ಲೀಸ್ ಬಾಡಿಗೆ ರಿಯಾಯಿತಿ FAQ ಗಳು: ನಿಮ್ಮ LRD ಪ್ರಶ್ನೆಗಳಿಗೆ ಉತ್ತರ ಪಡೆಯಿರಿ | ಬಜಾಜ್ ಫಿನ್‌ಸರ್ವ್‌

ಲೀಸ್ ಬಾಡಿಗೆ ರಿಯಾಯಿತಿ ಆಗಾಗ ಕೇಳುವ ಪ್ರಶ್ನೆಗಳು

ನಾನು ಬಜಾಜ್ ಫಿನ್‌ಸರ್ವ್‌ನಿಂದ ಪಡೆಯಬಹುದಾದ ಕನಿಷ್ಠ ಮತ್ತು ಗರಿಷ್ಠ ಲೋನ್ ಮೊತ್ತ ಎಷ್ಟು?

ನಾವು ಕಾರ್ಪೊರೇಟ್ ಲೀಸ್ ಬಾಡಿಗೆ ರಿಯಾಯಿತಿಯನ್ನು ರೂ. 10 ಕೋಟಿಯಿಂದ ರೂ. 50 ಕೋಟಿಯವರೆಗೆ ಒದಗಿಸುತ್ತೇವೆ.

ಲೋನ್ ಅರ್ಹತೆಯನ್ನು ನೀವು ಹೇಗೆ ನಿರ್ಧರಿಸುತ್ತೀರಿ?

ಅರ್ಹತೆಯನ್ನು ಗುರುತಿಸಲು ನಾವು ಈ ಮುಂದಿನ ಅಂಶಗಳನ್ನು ಅನುಸರಿಸುತ್ತೇವೆ:
ಆಸ್ತಿ ಮೌಲ್ಯಮಾಪನ (ಫೇರ್ ಮಾರುಕಟ್ಟೆ ಮೌಲ್ಯ) – ಕಮರ್ಷಿಯಲ್ ಸ್ವತ್ತಿನ ಮೌಲ್ಯದ 55% ವರೆಗೆ
ಅಡಮಾನ ಇಡುವ ಆಸ್ತಿಯ ಈಗಿನ ಬಾಡಿಗೆ - ನಿವ್ವಳ ಬಾಡಿಗೆ ರಸೀದಿಗಳ 90% ವರೆಗೆ

ಒಂದು ಆಸ್ತಿಯು ವ್ಯಕ್ತಿ ಮತ್ತು ಅವನ/ಅವಳ ಸಂಬಂಧಿಕರ ಜಂಟಿ ಒಡೆತನದಲ್ಲಿ ಇದ್ದರೆ, ಅವನು/ಅವಳು ಆಸ್ತಿ ಮೇಲೆ ಲೋನ್ ಪಡೆಯಬಹುದೇ?

ಪರಿಗಣಿಸಲಾದ ಆಸ್ತಿಯ ಎಲ್ಲಾ ಸಹ-ಮಾಲೀಕರು ಲೋನಿಗೆ ಸಹ-ಅರ್ಜಿದಾರರಾಗಿ ಬರಬೇಕಾದ ಅಗತ್ಯವಿದೆ.

ನನ್ನ ಕಾರ್ಪೊರೇಟ್ LRD ಲೋನ್‍ಗೆ ನನ್ನ ಅನುಮೋದಿತ ಟೆನರ್ ಏನು?

ಉಳಿಕೆ ಲೀಸ್ ಅವಧಿಗೆ ಒಳಪಟ್ಟು ಗರಿಷ್ಠ 11 ವರ್ಷಗಳ ಅವಧಿಗೆ ಲೋನನ್ನು ಪಡೆಯಬೇಕು.

ನನ್ನ ಲೋನ್‌ ಮರುಪಾವತಿ ಮಾಡುವುದು ಹೇಗೆ?

ನಿಮ್ಮ EMI ಯು ESCROW ಅಕೌಂಟಿನಿಂದ ಡೆಬಿಟ್ ಆಗುತ್ತದೆ, ಅಲ್ಲಿ ಬಾಡಿಗೆ ಮೊತ್ತವು ನಿಮ್ಮ ಭೋಗ್ಯದಾರರಿಂದ ಜಮಾ ಆಗುತ್ತದೆ.

ಯಾವ ಆಧಾರದಲ್ಲಿ ಆಂತರಿಕ FRR ಬದಲಾಗುತ್ತದೆ?

ಆಂತರಿಕ FRR ಬೆಂಚ್ ಮಾರ್ಕ್ ರೆಫರೆನ್ಸ್ ರೇಟ್ ಆಗಿರುತ್ತದೆ. ಮಾರುಕಟ್ಟೆಯ ಪರಿಸ್ಥಿತಿಗಳ ಆಧಾರದ ಮೇಲೆ ಮತ್ತು ಕಂಪನಿಗೆ ಹಣದ ವೆಚ್ಚವನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ವಿವಿಧ ಬಾಹ್ಯ ಅಂಶಗಳು ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಇದು ಬದಲಾಗುತ್ತದೆ.

ಬಡ್ಡಿದರಗಳು ಎಷ್ಟು ಸಮಯದಲ್ಲಿ ಬದಲಾಗುತ್ತವೆ?

ನಮ್ಮ ಮರು-ಬೆಲೆ ನೀತಿಯ ಪ್ರಕಾರ, ಬಡ್ಡಿದರಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ ಮತ್ತು ಬಡ್ಡಿದರಗಳನ್ನು ಬದಲಿಸಬೇಕೆ ಅಥವಾ ಬೇಡವೇ ಎಂದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಒಂದು ತಿಂಗಳ ಹಿಂದೆ ನಾನು ಲೋನ್ ತೆಗೆದುಕೊಂಡಿದ್ದೇನೆ. ಬಡ್ಡಿದರಗಳಲ್ಲಿನ ಬದಲಾವಣೆಯು ನನಗೆ ಹೇಗೆ ಸಹಾಯಕವಾಗುತ್ತದೆ?

ನಮ್ಮ ಆಂತರಿಕ ಪ್ರೈಸಿಂಗ್ ಪಾಲಿಸಿ, ರಿ-ಪ್ರೈಸಿಂಗ್ ಪಾಲಿಸಿ ಪ್ರಕಾರ, ಕನಿಷ್ಠ 3 ತಿಂಗಳ ಹಳೆಯ ಕೇಸ್‌ಗಳಿಗೆ ಮಾತ್ರ ಬಡ್ಡಿದರಗಳು ಬದಲಾಗುತ್ತವೆ. ನಿಮ್ಮ ವಿಚಾರದಲ್ಲಿ FRR ಗಳಲ್ಲಿನ ಬದಲಾವಣೆಯು ನಿಮ್ಮ ಲೋನ್ ಬಡ್ಡಿದರದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಆದರೆ ನಿಮ್ಮ ಲೋನ್ 3 ತಿಂಗಳು ಹಳೆಯದಾದ ನಂತರ, ಕಳೆದ 3 ತಿಂಗಳಿನಲ್ಲಿನ FRR ನಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದರೆ ನಿಮ್ಮ ಲೋನ್ ಮೇಲಿನ ಮಾರ್ಜಿನ್ ಆಧಾರದ ಮೇಲೆ ನಿಮ್ಮ ಈಗಿನ ಬಡ್ಡಿದರ ಬದಲಾಗುತ್ತದೆ.

ಫೋರ್‌ಕ್ಲೋಸರ್ ಸ್ಟೇಟ್ಮೆಂಟ್‌‌ಗೆ TAT (ಟರ್ನ್ ಅರೌಂಡ್ ಟೈಮ್) ಎಷ್ಟು?

ಫೋರ್‌ಕ್ಲೋಸರ್ ಸ್ಟೇಟ್ಮೆಂಟ್ ವಿತರಿಸಲು 12 ಕೆಲಸದ ದಿನಗಳ TAT ಬೇಕಾಗುತ್ತವೆ.