ಮನೆಯ ಡೌನ್‌ಪೇಮೆಂಟ್‌ಗಾಗಿ ಪರ್ಸನಲ್ ಲೋನ್ ಬಳಸುವುದರಿಂದ ಆಗುವ ಪ್ರಯೋಜನಗಳು
ಪರ್ಸನಲ್ ಲೋನ್‌ಗಳು ಅನುಕೂಲಕರ ಅಲ್ಪಾವಧಿ ಫೈನಾನ್ಸಿಂಗ್ ಆಯ್ಕೆಗಳಾಗಿದ್ದು, ಅವನ್ನು ನೀವು ವೈವಿಧ್ಯಮಯ ಖರ್ಚುಗಳ ಪೂರೈಕೆಗಾಗಿ ಪಡೆಯಬಹುದು. ಅಂತಹ ಲೋನ್‌ಗಳ ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ ನೀವು ಹೋಮ್ ಲೋನ್ ಡೌನ್‌ಪೇಮೆಂಟ್‌ಗೂ ಕೂಡ ಪರ್ಸನಲ್ ಲೋನ್ ಪಡೆಯಬಹುದು.
ಮನೆಗಳ ಬೆಲೆ ಆಕಾಶ ಮುಟ್ಟುತ್ತಿರುವುದರಿಂದ, ನಿಮ್ಮ ಉಳಿತಾಯದ ಹಣದಲ್ಲಿ ಮನೆ ಖರೀದಿಸುವುದು ಅಸಾಧ್ಯವಾಗಿದೆ. ಹಾಗಾಗಿ, ಬೇರೆ ಮೂಲಗಳ ಮೂಲಕ ಅದಕ್ಕೆ ಹಣ ಹೊಂದಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ನಗರದಲ್ಲಿ ಫ್ಲಾಟ್ ಬೆಲೆಯು ಹತ್ತಾರು ಲಕ್ಷಗಳು ಅಥವಾ ಕೆಲವು ಕೋಟಿಗಳೇ ಆಗಿರಬಹುದು. ಹಾಗಾಗಿ, ನಿಮ್ಮ ಉಳಿತಾಯದ ಹಣದಲ್ಲಿ ಡೌನ್‌ಪೇಮೆಂಟ್ ಮಾಡುವುದರಿಂದ ನಿಮ್ಮ ಹಣಕಾಸು ಭದ್ರತೆ ಕಡಿಮೆಯಾಗುವ ಅಪಾಯವೂ ಇರುತ್ತದೆ. ಹೀಗಾಗಿ ನೀವು ಬಜಾಜ್ ಫಿನ್‌ಸರ್ವ್ ಮೂಲಕ ಮನೆಯ ಡೌನ್‌ಪೇಮೆಂಟ್‌ಗಾಗಿ ಪರ್ಸನಲ್ ಲೋನ್ ಪಡೆಯಬಹುದು. ನಿಮ್ಮ ಇಎಂಐ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುವಲ್ಲಿನ ಪ್ರಮುಖ ಅಂಶವಾಗಿದೆ. ನಿಮ್ಮ ಸಿಬಿಲ್ ಸ್ಕೋರ್ ಅನ್ನು ಈಗಲೇ ಪರಿಶೀಲಿಸಿ.
ಡೌನ್ ಪೇಮೆಂಟ್‌ಗಾಗಿ ಪರ್ಸನಲ್ ಲೋನಿನ ಪ್ರಯೋಜನಗಳು
1. ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ಸುಲಭ EMI ಗಳಲ್ಲಿ ಮರುಪಾವತಿ
ಬಜಾಜ್ ಫಿನ್‌ಸರ್ವ್‌ನಿಂದ ಫ್ಲೆಕ್ಸಿ ಪರ್ಸನಲ್ ಲೋನ್‌ಗಳನ್ನು ಪಡೆದುಕೊಳ್ಳಿ ಮತ್ತು ಡೌನ್ ಪೇಮೆಂಟ್‌ಗಾಗಿ ಮಂಜೂರಾದ ಮಿತಿಯಿಂದ ನಿಮಗೆ ಅಗತ್ಯವಿರುವ ಮೊತ್ತವನ್ನು ವಿತ್‌ಡ್ರಾ ಮಾಡಿ. ಬಡ್ಡಿ-ಮಾತ್ರದ EMI ಗಳಲ್ಲಿ ಮರುಪಾವತಿ ಮಾಡಲು ಆಯ್ಕೆ ಮಾಡಿ ಮತ್ತು ಅವಧಿ ಮುಗಿಯುವ ಮೊದಲು ಯಾವುದೇ ಸಮಯದಲ್ಲಿ ಮುಂಗಡ-ಪಾವತಿ ಮಾಡಿ. ಪರ್ಸನಲ್ ಲೋನ್ ಬಡ್ಡಿ ದರಗಳಿಗೆ ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಲೆಕ್ಕ ಹಾಕಲಾಗುವುದರಿಂದ ಇದು ಮರುಪಾವತಿಯನ್ನು ಕೈಗೆಟಕುವಂತೆ ಮಾಡುತ್ತದೆ.
2. ತ್ವರಿತ ಅನುಮೋದನೆಗಾಗಿ ಮುಂಚಿತ-ಅನುಮೋದಿತ ಆಫರ್‌ಗಳು
ಮುಂಚಿತ-ಅನುಮೋದಿತ ಆಫರ್‌ಗಳೊಂದಿಗೆ ತ್ವರಿತವಾಗಿ ನಿಮ್ಮ ಲೋನಿಗೆ ಅನುಮೋದನೆ ಪಡೆಯಿರಿ ಮತ್ತು 24 ಗಂಟೆಗಳ ಒಳಗೆ ನಿಮ್ಮ ಅಕೌಂಟಿನಲ್ಲಿ ಕ್ರೆಡಿಟ್ ಪಡೆಯಿರಿ*. ಮನೆ ಡೌನ್ ಪೇಮೆಂಟ್‌ಗಾಗಿ ಪರ್ಸನಲ್ ಲೋನ್ ಪಡೆಯುವುದರಿಂದ ನಿಮ್ಮ ಕನಸಿನ ಮನೆಯನ್ನು ಖರೀದಿಸುವ ಅವಕಾಶವನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
3. ಪೂರೈಸಲು ಸುಲಭವಾದ ಅರ್ಹತಾ ಮಾನದಂಡ
ಇದು ಭದ್ರತೆ ರಹಿತ ಕ್ರೆಡಿಟ್ ಆಗಿರುವುದರಿಂದ ಪರ್ಸನಲ್ ಲೋನ್ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳು ಕನಿಷ್ಠ ಮತ್ತು ಪೂರೈಸಲು ಸುಲಭವಾಗಿದೆ.
4. ಕನಿಷ್ಠ ಫೀಸ್ ಮತ್ತು ಶುಲ್ಕಗಳು
ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್ ಶುಲ್ಕಗಳು ತೀರಾ ಕಡಿಮೆ ಇರುತ್ತವೆ. ಇದು ನಿಮ್ಮ ಲೋನ್ ವೆಚ್ಚವನ್ನು ತಕ್ಕಮಟ್ಟಿಗೆ ಕಡಿಮೆ ಮಾಡುತ್ತದೆ.
ಆದಾಗ್ಯೂ, ಮನೆ ಡೌನ್ ಪೇಮೆಂಟ್‌ಗಾಗಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮೊದಲು, ಈ ಲೋನ್‌ನ ಇಎಂಐಗಳು ಮತ್ತು ಹೋಮ್ ಲೋನ್‌ನ ಇಎಂಐಗಳು ಸೇರಿ ನಿಮ್ಮ ಹಣಕಾಸಿನ ಮೇಲೆ ಒತ್ತಡ ಹಾಕುತ್ತವೆ ಎಂಬುದನ್ನು ನೆನಪಿಡಿ. ಹೀಗಾಗಿ, ನೀವು ಈ ಲೋನ್‌ಗಳಿಗೆ ಅಪ್ಲೈ ಮಾಡುವ ಮೊದಲು ಇಎಂಐಗಳ ಒಟ್ಟು ಹೊರಹರಿವನ್ನು ಅಂದಾಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮತ್ತು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬೇಕು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ