ಹೋಮ್ ಲೋನ್ ಹಾಗೂ ಆಸ್ತಿಯ ಮೇಲೆ ಲೋನ್ ನಡುವಿನ ವ್ಯತ್ಯಾಸ

2 ನಿಮಿಷದ ಓದು

ಎರಡು ಆಯ್ಕೆಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಜೂರಾತಿಯ ಉದ್ದೇಶ. ಸಾಲಗಾರರು ಸಿದ್ಧವಾಗಿರುವ ಮನೆಯನ್ನು ಖರೀದಿಸಲು ಅಥವಾ ನಿರ್ಮಾಣದಲ್ಲಿರುವ ಆಸ್ತಿಯನ್ನು ಬುಕ್ ಮಾಡಲು ಹೋಮ್ ಲೋನ್‌ಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಆಸ್ತಿ ಮೇಲಿನ ಲೋನನ್ನು ಆಯ್ಕೆ ಮಾಡುವ ಸಾಲಗಾರರು ತಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಹಣವನ್ನು ಅಕ್ಸೆಸ್ ಮಾಡಲು ಮಂಜೂರಾತಿಯನ್ನು ಬಳಸುತ್ತಾರೆ.

ಆಸ್ತಿ ಮೇಲಿನ ಲೋನ್‌ನೊಂದಿಗೆ, ಮಂಜೂರಾತಿಯನ್ನು ಮದುವೆಯನ್ನು ಆಯೋಜಿಸುವುದು ಅಥವಾ ಶಿಕ್ಷಣ ಶುಲ್ಕವನ್ನು ಪಾವತಿಸುವುದು ಮುಂತಾದ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಬಹುದು. ಇನ್ನೊಂದು ಗಮನಾರ್ಹ ವ್ಯತ್ಯಾಸವೆಂದರೆ ಆಸ್ತಿ ಮೇಲಿನ ಲೋನ್‌ನೊಂದಿಗೆ, ಸಾಲದಾತರು ಅಡವಿಟ್ಟ ಭದ್ರತೆಯಾಗಿ ಇನ್ನೊಂದು ಸ್ವಯಂ ಮಾಲೀಕತ್ವದ ವಾಣಿಜ್ಯ ಅಥವಾ ವಸತಿ ಆಸ್ತಿಯನ್ನು ಅಂಗೀಕರಿಸಬಹುದು. ಆದರೆ, ಹೋಮ್ ಲೋನ್ ನೊಂದಿಗೆ, ಅರ್ಜಿದಾರರು ಆತ ಅಥವಾ ಆಕೆ ಖರೀದಿಸಲು ಬಯಸುವ ಆಸ್ತಿಯನ್ನು ಅಡವಿಡಬೇಕು ಮತ್ತು ಬೇರೆ ಆಸ್ತಿಯಲ್ಲ.

ಹೆಚ್ಚುವರಿಯಾಗಿ, ಹೋಮ್ ಲೋನ್ ಸಾಲಗಾರರು ಐಟಿ ಕಾಯ್ದೆ ಅಡಿಯಲ್ಲಿ ಹೋಮ್ ಲೋನ್ ಮರುಪಾವತಿ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು. ಸೆಕ್ಷನ್ 80 ಸಿ ಮತ್ತು ಸೆಕ್ಷನ್ 24 ಅಡಿಯಲ್ಲಿ, ಸಾಲಗಾರರು ಅಸಲು ಮರುಪಾವತಿಗಳ ಮೇಲೆ ರೂ. 1.5 ಲಕ್ಷದವರೆಗೆ ಮತ್ತು ಬಡ್ಡಿ ಪಾವತಿಗಳ ಮೇಲೆ ರೂ. 2 ಲಕ್ಷದವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಕೊನೆಯದಾಗಿ, ಆಸ್ತಿ ಮೇಲಿನ ಲೋನ್ ಮೇಲೆ ವಿಧಿಸಲಾಗುವ ದರಕ್ಕಿಂತ ಹೋಮ್ ಲೋನ್ ಬಡ್ಡಿ ದರ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ