ಬಿಸಿನೆಸ್ ಲೋನ್ ಮೇಲೆ ಬಡ್ಡಿಯನ್ನು ಲೆಕ್ಕ ಹಾಕುವುದು ಹೇಗೆ?

2 ನಿಮಿಷದ ಓದು

ಬಿಸಿನೆಸ್ ಲೋನ್ ತೆಗೆದುಕೊಳ್ಳುವಾಗ, ಲೋನ್ ಪಡೆದ ಅಸಲು ಮೊತ್ತದ ಮೇಲೆ ನೀವು ಪಾವತಿಸಬೇಕಾದ ಬಡ್ಡಿಯನ್ನು ಲೆಕ್ಕ ಹಾಕುವುದು ಮುಖ್ಯವಾಗಿರುತ್ತದೆ ಏಕೆಂದರೆ ಲೋನ್ ನಿಮಗೆ ಎಷ್ಟು ಕೈಗೆಟಕುವಂತಿದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ಮತ್ತು ನಿಮ್ಮ ಇಎಂಐ ಗಳಲ್ಲಿ ಬಡ್ಡಿಯ ಅಂಶವನ್ನು ಲೆಕ್ಕ ಹಾಕಿ ಮತ್ತು ಲೋನ್ ಮೇಲಿನ ಒಟ್ಟಾರೆ ಬಡ್ಡಿಯನ್ನು ಲೆಕ್ಕ ಹಾಕಿ.

ಈ ಆನ್ಲೈನ್ ಟೂಲ್ ಉಚಿತ ಮತ್ತು ಬಳಸಲು ಸುಲಭ. ಈ ಕೆಳಗಿನ ಮಾಹಿತಿಯನ್ನು ನಮೂದಿಸಿ:

  • ನೀವು ಲೋನ್ ಪಡೆಯಲು ಬಯಸುವ ಲೋನ್ ಮೊತ್ತ
  • ತಿಂಗಳುಗಳಲ್ಲಿ ಅವಧಿ ಅಥವಾ ಮರುಪಾವತಿ ಅವಧಿ
  • ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನಿಗೆ ವರ್ಷಕ್ಕೆ 9.75% ರಿಂದ 30% ಆರಂಭವಾಗುವ ಅನ್ವಯವಾಗುವ ಬಡ್ಡಿ ದರ

ಒಮ್ಮೆ ನೀವು ಈ ಮೌಲ್ಯಗಳನ್ನು ನಮೂದಿಸಿದ ನಂತರ, ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಮೂರು ಫಲಿತಾಂಶಗಳನ್ನು ನೀಡುತ್ತದೆ:

  • ಪಾವತಿಸಬೇಕಾದ ಒಟ್ಟು ಬಡ್ಡಿ
  • ಒಟ್ಟು ಪಾವತಿ (ಅಸಲು ಮತ್ತು ಬಡ್ಡಿ)
  • ನಿಮ್ಮ ಇಎಂಐ (ಮಾಸಿಕ ಮರುಪಾವತಿ)

ಬಿಸಿನೆಸ್ ಲೋನ್ ಮೇಲಿನ ಬಡ್ಡಿಯನ್ನು ಲೆಕ್ಕ ಹಾಕಲು ಇದು ಸರಳ ಮತ್ತು ಸಮರ್ಥ ಮಾರ್ಗವಾಗಿದೆ. ಇದು ನಿಮ್ಮ ಲೋನ್ ಮೊತ್ತ ಮತ್ತು ಅವಧಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನಿಮ್ಮ ಇಎಂಐ ಗಳು ತುಂಬಾ ಹೆಚ್ಚಾಗಿದ್ದರೆ, ನೀವು ಕಾಲಾವಧಿಯನ್ನು ಹೆಚ್ಚಿಸಬಹುದು ಅಥವಾ ನಿಮ್ಮ ಲೋನ್ ಮೊತ್ತವನ್ನು ಕಡಿಮೆ ಮಾಡಬಹುದು.

ಬಿಸಿನೆಸ್ ಲೋನ್ ಇಎಂಐ ಲೆಕ್ಕಾಚಾರ ಫಾರ್ಮುಲಾ:

ನಿಮ್ಮ ಬಿಸಿನೆಸ್ ಲೋನ್ ಮೇಲೆ ಬಡ್ಡಿ ದರವನ್ನು ಬಳಸಿ, ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಈ ಕೆಳಗಿನ ಫಾರ್ಮುಲಾದಲ್ಲಿ ಕೆಲಸ ಮಾಡುತ್ತದೆ:

E = P * r * (1+r) ^n / ((1+r) ^n-1)

ಎಲ್ಲಿ:

  • E ಎಂದರೆ EMI
  • P ಎಂದರೆ ಲೋನಿನ ಅಸಲು ಮೊತ್ತ
  • r ಎಂದರೆ ಪ್ರತಿ ತಿಂಗಳು ಲೆಕ್ಕ ಹಾಕಲಾಗುವ ಬಡ್ಡಿ ದರ
  • n ಎಂದರೆ ಲೋನಿನ ಅವಧಿ

ನಿಮ್ಮ ಬಿಸಿನೆಸ್ ಲೋನಿನ ಬಡ್ಡಿ ಮತ್ತು ಇಎಂಐ ಅನ್ನು ಹೇಗೆ ಲೆಕ್ಕ ಹಾಕುವುದು ಎಂಬುದರ ಉದಾಹರಣೆ ಇಲ್ಲಿದೆ:

18% ಬಡ್ಡಿ ದರ (r) ಮತ್ತು 4 ವರ್ಷಗಳ ಲೋನ್ ಅವಧಿಯೊಂದಿಗೆ ರೂ. 20 ಲಕ್ಷದ (P) ಬಿಸಿನೆಸ್ ಲೋನನ್ನು ಪಡೆಯಲು ನೀವು ಬಯಸುತ್ತೀರಿ ಎಂದು ಹೇಳಿ. ಲೆಕ್ಕಾಚಾರವನ್ನು ಈ ಕೆಳಗೆ ವಿವರಿಸಲಾಗಿದೆ:

E = 20,00,000 x 18%/12 x (1+18%/12) ^4/[(1+18%/12) ^4 – 1)]

ಇಎಂಐ = ರೂ. 58,750

ನೀವು ಇಎಂಐ ಕ್ಯಾಲ್ಕುಲೇಟರ್ ಬಳಸಿದಾಗ, ನೀವು ನೋಡಲು ಸಾಧ್ಯವಾಗುತ್ತದೆ:

ಒಟ್ಟು ಬಡ್ಡಿ: ರೂ. 8,20,000

ಒಟ್ಟು ಪಾವತಿ: ರೂ. 28,20,000

ಇನ್ನಷ್ಟು ಓದಿರಿ ಕಡಿಮೆ ಓದಿ