ಈ ಸುಲಭ ಮಾರ್ಗದರ್ಶಿಯನ್ನು ಓದಿ ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಪಡೆಯಿರಿ
ಟ್ರಾನ್ಸ್‌ಯೂನಿಯನ್ ಸಿಬಿಲ್ ಲಿಮಿಟೆಡ್ ಎಂಬುದು ವ್ಯಕ್ತಿಗಳ ಕ್ರೆಡಿಟ್ ಇತಿಹಾಸಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಟ್ರ್ಯಾಕ್ ಮಾಡುವ ಹಾಗೂ 300 ರಿಂದ 900 ವರೆಗಿನ ಕ್ರೆಡಿಟ್ ಸ್ಕೋರ್‌ಗಳನ್ನು ನೀಡುವ ಬ್ಯೂರೋ ಆಗಿದೆ. ಈ ಸ್ಕೋರ್‌ಗಳು ಒಬ್ಬ ವ್ಯಕ್ತಿಯ ಸಾಲ ಪಡೆಯುವ ಅರ್ಹತೆಯನ್ನು ಪ್ರತಿನಿಧಿಸುತ್ತವೆ. ಹೆಚ್ಚಿನ ಸ್ಕೋರ್ ನೀವು ಆರ್ಥಿಕವಾಗಿ ಜವಾಬ್ದಾರರಾಗಿದ್ದೀರಿ ಎಂದು ಸೂಚಿಸುತ್ತದೆ, ಆದರೆ ಕಡಿಮೆ ಸ್ಕೋರ್ ನೀವು ಸಾಲವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ತೋರಿಸುತ್ತದೆ. ಸಾಮಾನ್ಯವಾಗಿ, ನಿಮ್ಮ ಟ್ರಾನ್ಸ್‌ಯೂನಿಯನ್ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
ನೀವು ಲೋನ್‌ನಂತಹ ಕ್ರೆಡಿಟ್‌ಗಾಗಿ ಅಪ್ಲೈ ಮಾಡುವಾಗ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿಮ್ಮ ನೆರವಿಗೆ ಬರುತ್ತದೆ. ಇದು ನಿಮ್ಮ ಮರುಪಾವತಿ ಸಾಮರ್ಥ್ಯದ ಬಗ್ಗೆ ಸಾಲದಾತರಿಗೆ ಭರವಸೆ ನೀಡುತ್ತದೆ ಮತ್ತು ಕೈಗೆಟಕುವ ಬಡ್ಡಿದರಗಳಲ್ಲಿ ಸಾಲ ಪಡೆಯಲು ಸಹಾಯ ಮಾಡುತ್ತದೆ. ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್‌ಗೆ ಯಾವುದೇ ಮೇಲಾಧಾರ ಇಲ್ಲದ ಕಾರಣ, ಸಾಲಗಾರರು ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕೆಂದು ಸಾಲದಾತರು ನಿರೀಕ್ಷಿಸುತ್ತಾರೆ.
ನಿಮ್ಮ ಸಿಬಿಲ್ ಟ್ರಾನ್ಸ್‌ಯೂನಿಯನ್ ಸ್ಕೋರ್ ಪಡೆಯಲು ಹಂತಗಳು
ಸ್ಕೋರ್ ಪಡೆಯಲು, ಅನುಸರಿಸಬೇಕಾದ ಹಂತಗಳು ಹೀಗಿವೆ.
- ಟ್ರಾನ್ಸ್‌ಯೂನಿಯನ್ ಸಿಬಿಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಕೌಂಟ್ ರಚಿಸಿ ಮತ್ತು ಕ್ರೆಡಿಟ್ ವರದಿಗಾಗಿ ಕೋರಿಕೆ ಸಲ್ಲಿಸಿ.
- ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಮತ್ತು ಹುಟ್ಟಿದ ದಿನಾಂಕ ಮುಂತಾದ ಅಗತ್ಯ ಮಾಹಿತಿಯನ್ನು ಒದಗಿಸಿ.
- ಅತಿಕಡಿಮೆ ಶುಲ್ಕದಲ್ಲಿ ನಿಮ್ಮ ಸ್ಕೋರ್ ಹಾಗೂ ಟ್ರಾನ್ಸ್‌ಯೂನಿಯನ್ ಕ್ರೆಡಿಟ್ ವರದಿ ಪಡೆಯಿರಿ.
- ಪಾವತಿ ಪೂರ್ಣಗೊಂಡ ನಂತರ, ಸಿಬಿಲ್ ಸ್ಕೋರ್ ಮತ್ತು ಸಿಐಆರ್ (ಕ್ರೆಡಿಟ್ ಇನ್‌ಫರ್ಮೇಶನ್ ರಿಪೋರ್ಟ್) ಅನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಟ್ರಾನ್ಸ್‌ಯೂನಿಯನ್ ಸಿಬಿಲ್ ಮೂಲಕ ನಿಮ್ಮ ಕ್ರೆಡಿಟ್ ರಿಪೋರ್ಟ್ ಮತ್ತು ಸ್ಕೋರ್ ಪರಿಶೀಲಿಸುವುದು ಬಹಳ ಸುಲಭ, ಆದರೆ ನೀವು ಬಜಾಜ್ ಫಿನ್‌ಸರ್ವ್ ಮೂಲಕವೂ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಬಹುದು. ಕೈಗೆಟಕುವ ಬಡ್ಡಿದರದಲ್ಲಿ ತ್ವರಿತ ಪರ್ಸನಲ್ ಲೋನ್ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿರುವಂತೆ ನೋಡಿಕೊಳ್ಳಿ.