ್ತದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಅಗತ್ಯವಿರುವ ಕಡ್ಡಾಯ ಪ್ರಕ್ರಿಯೆಯಾಗಿದೆ.
ನಿಮ್ಮ ಕೆವೈಸಿ ವಿವರಗಳನ್ನು ಪರಿಶೀಲಿಸುವ ಮೂಲಕ, ನಮ್ಮ ಪ್ರಾಡಕ್ಟ್‌ಗಳನ್ನು ನಿಜವಾದ ಗ್ರಾಹಕರಿಗೆ ಮಾತ್ರ ನೀಡಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ. ಇದು ಮನಿ ಲಾಂಡರಿಂಗ್ ಮತ್ತು ವಂಚನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಗ್ರಾಹಕರು ಎರಡು ರೀತಿಯ ಕೆವೈಸಿಗಳನ್ನು ಮಾಡಬೇಕಾಗಬಹುದು:
-
ಲೋನ್‌ಗಳು ಮತ್ತು ಡೆಪಾಸಿಟ್‌ಗಳಿಗೆ ಕೆವೈಸಿ
ನೀವು ಯಾವುದೇ ಲೋನ್ ಅಥವಾ ಡೆಪಾಸಿಟ್ ಪ್ರಾಡಕ್ಟ್ ಆಯ್ಕೆ ಮಾಡಿದಾಗ, ನಿಮ್ಮ ಐಡಿ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಸಲ್ಲಿಸುವ ಮೂಲಕ ನೀವು ನಿಮ್ಮ ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು.
-
ವಾಲೆಟ್‌ಗಳಿಗಾಗಿ ಕೆವೈಸಿ
ಮೊಬೈಲ್ ನಂಬರ್, ಹೆಸರಿನ ಸ್ವಯಂ-ಘೋಷಣೆ ಮತ್ತು ಐಡಿ ಪುರಾವೆಯಂತಹ ಕನಿಷ್ಠ ವಿವರಗಳೊಂದಿಗೆ ಸಣ್ಣ ವಾಲೆಟ್ ಅಥವಾ ಪ್ರಿಪೇಯ್ಡ್ ಪಾವತಿ ಸಾಧನಗಳನ್ನು (ಪಿಪಿಐ) ನೀಡಬಹುದು. ಆದಾಗ್ಯೂ, ಯಾವುದೇ ಬ್ಯಾಂಕ್ ಅಕೌಂಟಿಗೆ ಹಣವನ್ನು ಕಳುಹಿಸಲು ಅಥವಾ ಟ್ರಾನ್ಸ್‌ಫರ್ ಮಾಡಲು ನಿಮ್ಮ ವಾಲೆಟ್ ಬಳಸಲು ನೀವು ನಿಮ್ಮ ಫುಲ್ ಕೆವೈಸಿ ಯನ್ನು ಪೂರ್ಣಗೊಳಿಸಬೇಕು.
-
ನೀವು ಲೋನ್‌ಗಳು, ಡೆಪಾಸಿಟ್‌ಗಳು ಮತ್ತು ಪಿಪಿಐಗಳಿಗೆ ತೆಗೆದುಕೊಂಡು ಹೋಗಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:
ಕಡ್ಡಾಯ ಡಾಕ್ಯುಮೆಂಟ್‌ಗಳು - ಫೋಟೋ, ಪ್ಯಾನ್ ಅಥವಾ ಫಾರ್ಮ್ 60 (ಪ್ಯಾನ್ ಇಲ್ಲದಿದ್ದರೆ).
ಗುರುತಿನ ಪುರಾವೆ (ಪಿಒಐ) – ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್.ವಿಳಾಸದ ಪುರಾವೆ (ಪಿಒಎ) – ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಅಥವಾ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ. ಒಂದು ವೇಳೆ ಮೇಲೆ ತಿಳಿಸಿದ ಡಾಕ್ಯುಮೆಂಟ್‌ಗಳಲ್ಲಿ ನಿಮ್ಮ ಪ್ರಸ್ತುತ ವಿಳಾಸವನ್ನು ಅಪ್ಡೇಟ್ ಮಾಡದಿದ್ದರೆ, ಯುಟಿಲಿಟಿ ಬಿಲ್‌ಗಳು, ಆಸ್ತಿ ತೆರಿಗೆ ರಶೀದಿ, ಪಿಂಚಣಿ ಅಥವಾ ಕುಟುಂಬ ಪಿಂಚಣಿ ಪಾವತಿ ಆರ್ಡರ್‌ಗಳು (ಪಿಪಿಒಗಳು), ಉದ್ಯೋಗದಾತರಿಂದ ವಸತಿ ಹಂಚಿಕೆ ಪತ್ರದಂತಹ ಯಾವುದೇ ಡಾಕ್ಯುಮೆಂಟ್‌ಗಳಲ್ಲಿ ಯಾವುದಾದರೂ ಒಂದನ್ನು ನೀವು ಸಲ್ಲಿಸಬಹುದು.
ಆಗಾಗ ಕೇಳುವ ಪ್ರಶ್ನೆಗಳು
ನೀವು ನಮ್ಮ ಯಾವುದೇ ಪ್ರಾಡಕ್ಟ್ ಅನ್ನು ಆಯ್ಕೆ ಮಾಡಿದಾಗ, ನಿಮ್ಮ ಪ್ಯಾನ್ ಮತ್ತು ಹುಟ್ಟಿದ ದಿನಾಂಕದಂತಹ ನಿಮ್ಮ ಕೆಲವು ವೈಯಕ್ತಿಕ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಮೈ ಅಕೌಂಟ್ ಪ್ರೊಫೈಲ್‌ನಲ್ಲಿ ಈ ಯಾವುದೇ ವಿವರಗಳು ಅಪೂರ್ಣವಾಗಿವೆ ಎಂದು ನೀವು ಕಂಡುಕೊಂಡರೆ, ಈ ಪ್ರಯೋಜನಗಳನ್ನು ಪಡೆಯಲು ನೀವು ತಕ್ಷಣ ಅದನ್ನು ಅಪ್ಡೇಟ್ ಮಾಡಬೇಕು:
- ನಮ್ಮಿಂದ ಪ್ರಮುಖ ಸೇವೆ ಸಂಬಂಧಿತ ಸಂವಹನವನ್ನು ಪಡೆಯಿರಿ.
- ನಿಮ್ಮ ಅಕೌಂಟಿನಲ್ಲಿ ಮೋಸದ ಚಟುವಟಿಕೆಗಳನ್ನು ತಡೆಯಿರಿ.
- ನಿಮಗೆ ಅಕೌಂಟ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣದ ಸಹಾಯ ಪಡೆಯಿರಿ.
ನನ್ನ ವೈಯಕ್ತಿಕ ವಿವರಗಳನ್ನು ಅಪ್ಡೇಟ್ ಮಾಡಿ
ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ನೀವು ಅಕ್ಸೆಸ್ ಹೊಂದಿಲ್ಲದಿದ್ದಲ್ಲಿ, ನಿಮ್ಮ ಪ್ರೊಫೈಲ್ ಮಾಹಿತಿಗೆ ಸಂಬಂಧಿಸಿದ ಯಾವುದೇ ಬದಲಾವಣೆಗಳನ್ನು ಆರಂಭಿಸಲು ದಯವಿಟ್ಟು ನಮ್ಮ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ನಂಬರ್ ನೀವು ನಮ್ಮೊಂದಿಗೆ ಹಂಚಿಕೊಳ್ಳುವ ನಿಮ್ಮ ಕಾಂಟಾಕ್ಟ್ ವಿವರಗಳ ಪ್ರಮುಖ ಭಾಗವಾಗಿದೆ. ಬದಲಾವಣೆಯ ಸಂದರ್ಭದಲ್ಲಿ, ಕೆಲವು ಸರಳ ಹಂತಗಳಲ್ಲಿ ನೀವು ನಿಮ್ಮ ವಿವರಗಳನ್ನು ಎಡಿಟ್ ಮಾಡಬಹುದು:
- ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್ ಬಳಸಿಕೊಂಡು ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
- ಮೊಬೈಲ್ ನಂಬರ್ ವಿಭಾಗದಲ್ಲಿ 'ಎಡಿಟ್' ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಪ್ಯಾನ್/ಇನ್ಸ್ಟಾ ಇಎಂಐ ಕಾರ್ಡ್ ನಂಬರ್/ಬ್ಯಾಂಕ್ ಅಕೌಂಟ್ ನಂಬರ್ ಮೂಲಕ ನಿಮ್ಮ ಗುರುತನ್ನು ದೃಢೀಕರಿಸಿ.
- ನಮ್ಮೊಂದಿಗೆ ನೋಂದಣಿಯಾಗಿರುವ ನಿಮ್ಮ ಹಳೆಯ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ನಮೂದಿಸಿ ಮತ್ತು ಸಲ್ಲಿಸಿ.
- ಎರಡು ಕೆಲಸದ ದಿನಗಳ ಒಳಗೆ ನಿಮ್ಮ ಹಳೆಯ ಮೊಬೈಲ್ ನಂಬರಿನಲ್ಲಿ ದೃಢೀಕರಣವನ್ನು ಪಡೆಯಿರಿ.
ನನ್ನ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ
ಮೈ ಅಕೌಂಟಿಗೆ ಭೇಟಿ ನೀಡುವ ಮೂಲಕ ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಇಮೇಲ್ ಐಡಿಯನ್ನು ನೀವು ಅಪ್ಡೇಟ್ ಮಾಡಬಹುದು. ನಮ್ಮೊಂದಿಗೆ ನಿಮ್ಮ ಇಮೇಲ್ ಐಡಿಯನ್ನು ಅಪ್ಡೇಟ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:
- ನಿಮ್ಮ ಪ್ರೊಫೈಲ್ ನೋಡಲು ನಿಮ್ಮ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕದೊಂದಿಗೆ ಮೈ ಅಕೌಂಟಿಗೆ ಸೈನ್-ಇನ್ ಮಾಡಿ.
- ಇಮೇಲ್ ಐಡಿ ವಿಭಾಗದಲ್ಲಿ 'ಎಡಿಟ್' ಆಯ್ಕೆಯನ್ನು ಆರಿಸಿ ಮತ್ತು ಮುಂದುವರೆಯಿರಿ.
- ನಿಮ್ಮ ಪ್ಯಾನ್/ ಇನ್ಸ್ಟಾ ಇಎಂಐ ಕಾರ್ಡ್/ ಬ್ಯಾಂಕ್ ಅಕೌಂಟ್ ನಂಬರ್ ಮೂಲಕ ನಿಮ್ಮ ಗುರುತನ್ನು ಮೌಲ್ಯೀಕರಿಸಿ.
- ನಿಮ್ಮ ಹೊಸ ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ ಮತ್ತು ನಿಮ್ಮ ಕೋರಿಕೆಯನ್ನು ಸಲ್ಲಿಸಿ.
ಒಮ್ಮೆ ನೀವು ಕೋರಿಕೆಯನ್ನು ಸಲ್ಲಿಸಿದ ನಂತರ, ನಿಮ್ಮ ಕೋರಿಕೆಯನ್ನು ನೀವು ಟ್ರ್ಯಾಕ್ ಮಾಡಬಹುದಾದ ಸೇವಾ ಕೋರಿಕೆ ನಂಬರನ್ನು ನೀವು ಪಡೆಯುತ್ತೀರಿ. ನಮ್ಮ ದಾಖಲೆಗಳಲ್ಲಿ ನಿಮ್ಮ ಇಮೇಲ್ ಐಡಿ ಯನ್ನು ಅಪ್ಡೇಟ್ ಮಾಡಲು ಸಾಮಾನ್ಯವಾಗಿ ಎರಡು ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.
ನನ್ನ ಇಮೇಲ್ ಐಡಿಯನ್ನು ಅಪ್ಡೇಟ್ ಮಾಡಿ
ಒಮ್ಮೆ ನೀವು ನಿಮ್ಮ ಕೋರಿಕೆಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನಿಮ್ಮ ಮೈ ಅಕೌಂಟ್ ಪ್ರೊಫೈಲನ್ನು ಅಪ್ಡೇಟ್ ಮಾಡಲು ನಮಗೆ ಎರಡು ಕೆಲಸದ ದಿನಗಳು ಬೇಕಾಗುತ್ತವೆ. ನಮ್ಮ ದಾಖಲೆಗಳಲ್ಲಿ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ದೃಢೀಕರಣದ ಮೆಸೇಜ್ ಪಡೆಯುತ್ತೀರಿ.
ನೀವು ನಿಮ್ಮ ಮೈ ಅಕೌಂಟ್ ಪ್ರೊಫೈಲನ್ನು ಅಪ್ಡೇಟ್ ಮಾಡಿದಾಗ, ನಿಮ್ಮಿಂದ ಬದಲಾವಣೆಗಳನ್ನು ಆರಂಭಿಸಲಾಗಿದೆಯೇ ಎಂದು ಪರಿಶೀಲಿಸುವುದು ಮುಖ್ಯವಾಗಿದೆ. ಆದ್ದರಿಂದ, ನಿಮ್ಮ ಪ್ಯಾನ್/ಇನ್ಸ್ಟಾ ಇಎಂಐ ಕಾರ್ಡ್/ಬ್ಯಾಂಕ್ ಅಕೌಂಟ್ ನಂಬರ್ ಮೂಲಕ ನೀವು ನಿಮ್ಮ ಗುರುತನ್ನು ದೃಢೀಕರಿಸಬೇಕು. ಪರಿಶೀಲನೆಯ ಈ ವಿಧಾನವು ಯಾವುದೇ ಮೋಸದ ಚಟುವಟಿಕೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಅನುಮತಿಯಿಲ್ಲದೆ ನಿಮ್ಮ ಅಕೌಂಟನ್ನು ಬಳಸುವುದನ್ನು ಕೂಡ ತಡೆಯುತ್ತದೆ.
ಅದರ ಫೋಟೋಕಾಪಿಯಲ್ಲಿ ನಿಮ್ಮ ಸಹಿಯನ್ನು ಇರಿಸುವ ಮೂಲಕ ನೀವು ನಿಮ್ಮ ಡಾಕ್ಯುಮೆಂಟನ್ನು ಸ್ವಯಂ-ದೃಢೀಕರಿಸಬಹುದು.
ನೀವು ನಿಮ್ಮ ಮೈ ಅಕೌಂಟ್ ಪ್ರೊಫೈಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದಾಗ, ನೀವು ಪರಿಶೀಲನೆಗಾಗಿ ಸ್ವಯಂ ದೃಢೀಕರಿಸಿದ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು.
ನೀವು ನಿಮ್ಮ ವೈಯಕ್ತಿಕ ವಿವರಗಳನ್ನು ನಮ್ಮೊಂದಿಗೆ ಅಪ್ಡೇಟ್ ಮಾಡುವಾಗ, ಪರಿಶೀಲನೆಗಾಗಿ ನೀವು ಕೆವೈಸಿ ಡಾಕ್ಯುಮೆಂಟ್‌ಗಳ ಸ್ವಯಂ-ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು.
ನೀವು ಈ ಡಾಕ್ಯುಮೆಂಟ್‌ಗಳಲ್ಲಿ ಒಂದನ್ನು ಸಲ್ಲಿಸಬಹುದು - ಗುರುತಿನ ಪುರಾವೆಯಾಗಿ ಪ್ಯಾನ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ವೋಟರ್ ಐಡಿ, ನರೇಗಾ ಜಾಬ್ ಕಾರ್ಡ್ ಅಥವಾ ಮಾಸ್ಕ್ ಮಾಡಿದ ಆಧಾರ್ ಕಾರ್ಡ್ (ಮೊದಲ ಎಂಟು ಅಂಕಿಗಳು). ವಿಳಾಸದ ಪುರಾವೆಯಾಗಿ, ನಿಮ್ಮ ಪ್ಯಾನ್ ಹೊರತುಪಡಿಸಿ, ಮೇಲೆ ಪಟ್ಟಿ ಮಾಡಲಾದ ಯಾವುದೇ ಡಾಕ್ಯುಮೆಂಟ್‌ಗಳನ್ನು ನೀವು ಸಲ್ಲಿಸಬಹುದು.
ನೀವು ಎರಡು ಒಟಿಪಿಗಳನ್ನು ಪಡೆದಾಗ ಮತ್ತು ಅವುಗಳಲ್ಲಿ ಯಾವುದಾದರೂ ಒಂದನ್ನು ನಮೂದಿಸಿದಾಗ ಈ ದೋಷ ಸಂಭವಿಸುತ್ತದೆ. ಇದನ್ನು ಪರಿಹರಿಸಲು, ಸ್ವಲ್ಪ ಸಮಯದವರೆಗೆ ಕಾಯಿರಿ ಮತ್ತು 'ಒಟಿಪಿ ಮರುಕಳುಹಿಸಿ' ಬಟನ್ ಮೇಲೆ ಒಮ್ಮೆ ಮಾತ್ರ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಹೊಸ ಒಟಿಪಿಯನ್ನು ಮರು-ನಮೂದಿಸಲು ನೀವು ಪ್ರಯತ್ನಿಸಬಹುದು.
ನಮ್ಮ ದಾಖಲೆಗಳಲ್ಲಿ ನಿಮ್ಮ ಹೆಸರು ತಪ್ಪಾಗಿದ್ದಲ್ಲಿ, ನಮ್ಮ 'ಕೋರಿಕೆಯನ್ನು ಸಲ್ಲಿಸಿ' ಸೌಲಭ್ಯವನ್ನು ಬಳಸಿಕೊಂಡು ನೀವು ಅದನ್ನು ಅಪ್ಡೇಟ್ ಮಾಡಬಹುದು. ನೀವು ನಿಮ್ಮ ಕೋರಿಕೆಯನ್ನು ಸಲ್ಲಿಸುವಾಗ ದಯವಿಟ್ಟು ಈ ಡಾಕ್ಯುಮೆಂಟ್‌ಗಳಲ್ಲಿ ಒಂದನ್ನು ಸುಲಭವಾಗಿ ಇರಿಸಿಕೊಳ್ಳಿ - ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್.
ಒಮ್ಮೆ ನೀವು ಕೋರಿಕೆಯನ್ನು ಸಲ್ಲಿಸಿದ ನಂತರ, ನೀವು ಸೇವಾ ಕೋರಿಕೆ ನಂಬರನ್ನು ಪಡೆಯುತ್ತೀರಿ. ನಿಮ್ಮ ಕೋರಿಕೆಯ ಸ್ಥಿತಿಯನ್ನು ಆನ್ಲೈನಿನಲ್ಲಿ ಟ್ರ್ಯಾಕ್ ಮಾಡಲು ನೀವು ಈ ಕೋರಿಕೆ ನಂಬರನ್ನು ಬಳಸಬಹುದು.
ನಿಮ್ಮ ಅಧಿಕೃತವಾಗಿ ಮಾನ್ಯವಾದ ಡಾಕ್ಯುಮೆಂಟ್‌ಗಳಲ್ಲಿ ನಿಮ್ಮ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್ ಅಥವಾ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರವನ್ನು ಒಳಗೊಂಡಿವೆ.
ನಿಮ್ಮ ಅಧಿಕೃತವಾಗಿ ಮಾನ್ಯವಾದ ಯಾವುದೇ ಡಾಕ್ಯುಮೆಂಟ್‌ಗಳನ್ನು ನಿಮ್ಮ ಪ್ರಸ್ತುತ ವಿಳಾಸದೊಂದಿಗೆ ಅಪ್ಡೇಟ್ ಮಾಡದಿದ್ದರೆ, ನೀವು ಅಧಿಕೃತವಾಗಿ ಮಾನ್ಯ ಡಾಕ್ಯುಮೆಂಟ್‌ಗಳಾಗಿ ಪರಿಗಣಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು (ಡಿಒವಿಡಿ).
ಅರ್ಜಿದಾರರ ಹೆಸರಿನಲ್ಲಿರುವ ನಿಮ್ಮ ಇತ್ತೀಚಿನ ಯುಟಿಲಿಟಿ ಬಿಲ್‌ಗಳಲ್ಲಿ ಯಾವುದಾದರೂ ಡಿಒವಿಡಿ ಆಗಿರಬಹುದು (ವಿದ್ಯುತ್, ದೂರವಾಣಿ, ಪೋಸ್ಟ್-ಪೇಯ್ಡ್ ಮೊಬೈಲ್ ಫೋನ್, ಪೈಪ್ಡ್ ಗ್ಯಾಸ್ ಅಥವಾ ನೀರಿನ ಬಿಲ್). ಇದು ಆಸ್ತಿ ಅಥವಾ ಪುರಸಭೆ ತೆರಿಗೆ ರಶೀದಿ, ಪಿಂಚಣಿ ಅಥವಾ ಕುಟುಂಬ ಪಿಂಚಣಿ ಪಾವತಿ ಆದೇಶಗಳು (ಪಿಪಿಒಎಸ್), ರಾಜ್ಯ ಅಥವಾ ಕೇಂದ್ರ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಅಥವಾ ನಿಯಂತ್ರಕ ಸಂಸ್ಥೆಗಳು, ಪಿಎಸ್ಒ, ನಿಗದಿತ ವಾಣಿಜ್ಯ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಪಟ್ಟಿ ಮಾಡಲಾದ ಕಂಪನಿಗಳಿಂದ ನೀಡಲಾದ ಉದ್ಯೋಗದಾತರಿಂದ ವಸತಿ ಹಂಚಿಕೆಯ ಪತ್ರವಾಗಿರಬಹುದು.
ಆದಾಗ್ಯೂ, ನಿಮ್ಮ ಡಿಒವಿಡಿ ಸಲ್ಲಿಸಿದ ಮೂರು ತಿಂಗಳ ಒಳಗೆ ನಿಮ್ಮ ಪ್ರಸ್ತುತ ವಿಳಾಸದೊಂದಿಗೆ ಅಪ್ಡೇಟ್ ಆದ ಅಧಿಕೃತವಾಗಿ ಮಾನ್ಯ ಡಾಕ್ಯುಮೆಂಟ್‌ಗಳಲ್ಲಿ ಯಾವುದಾದರೂ ಒಂದನ್ನು ನೀವು ಸಲ್ಲಿಸಬೇಕು.